Online Shopping: ದಿನಸಿ ಖರೀದಿಸೋ ಮುನ್ನ ತಿಳ್ಕೊಳ್ಳಿ

By Suvarna NewsFirst Published Feb 24, 2022, 8:25 PM IST
Highlights

ಈಗೇನಿದ್ರೂ ಆನ್‌ಲೈನ್ (Online) ಜಮಾನ. ಡ್ರೆಸ್‌, ಶೂ, ಮೇಕಪ್ ಐಟಂ ಬಿಟ್ವಿಡಿ. ತರಕಾರಿ (Vegetable), ಹಣ್ಣು, ದಿನಸಿ ಸಹ ಆರ್ಡರ್ ಮಾಡಿದ್ರೆ ಮನೆ ಬಾಗಿಲಿನ ಮುಂದಿರುತ್ತೆ. ಆದ್ರೆ ಈ ರೀತಿ ಆನ್‌ಲೈನ್‌ನಲ್ಲಿ ದಿನಸಿ ಖರೀದಿಸೋದು ಒಳ್ಳೆಯದಾ ?

ಮನುಷ್ಯ ಸ್ವಭಾವತಃ ಸೋಮಾರಿ. ಅದರಲ್ಲೂ ಕೊರೋನಾ (Corona) ಕಾಲಘಟ್ಟದ ನಂತರ ಲಾಕ್‌ಡೌನ್, ಕರ್ಫ್ಯೂನಿಂದಾಗಿ ಇನ್ನಷ್ಟು ಉದಾಸೀನತೆ ಬಂದ್ಬಿಟ್ಟಿದೆ. ಮನೆಯಿಂದ ಹೊರ ಹೋಗೋಕೆ ನಿರ್ಬಂಧವಿರುವ ಎಲ್ಲವೂ ಡೋರ್ ಟು ಡೆಲಿವರಿಯನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಕೊರೋನಾ ಸೋಂಕು ಹರಡುವುದಕ್ಕೂ ಮೊದಲು ಸಹ ಡ್ರೆಸ್, ಚಪ್ಪಲಿ, ಆಹಾರ ಎಲ್ಲದರ ಖರೀದಿಗೂ ಮನುಷ್ಯ ಆನ್‌ಲೈನ್‌ನ್ನೇ ಅವಲಂಬಿಸಿದ್ದ. ಮಾತ್ರವಲ್ಲ ಫುಡ್ (Food), ಟ್ಯಾಬ್ಲೆಟ್ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ ಹೀಗಾಗಿಯೇ ಮನೆಯಿಂದ ಹೊರ ಕಾಲಿಟ್ಟು ಅಂಗಡಿಗಳನ್ನು ಹುಡುಕಾಡಿ, ಆಯ್ಕೆ ಮಾಡಿ ವಸ್ತುಗಳನ್ನು ಖರೀದಿಸುವುದೆಂದರೆ ಮನುಷ್ಯನಿಗೆ ಇನ್ನಿಲ್ಲದ ಸೋಮಾರಿತನ.

ಡ್ರೆಸ್, ಶೂ, ಫುಡ್ ಹೀಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಖರೀದಿಸುವುದು ಸರಿ. ಆದರೆ ಆನ್‌ಲೈನ್‌ (Online)ನಲ್ಲಿ ದಿನಸಿ ಖರೀದಿಸುವುದು ಅಂದ್ರೆ ಸ್ಪಲ್ಪ ಯೋಚಿಸಬೇಕಾದ ವಿಷ್ಯ. ಆದರೆ, ವಾಸ್ತವದಲ್ಲಿ ನೂರರಲ್ಲಿ 50ರಷ್ಟು ಮಂದಿ ತಮ್ಮ ಒತ್ತಡದ ಜೀವನಶೈಲಿಯಿಂದಾಗಿ ಆನ್‌ಲೈನ್‌ನಲ್ಲಿ ದಿನಸಿ ಖರೀದಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೆ ಈ ರೀತಿ ಆನ್‌ಲೈನ್‌ನಲ್ಲಿ ದಿನಸಿ (Grocery) ಖರೀದಿಸುವುದು ಒಳ್ಳೆಯದಾ ? ಅಥವಾ ಇದ್ರಿಂದ ಏನಾದ್ರೂ ತೊಂದ್ರೆಯಿದ್ಯಾ ?

