ಇದೊಂದು ಸಿಂಪಲ್ ಸೀಕ್ರೆಟ್ ಟ್ರಿಕ್ ಗೊತ್ತಿದ್ರೆ KFC ಸ್ಟೈಲ್ ಗರಿಗರಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲೇ ಮಾಡ್ಬೋದು

Published : Nov 02, 2026, 09:19 PM IST
Crispy French fries recipe

ಸಾರಾಂಶ

Crispy French fries recipe: ಸಂಜೆಯ ಕಾಫಿ-ಟೀ ಜೊತೆಗೆ ಗರಿಗರಿಯಾದ ಫ್ರೆಂಚ್ ಫ್ರೈಸ್ ತಿನ್ನಲು ಇನ್ಮುಂದೆ ಹೊರಗಡೆ ಹೋಗುವ ಅಗತ್ಯವೇ ಇಲ್ಲ! ಅಡುಗೆಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ಕೆಎಫ್‌ಸಿ ಶೈಲಿಯ ಕ್ರಿಸ್ಪಿ ಫ್ರೆಂಚ್ ಫ್ರೈಸ್ ಮಾಡುವ ಸೀಕ್ರೆಟ್ ರೆಸಿಪಿ ಇಲ್ಲಿದೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಜೆಯ ಸ್ನ್ಯಾಕ್ಸ್ ಪಟ್ಟಿಯಲ್ಲಿ 'ಫ್ರೆಂಚ್ ಫ್ರೈಸ್' (French Fries) ಎಲ್ಲರ ಫೇವರಿಟ್. ಸಾಮಾನ್ಯವಾಗಿ ಮೆಕ್‌ಡೊನಾಲ್ಡ್ಸ್ ಅಥವಾ ಕೆಎಫ್‌ಸಿ ಅಂತಹ ರೆಸ್ಟೋರೆಂಟ್‌ಗಳಿಗೆ ಹೋದಾಗ ಹೊರಗಡೆ ಗರಿಗರಿ, ಒಳಗಡೆ ಮೃದುವಾಗಿರುವ ಫ್ರೆಂಚ್ ಫ್ರೈಸ್ ಸವಿಯುವ ಮಜಾವೇ ಬೇರೆ. ಆದರೆ, ನೂರಾರು ರೂಪಾಯಿ ಹಣ ಖರ್ಚು ಮಾಡಿ ರೆಸ್ಟೋರೆಂಟ್‌ಗೆ ಹೋಗುವ ಬದಲು, ಅಚ್ಚ ರೆಸ್ಟೋರೆಂಟ್ ಶೈಲಿಯಲ್ಲೇ ಅತ್ಯಂತ ಗರಿಗರಿಯಾದ ಫ್ರೆಂಚ್ ಫ್ರೈಸ್ ಅನ್ನು ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಅದಕ್ಕಾಗಿ ಅನುಸರಿಸಬೇಕಾದ ಸೀಕ್ರೆಟ್ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ - 2 ರಿಂದ 3 (ದೊಡ್ಡ ಗಾತ್ರದ್ದು)
ಉಪ್ಪು - ರುಚಿಗೆ ತಕ್ಕಷ್ಟು
ಅಚ್ಚಖಾರದ ಪುಡಿ - ಅರ್ಧ ಚಮಚ
ಚಾಟ್ ಮಸಾಲಾ - ಅರ್ಧ ಚಮಚ
ಎಣ್ಣೆ - ಕರಿಯಲು ಬೇಕಾದಷ್ಟು
ನೀರು

ಮಾಡುವ ವಿಧಾನ

ಕಟ್ ಮಾಡುವ ಹಂತ

ಮೊದಲು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಅರ್ಧ ಇಂಚು ದಪ್ಪದ ಸ್ಲೈಸ್‌ಗಳಾಗಿ ಕತ್ತರಿಸಿ, ಬಳಿಕ ಉದ್ದುದ್ದವಾಗಿ ಚೌಕಾಕಾರದಲ್ಲಿ (ಫ್ರೆಂಚ್ ಫ್ರೈಸ್ ಶೇಪ್‌ನಲ್ಲಿ) ಸಮನಾಗಿ ಕತ್ತರಿಸಿಕೊಳ್ಳಿ.

ಬೇಯಿಸುವ ಹಂತ

ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಇಡಿ. ನೀರು ಕಾದ ನಂತರ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕತ್ತರಿಸಿದ ಆಲೂಗಡ್ಡೆ ಹಾಕಿ. ಆಲೂಗಡ್ಡೆಯನ್ನು ಕೇವಲ ಶೇ. 80ರಷ್ಟು ಮಾತ್ರ ಬೇಯಿಸಿಕೊಳ್ಳಿ (ಚಾಕುವಿನಿಂದ ಚುಚ್ಚಿದಾಗ ಸುಲಭವಾಗಿ ಇಳಿಯಬೇಕು, ಪೂರ್ತಿ ಮೆತ್ತಗಾಗಬಾರದು).

ಆರಿಸುವಿಕೆ

ಬೆಂದ ಆಲೂಗಡ್ಡೆಯನ್ನು ಜಾಲರಿಯಿಂದ ಸೋಸಿ, ನೀರನ್ನು ತೆಗೆಯಿರಿ. ನಂತರ ಒಂದು ಒಣ ಹತ್ತಿ ಬಟ್ಟೆ (ಟವಲ್) ಮೇಲೆ ಪ್ರತಿಯೊಂದು ಪೀಸ್ ಅನ್ನು ಹರಡಿ, ಸಂಪೂರ್ಣವಾಗಿ ತಣ್ಣಗಾಗಲು ಮತ್ತು ತೇವಾಂಶ ಆರಿಹೋಗಲು ಬಿಡಿ.

