ತಟ್ಟೇಲಿದ್ದ ಮೀನು ತಿನ್ನೋಕೆ ಹೊರಟ್ರೆ ಮೀನೇ ಬಾಯಿ ಓಪನ್ ಮಾಡ್ತು !

By Suvarna News  |  First Published Mar 31, 2022, 3:09 PM IST

ಆತನಿಗೆ ಸೀ ಫುಡ್ (Sea Foo) ಅಂದ್ರೆ ಇಷ್ಟ. ಹೀಗಾಗಿ ಹೋಟೆಲಿಗೆ ಹೋದ ಕೂಡ್ಲೇ ಫಿಶ್‌ (Fish) ಐಟಂಗೆ ಆರ್ಡರ್ ಮಾಡಿದ. ನೋಡೋಕೆ ಯಮ್ಮಿ ಆಗಿರೋ ಫುಡ್ ಕೂಡಾ ಟೇಬಲ್‌ಗೆ ಬಂದಾಯ್ತು. ಆದ್ರೆ ಇನ್ನೇನು ಈ ಡಿಫರೆಂಟ್ ಫುಡ್‌ನ್ನು ಟೇಸ್ಟ್ (Taste) ಮಾಡ್ಬೇಕು ಅನ್ನೋಷ್ಟರಲ್ಲಿ, ತಟ್ಟೆಯಲ್ಲಿರೋ ಮೀನು ಬಾಯ್ತೆರೆದಿದೆ. ಅರೆ ಏನು ಫುಡ್‌ಲ್ಲಿದ್ದ ಮೀನು ಜೀವಂತ ಇತ್ತಾ ಅಂತ ಬೆಚ್ಚಿಬೀಳ್ತಿದ್ದೀರಾ. ನಂಬೋದು ಕಷ್ಟಾನೇ ಬಿಡಿ. ಏನ್ ವಿಷ್ಯ ಅಂತ ಡೀಟೈಲಾಗಿ ನೀವೇ ನೋಡಿ ಬಿಡಿ.


ಮೀನೂಟ ಹಲವರ ಫೇವರಿಟ್. ಫಿಶ್ ಕರಿ, ಫಿಶ್ ಫ್ರೈ, ಫಿಶ್ ಮಸಾಲ, ಫಿಶ್ ಬಿರಿಯಾನಿ ಹೀಗೆ ಮೀನಿನ ವಿವಿಧ ರೀತಿಯ ಖಾದ್ಯಗಳು ತಿನ್ನಲು ರುಚಿಕರವಾಗಿರುತ್ತದೆ. ಹೀಗಾಗಿಯೇ ಸೀ ಫುಡ್ ಹಲವರ ಫೇವರಿಟ್. ಮೀನು (Fish) ಹೆಚ್ಚಿನ ಪ್ರಮಾಣದ ಪ್ರೋಟೀನ್, ಅಯೋಡಿನ್, ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುವ ಕಾರಣ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಊಟದಲ್ಲಿ ಸೇರಿಸಲು ಇಷ್ಟಪಡುತ್ತಾರೆ. ಜತೆಗೆ ಮೀನಿನಲ್ಲಿ ವಿಟಮಿನ್ (Vitamin) ಎ, ಇ, ಬಿ, ಡಿ ಅಂಶವನ್ನು ಸಹ ಇರುತ್ತದೆ. ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳ ಅಂಶ ಹೃದಯಾಘಾತ (Heart Attack)ದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೆದುಳಿನ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ.

ಅನೇಕ ಜನರು ಮೀನು ತಿನ್ನಲು ಇಷ್ಟಪಡುತ್ತಾರೆ. ಕೆಲವರು ಬೇಯಿಸಿದ ನಂತರ ತಿನ್ನುತ್ತಾರೆ ಮತ್ತು ಕೆಲವರು ಹುರಿದ ನಂತರ ತಿನ್ನುತ್ತಾರೆ. ಆದರೆ ಜಗತ್ತಿನಲ್ಲಿ ಇಂತಹ ಹಲವು ದೇಶಗಳಿವೆ, ಅಲ್ಲಿ ಜನರು ಹಸಿ ಮೀನುಗಳನ್ನು ತಿನ್ನಲು ಹಿಂಜರಿಯುವುದಿಲ್ಲ. ವಿದೇಶಗಳಲ್ಲಿ ಹೆಚ್ಚಿನ ಹೋಟೆಲ್‌ಗಳಲ್ಲಿ ಹಲವು ಬಗೆಯ ಮೀನುಗಳನ್ನು ನೀಡಲಾಗುತ್ತದೆ. ಇದರಲ್ಲಿ ಹಲವು ಬಾರಿ ಜೀವಂತ ಮೀನುಗಳೂ ತಟ್ಟೆಯಲ್ಲಿ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗುತ್ತಿದೆ. ಇದರಲ್ಲಿ ತಟ್ಟೆಯಲ್ಲಿ ಬಡಿಸಿದ ಮೀನು ಇದ್ದಕ್ಕಿದ್ದಂತೆ ಜೀವಂತವಾಗುತ್ತದೆ ಮತ್ತು ಬಾಯಿ ತೆರೆಯುತ್ತದೆ. ಈ ವೀಡಿಯೋ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