ಆನ್‌ಲೈನ್‌ ಖರೀದಿಗೂ ಲೈನ್‌: ತಡವಾಗುತ್ತಿರೋದೇಕೆ? ಆರ್ಡರ್‌ ಮಾಡುವಾಗ ಹೀಗ್ಮಾಡಿ

ಆನ್‌ಲೈನ್‌ನಲ್ಲಿ ದಿನಸಿ ಖರೀದಿಸಬಹುದಾ ?
ಆನ್‌ಲೈನ್‌ನಲ್ಲಿ ದಿನಸಿ ಖರೀದಿಸುವುದು ಸಮಯ ಉಳಿಸಲು ಉತ್ತಮ ವಿಧಾನವಾಗಿದ್ದರೂ, ಇದರಿಂದ ಹಲವಾರು ತೊಂದರೆಗಳು ಸಹ ಇವೆ. ಆಹಾರಕ್ಕೆ ಬಳಸುವ ದಿನಸಿ ಪದಾರ್ಥಗಳನ್ನು ಎಲ್ಲರೂ ಕೈಯಲ್ಲಿ ಹಿಡಿದು ನೋಡಿ, ಗುಣಮಟ್ಟ ಪರಿಶೀಲಿಸಿ, ಡೇಟ್ ಬಾರ್ ಆಗಿದೆಯೇ ಎಂಬುದನ್ನು ನೋಡಿಕೊಂಡು ಖರೀದಿಸುತ್ತಾರೆ. ಆದರೆ ಆನ್‌ಲೈನ್‌ನಲ್ಲಿ ದಿನಸಿ ಖರೀದಿಯಲ್ಲಿ ಇದ್ಯಾವುದಕ್ಕೂ ಅವಕಾಶವಿರುವುದಿಲ್ಲ. ಪೋಟೋವನ್ನು ನೋಡಿಯೇ ವಸ್ತುವಿನ ಗುಣಮಟ್ಟವನ್ನು ತಿಳಿದುಕೊಳ್ಳಬೇಕು.

ಇತ್ತೀಚಿನ ಅಧ್ಯಯನದ ಪ್ರಕಾರ, ಅನೇಕ ಆನ್‌ಲೈನ್‌ನಲ್ಲಿ ಮಾರಾಟಗಾರರು ಪ್ಯಾಕ್ ಮಾಡಿದ ಆಹಾರದಲ್ಲಿ ಲಭ್ಯವಿರುವ ಪೌಷ್ಟಿಕಾಂಶದ ಸಂಗತಿಗಳು ಮತ್ತು ಪದಾರ್ಥಗಳ ಮಾಹಿತಿಯನ್ನು ಉಲ್ಲೇಖಿಸುತ್ತಿಲ್ಲ. ಆದರೆ ಅನಿವಾರ್ಯವಾಗಿ ಗ್ರಾಹಕರು ಇಂಥಹಾ ಪ್ಯಾಕೆಟ್ ದಿನಸಿಯನ್ನು ಖರೀದಿಸುತ್ತಾರೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ತಿಳಿದುಬಂದಿದೆ.

