ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

By Web Desk  |  First Published Oct 7, 2019, 4:46 PM IST

ನವರಾತ್ರಿ ಹಬ್ಬದಲ್ಲಿ ಏನೇನು ತಿಂಡಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿ ಒಂದು ಪಟ್ಟಿ ಮತ್ತು ರೆಸಿಪಿ ಇದೆ. ಹಬ್ಬ ರುಚಿಕರವಾಗಿರಲಿ. ಹಬ್ಬದ ರಜೆಯಲ್ಲಿ ಯಾರು ಅಡುಗೆ ಮಾಡ್ತಾರೆ ಅಂತ ಗೊಣಗಬೇಡಿ. ಮನೆಯವರೆಲ್ಲ ಕೂಡಿ ಅಡುಗೆ ಮಾಡಿ ಉಣ್ಣೋ ಮಜಾನೇ ಬೇರೆ ಹಬ್ಬವನ್ನು ಸಂಭ್ರಮಿಸೋಣ.


ಹಯಗ್ರೀವ

ಬೇಕಾದ ಸಾಮಗ್ರಿಗಳು: ಕಡಲೇಬೇಳೆ- 1/ 2 ಕಪ್, ಬೆಲ್ಲ- 1 ಕಪ್, ನೀರು- 1 ಕಪ್, ಕಾಯಿತುರಿ- 1/2 ಕಪ್, ಗೋಡಂಬಿ-2 ಚಮಚ, ದ್ರಾಕ್ಷಿ- 1ಚಮಚ, ಏಲಕ್ಕಿ-1 ಚಮಚ

Tap to resize

Latest Videos

ಮಾಡುವ ವಿಧಾನ: ಮೊದಲು ಕುಕ್ಕರ್‌ನಲ್ಲಿ ತೊಳೆದ ಕಡಲೇಬೇಳೆಗೆ ಅರ್ಧ ನೀರು ಹಾಕಿ ಒಂದು ವಿಶಲ್‌ಗೆ ಬೇಯಿಸಿಕೊಳ್ಳಿ. ಅದು ಅರ್ಧಂಬರ್ಧ ಬೆಂದಿರಬೇಕು. ಅದಕ್ಕೆ ಬೆಲ್ಲ, ಕಾಯಿತುರಿ, ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಕಲಸಿದರೆ ಹಯಗ್ರೀವ ರೆಡಿ. ಇದು ಶಾರದಾ ದೇವಿಗೆ ಹೆಚ್ಚು ಇಷ್ಟ ಎನ್ನಲಾಗುತ್ತೆ. 

undefined

ಅವಲಕ್ಕಿ ಪಾಯಸ

ಬೇಕಾದ ಸಾಮಗ್ರಿಗಳು: ನೆನೆಸಿದ ದಪ್ಪ ಅವಲಕ್ಕಿ- 1/2 ಕಪ್, ಸಕ್ಕರೆ ಅಥವಾ ಜೋನಿ ಬೆಲ್ಲ- 1/2 ಕಪ್, ಕಾಯಿ ಹಾಲು ಅಥವಾ ಹಾಲು- 2 ಕಪ್, ತುಪ್ಪ-2 ಚಮಚ, ಗೋಡಂಬಿ- 2 ಚಮಚ, ದ್ರಾಕ್ಷಿ-1 ಚಮಚ, ಏಲಕ್ಕಿ- 2

ಮಾಡುವ ವಿಧಾನ: ಒಂದು ಪ್ಯಾನ್‌ಗೆ ತುಪ್ಪ, ದ್ರಾಕ್ಷಿ, ಗೋಡಂಬಿಗಳನ್ನು ಗೋಲ್ಡನ್ ಕಲರ್‌ಗೆ ಹುರಿಯಿರಿ. ನಂತರ ಅದಕ್ಕೆ ಕಾಯಿ ಹಾಲು ಅಥವಾ ಹಾಲು, ಸಕ್ಕರೆ ಹಾಕಿ ಸ್ವಲ್ಪ ಕುದಿ ಬಂದ ಮೇಲೆ ನೆನೆಸಿದ ಅವಲಕ್ಕಿ, ಏಲಕ್ಕಿ ಪುಡಿ ಹಾಕಿ ಒಂದೆರಡು ನಿಮಿಷ ಕುದಿಸಿದರೆ ಅವಲಕ್ಕಿ ಪಾಯಸ ರೆಡಿ.

