ಅನ್ನದ (Rice) ಜೊತೆಗೆ ಯಾವಾಗ್ಲೂ ಚಪಾತಿ (Chapathi)ಯನ್ನೂ ತಿನ್ನೋದು ಹಲವರ ರೂಢಿ. ಹೊಟೇಲ್ (Hotel)ಗಳಲ್ಲಿಯೂ ಹಾಗೆಯೇ ಅನ್ನದ ಜೊತೆಗೆ ಚಪಾತಿ ಅಥವಾ ರೋಟಿಯನ್ನು ಸರ್ವ್ ಮಾಡುತ್ತಾರೆ. ಆದ್ರೆ ಹೀಗೆ ಅನ್ನ, ರೋಟಿ (Roti)ಯನ್ನು ಜತೆಯಾಗಿ ತಿನ್ನೋದು ಆರೋಗ್ಯ (Health)ಕ್ಕೆ ಒಳ್ಳೇದಾ ?
ತರಕಾರಿ (Vegetables), ಹಣ್ಣು, ಹಾಲು, ಅನ್ನ, ರೊಟ್ಟಿ ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಎಲ್ಲವನ್ನೂ ಬೇಕಾಬಿಟ್ಟಿ ತಿಂದರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತದೆ. ಅನ್ನದ (Rice) ಜೊತೆ ಪಲ್ಯ,ಸಾಂಬಾರ್,ಮೊಸರು ಎಲ್ಲವನ್ನೂ ಸೇರಿಸಿ ಸೇವನೆ ಮಾಡುವವರಿದ್ದಾರೆ. ಎಲ್ಲ ಆಹಾರ ಹೊಟ್ಟೆಗೆ ಹೋಗುತ್ತದೆ.ಅದನ್ನು ಬೇರೆ ಬೇರೆಯಾಗಿ ಏಕೆ ಸೇವೆನ ಮಾಡಬೇಕೆಂದು ಪ್ರಶ್ನಿಸುತ್ತಾರೆ. ಆದರೆ ತಜ್ಞರ ಪ್ರಕಾರ,ಆಹಾರ ಸೇವನೆಗೂ ಒಂದು ವಿಧಾನವಿದೆ. ಊಟ ಮಾಡಿದ ತಕ್ಷಣ ಹಣ್ಣು ಸೇವನೆ ಒಳ್ಳೆಯದಲ್ಲ. ಅನಾನಸ್ ಜ್ಯೂಸ್ ಕುಡಿದ ತಕ್ಷಣ ಹಾಲು ಕುಡಿದರೆ ಅನೇಕರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಇದರಂತೆ ಊಟಕ್ಕೆ ಅರ್ಧ ಗಂಟೆ ಮೊದಲು ಮತ್ತು ಊಟವಾದ ಅರ್ಧಗಂಟೆ ನಂತರ ನೀರು ಸೇವನೆ ಮಾಡಿ. ಊಟದ ಸಮಯದಲ್ಲಿ ನೀರು ಸೇವನೆ ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ. ಇವೆಲ್ಲದರ ಹಾಗೆಯೇ ಅನ್ನದ ಜೊತೆ ಚಪಾತಿ (Roti) ಸೇವನೆ ಕೂಡ ಒಳ್ಳೆಯದಲ್ಲ. ಅನ್ನ ಹಾಗೂ ಚಪಾತಿಯನ್ನು ಒಟ್ಟಿಗೆ ತಿಂದರೆ ಏನು ಸಮಸ್ಯೆಯಾಗುತ್ತದೆ ಎಂಬುದನ್ನು ಇಂದು ಹೇಳ್ತೆವೆ.
ರೊಟ್ಟಿಯೊಂದಿಗೆ ಅನ್ನ: ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಊಟವಾಗಲಿ ಹೆಚ್ಚಿನವರು ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಅಭ್ಯಾಸದಿಂದ ಕೆಲವು ಅನಾನುಕೂಲತೆಗಳಿವೆ. ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನೂರು ವರ್ಷಕ್ಕೆ ಒಂದೆರಡು ಬಾರಿ ಬೆಳೆಯುವ ಬಿದಿರಿನ ಅಕ್ಕಿ !
