
ಒಂದು ಸ್ಯಾಂಡ್ ವಿಚ್ ಬೆಲೆ ಎಷ್ಟಿರಬಹುದು? ಇದನ್ನು ತಿನ್ನೋರಿಗೆ ಬೆಲೆ ಗೊತ್ತಿರುತ್ತೆ. ಒಂದು ಸ್ಯಾಂಡ್ ವಿಚ್ ನಿಮಗೆ 50ರಿಂದ 100 ರೂಪಾಯಿ ಒಳಗೆ ಸಿಗುತ್ತೆ. ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ಸ್ಯಾಂಡ್ ವಿಚ್ ಬೆಲೆ ಇನ್ನೂ ಸ್ವಲ್ಪ ಹೆಚ್ಚಿರಬಹುದು. ಅತಿ ಹೆಚ್ಚು ಅಂದ್ರೆ ಒಂದು ಸಾವಿರ ರೂಪಾಯಿ ಒಳಗೆ ನಿಮಗೆ ಸ್ಯಾಂಡ್ ವಿಚ್ ಸಿಗುತ್ತೆ ಅಂತಾ ನೀವು ಅಂದುಕೊಂಡ್ರೆ ತಪ್ಪು. ವಿಶ್ವದಲ್ಲಿ ಅತ್ಯಂತ ದುಬಾರಿ ಸ್ಯಾಂಡ್ ವಿಚ್ ಬೆಲೆ ಕೇಳಿದ್ರೆ ನೀವು ದಂಗಾಗ್ತಿರ. ನಾವಿಂದು ನಿಮಗೆ ದುಬಾರಿ ಸ್ಯಾಂಡ್ ವಿಚ್ ಎಲ್ಲಿ ಸಿಗುತ್ತೆ, ಅದ್ರ ಬೆಲೆ ಏನು, ಅದ್ರ ವಿಶೇಷತೆ ಏನು ಎಂಬುದನ್ನು ನಿಮಗೆ ಹೇಳ್ತೇವೆ.
ಇಲ್ಲಿ ಸಿಗುತ್ತೆ ದುಬಾರಿ ಸ್ಯಾಂಡ್ ವಿಚ್ (Sandwich) : ನ್ಯೂಯಾರ್ಕ್ (New York) ನ ಸೆರೆಂಡಿಪಿಟಿ 3 ರೆಸ್ಟೋರೆಂಟ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಸ್ಯಾಂಡ್‌ವಿಚ್ ಲಭ್ಯವಿದೆ. ಈ ಸ್ಯಾಂಡ್‌ವಿಚ್‌ನ ಹೆಸರು ಕ್ವಿಂಟೆಸೆನ್ಷಿಯಲ್ ಗ್ರಿಲ್ಡ್ ಚೀಸ್ (Grilled Cheese) ಸ್ಯಾಂಡ್‌ವಿಚ್. ಈ ಸ್ಯಾಂಡ್‌ವಿಚ್ ಜನಸಾಮಾನ್ಯರು ತಿನ್ನೋದು ಕನಸಿನ ಮಾತು. ಅದನ್ನು ಖರೀದಿಸುವ ಬೆಲೆಯಲ್ಲಿ ಎರಡು ತಿಂಗಳು ಜೀವನ ನಡೆಸಬಹುದು.
ಅಬ್ಬಬ್ಬಾ..ಒಂದು ಕೆಜಿ ಆಲೂಗಡ್ಡೆ ಬೆಲೆ ಇಷ್ಟೊಂದಾ? ಆ ದುಡ್ಡಲ್ಲಿ ಐಫೋನ್ ಖರೀದಿಸ್ಬೋದು!
ಕ್ವಿಂಟೆಸೆನ್ಷಿಯಲ್ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ ಬೆಲೆ ಎಷ್ಟು? : ಈ ಸ್ಯಾಂಡ್ ವಿಚ್ ತಯಾರಿಸಲು ಬಳಸಲಾದ ಪದಾರ್ಥಗಳು ತುಂಬಾ ದುಬಾರಿಯಾಗಿವೆ. ಹಾಗಾಗಿಯೇ ಇದ್ರ ಬೆಲೆ ಹೆಚ್ಚು. ಒಂದು ಸ್ಯಾಂಡ್ ವಿಚ್ ಬೆಲೆ ಕನಿಷ್ಠ 17 ಸಾವಿರ ರೂಪಾಯಿ. ಇದು ವಿಶ್ವದ ಅತ್ಯಂತ ದುಬಾರಿ ಸ್ಯಾಂಡ್‌ವಿಚ್ ಎಂಬ ಗಿನ್ನೆಸ್ ದಾಖಲೆಯನ್ನು ಹೊಂದಿದೆ.
ಎರಡು ದಿನ ಮೊದಲೇ ನೀಡ್ಬೇಕು ಆರ್ಡರ್ : ಇಷ್ಟು ದುಬಾರಿ ಬೆಲೆಯ ಸ್ಯಾಂಡ್ ವಿಚ್ ತಿನ್ನೋದು ಸುಲಭವಲ್ಲ. ತಿನ್ನುವ ಆಸೆಯಾದ ತಕ್ಷಣ ನೀವು ತಿನ್ನಲು ಸಾಧ್ಯವಿಲ್ಲ. ಎರಡು ದಿನ ಮೊದಲೇ ಈ ಸ್ಯಾಂಡ್ ವಿಚ್ ಗೆ ಆರ್ಡರ್ ನೀಡಬೇಕು. ಇದನ್ನು ತಯಾರಿಸಲು ಎರಡು ದಿನ ಬೇಕು. ಅಚ್ಚರಿ ಎನ್ನಿಸಿದ್ರೂ ಇದು ಸತ್ಯ.