ಗುಡಾನ್ನ

ಬೇಕಾದ ಸಾಮಗ್ರಿಗಳು: ಅಕ್ಕಿ-1 ಕಪ್, ಹೆಸರುಕಾಳು- 1/2 ಕಪ್, ಕಾಯಿತುರಿ-1 ಕಪ್, ಬೆಲ್ಲ-3-4 ಉಂಡೆ, ನೀರು-1 ಲೋಟ, ಏಲಕ್ಕಿ- 1 ಚಮಚ, ತುಪ್ಪ-1 ಚಮಚ, ಗೋಡಂಬಿ-2 ಚಮಚ,
ದ್ರಾಕ್ಷಿ-1 ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಹೆಸರುಕಾಳನ್ನು ಹಾಕ್ಕಿ ಬೇಯಿಸಿಕೊಳ್ಳಬೇಕು. ಅನ್ನವಾದ ಮೇಲೆ ಅದಕ್ಕೆ ಬೆಲ್ಲ, ಕಾಯಿ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಅದಕ್ಕೆ ತುಪ್ಪದಲ್ಲಿ ಗೋಲ್ಡನ್ ಬಣ್ಣದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಕಲಸಿದರೆ ಗುಡ್ಡನ್ನ ರೆಡಿ.

ಅತ್ರಸ

ಬೇಕಾದ ಸಾಮಗ್ರಿಗಳು: ಅಕ್ಕಿ ತೊಳೆದು ಒಣಗಿಸಿ ಪುಡಿ ಮಾಡಿದ ಅಕ್ಕಿ ಹಿಟ್ಟು-1 ಕಪ್, ಬೆಲ್ಲ- 1/2 ಕಪ್, ಕಾಯಿತುರಿ- 1/2 ಕಪ್, ಏಲಕ್ಕಿ-1 ಚಮಚ, ತುಪ್ಪ- 1 ಕಪ್,

ಮಾಡುವ ವಿಧಾನ: ಬೆಲ್ಲ, ಕಾಯಿತುರಿಯನ್ನು ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಸ್ವಲ್ಪ ಗಟ್ಟಿಯಾದ ನಂತರ ಅದಕ್ಕೆ ಅಕ್ಕಿ ಹಿಟ್ಟು, ಏಲಕ್ಕಿ ಹಾಕಿ ಚೆನ್ನಾಗಿ ಕಲಸಬೇಕು. ನಂತರ ಅದನ್ನು ಆಂಬೊಡೆ ಆಕಾರದಲ್ಲಿ ಉಂಡೆ ಮಾಡಿಕೊಂಡು ತುಪ್ಪದಲ್ಲಿ ಕೆಂಪಗೆ ಕರೆದರೆ ಆಯಿತು. ಕೆಲವರು ಇದಕ್ಕೆ ಕಜ್ಜಾಯ ಎಂದೂ ಕರೆಯುತ್ತಾರೆ.

ಬೇಕಾದ ಸಾಮಾಗ್ರಿಗಳು: ಕಡಲೇಹಿಟ್ಟು-1 ಕಪ್, ನೀರು-ಬೇಕಾದಷ್ಟು, ಎಣ್ಣೆ- 2 ಕಪ್, ಕಾಯಿತುರಿ- 1 ಕಪ್, ಬೆಲ್ಲ-1 ಕಪ್, ಏಲಕ್ಕಿ-೧ಚಮಚ.

ಮಾಡುವ ವಿಧಾನ: ಕಡಲೇಹಿಟ್ಟನ್ನು ಬಜ್ಜಿಯ ಹಿಟ್ಟಿನ ಹದಕ್ಕೆ ನೀರು ಹಾಕಿ ಕಲಸಿ. ಅದನ್ನು ಜರಡಿ ಸೌಟ್‌ನ ಸಹಾಯದಿಂದ ಕಾದ ಎಣ್ಣೆಗೆ ಹಾಕಿ ಬೂಂದಿಯನ್ನು ಕರೆದು ತಯಾರಿಸಿಕೊಳ್ಳಿ. ಮತ್ತೊಂದು ಪಾನ್‌ನಲ್ಲಿ ಬೆಲ್ಲ, ಕಾಯಿ ಹಾಕಿ ಕಾಯಿಸಿಕೊಳ್ಳಿ. ನಂತರ ಕರೆದ ಬೂಂದಿಗೆ ಕಾಯಿಸಿದ ಕಾಯಿಬೆಲ್ಲ, ಏಲಕ್ಕಿ ಹಾಕಿ ಕಲಸಿದರೆ ಮನೋರ ತಿಂಡಿ ರೆಡಿ.

