
ಪ್ರತಿಯೊಬ್ಬ ಮನುಷ್ಯನಿಗೂ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವಂಥದ್ದು ನೀರು. ಮಾನವನು ಆಹಾರವಿಲ್ಲದೆ 8ರಿಂದ 21 ದಿನಗಳ ವರೆಗೆ ಬದುಕಬಲ್ಲನು. ಆದರೆ ನೀರಿಲ್ಲದೆ ಹೆಚ್ಚೆಂದರೆ ಮೂರು ದಿನದ ಮೇಲೆ ಬದುಕಲಾರ. ಜೀವದಾನಿ ಹಾಗೂ ಜೀವಹಾನಿ ಎರಡು ಆಗಬಲ್ಲ ಶಕ್ತಿ ನೀರಿಗಿದೆ. ಹೀಗಾಗಿಯೇ ನೀರನ್ನು ಉಳಿಸುವಂತೆ ಪರಿಸರ ಪ್ರೇಮಿಗಳು ಆಗಿಂದಾಗೆ ಅಭಿಯಾನಗಳನ್ನು ನಡೆಸುತ್ತಲೇ ಇರುತ್ತಾರೆ. ಹೀಗಾಗಿಯೇ ನೀರನ್ನು ಉಳಿಸಲು ಮಳೆಕೊಯ್ಲು, ಮಳೆನೀರು ಸಂಗ್ರಹಣೆ, ಇಂಗುಗುಂಡಿ ಮೊದಲಾದ ಅಭಿಯಾನಗಳನ್ನು ಮಾಡ್ತಾರೆ. ಆದ್ರೆ ಇಲ್ಲೊಂದು ರೆಸ್ಟೋರೆಂಟ್ ಇದೆಲ್ಲಕ್ಕಿಂತ ವಿಚಿತ್ರವಾಗಿ ಶೌಚಾಲಯ, ಸಿಂಕ್ ನೀರನ್ನು ಮರುಬಳಕೆ ಮಾಡ್ತಿದೆ.
ಜಲವಿಜ್ಞಾನಿ ಲೂನಾ ಲಿಯೋಪೋಲ್ಡ್ , 'ನಮ್ಮ ಜೀವಿತಾವಧಿಯಲ್ಲಿ ಮತ್ತು ನಮ್ಮ ಮಕ್ಕಳ ಜೀವಿತಾವಧಿಯಲ್ಲಿ ನೀರು (Water) ಅತ್ಯಂತ ನಿರ್ಣಾಯಕ ಸಂಪನ್ಮೂಲ ಸಮಸ್ಯೆಯಾಗಿದೆ. ನಮ್ಮ ನೀರಿನ ಆರೋಗ್ಯವು (Health) ನಾವು ಭೂಮಿಯಲ್ಲಿ ಹೇಗೆ ಬದುಕುತ್ತೇವೆ ಎಂಬುದರ ಪ್ರಮುಖ ಅಳತೆಯಾಗಿದೆ' ಎಂದು ತಿಳಿಸಿದ್ದಾರೆ. ಲಿಯೋಪೋಲ್ಡ್ ಮಾತ್ರವಲ್ಲ, ಪ್ರಪಂಚದಾದ್ಯಂತದ ಅನೇಕ ಪರಿಸರ ಕಾರ್ಯಕರ್ತರು ಪರಿಸರದ ಸಲುವಾಗಿ ನೀರನ್ನು ಮರುಬಳಕೆ ( Recycled Water) ಮಾಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದ್ರೆ, ಬೆಲ್ಜಿಯಂನ ಈ ರೆಸ್ಟೋರೆಂಟ್ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಬಾಟಲ್ ನೀರು ಕುಡಿಯೋದು ಯಾಕೆ ಡೇಂಜರಸ್ ಇಲ್ಲಿ ತಿಳ್ಕೊಳ್ಳಿ!
ಶೌಚಾಲಯ, ಸಿಂಕ್ ನೀರು ಮರುಬಳಕೆ ಮಾಡುತ್ತಿರುವ ರೆಸ್ಟೋರೆಂಟ್
ಈಗಾಗಲೇ ಹಲವು ದೇಶಗಳಲ್ಲಿ ನೀರನ್ನು ಮರುಬಳಕೆ ಮಾಡಲಾಗುತ್ತಿದೆ. ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮತ್ತೆ ಬಳಸುತ್ತಾರೆ. ಆದ್ರೆ ಬೆಲ್ಜಿಯಂನ ಈ ರೆಸ್ಟೋರೆಂಟ್ ಮಾತ್ರ ಜನ್ರು ಛೀ ಥೂ ಅನ್ನುವಂತೆ ನೀರನ್ನು ಬಳಕೆ ಮಾಡುತ್ತಿದೆ. ಹೌದು, ಗೆಸ್ಟ್‌ಯಾಕ್ಸ್ ರೆಸ್ಟೋರೆಂಟ್ ತಮ್ಮ ಬಳಿ ಬರುವ ಗ್ರಾಹಕರಿಗೆ ಶೌಚಾಲಯದ ನೀರನ್ನು ಮರುಬಳಕೆ ಮಾಡುತ್ತಿದೆ. ಬೆಲ್ಜಿಯನ್ ರೆಸ್ಟೋರೆಂಟ್ ನೀರನ್ನು ಉಳಿಸುವ ಉದ್ದೇಶದಿಂದ ಗ್ರಾಹಕರಿಗೆ ಶೌಚಾಲಯಗಳು ಮತ್ತು ಸಿಂಕ್‌ಗಳಿಂದ ಮರುಬಳಕೆ ಮಾಡಿದ ನೀರನ್ನು ಒದಗಿಸುತ್ತಿದೆ.
