ನಮ್ಮಲ್ಲಿ ಸಾಕಷ್ಟು ವೆರೈಟಿ ತರಕಾರಿ ಲಭ್ಯವಿದೆ. ಒಂದೊಂದು ತರಕಾರಿಯೂ ಅನೇಕ ಲಾಭವನ್ನು ಹೊಂದಿದೆ. ಆರೋಗ್ಯವಾಗಿರಬೇಕೆಂದ್ರೆ ನೀವೂ ಎಲ್ಲ ತರಕಾರಿ ಸೇವನೆ ಮಾಡಬೇಕು. ನಿಮ್ಮ ಡಯಟ್ ನಲ್ಲಿ ಹೀರೆಕಾಯಿ ತಿನ್ನಿ.
ಬೇಸಿಗೆ ಶುರುವಾಗಿದೆ. ಈಗ ಮಾರುಕಟ್ಟೆಗೆ ಋತುವಿನ ತರಕಾರಿ ಲಗ್ಗೆ ಇಟ್ಟಿದೆ. ಈಗ ಎಲ್ಲ ಕಾಲದಲ್ಲೂ ಹೀರೆಕಾಯಿ ಸಿಗುತ್ತದೆ. ಈ ಋತುವಿನಲ್ಲಿ ನೀವು ಹೀರೆಕಾಯಿ ತಿಂದಿಲ್ಲವೆಂದ್ರೆ ಈಗ್ಲೇ ಸೇವನೆ ಶುರು ಮಾಡಿ. ನೀವು ಹೀರೆಕಾಯಿಯಲ್ಲಿ ನಾನಾ ರೀತಿಯ ಆಹಾರ ತಯಾರಿಸಬಹುದು. ಹೀರೆಕಾಯಿ ಸಾಂಬಾರ್, ತಂಬುಳಿ, ಪಲ್ಯ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಡಯಟ್ ನಲ್ಲಿ ಹೀರೆಕಾಯಿ ಸೇರಿಸೋದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಹೀರೆಕಾಯಿ (Ridge Gourd) ಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಎ, ಬಿ, ಸಿ ಮಾತ್ರವಲ್ಲದೆ ಕೆಲವು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ.
ಮೆದುಳಿ (Brain) ನ ಆರೋಗ್ಯ (Health) ಕ್ಕೆ ಒಳ್ಳೆಯದು : ಹೀರೆಕಾಯಿಯಲ್ಲಿ ವಿಟಮಿನ್ ಬಿ 6 ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ -6 ದೇಹದಲ್ಲಿನ ನರಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ6, ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಇದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸವನ್ನು ಇದು ಮಾಡುತ್ತದೆ. ವಿಟಮಿನ್ ಬಿ 6 ಜೀವಸತ್ವ ಪಡೆಯಲು ನೀವು ಡಯಟ್ ನಲ್ಲಿ ಹೀರೆಕಾಯಿ ಸೇವನೆ ಮಾಡ್ಬೇಕು.
COSTLY FOOD : ಈ ಸ್ಯಾಂಡ್‌ವಿಚ್ ಬೆಲೆ ಕೇಳಿದ್ರೆ ತಲೆ ಸುತ್ತುತ್ತೆ
ತೂಕ ಇಳಿಸಬೇಕೆಂದ್ರೆ ಹೀರೆಕಾಯಿ ಸೇವಿಸಿ : ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನೋರು ಹೀರೆಕಾಯಿ ಸೇವನೆ ಮಾಡ್ಬೇಕು. ಇದು ಹೊಟ್ಟೆಯ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುವ ಜೊತೆಗೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೀರಿನಿಂದ ಕೂಡಿರುವ ತರಕಾರಿಯಾಗಿದೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲು ಇದನ್ನು ಸೇವನೆ ಮಾಡಬಹುದು. ನಿಮಗೆ ರುಚಿಸಿದ್ರೆ ಹೀರೆಕಾಯಿ ರಸವನ್ನು ಕೂಡ ನೀವು ಕುಡಿಯಬಹುದು.
