ಮಕ್ಕಳಿಗೆ ಎಕ್ಸಾಂ ಟೖಮ್. ಓದುವ ನಡುವೆ ಏನೇನೆಲ್ಲ ತಿಂಡಿ ಕೇಳ್ತಾರೆ. ಅದನ್ನು ಅಂಗಡಿಯಿಂದ ತಂದು ಕೊಡುವ ಬದಲು ಮನೆಯಲ್ಲೇ ತಯಾರಿಸಿ ಕೊಟ್ಟರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನೋದು ಮಾತ್ರವಲ್ಲ, ನಿಮಗೂ ಒಳ್ಳೆ ಆಹಾರ ತಿನಿಸಿದ ಖುಷಿ ಇರುತ್ತದೆ.
ಬಾಳೆಹಣ್ಣಿನ ಮಫಿನ್ಸ್
ಬಾಳೆಹಣ್ಣು ಜೀರ್ಣಕ್ರಿಯೆಗೆ ಉತ್ತಮ. ಇದರಲ್ಲಿ ಆರೋಗ್ಯಕ್ಕೆ ಪೂರಕವಾದ ಗೋಧಿ ಹಿಟ್ಟು, ಬಾದಾಮಿ ಹಾಲು ಎಲ್ಲ ಬಳಸೋದರಿಂದ ರುಚಿ ಹೆಚ್ಚುತ್ತೆ. ದೇಹಕ್ಕೆ ಪೌಷ್ಠಿಕಾಂಶ ಸಿಗುತ್ತೆ. ಮಫಿನ್ಸ್ ಅನ್ನೋ ತಿನಿಸು ಇಂದಿನ ಲೈಫ್‌ಸ್ಟೈಲ್‌ನ ಒಂದು ಭಾಗವೇ ಆಗಿದೆ. ಮಫಿನ್ಸ್ ಮಕ್ಕಳಿಗೂ, ದೊಡ್ಡವರಿಗೂ ಇಷ್ಟವಾಗುವ ತಿಂಡಿ. ಅನೇಕ ದೇಶಗಳಲ್ಲಿ, ನಮ್ಮಲ್ಲೂ ಕೆಲವು ಕಡೆ ಇದನ್ನು ಬೆಳಗಿನ ಉಪಹಾರವಾಗಿ ಸೇವಿಸುತ್ತಾರೆ. ಉಳಿದವರು ಇದನ್ನು ಹೊರಗೆಲ್ಲೋ ತಿಂದು ಬರುತ್ತಾರೆ. ಹಾಗೆ ತಿಂದಾಗ ಕೆಲವೊಮ್ಮೆ ಹೊಟ್ಟೆ ಕೆಡೋದೂ ಇದೆ. ಅಜೀರ್ಣ, ಹೊಟ್ಟೆ ಉಬ್ಬರಿಸೋದು ಮೊದಲಾದ ಸಮಸ್ಯೆ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಾಣಿಸಿಕೊಳ್ಳಬಹುದು. ಜೊತೆಗೆ ಇದಕ್ಕೆ ರಾಸಾಯನಿಕ ಇರುವ ಬಣ್ಣಗಳನ್ನು ಹಾಕೋದರಿಂದ ಆ ಕ್ಷಣಕ್ಕೆ ಅಲ್ಲದಿದ್ದರೂ ನಿಧಾನಕ್ಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದಕ್ಕೆ ಸುಲಭ ಉಪಾಯ ನಮಗೆ ಬೇಕಾದ ತಿಂಡಿಗಳನ್ನು ಸ್ವಲ್ಪ ಕಷ್ಟವಾದರೂ ಮನೆಯಲ್ಲೇ ಮಾಡ್ಕೊಳ್ಳೋದು. ಇಲ್ಲಿ ಬಾಳೆಹಣ್ಣಿನ ಮಫಿನ್ಸ್ ರೆಸಿಪಿ ಇದೆ. ಬಾಳೆಹಣ್ಣಿನಲ್ಲಿ ಫೈಬರ್‌ನ ಅಂಶ ಅಧಿಕವಾಗಿರುವ ಕಾರಣ ಇದನ್ನು ತಿಂದರೆ ಜೀರ್ಣವಾಗುತ್ತೋ ಇಲ್ಲವೋ ಅನ್ನುವ ಯೋಚನೆ ಬೇಡ.
