ಚಿಕನ್ ಅಂದ್ರೆ ಸಾಕು ಬಹುತೇಕರಿಗೆ ಕೆಎಫ್‌ಸಿ ನೆನಪಾಗುತ್ತದೆ. ಕ್ರಂಚಿ ಕ್ರಂಚಿ ಫ್ರೈಡ್ ಚಿಕನ್ ತಿನ್ನೋದೆ ಖುಷಿ ಅನ್ನುತ್ತಾರೆ. ಹಾಗೆಯೇ ಸಖತ್ ಟೇಸ್ಟ್ ಇರುತ್ತೆ ಅಂತ ಕೆಎಫ್‌ಸಿ ಚಿಕನ್ ತಿನ್ನಲು ಬಂದ ವ್ಯಕ್ತಿಗೆ ಅದರಲ್ಲಿ ಸತ್ತ ಜೇಡ ಸಿಕ್ರೆ ಹೇಗಾಗಿರ್ಬೇಡ.
ನಾನ್‌ವೆಜ್ ಪ್ರಿಯರು ವೀಕೆಂಡ್‌ಗಳಲ್ಲಿ ಕೆಎಫ್‌ಸಿಗೆ ವಿಸಿಟ್ ಮಾಡೋದನ್ನು ಮಾತ್ರ ಮಿಸ್ ಮಾಡಲ್ಲ. ಕೆಎಫ್‌ಸಿ ಬಕೆಟ್ ಚಿಕನ್, ಕ್ರಂಚಿ ವಿಂಗ್ಸ್ ಮೊದಲಾದವುಗಳನ್ನು ಮೆಲ್ಲುತ್ತಾರೆ. ಹಾಗೆಯೇ ಸೌತ್ ವೇಲ್ಸ್‌ನ ನ್ಯೂಪೋರ್ಟ್‌ನಲ್ಲಿನ ಔಟ್‌ಲೆಟ್‌ನಲ್ಲಿ ಯುವಕ ಕೆಎಫ್‌ಸಿ ಚಿಕನ್ ವ್ರ್ಯಾಪ್ ಅನ್ನು ಕಚ್ಚಿದಾಗ ಅದರಲ್ಲಿ ಸತ್ತ ಜೇಡ ದೊರಕಿದೆ. ಲ್ಯೂಕ್ ಹ್ಯಾಥೆರಾಲ್ ಅವರು ಚಿಕನ್ ರ್ಯಾಪ್ ಆರ್ಡರ್ ಮಾಡಿದ್ದರು. ತಮ್ಮ ಆಹಾರ ಬಂದಾಗ ಒಂದು ಬೈಟ್ ಸವಿದ ಮೇಲಷ್ಟೇ ಅವರಿಗೆ ಅದರಲ್ಲಿ ಜೇಡ ಇರೋದು ಗೊತ್ತಾಗಿದೆ. ಲ್ಯೂಕ್ ಅವರು ನೇರವಾಗಿ ಔಟ್ಲೆಟ್ ಸಿಬ್ಬಂದಿಗೆ ದೂರು ನೀಡಲು ಹೋದರು. ಆದರೆ ಸ್ಟೋರ್ ಮ್ಯಾನೇಜರ್ ದೂರು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.
'ಕೆಎಫ್‌ಸಿಯಲ್ಲಿ ಇಂಥಾ ಘಟನೆ ನಡೆದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ವಿಷಯದ ಬಗ್ಗೆ ತಿಳಿದರೂ ಮ್ಯಾನೇಜರ್ ಸ್ವಲ್ಪವೂ ಕಾಳಜಿ ವಹಿಸಲಿಲ್ಲ, ನನಗೆ ಸಹಜವಾಗಿ ಮರುಪಾವತಿಯನ್ನು ನೀಡಿದರು. ಆದರೆ ಅವರು ವರ್ತಿಸಿದ ರೀತಿ ಸರಿಯಾಗಿರಲ್ಲಿಲ್ಲ. ನಿಜವಾಗಿಯೂ ಬೇಸರವಾಗಿದೆ. ನಾನು ಯಾವಾಗಲೂ ಆ ಕೆಎಫ್‌ಸಿಯಲ್ಲಿ ತಿನ್ನುತ್ತಿದ್ದೆ. ಇನ್ನು ಮುಂದೆ ಹೋಗುವುದಿಲ್ಲ' ಎಂದು ಲ್ಯೂಕ್ ಹ್ಯಾಥೆರಾಲ್ ಹೇಳಿದರು. 'ನಾನು ನಿಜವಾಗಿಯೂ ಈ ರೀತಿಯ ವಿಷಯದ ಬಗ್ಗೆ ದೂರು ನೀಡುವವನಲ್ಲ, ಆದರೆ ಸಿಬ್ಬಂದಿಯ ಪ್ರತಿಕ್ರಿಯೆಯು ನನಗೆ ನಿಜವಾಗಿಯೂ ಕಿರಿಕಿರಿ ಉಂಟುಮಾಡಿದೆ, ಅವರು ಯಾವುದೇ ಕಾಳಜಿ ತೋರುತ್ತಿಲ್ಲ' ಎಂದು ಅವರು ಹೇಳಿದರು.