ಮೊದಲ ಬಾರಿ ಕರಿಯುವುದು (First Fry)

ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾಯಿಸಿ. ಎಣ್ಣೆ ಸಾಧಾರಣ ಕಾದಾಗ, ಆಲೂಗಡ್ಡೆ ಹಾಕಿ ಮಧ್ಯಮ ಉರಿಯಲ್ಲಿ ಶೇ. 80ರಷ್ಟು ಮಾತ್ರ (ಬಣ್ಣ ಬದಲಾಗದಂತೆ) ಕರಿದು ತೆಗೆಯಿರಿ. ನಂತರ ಇವುಗಳನ್ನು ಮತ್ತೊಮ್ಮೆ ತಣ್ಣಗಾಗಲು ಬಿಡಿ.

ಎರಡನೇ ಬಾರಿ ಕರಿಯುವುದು (Double Fry - ಸೀಕ್ರೆಟ್ ಟ್ರಿಕ್)

ಎಣ್ಣೆಯನ್ನು ಚೆನ್ನಾಗಿ ಕಾಯಿಸಿ, ತಣ್ಣಗಾದ ಆಲೂಗಡ್ಡೆ ಪೀಸ್‌ಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಗರಿಗರಿಯಾಗಿ ಕರಿಯಿರಿ. ಹೀಗೆ ಎರಡು ಬಾರಿ ಕರಿಯುವುದರಿಂದಲೇ ಫ್ರೆಂಚ್ ಫ್ರೈಸ್ ರೆಸ್ಟೋರೆಂಟ್‌ನಂತೆಯೇ ಹೊರಗಡೆ ಕ್ರಿಸ್ಪಿಯಾಗಿ, ಒಳಗಡೆ ಸಾಫ್ಟ್ ಆಗಿ ಬರುತ್ತವೆ.

ಈಗ ಮಸಾಲೆ ಸೇರಿಸಿ

ಗರಿಗರಿಯಾದ ಬಿಸಿ ಫ್ರೈಸ್‌ಗಳನ್ನು ಒಂದು ಬೌಲ್‌ಗೆ ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಹಾಗೂ ಚಾಟ್ ಮಸಾಲಾ ಉದುರಿಸಿ ಚೆನ್ನಾಗಿ ಟಾಸ್ ಮಾಡಿ.

ಈಗ ಸೂಪರ್ ಟೇಸ್ಟಿ ಹಾಗೂ ಕ್ರಿಸ್ಪಿಯಾದ ರೆಸ್ಟೋರೆಂಟ್ ಸ್ಟೈಲ್ ಫ್ರೆಂಚ್ ಫ್ರೈಸ್ ಸವಿಯಲು ರೆಡಿ! ಟೊಮೆಟೊ ಕೆಚಪ್ ಜೊತೆ ಸವಿದರೆ ಇದರ ರುಚಿ ಅದ್ಭುತ.

ಫ್ಲೇವರ್ ವೆರೈಟಿಗಳು (Tasty Variations)

ಕೇವಲ ಉಪ್ಪು-ಖಾರ ಮಾತ್ರವಲ್ಲದೆ

ಪೆರಿ-ಪೆರಿ ಫ್ರೈಸ್: ಪೆರಿ ಪೆರಿ ಮಸಾಲಾ ಹಾಕಿ ಟಾಸ್ ಮಾಡಿದರೆ ರೆಸ್ಟೋರೆಂಟ್ ಶೈಲಿಯ 'ಪೆರಿ ಪೆರಿ ಫ್ರೈಸ್' ಆಗುತ್ತದೆ.

ಚೀಸ್ ಫ್ರೈಸ್: ಮೇಲೆ ಕರಗಿಸಿದ ಚೀಸ್ (Melted cheese) ಹಾಕಿ ಕೊಟ್ಟರೆ ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತದೆ.

ಇದು ನೆನಪಿರಲಿ

ಸರಿಯಾದ ಆಲೂಗಡ್ಡೆ ಆಯ್ಕೆ (Potato Selection)

ಹೊಸ ಆಲೂಗಡ್ಡೆಗಿಂತ (New potatoes), ಹಳೆಯ ಮತ್ತು ಸ್ವಲ್ಪ ಒಣಗಿದಂತಿರುವ ದೊಡ್ಡ ಆಲೂಗಡ್ಡೆಗಳನ್ನು ಬಳಸಿದರೆ ಫ್ರೆಂಚ್ ಫ್ರೈಸ್ ಪರ್ಫೆಕ್ಟ್ ಆಗಿ ಬರುತ್ತವೆ. ಹೊಸ ಆಲೂಗಡ್ಡೆಯಲ್ಲಿ ನೀರಿನಂಶ ಹೆಚ್ಚಿರುವುದರಿಂದ ಫ್ರೈಸ್ ಮೆತ್ತಗಾಗುವ ಸಾಧ್ಯತೆ ಹೆಚ್ಚು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Pickle: ಚಳಿಗಾಲ ಇರಲಿ, ಬೇಸಿಗೆ ಇರಲಿ ಉಪ್ಪಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌!
ಮ್ಯಾಗಿ ತಿಂದ್ರೆ ಕ್ಯಾನ್ಸರ್​-ಮಕ್ಕಳಾಗೋದು ಕಷ್ಟ! ಪ್ಯಾಕೆಟ್​ ಮೇಲೆ ವಾರ್ನಿಂಗ್​ ಕೊಟ್ಟು ಮಾರಾಟ ಮಾಡ್ತಿರೋ ಅಮೆರಿಕ