Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?

Published : Apr 18, 2023, 12:20 PM IST
Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?

ಸಾರಾಂಶ

ಆಹಾರದ ರುಚಿ ಹೊಸದಾಗಿರಬೇಕು ನಿಜ. ಆದ್ರೆ ಅದಕ್ಕೆ ಏನೇನೋ ಬರೆಸಿದ್ರೆ ತಿನ್ನೋದು ಮಾತ್ರವಲ್ಲ ನೋಡೋಕೂ ಕಷ್ಟ. ಈಗ ವೈರಲ್ ಆಗಿರುವ ವಿಡಿಯೋ ಕೂಡ ಹಾಗೆ ಇದೆ. ಐಸ್ ಕ್ರೀಂಗೆ ಈತ ಬೆರಸಿರುವ ವಸ್ತು ನೋಡಿ ಜನರು ಛೀಮಾರಿ ಹಾಕಿದ್ದಾರೆ.   

ಬೇಸಿಗೆ ಬಂದಿದೆ, ಐಸ್ ಕ್ರೀಂಗೆ ಬೇಡಿಕೆ ಹೆಚ್ಚಾಗಿದೆ. ಚಾಕೊಲೇಟ್, ವೆನಿಲ್ಲಾ, ಸ್ಟ್ರಾಬೆರಿ ಮತ್ತು ಬಟರ್ಸ್ಕಾಚ್‌ಗಳಂತಹ ವಿವಿಧ ರುಚಿಯ ಐಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವರು ಬೇಸಿಗೆ ಬರ್ತಿದ್ದಂತೆ ಮನೆಯಲ್ಲಿಯೇ ಐಸ್ ಕ್ರೀಂ ತಯಾರಿಸ್ತಾರೆ. ಮನೆಯಲ್ಲಿರುವ ಹಣ್ಣುಗಳನ್ನು ಬಳಸಿ ಐಸ್ ಕ್ರೀಂ ತಯಾರಿಸೋದನ್ನು ನೀವು ನೋಡ್ಬಹುದು.  

ಯಾವುದೇ ಆಹಾರ (Food) ವಿರಲಿ ಅದ್ರಲ್ಲಿ  ವೈವಿಧ್ಯತೆಯ ಅವಶ್ಯಕತೆಯಿರುತ್ತದೆ. ಒಂದೇ ರುಚಿಯ ಆಹಾರ ಸೇವನೆ ಮಾಡಿ ಜನರು ಬೋರ್ ಆಗ್ತಾರೆ. ಇದೇ ಕಾರಣಕ್ಕೆ ಜನರು ಪ್ರತಿ ದಿನವೂ ವೆರೈಟಿ ಆಹಾರ ಸೇವನೆ ಮಾಡ್ತಾರೆ. ಐಸ್ ಕ್ರೀಂ ವಿಷ್ಯದಲ್ಲೂ ಜನರು ಬೇರೆ ರುಚಿ ಸವಿಯಲು ಬಯಸ್ತಾರೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಬೇರೆ ಬೇರೆ ಫ್ಲೇವರ್ ಐಸ್ ಕ್ರೀಂ (Ice Cream) ನೀವು ನೋಡಬಹುದು. ವೀಳ್ಯದೆಲೆ ಐಸ್ ಕ್ರೀಂ ಸೇರಿದಂತೆ ಹೊಸ ಪ್ರಯೋಗ ಐಸ್ ಕ್ರೀಂನಲ್ಲಿ  ನಡೆಯುತ್ತಿರುತ್ತದೆ. ಹಾಗಂತ  ಹೊಸ ಪ್ರಯೋಗ ಮಾಡಿ ಆಹಾರದ ರುಚಿ ಕೆಡಿಸಿದ್ರೆ ಅದನ್ನು ಖಾದ್ಯ ಪ್ರೇಮಿಗಳು ಒಪ್ಪಿಕೊಳ್ಳೋದಿಲ್ಲ. 

HEALTHY FOOD: ಬೇಸಿಗೆಯಲ್ಲಿ ಹಲಸಿನ ಹಣ್ಣು ತಿನ್ಬಹುದಾ?

ಈಗಿನ ದಿನಗಳಲ್ಲಿ ಆಹಾರದ ಮೇಲೆ ಮಾಡುತ್ತಿರುವ ಹೊಸ ಹೊಸ ಪ್ರಯೋಗ ಕೆಲವು ಜನರಿಗೆ ಇಷ್ಟವಾದ್ರೆ ಮತ್ತೆ ಕೆಲವನ್ನು ಜನರು ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕ ಆಹಾರದ ವಿಡಿಯೋಗಳು ವೈರಲ್ (Viral) ಆಗ್ತಿರುತ್ತವೆ. ಕೆಲ ದಿನಗಳ ಹಿಂದೆ ಬೆಂಡೆಕಾಯಿ ನೂಡಲ್ಸ್ ಮಾಡಿ ಮಹಿಳೆಯೊಬ್ಬಳು ಸುದ್ದಿ ಮಾಡಿದ್ದಳು. ಹಿಂದಿನ ವರ್ಷ ಮ್ಯಾಗಿ ಐಸ್ ಕ್ರೀಂ ರೋಲ್ ಹಂಚಿಕೊಳ್ಳಲಾಗಿತ್ತು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಂಗೆ ಈತ ಬೆರೆಸಿದ ವಸ್ತು ನೋಡಿದ ನೆಟ್ಟಿಗರ ಕಣ್ಣು ಕೆಂಪಾಗಿದೆ.