ಮಾಡುವ ಅವಧಿ: ನಲವತ್ತೖದು ನಿಮಿಷ
ಏನೆಲ್ಲ ಸಾಮಗ್ರಿಗಳು ಬೇಕು? : ಬಾಳೆಹಣ್ಣು -2, ಖರ್ಜೂರದ ಪೇಸ್ಟ್ - 2 ಚಮಚ, ಗೋಧಿಹಿಟ್ಟು - 1 ಕಪ್, ಪೀನಟ್ ಬಟರ್ - 2 ಚಮಚ, ಬೇಕಿಂಗ್ ಪೌಡರ್ -2 ಚಮಚ, ಗೋಡಂಬಿ- 8, ಬಾದಾಮಿ ಬೀಜದ ಹಾಲು - ಅರ್ಧ ಕಪ್, ಅಡುಗೆ ಸೋಡಾ - 1 ಚಿಟಿಕೆ.
ಮಾಡುವ ವಿಧಾನ ಹೇಗೆ?:
- ಎರಡು ಬಾಳೆಹಣ್ಣುಗಳ ಸಿಪ್ಪೆ ತೆಗೆದು ಒಂದು ಬೌಲ್‌ಗೆ ಹಾಕಿ.
- ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ.
- ಅದಕ್ಕೆ ಗೋಧಿಹಿಟ್ಟು ಹಾಕಿ.
- ಪೀನಟ್ ಬಟರ್ ಅನ್ನು ಸೂಚಿಸಿದ ಪ್ರಮಾಣದಲ್ಲಿ ಇದಕ್ಕೆ ಹಾಕಿ.
- ಬೇಕಿಂಗ್ ಪೌಡರ್, ಗೋಡಂಬಿ, ಖರ್ಜೂರದ ಪೇಸ್ಟ್, ಅಡುಗೆ ಸೋಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಇದಕ್ಕೆ ಬಾದಾಮಿ ಹಾಲನ್ನು ಸೇರಿಸಿ. ಚೆನ್ನಾಗಿ ಹೊಂದುಕೊಳ್ಳುವಂತೆ ಕಲಸಿ.
- ಪೇಪರ್ ಮೌಲ್ಡ್‌ಗೆ ಈ ಮಿಶ್ರಣವನ್ನು ಹಾಕಿ.
- ಇದನ್ನು ಒಂದು ಕಪ್‌ನಲ್ಲಿಟ್ಟು ಓವೆನ್‌ನಲ್ಲಿ 20 ನಿಮಿಷ ಬೇಯಿಸಿ.
- ಆ ಬಳಿಕ ಮಫಿನ್ಸ್ ರೆಡಿಯಾಗುತ್ತೆ. ಇದನ್ನು ಬಿಸಿಬಿಸಿಯಾಗಿ ತಿನ್ನಿ. ಸಖತ್ತಾಗಿರುತ್ತೆ.
ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ
* ಪೀನಟ್ ಬಟರ್ ಚಾಕೋಲೇಟ್ ಕಪ್ ಕೇಕ್
ಪೀನಟ್ ಬಟರ್ ಚಾಕೊಲೇಟ್ ಕೇಕ್ ಅಂದರೆ ನಮ್ಮ ಮಕ್ಕಳಿಗೆ ಮಾತ್ರವಲ್ಲ, ಎಲ್ಲ ಮಕ್ಕಳಿಗೂ ಬಹಳ ಇಷ್ಟ. ಅಂಥ ರುಚಿವತ್ತಾದ ಕೇಕ್ ಎದುರಿದ್ದರೆ ಯಾರು ತಾನೆ ಬೇರೆ ವಿಷಯಕ್ಕೆ ತಲೆಕೆಡಿಸಿಕೊಳ್ತಾರೆ? ಇಷ್ಟೊಂದು ರುಚಿಯಾದ ಪೀನಟ್ ಬಟರ್ ಚಾಕೊಲೇಟ್ ಕೇಕ್‌ನ್ನು ನೀವು ಆರೋಗ್ಯಪೂರ್ಣವಾಗಿ, ಹೈಜಿನಿಕ್ ಆಗಿ ಮನೆಯಲ್ಲೇ ರೆಡಿಮಾಡಿ ಕೊಡಬಹುದು. ಪೀನಟ್ ಬಟರ್ ಮಾರ್ಕೆಟ್‌ನಲ್ಲಿ ಸಿಗುತ್ತೆ. ಅದನ್ನು ತಂದರೂ ಆಯ್ತು, ಮನೆಯಲ್ಲೂ ಇದನ್ನು ರೆಡಿಮಾಡಬಹುದು.