KFC Chicken Sticks: ಸ್ಪೆಷಲ್ ಅಗರಬತ್ತಿ, ಹಚ್ಚಿದ್ರೆ ಮನೆ ತುಂಬಾ ಚಿಕನ್ ಘಮಘಮ
ಫೆಬ್ರವರಿ 3, 2023 ರಂದು ಸೆಂಟ್ರಲ್ ನ್ಯೂಪೋರ್ಟ್‌ನಲ್ಲಿರುವ ಫ್ರಿಯರ್ಸ್ ವಾಕ್ ಶಾಪಿಂಗ್ ಸೆಂಟರ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್ ಅನ್ನು ಆಹಾರ ನೈರ್ಮಲ್ಯ ಅಧಿಕಾರಿಗಳು ಪರಿಶೀಲಿಸಿದ್ದರು. ಈ ಸಂದರ್ಭಲ್ಲಿ ಔಟ್‌ಲೆಟ್‌ಗೆ ಎರಡು ರೇಟಿಂಗ್ ನೀಡಿದ್ದಾರೆ. ಅಂದರೆ ಇದಕ್ಕೆ ಸಾಕಷ್ಟು ಸುಧಾರಣೆಯ ಅಗತ್ಯವಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಘಟನೆಯ ನಂತರ, ಕೆಎಫ್‌ಸಿ ಸಂಸ್ಥೆ ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದೆ. 'ಆಹಾರ (Food)ದಲ್ಲಿ ಜೇಡ (Spider) ಸಿಕ್ಕಿರುವುದಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ಎಲ್ಲಾ ರೆಸ್ಟೋರೆಂಟ್‌ಗಳ ಗುಣಮಟ್ಟ ಮತ್ತು ನೈರ್ಮಲ್ಯವನ್ನು (Hygeine) ಖಚಿತಪಡಿಸಿಕೊಳ್ಳಲು ನಾವು ತುಂಬಾ ಕಟ್ಟುನಿಟ್ಟಾದ ಪ್ರಕ್ರಿಯೆಗಳನ್ನು ಹೊಂದಿದ್ದೇವೆ. ಹೀಗಿದ್ದೂ ಯಾಕೆ ಇಂಥಾ ತಪ್ಪಾಯಿತು ಎಂದು ನಮಗೆ ತಿಳಿದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ' ಎಂದು ತಿಳಿಸಿದ್ದಾರೆ.
ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..
ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ
ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ(UK) ಕೆಎಫ್‌ಸಿ ಗ್ರಾಹಕರೊಬ್ಬರಿಗೆ ಕೋಳಿಯ ಇಡೀ ತಲೆಯೇ ಕೆಎಫ್‌ಸಿ ಟೇಕ್ ಅವೇ ಬಾಕ್ಸ್‌ನಲ್ಲಿ ಸಿಕ್ಕಿದ್ದು, ಇದನ್ನು ನೋಡಿ ಅವರು ಗಾಬರಿಯಾಗಿದ್ದರು. ಕೆಎಫ್‌ಸಿಯಿಂದ ಚಿಕನ್ ಆರ್ಡರ್ ಮಾಡಿದ ಅವರು ಅರ್ಧ ತಿಂದ ನಂತರ ಒಳ ಭಾಗದಲ್ಲಿ ಕೋಳಿಯ ಕಣ್ಣು ಕೊಕ್ಕು ಇರುವಂತಹ ಇಡೀ ತಲೆ ಕಾಣಿಸಿಕೊಂಡಿದ್ದು, ಆಹಾರವನ್ನು ಅರ್ಧಕ್ಕೆ ಬಿಟ್ಟು ಮೇಲೆದಿದ್ದಾರೆ. ತಮ್ಮ ಈ ಹಾರರ್ ಅನುಭವವನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು.
ಗ್ಯಾಬ್ರಿಯಲ್ ಹೆಸರಿನ ಗ್ರಾಹಕ (Customer)ರೊಬ್ಬರು ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್ ನಲ್ಲಿರುವ ಕೆಎಫ್‌ಸಿ ಶಾಫ್‌ವೊಂದರಿಂದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಈ ಬಾರಿ ಎಂದಿನಂತೆ ಕೆಎಫ್‌ಸಿಯ ರುಚಿಗೆ ಖುಷಿ ಪಡುವ ಬದಲು ಗಾಬರಿಯಾಗುವ ಸರದಿ ಅವರದಾಗಿತ್ತು. ಜಸ್ಟ್‌ಈಟ್ ಡಾಟ್‌ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಆಹಾರದ ಮಧ್ಯದಲ್ಲಿ ಫ್ರೈ ಮಾಡಲಾದ ಕೋಳಿಯ ಇಡೀ ತಲೆ ಇತ್ತು. ಇದನ್ನು ನೋಡಿ ಆಹಾರ ಸೇವಿಸುತ್ತಿದ್ದ ನಾನು ಉಳಿದ ಆಹಾರವನ್ನು ಅಲ್ಲೇ ಬಿಡುವಂತಾಯಿತು ಎಂದು ಬರೆದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಟೇಕ್ ಅವೇ ಟ್ರೂಮಾಎಂಬ ಪೇಜ್ ಮಾಡಿ ಆಕೆ ತನ್ನ ಅನುಭವವನ್ನು ಅಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ನೆಟ್ಟಿಗರು ಕೆಎಫ್‌ಸಿ ಪ್ರಿಯರು ಗಾಬರಿಗೊಂಡಿದ್ದರು.