ಕೇಸರಿ

ಸಾಮಗ್ರಿಗಳು: ತೊಳೆದಿಟ್ಟುಕೊಂಡ ಅಕ್ಕಿ-1 ಕಪ್, ತುಪ್ಪ- 1/2 ಕಪ್, ಸಕ್ಕರೆ-1/2 ಕಪ್, ಗೋಡಂಬಿ- 3 ಚಮಚ, ದ್ರಾಕ್ಷಿ-2 ಚಮಚ, ಪ್ಯೂರ್ ಕೇಸರಿ- 1/2 ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ಉದುರು ಅನ್ನದಂತೆ ಬೇಯಿಸಿಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಸಕ್ಕರೆ, ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಬೇಯಿಸಿದ ಅನ್ನ, ತುಪ್ಪ, ಏಲಕ್ಕಿ, ಕೇಸರಿ ಹಾಕಿ ಚೆನ್ನಾಗಿ ಕಲಸಿ. ತುಪ್ಪ ನಿಮ್ಮ ಕೈಗಂಟವವರೆಗೆ, ಕೇಸರಿ ವಾಸನೆ ಬರುವವರೆಗೂ ಕಾಯಿಸಿ. ತುಪ್ಪದಲ್ಲೇ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಕಲಸಿದರೆ ಕೇಸರಿ ರೆಡಿ. 

ಕ್ಯಾರೆಟ್ ಪಾಯಸ

ಬೇಕಾದ ಸಾಮಗ್ರಗಳು: ಮೀಡಿಯಂ ಸೈಜ್ ಕ್ಯಾರೆಟ್- 3, ಸಕ್ಕರೆ- 1/4 ಕಪ್, ಕಾಯಿ ಹಾಲು ಅಥವಾ ಹಾಲು- 1.1/2 ಕಪ್, ಬಾದಾಮಿ- 12, ಗೋಡಂಬಿ-1 ಚಮಚ, ದ್ರಾಕ್ಷಿ-1 ಚಮಚ, ತುಪ್ಪ-1 ಚಮಚ.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಕ್ಯಾರೆಟ್ ಅನ್ನು ಚೆನ್ನಾಗಿ ಬೇಯಿಸಿ, ನಂತರ ಅದರ ಪಲ್ಪ್ ಮಾಡಿಕೊಳ್ಳಿ. ಕುದಿಯುವ ನೀರಿನಲ್ಲಿ ಬಾದಾಮಿ ಹಾಕಿ, ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ನಂತರ ಕ್ಯಾರೆಟ್ ಪಲ್ಪ, ರುಬ್ಬಿದ ಬಾದಾಮಿ, ಕಾಯಿ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಹಾಕಿದರೆ ಪಾಯಸ ರೆಡಿ.

ಪುರಿ ಲಡ್ಡು 

ಬೇಕಾದ ಸಾಮಗ್ರಿಗಳು: ಗೋದಿ ಹಿಟ್ಟು-2 ಕಪ್, ನೀರು-ಬೇಕಾದಷ್ಟು, ಎಣ್ಣೆ- 11|2 ಕಪ್, ಸಕ್ಕರೆ- 2 ಕಪ್, ಗೋಡಂಬಿ- 3 ಚಮಚ, ದ್ರಾಕ್ಷಿ- 3 ಚಮಚ, ಏಲಕ್ಕಿ-2 ಚಮಚ, ತುಪ್ಪ- 4 ಚಮಚ.

ಮಾಡುವ ವಿಧಾನ: ಚಪಾತಿ ಹಿಟ್ಟಿನ ಹದಕ್ಕೆ ಕಲಸಿದ ಗೋಧಿಹಿಟ್ಟನ್ನು ಪಾನಿಪುರಿಯಂತೆ ಎಣ್ಣೆಯಲ್ಲಿ ಪೂರಿ ಮಾಡಿಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಸಕ್ಕರೆ, ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ. ಪೂರಿಯನ್ನು ಪುಡಿ ಮಾಡಿ ಅದಕ್ಕೆ ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ, ಬಿಸಿಯಾದ ಒಂದೆಳೆಯ ಸಕ್ಕರೆ ಪಾಕವನ್ನು ಹಾಕಿ ಕಲಸಿ ಉಂಡೆ ಕಟ್ಟಿದರೆ ಪುರಿ ಲಡ್ಡು ರೆಡಿ. 

click me!