'ಸಾರ್ವಜನಿಕ ಆರೋಗ್ಯ ಪೋಷಣೆ' ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಲ್ಲಿ ಶಾಪಿಂಗ್ ಮಾಡುವಾಗ ಗ್ರಾಹಕರು, ಆಹಾರದ ಪೌಷ್ಟಿಕಾಂಶ, ಅವಧಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಆದರೆ ಅನೇಕ ಆನ್‌ಲೈನ್ ಮಾರಾಟಗಾರರು ಈ ಮಾಹಿತಿಯನ್ನು ಎಲ್ಲೂ ತಿಳಿಸುವುದಿಲ್ಲ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ, ಒಂಬತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳಲ್ಲಿ 10 ಪ್ರಮುಖ ರಾಷ್ಟ್ರೀಯ ಪ್ಯಾಕೇಜ್ ಉತ್ಪನ್ನಗಳನ್ನು ಅಧ್ಯಯನ ಮಾಡಲಾಗಿದೆ ಮತ್ತು ಚಿಲ್ಲರೆ ವ್ಯಾಪಾರಿಗಳಾದ್ಯಂತ ಸುಮಾರು 11 ಪ್ರತಿಶತ ಉತ್ಪನ್ನಗಳಿಗೆ ಪೌಷ್ಟಿಕಾಂಶದ ಸಂಗತಿಗಳು ಮತ್ತು ಪದಾರ್ಥಗಳ ಪಟ್ಟಿಗಳನ್ನು ಸೇರಿಸಲಾಗಿಲ್ಲ. 63 ಪ್ರತಿಶತ ಉತ್ಪನ್ನಗಳಲ್ಲಿ, ಸಾಮಾನ್ಯ ಆಹಾರ ಅಲರ್ಜಿಗಳ ಉಪಸ್ಥಿತಿಯನ್ನು ಉಲ್ಲೇಖಿಸಲಾಗಿಲ್ಲ.

Learning From Home: ಆನ್‌ಲೈನ್‌ ಕ್ಲಾಸ್ ಬೋರಿಂಗ್ ಆಗ್ತಿದ್ರೆ ಹೀಗೆ ಮಾಡಿ

ಆನ್‌ಲೈನ್‌ನಲ್ಲಿ ದಿನಸಿ ಖರೀದಿಸುವಾಗ ಯಾವ ವಿಚಾರ ಗಮನಿಸಬೇಕು ?
ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಆನ್‌ಲೈನ್‌ನಲ್ಲಿ ದಿನಸಿ ಖರೀದಿಸುವಾಗ ಗ್ರಾಹಕರಿಗೆ ಯಾವ ಮಾಹಿತಿ ಲಭ್ಯವಾಗಬೇಕು ಎಂಬುದನ್ನು ನಿರ್ದಿಷ್ಟಪಡಿಸಿದೆ. ಇದರಲ್ಲಿ ಕ್ಯಾಲೋರಿಗಳು, ಸೇರಿಸಿದ ಸಕ್ಕರೆಗಳು, ಅಲರ್ಜಿ ಪದಾರ್ಥಗಳು, ಸೋಡಿಯಂ, ಸಕ್ಕರೆ, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೊಟೀನ್‌ನ ಅಂಶವನ್ನು ದಾಖಲಿಸಬೇಕೆಂದು ಸೂಚಿಸಬೇಕಿದೆ.  ಅಧ್ಯಯನದ ಪ್ರಕಾರ, ಎಫ್‌ಡಿಎ ಈ ಅಂತರವನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಕ್ಷಣವೇ ಜಾರಿಗೆ ಬರುವಂತೆ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಲಾಗಿದೆ.

ನೀವು ಸಹ ಆನ್ಲೈನ್ನಲ್ಲಿ ದಿನಸಿ ಖರೀದಿಸಲು ಇಷ್ಟಪಡುವವರಾಗಿದ್ದರೆ ಮೇಲೆ ಹೇಳಿದ ವಿಚಾರಗಳನ್ನು ಗಮನಿಸುವುದನ್ನು ಮರೆಯಬೇಡಿ. ಅಥವಾ ಇದಕ್ಕಿಂತ ಉತ್ತಮ ಆಯ್ಕೆಯೆಂದರೆ ಯಾವತ್ತೂ ದಿನಸಿಯನ್ನು ಸ್ವತಃ ಅಂಗಡಿಗೆ ಹೋಗಿ ಖರೀದಿಸಿ.

click me!