ಟಾಯ್ಲೆಟ್ ನೀರನ್ನು ತಂತ್ರಜ್ಞಾನ ಬಳಸಿಕೊಂಡು ಐದು ಹಂತದಲ್ಲಿ ಶುದ್ಧೀಕರಿಸಲಾಗುತ್ತದೆಯಂತೆ. ಮಾತ್ರವಲ್ಲ ಈ ರೆಸ್ಟೋರೆಂಟ್ ಟಾಯ್ಲೆಟ್ ನೀರನ್ನು ಕುಡಿಯುವ ನೀರಿನಿಂದ ಹಿಡಿದು ಕಾಫಿ ತಯಾರಿಸಲು ಮತ್ತು ಬಿಯರ್ ತಯಾರಿಸಲು ಸಹ ಬಳಸ್ತಾರಂತೆ. ಆರಂಭದಲ್ಲಿ ಟಾಯ್ಲೆಟ್ ನೀರನ್ನು ಕೆಮಿಕಲ್ ಬಳಸಿ ಶುದ್ಧಗೊಳಿಸಿ ಸಸ್ಯಗಳಿಗೆ ಉಪಯೋಗಿಸಲಾಗುತ್ತದೆ. ಬಳಿಕ ಇದಕ್ಕೆ ಮಳೆನೀರನ್ನು ಮಿಶ್ರಣ ಮಾಡಿ ಶುದ್ಧೀಕರಿಸಲಾಗುತ್ತದೆ. ಬಳಿಕ ನೀರನ್ನು ಕುಡಿಯಲು ಮತ್ತು ಕಾಫಿ ಮಾಡಲು ಬಳಸ್ತಾರಂತೆ.
ನಲ್ಲಿ ನೀರು ಕುಡಿಯಲ್ಲ ನಾಯಿ, ತಿಂಗಳಿಗೆ 4,000 ರೂ. ಕೊಟ್ಟು ವಾಟರ್ ಬಾಟಲ್ ಖರೀದಿಸುತ್ತಾಳೆ ಒಡತಿ !
ನೀರಿಗೆ ಯಾವುದೇ ಬಣ್ಣ ಅಥವಾ ವಾಸನೆ ಇರುವುದಿಲ್ಲ
ಆಡಿಟಿ ಸೆಂಟ್ರಲ್ ಪ್ರಕಾರ, ಬೆಲ್ಜಿಯಂನ ಕುರ್ನೆ ಪುರಸಭೆಯಲ್ಲಿರುವ ಗಸ್ಟ್'ಯಾಕ್ಸ್ ರೆಸ್ಟೋರೆಂಟ್ ತಮ್ಮ ಅತಿಥಿಗಳಿಗೆ ಶೌಚಾಲಯದ ನೀರನ್ನು ಪೂರೈಸುತ್ತದೆ. ಮತ್ತೊಂದೆಡೆ, ಕುಡಿಯುವ ನೀರು ಸಾಮಾನ್ಯ ನೀರಿನಂತೆಯೇ ರುಚಿ ಮತ್ತು ಯಾವುದೇ ವಾಸನೆ ಅಥವಾ ಬಣ್ಣವನ್ನು ಹೊಂದಿರುವುದಿಲ್ಲ. Gusteaux ನ ಸಮಗ್ರ, ಐದು-ಹಂತದ ಫಿಲ್ಟರಿಂಗ್ ತಂತ್ರವು ಕೊಳಚೆ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ, ಅದು ಗ್ರಾಹಕರಿಗೆ ತಲುಪಿಸುವ ಮೊದಲು ಖನಿಜ ಪೂರೈಕೆಯ ಅಗತ್ಯವಿರುತ್ತದೆ ಎಂದು ತಿಳಿಸಿದೆ.
ತ್ಯಾಜ್ಯನೀರನ್ನು ಕುಡಿಯಲು ಭಯಪಡುವವರಿಗೆ, ವಿಶಿಷ್ಟವಾದ ನೀರಿನ ಮರುಬಳಕೆ ವ್ಯವಸ್ಥೆಯನ್ನು ಮೊದಲು ಸಸ್ಯ ಗೊಬ್ಬರವನ್ನು ಬಳಸಿಕೊಂಡು ರಾಸಾಯನಿಕವಾಗಿ ಸಂಸ್ಕರಿಸಲಾಗುತ್ತದೆ. ಅದನ್ನು ಅನುಸರಿಸಿ, ನೀರಿನ ಒಂದು ಭಾಗವನ್ನು ಸಂಗ್ರಹಿಸಿದ ಮಳೆಯೊಂದಿಗೆ ಬೆರೆಸಲಾಗುತ್ತದೆ, ಉಳಿದವು ಸಂಪೂರ್ಣವಾಗಿ ಶುದ್ಧೀಕರಿಸಲ್ಪಡುತ್ತದೆ. ರೆಸ್ಟೋರೆಂಟ್‌ನ ಪ್ರತಿನಿಧಿಯ ಪ್ರಕಾರ, 'ಈ ನೀರು ಕುಡಿಯಲು ತುಂಬಾ ಶುದ್ಧವಾಗಿದೆ, ಆದ್ದರಿಂದ ನಾವು ಅದನ್ನು ಆರೋಗ್ಯಕರವಾಗಿಸಲು ಖನಿಜಗಳನ್ನು ಸೇರಿಸುತ್ತೇವೆ' ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.