ಮಧುಮೇಹಿಗಳಿಗೆ ಪ್ರಯೋಜನಕಾರಿ : ಮಧುಮೇಹಿಗಳು ಕೂಡ ಹೀರೆಕಾಯಿ ಸೇವನೆ ಮಾಡಬೇಕು. ಇದು ಸಕ್ಕರೆಯ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದಲ್ಲದೆ ಮಧುಮೇಹದಿಂದ ಉಂಟಾಗುವ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಹೀರೆಕಾಯಿ ಸಹಾಯಕಾರಿ. ಮಧುಮೇಹ ರೋಗಿಗಳು ತಮ್ಮ ಡಯಟ್ ನಲ್ಲಿ ಇದನ್ನು ಸೇರಿಸೋದು ಒಳ್ಳೆಯದು.
Health Tips: ಕ್ಯಾನ್ಸರ್ ವಿರುದ್ಧ ಹೋರಾಡುವ ಈರುಳ್ಳಿ ಹೆಚ್ಚು ತಿಂದ್ರೂ ಅಪಾಯ!
ಚರ್ಮದ ಆರೋಗ್ಯಕ್ಕೆ ಒಳ್ಳೆಯದು : ಹೀರೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮೊಡವೆ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ. ಹೀರೆಕಾಯಿಯಲ್ಲಿರುವ ನೀರು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದು ಚರ್ಮವನ್ನು ಒಳಗಿನಿಂದ ನಿರ್ವಿಷಗೊಳಿಸುತ್ತದೆ. ಹೊಳೆಯುವ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಚರ್ಮ ಡ್ರೈ ಆಗುವ ಕಾರಣ, ಬೇಸಿಗೆಯಲ್ಲಿ ಹೀರೆಕಾಯಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ತಲೆನೋವಿನ (Headache) ಸಮಸ್ಯೆಗೆ ಮುಕ್ತಿ : ಹೀರೆಕಾಯಿ ತಲೆನೋವಿಗೆ ರಾಮಬಾಣ ಎನ್ನಲಾಗಿದೆ. ಹೀರೆಕಾಯಿ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇವು ನೋವನ್ನು ಕಡಿಮೆ ಮಾಡುತ್ತವೆ.
ಕಣ್ಣಿನ ಆರೋಗ್ಯಕ್ಕೆ (Eye Health) ಒಳ್ಳೆಯದು : ಹೀರೆಕಾಯಿಯಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ದೃಷ್ಟಿ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಹೀರೆಕಾಯಿಯಲ್ಲಿರುವ ಬೀಟಾ-ಕ್ಯಾರೋಟಿನ್ ಉತ್ತಮ ಉತ್ಕರ್ಷಣ ನಿರೋಧಕವಾಗಿದೆ. ಇದು ಕಣ್ಣುಗಳ ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕುತ್ತದೆ. ಹೀರೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ರಕ್ತಹೀನತೆಯಿಂದ ಮುಕ್ತಿ : ಹೀರೆಕಾಯಿಯಲ್ಲಿ ಕಬ್ಬಿಣ ಸಮೃದ್ಧವಾಗಿದೆ. ಕಬ್ಬಿಣದ ಕೊರತೆ ನೀಗಿಸಿ, ರಕ್ತಹೀನತೆ ಕಡಿಮೆ ಮಾಡ್ಬೇಕೆಂದ್ರೆ ಹೀರೆಕಾಯಿ ಸೇವನೆ ಮಾಡ್ಬೇಕು, ಇದ್ರಲ್ಲಿರುವ ವಿಟಮಿನ್ ಬಿ 6 ಕೆಂಪು ರಕ್ತ ಕಣಗಳ ರಚನೆಗೆ ಕಾರಣವಾಗುತ್ತದೆ.