
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ಅನೇಕ ಜನಪ್ರಿಯ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಂತೆ ಆಹಾರ ಶೈಲಿ ಕೂಡ ಭಿನ್ನವಾಗುತ್ತದೆ. ಒಂದೊಂದು ಸ್ಥಳಗಳು ಒಂದೊಂದು ರೀತಿಯ ತಿಂಡಿ ತಿನಿಸುಗಳಿಗೆ ಫೇಮಸ್ ಆಗಿವೆ. ಉದಾಹರಣೆಗೆ ಮೈಸೂರಿನ ಮೈಸೂರ್ ಪಾಕ್, ದಾವಣಗೆರೆ ಬೆಣ್ಣೆ ದೋಸೆ ಮುಂತಾದವು ಜಾಗತಿಕ ಮಟ್ಟದಲ್ಲೇ ಹೆಸರುವಾಸಿಯಾಗಿದೆ.
ಜಗತ್ತಿನ ಜನಪ್ರಿಯ ಆಹಾರ (Popular Food) ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ (Taste Atlas) ವಿಶ್ವದ ಅತ್ಯುತ್ತಮ ಸಿಹಿ ತಿಂಡಿಗಳ ಪಟ್ಟಿಯನ್ನು ಪ್ರಕಟಿಸಿದೆ. ಭಾರತ (India) ಸೇರಿದಂರೆ ವಿಶ್ವದ ಅನೇಕ ದೇಶಗಳ ಸಿಹಿತಿಂಡಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಟೇಸ್ಟ್ ಅಟ್ಲಾಸ್ 50 ದೇಶಗಳ ವಿವಿಧ ರೀತಿಯ ಸಿಹಿ ತಿಂಡಿಯ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಕೆಲವು ಸಿಹಿ ತಿಂಡಿಗಳಿರುವುದು ವಿಶೇಷ. ಈ ಮೂಲಕ ಭಾರತದ ಸಿಹಿ ತಿಂಡಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಂತಾಗಿದೆ. ಕೆಲವು ದಿನಗಳ ಹಿಂದೆ ಟೇಸ್ಟ್ ಅಟ್ಲಾಸ್ ಭಾರತದ ಫಿರ್ನಿ ಮತ್ತು ಖೀರ್ ಅನ್ನು ವಿಶ್ವದ ಅತ್ಯತ್ತಮ 10 ಫುಡಿಂಗ್ ಗಳ ಪಟ್ಟಿಯಲ್ಲಿ ಸೇರಿಸಿತ್ತು.
ಯುವಕರು ಹಾರ್ಟ್ ಅಟ್ಯಾಕ್ ಸತ್ರೆ ಕ್ರ್ಯಾಶ್ ಡಯಟ್ ಎಫೆಕ್ಟ್ ಅಂತಾರಲ್ಲ, ಏನದು?
ಭಾರತದ ರಸಮಲೈ ಮತ್ತು ಕಾಜು ಕಟ್ಲಿಗೆ ಜಾಗತಿಕ ಮನ್ನಣೆ : ಭಾರತೀಯ ಪಾಕಪದ್ಧತಿಯಲ್ಲಿ ಸಿಹಿತಿನಿಸುಗಳು ವೈವಿಧ್ಯತೆಯನ್ನು ಹೊಂದಿದೆ. ಪ್ರತಿಯೊಂದು ಪ್ರದೇಶದ ಸಿಹಿ ತಿನಿಸುಗಳು ಕೂಡ ತಮ್ಮದೇ ಆದ ವಿಶೇಷತೆಯನ್ನು ಹೊಂದಿದೆ. ಈಗಾಗಲೇ ಐಸ್ ಕ್ರೀಮ್, ರಸ್ತೆ ಬದಿ ಸಿಹಿ ತಿನಿಸುಗಳಲ್ಲಿ ಭಾರತದ ತಿನಿಸುಗಳು ಜಾಗತಿಕ ಮನ್ನಣೆ ಪಡೆದಿವೆ. ಈ ಪಟ್ಟಿಯಲ್ಲಿ ಭಾರತದ ಉತ್ತಮ ಡೆಸರ್ಟ್ ಕೂಡ ಸೇರಿಕೊಳ್ಳಲಿದೆ.
ಹಲಸಿನ ಹಣ್ಣು ಇವನ್ನೆಲ್ಲಾ ತಿಂದ್ರೆ ಆರೋಗ್ಯ ಕೆಡೋದು ಗ್ಯಾರಂಟಿ!
