ತೂಕ ಏರಿದಷ್ಟು ವೇಗದಲ್ಲಿ ತೂಕ ಇಳಿಸೋದು ಕಷ್ಟ. ಬಾಯಿ ರುಚಿ ಹೆಚ್ಚಿದ್ರೆ ಮತ್ತೂ ಕಷ್ಟ. ಹಾಗಂತ ತೂಕ ಏರೋಕೆ ಬಿಟ್ಟು ಸುಮ್ಮನೆ ಕೂರೋಕೆ ಆಗಲ್ಲ. ನಿಮ್ಮ ವೇಟ್ ಕಡಿಮೆ ಆಗ್ಬೇಕು ಅಂದ್ರೆ ಕೆಲ ಸುಲಭ ಟಿಪ್ಸ್ ನೀವು ಫಾಲೋ ಮಾಡ್ಬಹುದು.
ಆರೋಗ್ಯಕರ ಜೀವನಶೈಲಿ ಎನ್ನುವುದು ಸಮತೋಲಿತ, ಪೌಷ್ಟಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಜನರು ಈ ಎರಡೂ ಅಂಶಕ್ಕೆ ಮಹತ್ವ ನೀಡೋದಿಲ್ಲ. ಇದೇ ಕಾರಣದಿಂದಾಗಿ ಅವರ ಆರೋಗ್ಯ ಹಾಳಾಗುವ ಜೊತೆಗೆ ತೂಕ ಅನಿಯಮಿತವಾಗಿ ಏರಿಕೆ ಕಾಣುತ್ತದೆ. ಅದೆಷ್ಟು ಪ್ರಯತ್ನ ನಡೆಸಿದ್ರೂ ತೂಕ ಇಳಿಯೋದು ಕಷ್ಟವಾಗುತ್ತದೆ.
ಸಕ್ಕರೆ (Sugar), ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನಂಶವಿರುವ ಆಹಾರ ಮತ್ತು ಪಾನೀಯಗಳ ಸೇವನೆಯಲ್ಲಿ ಮಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಆಹಾರ (food) ಸೇವನೆ ವೇಳೆ ನೀವು ಎಷ್ಟು ಪ್ರಮಾಣದಲ್ಲಿ ಇದನ್ನು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸಬೇಕು. ಅತಿ ಕಡಿಮೆ ಪ್ರಮಾಣದಲ್ಲಿ ಇದರ ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯ (Health)ಕ್ಕೆ ಯಾವುದೇ ಹಾನಿಯಿಲ್ಲ. ಇದ್ರಿಂದ ನಿಮ್ಮ ತೂಕ ಹಾಗೂ ನಿಮ್ಮ ಹಸಿವು ಎರಡೂ ನಿಯಂತ್ರಣಕ್ಕೆ ಬರುತ್ತದೆ.
undefined
'ಸೀತಾರಾಮ' ಸೀರಿಯಲ್ ಸೀತಾ ದಿನವಿಡೀ ಏನ್ ತಿಂತಾರೆ? ಸೆಟ್ನಲ್ಲಿ ರಾಮ್ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್
ನಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯ, ಪ್ರೋಟೀನ್, ಡೈರಿ ಉತ್ಪನ್ನ ಸೇರಿದಂತೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡ ಆಹಾರ ಸೇವನೆ ಮಾಡಬೇಕು. ನಾವು ನಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಿದಾಗ ಹಾಗೂ ಸರಿಯಾದ ಸಮಯದಲ್ಲಿ ಯಾವುದೇ ಒತ್ತಡವಿಲ್ಲದೆ ಎಚ್ಚರಿಕೆಯಿಂದ ಆಹಾರ ಸೇವನೆ ಮಾಡಿದಲ್ಲಿ ನಮ್ಮ ತೂಕವನ್ನು ನಾವು ನಿಯಂತ್ರಣ ಮಾಡಿಕೊಳ್ಳಬಹುದು. ನಾವಿಂದು ಬೆಳಿಗ್ಗೆ ನೀವು ಮಾಡುವ ಯಾವ ಅಭ್ಯಾಸ ನಿಮ್ಮ ತೂಕವನ್ನು ನಿಯಂತ್ರಣ ಮಾಡುತ್ತೆ ಎಂಬುದನ್ನು ತಿಳಿಸ್ತೇವೆ.