ಐಸ್ ಕ್ರೀಮ್ ಗೆ ಚಿಕನ್ ಬೆರೆಸಿದ ಭೂಪ : ನಾನ್ ವೆಜ್ ಪ್ರೇಮಿಗಳು  ತಂದೂರಿ ಚಿಕನ್ ಬಾಯಿ ಚಪ್ಪಿರಿಸಿ ತಿನ್ನುತ್ತಾರೆ. ಆದರೆ ಡೆಸರ್ಟ್ ಹೆಸರಿನಲ್ಲಿ ತಂದೂರಿ ಚಿಕನ್ (Chicken ) ಗೆ ಐಸ್ ಕ್ರೀಮ್ ಬೆರೆಸಿ ತಿನ್ನುವ ಪ್ರಯತ್ನ ಮಾಡಿರಲಿಕ್ಕಿಲ್ಲ ಅಲ್ವಾ?  ಇಲ್ಲೊಬ್ಬ ವ್ಯಕ್ತಿ, ಐಸ್ ಕ್ರೀಂಗೆ ಚಿಕನ್ ಬೆರೆಸಿದ್ದಾನೆ.

Health Tips : ಕ್ಯಾನ್ಸರ್ ಸೇರಿ ಅನೇಕ ರೋಗಕ್ಕೆ ಮದ್ದು ಮಾವಿನ ಕಾಯಿ

@MFuturewala ಹೆಸರಿನ ಟ್ವಿಟರ್ ಖಾತೆಯಲ್ಲಿ  ತಂದೂರಿ ಐಸ್ ಕ್ರೀಮ್ ರೆಸಿಪಿಯ ವೀಡಿಯೊ ಹಂಚಿಕೊಳ್ಳಲಾಗಿದೆ. ಬೇಸಿಗೆ ಬಿಸಿ ಹೋಗಲಾಡಿಸಲು ಪರ್ಫೆಕ್ಟ್ ಹ್ಯಾಕ್. ಎಲ್ಲರಿಗೂ ಪ್ರೋಟೀನ್ ಭರಿತ ತಂದೂರಿ ಚಿಕನ್ ಐಸ್ ಕ್ರೀಮ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಶೀರ್ಷಿಕೆ ಹಾಕಲಾಗಿದೆ. ಇದರಲ್ಲಿ ಆಹಾರ ಮಾರಾಟಗಾರರೊಬ್ಬರು ಚಿಕನ್ ಗೆ ಐಸ್ ಕ್ರೀಂ ಸೇರಿಸುತ್ತಿರುವುದನ್ನು ನೀವು ನೋಡ್ಬಹುದು. ಮೊದಲು ಚಿಕನ್ ಅನ್ನು ತುಂಡುಗಳಾಗಿ ಕತ್ತರಿಸಿ ಗ್ರಿಡ್ಲ್ನಲ್ಲಿ ಮ್ಯಾಶ್ ಮಾಡುತ್ತಾರೆ. ನಂತರ ಹಾಲು, ಚಾಕೊಲೇಟ್ ಚಿಪ್ಸ್ ಮತ್ತು ಚಾಕೊಲೇಟ್ ಸಿರಪ್ ಅನ್ನು ಇದಕ್ಕೆ ಸೇರಿಸುತ್ತಾರೆ.  ಕೊನೆಯಲ್ಲಿ ಮಿಶ್ರಣವನ್ನು ಗ್ರಿಡಲ್ ನಲ್ಲಿ ಮತ್ತೆ ಹರಡಿ, ಅದನ್ನು ಚಮಚದ ಸಹಾಯದಿಂದ ಐಸ್ ಕ್ರೀಮ್ ಕಪ್ಲ್ಲಿ ಹಾಕಿ ಸರ್ವ್ ಮಾಡುತ್ತಾರೆ. 

ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇಷ್ಟವಾಗಿಲ್ಲ ಈ ರೆಸಿಪಿ : ಈ ವಿಚಿತ್ರ ಆಹಾರ ಸಂಯೋಜನೆಯನ್ನು ನೋಡಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, ಅಲ್ಲಾ ನಿಮ್ಮನ್ನು ಕ್ಷಮಿಸುವುದಿಲ್ಲ  ಎಂದು ಬರೆದಿದ್ದಾರೆ. ಮತ್ತೊಬ್ಬರು,  ನಾನು ಕೈಮುಗಿಯುತ್ತಿದ್ದೇನೆ, ಇದನ್ನೆಲ್ಲಾ ನಿಲ್ಲಿಸಿ ಎಂದು ಬರೆದಿದ್ದಾರೆ. ಅದಕ್ಕಾಗಿಯೇ ಜನರು ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ  ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇದನ್ನು ಹೇಗೆ ಕಾಂಬಿನೇಷನ್ ಮಾಡಿದ್ದೀರಿ ಅಂತಾ ಒಬ್ಬರು ಕೇಳಿದ್ರೆ ಮತ್ತೊಬ್ಬರು ಇದು ಕಾನೂನಿಗೆ ವಿರುದ್ಧವೆಂದು ಬರೆದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