ಟೀ ಬಹುತೇಕರ ಫೇವರಿಟ್. ಖುಷಿಯಾದಾಗ;, ಬೇಜಾರಾದಾಗ, ತಲೆನೋವಾದಾಗ, ಟೆನ್ಶನ್ ಆದಾಗ ಒಂದು ಕಪ್ ಟೀ ಕೊಟ್ರೆ ಸಾಕು ರಿಲ್ಯಾಕ್ಸ್ ಆಗಿ ಬಿಡ್ತಾರೆ. ಚಹಾಪ್ರಿಯರು ಬಗೆಬಗೆಯ ಚಹಾಗಳನ್ನು ಹುಡುಕುತ್ತಲೇ ಇರುತ್ತಾರೆ. ಸದ್ಯ ವಿಭಿನ್ನವಾದ ಟೀ ತಯಾರಿಕೆಯ ರೀತಿ ಎಲ್ಲೆಡೆ ವೈರಲ್ ಆಗ್ತಿದೆ.
ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅನೇಕ ಜನರ ನೆಚ್ಚಿನ ಪಾನೀಯ ಚಹಾ. ಚಳಿಗಾಲದಲ್ಲಿ, ಜನರು ಹೆಚ್ಚಾಗಿ ಸಾಕಷ್ಟು ಚಹಾ ಸೇವಿಸುತ್ತಾರೆ. ಚಹಾ (Tea) ಕುಡಿಯಲು ಇಷ್ಟಪಡದವರು ಯಾರೂ ಇಲ್ಲ. ಚಹಾ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬಹಳ ಜನಪ್ರಿಯ ಪಾನೀಯ. ಚಹಾದ ಈ ಜನಪ್ರಿಯತೆಯಿಂದಾಗಿ, ಅನೇಕ ರೀತಿಯ ಚಹಾವು ಪ್ರಪಂಚದಾದ್ಯಂತ ಸಿಗುತ್ತೆ. ನಮ್ಮ ಮನಸ್ಥಿತಿಯನ್ನು ಉಲ್ಲಾಸಗೊಳಿಸುವುದರ ಜೊತೆಗೆ, ಚಹಾ ನಮ್ಮ ಆರೋಗ್ಯಕ್ಕೆ (Health) ಅನೇಕ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಇನ್ನು, ಚಳಿಗಾಲದಲ್ಲಿ, ಜನರು ಹೆಚ್ಚಿನ ಪ್ರಮಾಣದಲ್ಲಿ ಚಹಾ ಸೇವಿಸಲು ಪ್ರಾರಂಭಿಸುತ್ತಾರೆ.
ಚಹಾದಲ್ಲಿ ಹಲವು ವೆರೈಟಿಗಳಿವೆ. ಮಿಲ್ಕ್ ಟೀ, ಜಿಂಜರ್ ಟೀ, ಲೆಮನ್ ಟೀ, ರೋಸ್ ಟೀ, ಮ್ಯಾಂಗೋ ಟೀ, ಕೇಸರ್ ಟೀ ಹೀಗೆ ಹಲವು. ಚಹಾ ತಯಾರಿಸುವ ರೀತಿ ವ್ಯಕ್ತಿಯಿಂ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಬ್ಬರು ಹೆಚ್ಚು ನೀರನ್ನು ಬಳಸಿ ಟೀ ಮಾಡಿದರೆ, ಇನ್ನು ಕೆಲವರು ಹೆಚ್ಚು ಹಾಲನ್ನು ಬಳಸುತ್ತಾರೆ. ಮತ್ತಷ್ಟು ಮಂದಿ ಟೀ ಪುಡಿಯನ್ನು ಬಳಸುವ ರೀತಿ ವ್ಯತ್ಯಸ್ಥವಾಗಿರುತ್ತದೆ. ಕೆಲವೊಬ್ಬರು ಟೀ ಮಾಡಲೆಂದೇ ಪ್ರತ್ಯೇಕ ಪಾತ್ರೆಯನ್ನು ಬಳಸುತ್ತಾರೆ. ಆದರೆ ತೆಂಗಿನಕಾಯಿ ಚಿಪ್ಪಿನಲ್ಲಿ (Coconut shell) ಟೀ ಮಾಡೋದನ್ನು ನೀವು ನೋಡಿದ್ದೀರಾ?