ಏನೇನು ಸಾಮಗ್ರಿಗಳು ಬೇಕು? :
ಕಡ್ಲೇಕಾಯಿ ಬೀಜ - 1 ಕಪ್, ಖರ್ಜೂರದ ಪೇಸ್ಟ್ - 2 ಚಮಚ, ಕೋಕೋ ಪುಡಿ - 2 ಚಮಚ, ಕೋಕೋನಟ್ ಮಿಲ್ಕ್ ಪುಡಿ - 2 ಚಮಚ, ಉಪ್ಪು - 1 ಚಿಟಿಕೆ
ಇದು ಪಾತ್ರೆಗಳ ಪ್ರಪಂಚ; ಆಯ್ಕೆಯಲ್ಲಿರಲಿ ಜಾಣತನ ಕೊಂಚ
ಮಾಡೋ ವಿಧಾನ ಹೇಗೆ? :
- ಮೊದಲು ಬಾಣಲೆಯನ್ನು ಸ್ಟೌ ಮೇಲಿಟ್ಟು ಅದು ಬಿಸಿಯಾದ ಮೇಲೆ ಕಡಲೆಬೀಜ ಹಾಕಿ.
- ಇದನ್ನು ಚೆನ್ನಾಗಿ ಹುರಿಯಿರಿ.
- ಕೊನೆಯಲ್ಲಿ ಸ್ವಲ್ಪ ಉಪ್ಪು ಸೇರಿಸಿ.
- ಇದನ್ನು ರುಬ್ಬಿ ಪೇಸ್ಟ್‌ಥರ ಮಾಡಿಕೊಳ್ಳಿ. ಇದು ಪೀನಟ್ ಬಟರ್.
- ಬಳಿಕ ಒಂದು ಬೌಲ್‌ಗೆ ಕೋಕೋನಟ್ ಮಿಲ್ಕ್ ಪೌಡರ್ ಹಾಕಿ.
- ಮೇಲಿಂದ ಕೋಕೋ ಪುಡಿ, ಖರ್ಜೂರದ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
- ಚಾಕೋಲೇಟ್ ಮಿಕ್ಸ್‌ನ್ನು ರೆಡಿ ಮಾಡಿಕೊಳ್ಳಿ.
- ನಂತರ ಒಂದು ಪೇಪರ್ ಕಪ್‌ಗೆ ಪೀನಟ್ ಬಟರ್ ಹಾಕಿ, ಅದರ ಮೇಲೆ ಚಾಕೋಲೇಟ್ ಮಿಕ್ಸ್ ಹಾಕಿ.
- ಇದನ್ನು ಫ್ರೀಜರ್‌ನಲ್ಲಿ 2 ಗಂಟೆಗಳ ಕಾಲ ಇಡಬೇಕು.
- ಆ ಬಳಿಕ ಸಿಹಿಯಾದ ಪೀನಟ್ ಬಟರ್ ಚಾಕೊಲೇಟ್ ಕಪ್ ಕೇಕ್ ಸಿದ್ಧವಾಗುತ್ತೆ. ಮಕ್ಕಳಿಗೆ ಎಕ್ಸಾಂ ಟೖಮ್. ಓದುವ ನಡುವೆ ಏನೇನೆಲ್ಲ ತಿಂಡಿ ಕೇಳ್ತಾರೆ. ಅದನ್ನು ಅಂಗಡಿಯಿಂದ ತಂದು ಕೊಡುವ ಬದಲು ಮನೆಯಲ್ಲೇ ತಯಾರಿಸಿ ಕೊಟ್ಟರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನೋದು ಮಾತ್ರವಲ್ಲ, ನಿಮಗೂ ಒಳ್ಳೆ ಆಹಾರ ತಿನಿಸಿದ ಖುಷಿ ಇರುತ್ತದೆ.