ಚಿಕನ್ ಹೆಸರು ಕೇಳಿದರೆ ಸಾಕು, ಮಾಂಸಾಹಾರಿಗಳ ಬಾಯಲ್ಲಿ ನೀರೂರುತ್ತದೆ. ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಒಗ್ಗರಣೆಗೆ ಮಾತ್ರ ಬಳಸಿ, ಊಟ ಮಾಡುವಾಗ ಅದನ್ನು ಬದಿಗೆ ತಳ್ಳಿಬಿಡುತ್ತೇವೆ. ಆದರೆ, ಅದೇ ಕರಿಬೇವಿನ ಸೊಪ್ಪನ್ನು ಮುಖ್ಯ ಮಸಾಲೆಯನ್ನಾಗಿ ಬಳಸಿ ಚಿಕನ್ ರೋಸ್ಟ್ ಮಾಡಿದರೆ ಅದರ ರುಚಿಯೇ ಬೇರೆ! ಗರಿಗರಿಯಾದ ಕರಿಬೇವು ಮತ್ತು ಘಾಟಾದ ಮೆಣಸಿನ ಪರಿಮಳ ನೀಡುವ ‘ಕರಿಬೇವು ಚಿಕನ್ ರೋಸ್ಟ್’ ಮಾಡುವ ವಿಧಾನ ಇಲ್ಲಿದೆ.
1. ಮ್ಯಾರಿನೇಷನ್ಗಾಗಿ
ಚಿಕನ್ (ಲೆಗ್ ಪೀಸ್ ಅಥವಾ ಸಾಮಾನ್ಯ ತುಂಡುಗಳು) – 250 ಗ್ರಾಂ
ಮೊಸರು – 1/3 ಕಪ್
ನಿಂಬೆಹಣ್ಣಿನ ರಸ – 1 ಟೇಬಲ್ ಸ್ಪೂನ್
ಉಪ್ಪು – ಒಂದು ಚಿಟಿಕೆ
2. ಸ್ಪೆಷಲ್ ಮಸಾಲಾ ಪುಡಿಗೆ
ತಾಜಾ ಕರಿಬೇವಿನ ಸೊಪ್ಪು –1 ಕಪ್
ಒಣ ಮೆಣಸಿನಕಾಯಿ – 5
ಧನಿಯಾ (ಕೊತ್ತಂಬರಿ ಬೀಜ)–1 ಟೇಬಲ್ ಸ್ಪೂನ್
ಕಾಳುಮೆಣಸು (ಕರಿಮೆಣಸು)–1 ಟೇಬಲ್ ಸ್ಪೂನ್
ಜೀರಿಗೆ –1/2 ಟೀಸ್ಪೂನ್
3. ಮಸಾಲಾ ಪೇಸ್ಟ್ಗಾಗಿ
ಈರುಳ್ಳಿ – 1 (ದೊಡ್ಡದು)
ಹಸಿಮೆಣಸಿನಕಾಯಿ – 3
ಬೆಳ್ಳುಳ್ಳಿ ಎಸಳು – 2 ಟೇಬಲ್ ಸ್ಪೂನ್
ಶುಂಠಿ – 1 ಟೇಬಲ್ ಸ್ಪೂನ್
4. ಒಗ್ಗರಣೆ ಮತ್ತು ರೋಸ್ಟ್ಗಾಗಿ
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – ಸ್ವಲ್ಪ
ಗರಂ ಮಸಾಲಾ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮ್ಯಾರಿನೇಷನ್
ಮೊದಲಿಗೆ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು, ಮಸಾಲೆ ಒಳಗೆ ಇಳಿಯುವಂತೆ ಸಣ್ಣದಾಗಿ ಗೀರು ಹಾಕಿ. ಒಂದು ಬಟ್ಟಲಿನಲ್ಲಿ ಚಿಕನ್, ಮೊಸರು, ನಿಂಬೆರಸ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸುಮಾರು 20 ನಿಮಿಷಗಳ ಕಾಲ ನೆನೆಯಲು ಬಿಡಿ (ಇದರಿಂದ ಚಿಕನ್ ಸಾಫ್ಟ್ ಹಾಗೂ ಜ್ಯೂಸಿಯಾಗಿ ಬೇಯುತ್ತದೆ).
ಮಸಾಲಾ ಪುಡಿ ತಯಾರಿಕೆ
ಗ್ಯಾಸ್ ಮೇಲೆ ಬಾಣಲೆ ಇಟ್ಟು ಕಾಳುಮೆಣಸು, ಒಣಮೆಣಸಿನಕಾಯಿ, ಧನಿಯಾ, ಜೀರಿಗೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಕರಿಬೇವು ಗರಿಗರಿಯಾಗಿ ಪರಿಮಳ ಬರುವವರೆಗೆ ಹುರಿದು, ತಣ್ಣಗಾದ ಮೇಲೆ ಮಿಕ್ಸಿ ಜಾರ್ನಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.
ಪೇಸ್ಟ್ ತಯಾರಿಕೆ: ಮತ್ತೊಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
*ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸ್ವಲ್ಪ ಜೀರಿಗೆ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಮ್ಯಾರಿನೇಟ್ ಮಾಡಿದ ಚಿಕನ್, ರುಬ್ಬಿಕೊಂಡ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸಿದ್ಧಪಡಿಸಿದ ಕರಿಬೇವಿನ ಮಸಾಲಾ ಪುಡಿಯನ್ನು ಹಾಕಿ ಚಿಕನ್ ತುಂಡುಗಳಿಗೆ ಮಸಾಲೆ ಹಿಡಿಯುವಂತೆ ಚೆನ್ನಾಗಿ ಕಲಸಿ.
*ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಲು ಬಿಡಿ.
ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ತಳಹಿಡಿಯದಂತೆ ಮಧ್ಯಮಧ್ಯದಲ್ಲಿ ಕೈಯಾಡಿಸುತ್ತಾ, ಸಣ್ಣ ಉರಿಯಲ್ಲಿ ಎಣ್ಣೆ ತೇಲುವವರೆಗೆ ರೋಸ್ಟ್ ಮಾಡಿ ಗ್ಯಾಸ್ ಆಫ್ ಮಾಡಿ.
ಈಗ ಘಮಘಮಿಸುವ, ಖಾರ-ಖಾರವಾದ ಕರಿಬೇವು ಚಿಕನ್ ರೋಸ್ಟ್ ಸವಿಯಲು ಸಿದ್ಧ! ಇದು ಬಿಸಿಬಿಸಿ ಅನ್ನ, ತಿಳಿಸಾರು/ರಸಂ ಜೊತೆ ಸೈಡ್ ಡಿಶ್ ಆಗಿ ಅಥವಾ ಸ್ಟಾರ್ಟರ್ ಆಗಿ ತಿನ್ನಲು ಅತ್ಯದ್ಭುತವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.