ತಂಜಾವೂರಿನ ಆಹಾರ ತಂತ್ರಜ್ಞಾನ ಸಂಸ್ಥೆಯಿಂದ ಹಾಲುರಹಿತ ರಾಗಿ ಐಸ್‌ಕ್ರೀಂ ತಯಾರಿ

By Kannadaprabha News  |  First Published Nov 20, 2023, 8:31 AM IST

ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ, ಹಾಲನ್ನು ಬಳಸದೆ ರಾಗಿಯಿಂದ ತಯಾರಿಸಿದ ಐಸ್‌ಕ್ರೀಂ ಅಭಿವೃದ್ಧಿಪಡಿಸಿದ್ದು, ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಯಿತು.


ಬೆಂಗಳೂರು: ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ, ಹಾಲನ್ನು ಬಳಸದೆ ರಾಗಿಯಿಂದ ತಯಾರಿಸಿದ ಐಸ್‌ಕ್ರೀಂ ಅಭಿವೃದ್ಧಿಪಡಿಸಿದ್ದು, ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಸಾಮಾನ್ಯವಾಗಿ, ಐಸ್‌ಕ್ರೀಂ ತಯಾರಿಕೆಯಲ್ಲಿ ಹಾಲನ್ನು ಬಳಸಲಾಗುತ್ತದೆ. ಆದರೆ ಈ ಐಸ್‌ಕ್ರೀಂ ಹಾಲು ರಹಿತವಾಗಿದ್ದು, ಸಿರಿಧಾನ್ಯವಾದ ರಾಗಿಯಿಂದ ತಯಾರಿಸಲ್ಪಟ್ಟಿದೆ. ಹಾಲಿನ ಅಲರ್ಜಿ ಇರುವವರು, ಪೂರ್ಣ ಪ್ರಮಾಣದ ಸಸ್ಯಾಹಾರಿ ಪದ್ಧತಿ ಅನುಸರಿಸುವವರು ಸೇವಿಸಲು ಸಹಕಾರಿಯಾಗಿದೆ. ಕಬ್ಬಿಣ ಮತ್ತು ವಿಟಮಿನ್‌ ‘ಬಿ’ ಯಿಂದ ಇದು ಸಮೃದ್ಧವಾಗಿದೆ.

Latest Videos

undefined

ಮಂಗಳೂರಿನ ಹಣ್ಣಿನ ವ್ಯಾಪಾರಿ ಮಗ ದೇಶದ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಮಾಲೀಕ; 300 ಕೋಟಿ ಸಂಪತ್ತಿನ ಒಡೆಯ!

ಈ ಐಸ್‌ಕ್ರೀಂ ಸೇವನೆಯಿಂದ ವಿಟಮಿನ್‌ ಬಿ-1 ಕೊರತೆಯಿಂದ ಉಂಟಾಗುವ ಬೆರಿಬೆರಿ ರೋಗ ತಡೆಗಟ್ಟಬಹುದು. ರಾಗಿಯು ರೋಗದ ವಿರುದ್ಧ ರಕ್ಷಣೆ ನೀಡುವ ವಿವಿಧ ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯಸ್ನೇಹಿ ಆಹಾರವಾಗಿದೆ. ಸಾಂಪ್ರದಾಯಿಕ ಹಾಲಿನ ಐಸ್‌ಕ್ರೀಂಗೆ ಬದಲಾಗಿ ಇದು ಉತ್ತಮವಾಗಿದ್ದು, ಸಕ್ಕರೆ ಅಲರ್ಜಿಯವರಿಗೂ ಉತ್ತಮ ಆಹಾರವಾಗಿದೆ.

100 ಗ್ರಾಂ ಐಸ್‌ಕ್ರೀಂನಲ್ಲಿ 35.7 ಗ್ರಾಂ ಸಕ್ಕರೆ ಪಿಷ್ಠ, 3.10 ಗ್ರಾಂ ಸಸಾರಜನಕ, 9 ಗ್ರಾಂ ಕೊಬ್ಬು, 0.6 ಗ್ರಾಂ ನಾರಿನಂಶವನ್ನು ಹೊಂದಿದೆ. ಈ ಐಸ್‌ಕ್ರೀಂ ಅನ್ನು ಸಂಸ್ಥೆಯ ಡಾ।ವಿ.ಪಳನಿಮುತ್ತು ಕೃಷಿ ಮೇಳದಲ್ಲಿ ಲೋಕಾರ್ಪಣೆಗೊಳಿಸಿದರು.

9ನೇ ಕ್ಲಾಸ್‌ ಫೇಲ್‌ ಆದ ವ್ಯಕ್ತಿ ಈಗ 1,843 ಕೋಟಿ ಮೌಲ್ಯದ ಐಸ್‌ಕ್ರೀಂ ಕಂಪನಿಯ ಬಾಸ್‌!

ಕ್ಯಾಪ್ಷನ್‌: ಕೃಷಿ ಮೇಳದಲ್ಲಿ ರಾಗಿಯಿಂದ ತಯಾರಿಸಿದ ಕ್ಷೀರರಹಿತ ಐಸ್‌ಕ್ರೀಂ ಅನ್ನು ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯ ಡಾ। ವಿ.ಪಳನಿಮುತ್ತು ಲೋಕಾರ್ಪಣೆಗೊಳಿಸಿದರು.

click me!