Health Tips: ಕ್ಯಾನ್ಸರ್ ವಿರುದ್ಧ ಹೋರಾಡುವ ಈರುಳ್ಳಿ ಹೆಚ್ಚು ತಿಂದ್ರೂ ಅಪಾಯ!
ಸ್ಯಾಂಡ್ ವಿಚ್ ಗೆ ಏನೆಲ್ಲ ಬಳಸಲಾಗುತ್ತೆ? : ಹೊಟೇಲ್ ಇರುವ ಜಾಗದಲ್ಲಿ ಸ್ಯಾಂಡ್ ವಿಚ್ ಗೆ ಬೇಕಾದ ಪದಾರ್ಥ ಸಿಗೋದಿಲ್ಲ. ಅವುಗಳನ್ನು ಹೊರಗಿನಿಂದ ತರಿಸಿಕೊಳ್ಳಬೇಕು. ಈ ಸ್ಯಾಂಡ್ ವಿಚ್ ಗೆ ಡೊಮ್ ಪೆರಿಗ್ನಾನ್ ಶಾಂಪೇನ್ ನಿಂದ ತಯಾರಿಸಲಾದ ಫ್ರೆಂಚ್ ಪುಲ್ಮನ್ ಷಾಂಪೇನ್ ಬ್ರೆಡನ್ನು ಇದಕ್ಕೆ ಬಳಸಲಾಗುತ್ತದೆ. ಬಿಳಿ ಟ್ರಫಲ್ ಬೆಣ್ಣೆಯನ್ನು ಇದಕ್ಕೆ ಸೇರಿಸಲಾಗುತ್ತದೆ. ಅತಿ ದುಬಾರಿಯ ಹಾಗೂ ಅಪರೂಪದ ಕ್ಯಾಸಿಯೋಕಾವಲ್ಲೊ ಪೊಡೊಲಿಕೊ ಚೀಸ್ (Caciocavallo Podolico cheese) ಬಳಸಲಾಗುತ್ತದೆ. ಇವೆಲ್ಲವೂ ದುಬಾರಿ. ಇದನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವ ಕಾರಣ, ಆರ್ಡರ್ ಬಂದ ಎರಡು ದಿನದ ನಂತ್ರ ಗ್ರಾಹಕರಿಗೆ ಈ ಸ್ಯಾಂಡ್ ವಿಚ್ ಸಿಗುತ್ತದೆ.
ವಿಶೇಷ ಚೀಸ್ ನಲ್ಲಿ ಇದನ್ನು ಗ್ರಿಲ್ ಮಾಡಿದ ನಂತರ, ತ್ರಿಕೋನ ಆಕಾರದಲ್ಲಿ ಕತ್ತರಿಸಿ 23k ಎಡಿಬಲ್ ಗೋಲ್ಡ್ ಪ್ಲೆಕ್ಸ್ ನೊಂದಿಗೆ ನೀಡಲಾಗುತ್ತದೆ. ಇದನ್ನು Baccarat crystal ಪ್ಲೇಟ್ ನಲ್ಲಿ ಸರ್ವ್ ಮಾಡಲಾಗುತ್ತದೆ. ಇದಲ್ಲದೆ ಬ್ಯಾಕಾರಟ್ (Baccarat) ಗ್ಲಾಸ್ ನಲ್ಲಿ ಲೋಬ್‌ಸ್ಟರ್ ಟೊಮೇಟೊ ಬಿಸ್ಕ್ ( Lobster Tomato Bisque) ಸರ್ವ್ ಮಾಡಲಾಗುತ್ತದೆ.
ಇದು ದುಬಾರಿ ಹೊಟೇಲ್ : ನ್ಯೂಯಾರ್ಕ್‌ನ ಸೆರೆಂಡಿಪಿಟಿ 3 ರೆಸ್ಟೋರೆಂಟ್ ಬರೀ ಈ ಸ್ಯಾಂಡ್ ವಿಚ್ ಗ ಪ್ರಸಿದ್ಧಿಯಾಗಿಲ್ಲ. ಇಲ್ಲಿ ಸಿಗುವ ಎಲ್ಲ ಖಾದ್ಯಗಳು ದುಬಾರಿಯಾಗಿವೆ. ಅತ್ಯಂತ ದುಬಾರಿ ಸಿಹಿತಿಂಡಿ, ಅತ್ಯಂತ ದುಬಾರಿ ಹ್ಯಾಂಬರ್ಗರ್, ಅತ್ಯಂತ ದುಬಾರಿ ಹಾಟ್ ಡಾಗ್ ಮತ್ತು ಅತಿ ದೊಡ್ಡ ಮದುವೆಯ ಕೇಕ್ ತಯಾರಿಸಿದ ರೆಸ್ಟೋರೆಂಟ್ ದಾಖಲೆ ಬರೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.