ಟೇಸ್ಟ್ ಅಟ್ಲಾಸ್ ಬಿಡುಗಡೆಗೊಳಿಸಿದ ಉತ್ತಮ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಫ್ರಾನ್ಸ್ ನ ಸಿಹಿ ತಿಂಡಿಯಾದ ಕ್ರೇಪ್ಸ್ ಅಗ್ರಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಬ್ರೆಜಿಲ್ ನ ತೆಂಗಿನಕಾಯಿಯ ಸ್ವೀಟ್ ಬೊಂಬೊಕಾಡೊ ಹಾಗೂ ಮೂರನೇ ಸ್ಥಾನ ಪೆರುವಿನ ಕ್ವೆಸೊ ಹೆಲಾಡೊ ಪಡೆದಿದೆ. ಇಟಲಿಯ ತಿರುಮಿಸು ಎನ್ನು ಸಿಹಿ ತಿಂಡಿಗೆ ನಾಲ್ಕನೇ ಸ್ಥಾನ ಮತ್ತು ಫ್ರಾನ್ಸ್ ನ ಕ್ರೀಮ್ ಬ್ರೂಲಿ 5ನೇ ಸ್ಥಾನ ಮತ್ತು ಸೌಫಲ್ ಔ ಚಾಕಲೇಟ್ 9 ನೇ ಸ್ಥಾನದಲ್ಲಿದೆ. ಬಕ್ಲಾವಾ 27ನೇ ಸ್ಥಾನ ಮತ್ತು ಬ್ರೌನಿ ಹಾಗೂ ಚಾಕೊಲೇಟ್ ಚಿಪ್ ಗಳು ಕುಕೀಗಳು ಕ್ರಮವಾಗಿ 49 ಹಾಗೂ 50 ನೇ ಸ್ಥಾನ ಗಳಿಸಿವೆ.
ಭಾರತದ ರಸಮಲೈ 4.5 ಅಂಕಗಳನ್ನು ಹೊಂದುವ ಮೂಲಕ 31ನೇ ಸ್ಥಾನ ಪಡೆದಿದೆ. ಹಾಗೂ ಕಾಜು ಕತ್ಲಿ 41 ನೇ ಸ್ಥಾನ ಗಿಟ್ಟಿಸಿಕೊಂಡಿದೆ. ರಸಮಲೈ ಪಶ್ಚಿಮ ಬಂಗಾಳದ ಸಿಹಿ ತಿಂಡಿಯಾಗಿದ್ದು ಕ್ರಸ್ಟ್ ಇಲ್ಲದ ಶ್ರೀಮಂತ ಸಿಹಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಸಮಲೈ ಎನ್ನುವುದು ಎರಡು ಹಿಂದಿ ಪದಗಳ ಸಂಯೋಜನೆಯಾಗಿದೆ. ಅಲ್ಲಿ ರಾಸ್ ಎಂದರೆ ರಸ ಮತ್ತು ಮಲೈ ಎಂದರೆ ಕೆನೆ ಎಂದಾಗಿದೆ. ದೀಪಾವಳಿ, ಹೋಳಿ ಸೇರಿದಂತೆ ಅನೇಕ ಹಬ್ಬ ಮತ್ತು ಶುಭ ಸಮಾರಂಭಗಳಲ್ಲಿ ಇದು ಸರ್ವೇಸಾಮಾನ್ಯವಾಗಿದೆ. ಇನ್ನು ಕಾಜು ಕಟ್ಲಿಯನ್ನು ಅನೇಕ ಮಂದಿ ಇಷ್ಟಪಡುತ್ತಾರೆ. ಬೆಳ್ಳಿಯ ಹಾಳೆಯಲ್ಲಿ ಸುತ್ತಿ ಬರುವ ಇದು ಗ್ರಾಹಕರಿಗೆ ಐಶಾರಾಮಿಯಾಗಿಯೂ ಕಾಣುತ್ತದೆ ಎಂದು ಟೇಸ್ಟ್ ಅಟ್ಲಾಸ್ ಮೆಚ್ಚುಗೆ ವ್ಯಕ್ತಪಡಿಸಿದೆ. ಕೆಲ ದಿನಗಳ ಟೇಸ್ಟ್ ಅಟ್ಲಾಸ್ ವಿಶ್ವದ ಅತಿ ಹೆಚ್ಚು ಇಷ್ಟಪಡುವ ಸಿಹಿತಿಂಡಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಭಾರತದ ಮೂರು ಸಿಹಿತಿಂಡಿಗಳು ಸೇರಿದ್ದವು. ಮೈಸೂರು ಪಾಕ್ 14 ನೇ ಸ್ಥಾನದಲ್ಲಿದೆ ಕುಲ್ಫಿ ಮತ್ತು ಕುಲ್ಫಿ ಫಲೂದಾ 18 ಮತ್ತು 32 ನೇ ಸ್ಥಾನವನ್ನು ಪಡೆದಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.