ಸಿಕ್ಕಾಪಟ್ಟೆ ಟೀ ಕುಡಿಯೋ ಅಭ್ಯಾಸನಾ ? ಸ್ಪಲ್ಪ ಕಪ್ ಬಗ್ಗೆನೂ ಗಮನ ಇರ್ಲಿ
ತೆಂಗಿನ ಚಿಪ್ಪಿನಲ್ಲಿ ಟೀ ತಯಾರಿ ಮಾಡುವ ವೀಡಿಯೋ ವೈರಲ್
ನೀವು ತುಂಬಾ ಡಿಫರೆಂಟ್ ಆದ ಟೀ ಕುಡಿಯಲು ಬಯಸಿದರೆ ನೀವು ಕೊಕೋನೆಟ್ ಶೆಲ್ ಬಳಸಿ ಟೀ ತಯಾರಿಸಿ ಕುಡಿಯಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮಹಿಳೆಯೊಬ್ಬರು ಒಲೆಯ ಮೇಲೆ ಟೊಳ್ಳಾದ ತೆಂಗಿನ ಚಿಪ್ಪನ್ನು ಇಟ್ಟು ಟೀ ತಯಾರಿಸುತ್ತಾರೆ. ಹಾಲು ಬಿಸಿಯಾದ ನಂತರ ಸ್ವಲ್ಪ ನೀರು, ಶುಂಠಿ, ಹಾಲು, ಏಲಕ್ಕಿ ಮತ್ತು ಸಕ್ಕರೆಯನ್ನು ಸೇರಿಸುತ್ತಾರೆ. ಅಲ್ಲಿಗೆ ಪರಿಪೂರ್ಣವಾದ ತೆಂಗಿನ ಚಹಾ ರೆಡಿಯಾಗುತ್ತದೆ. ಸಾಮಾಜಿಕ ಜಾಲತಾಣ (Social media)ಗಳಲ್ಲಿ ಈ ಕೋಕೊನೆಟ್ ಶೆಲ್ ಟೀ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಟೀ ಪ್ರಿಯರು ತಮ್ಮ ನೆಚ್ಚಿನ ಪಾನೀಯವನ್ನು ತಯಾರಿಸುವ ವಿನೂತನ ವಿಧಾನದಿಂದ ಪ್ರಭಾವಿತರಾಗಿದ್ದಾರೆ. ಯಾವುದೇ ಸಾಮಾನ್ಯ ಚಹಾಕ್ಕಿಂತ ಈ ರೀತಿ ಮಾಡಿದ ಚಹಾದ ರುಚಿಯ (Taste) ನಡುವೆ ಏನಾದರೂ ವ್ಯತ್ಯಾಸವಿದೆಯೇ ಎಂದು ಹಲವರು ಕುತೂಹಲ ವ್ಯಕ್ತಪಡಿಸಿದರು. ಕ್ಲಿಪ್ ಅನ್ನು ಶೇರ್ ಮಾಡಿದ ಬಳಕೆದಾರರು ಇದು ಯಾವ ರುಚಿಗೆ ಹೋಲುತ್ತದೆ ಎಂದು ಜನರಿಗೆ ತಿಳಿಸಿದರು, ಈ ಚಹಾದಲ್ಲಿ ತೆಂಗಿನಕಾಯಿಯ ಸ್ವಲ್ಪ ಪರಿಮಳವಿತ್ತು ಎಂದು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, 'ನಾನು ಕಾಡಿನಲ್ಲಿ ಕಳೆದುಹೋದರೆ ಮತ್ತು ಚಾಯ್ ಮಾಡಲು ಪಾತ್ರೆಯಿಲ್ಲದಿದ್ದರೆ ಈಗೇನು ಮಾಡಬೇಕೆಂದು ನನಗೆ ತಿಳಿದಿದೆ. ತೆಂಗಿನ ಚಿಪ್ಪಿನಲ್ಲಿ ಟೀ ಮಾಡುವುದು ನಿಜವಾಗಿಯೂ ಒಳ್ಳೆಯ ಅಭ್ಯಾಸ' ಎಂದಿದ್ದಾರೆ.
