ಮಕ್ಕಳಿಗೆ ಬ್ರೆಡ್, ಜಾಮ್: ಏನೆಲ್ಲ ಸೈಡ್ ಎಫೆಕ್ಸ್ಟ್... ?

Published : Mar 07, 2019, 03:29 PM IST
ಮಕ್ಕಳಿಗೆ ಬ್ರೆಡ್, ಜಾಮ್: ಏನೆಲ್ಲ ಸೈಡ್ ಎಫೆಕ್ಸ್ಟ್... ?

ಸಾರಾಂಶ

ಮಕ್ಕಳಿಗೆ ಇಷ್ಟವೆನ್ನುವ ಕಾರಣಕ್ಕೋ, ಬೆಳಗ್ಗೆ ತಿಂಡಿ ಮಾಡಲು ಸೋಮಾರಿತನವೋ ಗೊತ್ತಿಲ್ಲ. ಒಟ್ಟಿನಲ್ಲಿ ಮಕ್ಕಳಿಗೆ ಬ್ರೆಡ್, ಜಾಮ್ ತಿನ್ನಿಸಿ ಸ್ಕೂಲಿಗೆ ಕಳುಹಿಸುವ ಅಭ್ಯಾಸ ಅನೇಕ ತಾಯಂದಿರಿಗೆ ಇರುತ್ತೆ. ಇದರಿಂದೇನು ಆಪತ್ತು ಗೊತ್ತಾ?

ಮಕ್ಕಳು ಬೆಳಗ್ಗೆ ಏನೂ ತಿನ್ನದಿದ್ದರೆ ತಾಯಿ ಮೊದಲಿಗೆ ನೀಡೋದು ಬ್ರೆಡ್ ಜಾಮ್. ಇಲ್ಲವೇ ಚಪಾತಿ ಜಾಮ್. ಒಟ್ಟಿನಲ್ಲಿ ಎಲ್ಲವಕ್ಕೂ ಜಾಮ್ ಹಾಕಿ ಅವರಿಗೆ ಇಷ್ಟವಾಗುತ್ತೆ ಎಂದು ನೀಡುತ್ತಾರೆ. ಜಾಮ್‌ನಲ್ಲಿ ಎಲ್ಲ ಹಣ್ಣುಗಳೂ ಇವೆ ಎಂದು ಜಾಹೀರಾತುಗಳು ತೋರಿಸುತ್ತವೆ. ಆ್ಯಡ್ ನಂಬಿ ನಿಮ್ಮ ಮಕ್ಕಳಿಗೆ ಜಾಮ್ ಕೊಟ್ಟರೆ, ಮುಗೀತು ಕಥೆ. 

ಒಂದು ಚಮಚ ಜಾಮ್ ಎರಡು ಚಮಚ ಸಕ್ಕರೆಗೆ ಸಮ. ಸಕ್ಕರೆ ಕ್ಯಾನ್ಸರ್‌ನಂಥ ಕಣಗಳನ್ನೂ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಇಂಥ ಸಕ್ಕರೆ ದೇಹಕ್ಕೆ ಸೇರಿದರೆ ಏನಾಗಬಹುದು, ನೀವೇ ಯೋಚಿಸಿ.

  • ಜಾಮ್ ತಯಾರಿಸಲು ಅಗತ್ಯ ಹಣ್ಣುಗಳನ್ನು ಬೇಯಿಸಿ ಅದಕ್ಕೆ ಬೇಕಾದ ಪ್ರಮಾಣದಲ್ಲಿ ಸಕ್ಕರೆ ಹಾಗೂ ಪ್ರಸರ್ವೇಟಿವ್ಸ್ ಬೆರೆಸಲಾಗುತ್ತದೆ. ಹಣ್ಣುಗಳನ್ನು ಬೇಯಿಸುವುದರಿಂದ
  • ಹಣ್ಣಿನ ಪೌಷ್ಟಿಕಾಂಶಗಳು ನಷ್ಟವಾಗುತ್ತವೆ.  ಪ್ಯಾಕ್‌ನಲ್ಲಿ ತೋರಿಸಿರುವ ಎಲ್ಲ ಪೋಷಕಾಂಶಗಳೂ ಜಾಮ್‌ನಲ್ಲಿರೋಲ್ಲ. 
  • ರೆಗ್ಯುಲರ್ ಆಗಿ ಮಕ್ಕಳು ಜಾಮ್ ತಿನ್ನುತ್ತಿದ್ದರೆ ಬೊಜ್ಜು ಹೆಜ್ಜುತ್ತೆ. ಜತೆಗೆ ಹೃದ್ರೋಗವೂ ಕಾಣಿಸಿಕೊಳ್ಳುತ್ತದೆ. ಹೈ ಕ್ಯಾಲರಿ ಸಮಸ್ಯೆ ಜಾಮ್‌ನಿಂದ ಹೆಚ್ಚು ಕಾಡುತ್ತದೆ. 
  • ಜಾಮ್ ಪ್ರಿಸರ್ವಡ್ ಫುಡ್ ಆಗಿರುವುದರಿಂದ ಟೆಸ್ಟ್ ಬಡ್‌ಗೂ ಇಷ್ಟವಾಗುತ್ತವೆ. ಇವು ಮಕ್ಕಳಿಗೆ ಪದೇ ಪದೇ ತಿನ್ನುವಂತೆ ಪ್ರೇರೇಪಿಸುತ್ತವೆ. ಆದುದರಿಂದ ಮಕ್ಕಳು ಅಗತ್ಯ, ಪೋಷಕಾಂಶಗಳಿರೋ ಆಹಾರ ಸೇವಿಸೋ ಬದಲು, ಇದನ್ನೇ ತಿನ್ನಬಹುದು. ಹಾಗಾಗದಂತೆ ಎಚ್ಚರ ವಹಿಸಿಕೊಳ್ಳಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?