ಕ್ಯಾಲೋರಿ ಸೇವನೆ ಹೆಚ್ಚಾಗುತ್ತದೆ : ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದಲ್ಲದೆ ನಿದ್ರೆ ಬರುವುದಿಲ್ಲ. ತಜ್ಞರ ಪ್ರಕಾರ,ಮಧ್ಯಾಹ್ನ ಅಥವಾ ರಾತ್ರಿ ಅನ್ನ ಸೇವನೆ ಮಾಡಲು ಬಯಸಿದ್ದರೆ ಅನ್ನವನ್ನು ಮಾತ್ರ ತಿನ್ನಬೇಕು. ಚಪಾತಿ ತಿನ್ನಲು ಬಯಸಿದ್ದರೆ ಚಪಾತಿಯನ್ನು ಮಾತ್ರ ತಿನ್ನಬೇಕು. ಸ್ವಲ್ಪ ಅನ್ನ ಹಾಗೂ ಸ್ವಲ್ಪ ಚಪಾತಿ ಸೇವನೆ ಮಾಡುತ್ತಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಡುವುದು ಒಳ್ಳೆಯದು.
ಬೊಜ್ಜು ಕಾಡುವ ಅಪಾಯ : ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ರೊಟ್ಟಿಯೊಂದಿಗೆ ಅನ್ನವನ್ನು ತಿನ್ನುವುದು ಕ್ಯಾಲೋರಿ ಹೆಚ್ಚಾಗುತ್ತದೆ. ಇದು ಬೊಜ್ಜಿನ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಒಮ್ಮೆ ದೇಹಕ್ಕೆ ಕೊಬ್ಬು ಸೇರಿಕೊಂಡರೆ, ಅದನ್ನು ಕಡಿಮೆ ಮಾಡುವುದು ಕಷ್ಟವಾಗುತ್ತದೆ. ತೂಕ ಇಳಿಸುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ.
ಗ್ಯಾಸ್ ಮತ್ತು ಅಜೀರ್ಣಕ್ಕೆ ದಾರಿ : ಕೆಲವರು ರೊಟ್ಟಿ ತಿಂದ ನಂತರವೂ ಹೆಚ್ಚಿನ ಪ್ರಮಾಣದಲ್ಲಿ ಅನ್ನ ತಿನ್ನುತ್ತಾರೆ. ಇದು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು. ಎರಡೂ ಸರಿಯಾಗಿ ಜೀರ್ಣವಾಗದ ಕಾರಣ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ.
Healthy Weight Gain: ತೂಕವನ್ನು ಹೆಚ್ಚಿಸಲು ಈ 8 ಬಿಳಿ ವಸ್ತುಗಳನ್ನು ಸೇವಿಸಿ
ನಿಧಾನವಾಗುವ ಜೀರ್ಣಕ್ರಿಯೆ : ಬೆಳಗ್ಗೆ (Morning) ಹಾಗೂ ಮಧ್ಯಾಹ್ನದ ಆಹಾರಕ್ಕಿಂತ (Lunch) ರಾತ್ರಿ (Dinner) ಕಡಿಮೆ ಆಹಾರ ಸೇವನೆ ಮಾಡಬೇಕು. ಬಹುತೇಕರಿಗೆ ರಾತ್ರಿ ಅನ್ನದಿಂದ ದೂರವಿರುವಂತೆ ಸಲಹೆ ನೀಡಲಾಗುತ್ತದೆ. ಚಪಾತಿಯನ್ನು ಮಾತ್ರ ತಿನ್ನುವಂತೆ ಸೂಚಿಸಲಾಗುತ್ತದೆ. ರಾತ್ರಿ ಅನ್ನ ಹಾಗೂ ರೊಟ್ಟಿ ಎರಡನ್ನೂ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ರಾತ್ರಿಯಲ್ಲಿ ಜೀರ್ಣಕ್ರಿಯೆಯು ನಿಧಾನವಾಗಿರುತ್ತದೆ. ಆದ್ದರಿಂದ ಲಘು ಆಹಾರವನ್ನು ಸೇವಿಸಿ. ಚಪಾತಿ,ಅನ್ನ ಎರಡೂ ಬೇಡ ಎನ್ನುವವರು ಬ್ರೆಡ್ ಸೇವನೆ ಮಾಡಬಹುದು.
ಸಕ್ಕರೆ ಸಮಸ್ಯೆ : ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸೇವನೆಯು ಬೊಜ್ಜು ಮತ್ತು ಸಕ್ಕರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೃದಯ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣಿಸುತ್ತದೆ.
ಉಸಿರಾಟಕ್ಕೆ ತೊಂದರೆ : ಅನ್ನ ತಂಪು ಆಹಾರ. ಉಸಿರಾಟದ ಕಾಯಿಲೆ ಅಥವಾ ಅಸ್ತಮಾದಿಂದ ಬಳಲುತ್ತಿರುವವರು ಅನ್ನವನ್ನು ತ್ಯಜಿಸಬೇಕು ಇಲ್ಲವೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಅತಿಯಾದ ಅನ್ನ ಸೇವನೆ ಉಸಿರಾಟದ ತೊಂದರೆ ಹೆಚ್ಚಿಸುತ್ತದೆ.