ಕಿತ್ತಳೆ ಸಿಪ್ಪೆ ಬಿಸಾಕ್ಬೇಡಿ… ಚಹಾ ಮಾಡಿ ಕುಡಿದ್ರೆ ಹಲವು ರೋಗಕ್ಕೆ ಮದ್ದು
ಡಿಫರೆಂಟ್ ಟೀ ತಯಾರಿಗೆ ನೆಟ್ಟಿಗರು ಫಿದಾ
ಕೆಲವು ಬಳಕೆದಾರರಿಗೆ, ಈ ಚಹಾವನ್ನು ತಯಾರಿಸಲು ಹೊರಡುವ ದೊಡ್ಡ ಅಡಚಣೆ ಅವರ ತಾಯಿಯ ಭಯವಾಗಿತ್ತು. ಅಡುಗೆ ಮನೆ ಹಾಳು ಮಾಡಿದ್ದಕ್ಕೆ ಅಮ್ಮನಿಂದ ಬೈಗುಳ ಕೇಳುವುದು ಯಾರಿಗೂ ಇಷ್ಟವಿರಲಿಲ್ಲ. ಒಬ್ಬ ಬಳಕೆದಾರರು 'ಹೀಗೆಲ್ಲಾ ಮಾಡಲು ನನ್ನ ತಾಯಿ ಎಂದಿಗೂ ಅನುಮತಿಸುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ಟೀ ಲವರ್ ಆಗಿ ನಾನಿದನ್ನು ಖಂಡಿತಾ ಟ್ರೈ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಕಾಮೆಂಟ್ ವಿಭಾಗದಲ್ಲಿ ಗಂಭೀರ ಪ್ರಶ್ನೆಯೊಂದು ಮೂಡಿದೆ. ತೆರೆದ ಉರಿಯಲ್ಲಿ ತೆಂಗಿನ ಚಿಪ್ಪಿಗೆ ಬೆಂಕಿ ಬೀಳುವುದು ಖಚಿತ ಎಂದು ಬಳಕೆದಾರರಲ್ಲಿ ಒಬ್ಬರು ಹೇಳಿದರು. ಹೀಗಿರುವಾಗ ವಿಡಿಯೋದಲ್ಲಿರುವ ಚಿಪ್ಪಿಗೆ ಬೆಂಕಿ ಬೀಳದಿದ್ದು ಹೇಗೆ? ಈ ಕ್ಲಿಪ್ ಅನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಬಳಕೆದಾರ ಕವಿತಾ ರೈ ಅವರು ವಿವರಣೆ ನೀಡಿದ್ದಾರೆ. ತೆಂಗಿನ ಚಿಪ್ಪನ್ನು ಕಡಿಮೆ ಉರಿಯಲ್ಲಿ ಹಾಕಿದರೆ ಚಿಂತೆಯಿಲ್ಲ ಎಂದು ಜನರಿಗೆ ತಿಳಿಸಿದ್ದಾರೆ. ತೆಂಗಿನಕಾಯಿ ಒಲೆಯ ಮೇಲೆ ಹಾಕುವ ಮೊದಲು ಅದರಲ್ಲಿ ಯಾವುದೇ ರಂಧ್ರಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ಎಚ್ಚರಿಕೆಯಿಂದ ಇರಬೇಕು ಎಂದು ಕವಿತಾ ಸೂಚನೆ ನೀಡಿದ್ದಾರೆ.