ತೂಕ ನಿಯಂತ್ರಣಕ್ಕೆ ಬೆಳಿಗ್ಗೆ ಮಾಡಿ ಈ ಕೆಲಸ :
ಬೇಗ ಎದ್ದು ನೀರು ಕುಡಿ : ಬೇಗ ಮಲಗಿ ಬೇಗ ಏಳು ಎನ್ನುವ ಮಾತು ಈಗಿನದಲ್ಲ. ಹಿಂದಿನ ಕಾಲದಿಂದಲೂ ಆರೋಗ್ಯಕ್ಕೆ ಇದು ಒಳ್ಳೆಯದು ಎಂದು ದೃಢವಾಗಿ ನಂಬಲಾಗಿದೆ. ಸೂರ್ಯ ನೆತ್ತಿಯ ಮೇಲೆ ಬಂದ್ಮೇಲೆ ಏಳುವ ಬದಲು ಬೆಳಿಗ್ಗೆ ಬೇಗ ಏಳುವ ರೂಢಿ ಮಾಡಿಕೊಳ್ಳಿ. ಎದ್ದ ತಕ್ಷಣ ನಿಮ್ಮ ದೇಹವನ್ನು ಹೈಡ್ರೀಟ್ ಮಾಡುವುದು ಮುಖ್ಯ. ಅದಕ್ಕಾಗಿ ನೀವು ಒಂದು ಲೋಟ ನೀರು ಸೇವನೆ ಮಾಡ್ಬೇಕು. ಇದು ಚಯಾಪಚಯಕ್ರಿಯೆಯನ್ನು ಸರಿಯಾಗಿಸುವ ಜೊತೆಗೆ ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ. ಇಡೀ ದಿನ ಕೆಲಸ ಮಾಡಲು ಶಕ್ತಿ ನೀಡುತ್ತದೆ.
Health Tips: ಈ ಖಾದ್ಯ ತೈಲಗಳಲ್ಲಿದೆ ವಿಷಕಾರಿ ಅಂಶ, ಬಳಕೆ ಮಾಡೋದ್ರಿಂದ ಹಾನಿಯೇ ಹೆಚ್ಚು!
ಬೆಳಗಿನ ಉಪಹಾರ ಬಿಡ್ಲೇಬೇಡಿ : ಬೆಳಿಗ್ಗೆ ಯಾವುದೇ ಕಾರಣಕ್ಕೆ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡ್ಬೇಡಿ. ಇದು ನಿಮ್ಮ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ದೇಹಕ್ಕೆ ಶಕ್ತಿಬೇಕು, ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕೆಂದ್ರೆ ನೀವು ಬೆಳಿಗ್ಗೆ ಉಪಹಾರ ಸೇವನೆ ಮಾಡಿ. ಅದ್ರಲ್ಲಿ ಪ್ರೋಟೀನ್, ಹೆಚ್ಚಿನ ಫೈಬರ್ ಕಾರ್ಬೋಹೈಡ್ರೇಟ್, ಆರೋಗ್ಯಕರ ಕೊಬ್ಬು ಸೇರಿದಂತೆ ಪೌಷ್ಠಿಕಾಂಶವಿರುವ ಆಹಾರ ತಿನ್ನಿ.
ಆರೋಗ್ಯಕರ ಊಟ : ನೀವು ಊಟ ಮಾಡುವ ಮೊದಲೇ ನಿಮ್ಮ ಊಟದ ಪ್ಲೇಟ್ ನಲ್ಲಿ ಏನಿರಬೇಕು ಎಂಬುದನ್ನು ತೀರ್ಮಾನಿಸಿ. ಅದ್ರಲ್ಲಿ ವಿವಿಧ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳನ್ನು ಸೇರಿಸಿ. ಪೋಷಕಾಂಶ ಸಮೃದ್ಧ ಆಹಾರ ಸೇವನೆಗೆ ಆದ್ಯತೆ ನೀಡಿ.
ಸದಾ ಆಕ್ಟಿವ್ ಆಗಿರಿ : ಬೆಳಿಗ್ಗೆ ಕನಿಷ್ಠ 30 ನಿಮಿಷವನ್ನು ನಿಮಗಾಗಿ ತೆಗೆದಿಡಬೇಕು. ವ್ಯಾಯಾಮ, ಯೋಗ, ಕ್ರೀಡೆ, ವಾಕಿಂಗ್, ಏರೋಬಿಕ್ಸ್ ಸೇರಿದಂತೆ ನೀವು ಯಾವುದೇ ವ್ಯಾಯಾವನ್ನಾದ್ರೂ ಆಯ್ಕೆ ಮಾಡಿಕೊಂಡು ಸಕ್ರಿಯವಾಗಿರಲು ಪ್ರಯತ್ನಿಸಿ. ಇದು ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.
ತಿನ್ನುವ ವಿಧಾನ ತಿಳಿದು ಪಾಲಿಸಿ : ಅನೇಕರು ಆಹಾರ ಸೇವನೆ ಮಾಡ್ತಾರೆ ಆದ್ರೆ ಹೇಗೆ ಮಾಡ್ಬೇಕು ಎನ್ನುವುದು ತಿಳಿದಿರೋದಿಲ್ಲ. ನಾನಾ ಕಾರಣಕ್ಕೆ ಆಹಾರವನ್ನು ಜಗಿಯದೆ ಹಾಗೆಯೇ ತಿನ್ನುತ್ತಾರೆ. ಇದ್ರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಯಾವಾಗ್ಲೂ ನಾವು ಆಹಾರವನ್ನು ಸ್ವಲ್ಪ ಸ್ವಲ್ಪವೇ ಬಾಯಿಗೆ ಹಾಕಿ ಜಗಿದು ನುಂಗಬೇಕು.