 
 
 
 
 
 
 
 
 
 
 
 
 
 
 

Latest Videos

undefined

A post shared by Rashid alsuwaidi(راشد السويدي) (@rhmsuwaidi)

ಫಿಶ್‌ ಲವರ್ಸ್ ಎಲ್ಲಿ ಹೋದ್ರೂ ಅಷ್ಟೆ. ಎಷ್ಟು ದೊಡ್ಡ ಮೆನು ಮುಂದೆ ತಂದಿಟ್ರೂ ಮೀನನ್ನೇ ಆರ್ಡರ್ ಮಾಡ್ತಾರೆ. ಆತನು ಹಾಗೆ  ಮೀನಂದ್ರೆ ಪಂಚ ಪ್ರಾಣ. ಅದ್ಕೆ ಹೋಟೆಲಿಗೆ ಹೋದ ಕೂಡ್ಲೇ ಫಿಶ್‌ ಐಟಂಗೆ ಆರ್ಡರ್ ಮಾಡಿದ. ನೋಡೋಕೆ ಯಮ್ಮಿ ಆಗಿರೋ ಫುಡ್ ಕೂಡಾ ಟೇಬಲ್‌ಗೆ ಬಂದಾಯ್ತು. ಆದ್ರೆ ಇನ್ನೇನು ಈ ಡಿಫರೆಂಟ್ ಫುಡ್‌ನ್ನು ಟೇಸ್ಟ್ ಮಾಡ್ಬೇಕು ಅಂದ್ರೆ, ತಟ್ಟೆಯಲ್ಲಿರೋ ಮೀನು ಬಾಯ್ತೆರೆದಿದೆ. ಒಮ್ಮೆಗೇ ಹೇಗಾಗ್ಬೋದು ಊಹಿಸಿಕೊಳ್ಳಿ. ಆತನಿಗೂ ಅದೇ ಆಗಿತ್ತು. ಮೀನು ಸ್ಪೂನ್‌ನಲ್ಲಿ ತೆಗೆದುಕೊಂಡು ಇನ್ನೃನು ಬಾಯಿಗಿಡ್ಬೇಕು ಅಂತ ಹೊರಟವನು ಗಾಬರಿಯಾಗಿ ಅಷ್ಟು ದೂರ ಹಾರಿಬಿದ್ದ.

Fish Recipes: ಮೀನಿನ ಅಡುಗೆ ಮಾಡುವಾಗ ಈ ವಿಚಾರ ಗೊತ್ತಿರಲಿ

ತಟ್ಟೆಯಲ್ಲಿ ಇಟ್ಟಿದ್ದ ಮೀನನ್ನು ವ್ಯಕ್ತಿಯೊಬ್ಬರು ತಿನ್ನಲು ಮುಂದಾದಾಗಲೇ ಮೀನು ಬಾಯಿ ತೆರೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ತಟ್ಟೆಯಲ್ಲಿ ಮೀನಿನೊಂದಿಗೆ ಕೆಲವು ಸಲಾಡ್  ಇಟ್ಟಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ವ್ಯಕ್ತಿಯು ಅವುಗಳನ್ನು ತಿನ್ನಲು ಹೋಗುತ್ತಾನೆ, ಆದರೆ ಅದಕ್ಕೂ ಮೊದಲು ಅವನು ಮೀನಿನ ಬಾಯಿಯ ಬಳಿ ಮರದ ಫೋರ್ಕ್ ಅನ್ನು ತೆಗೆದುಕೊಳ್ಳುತ್ತಾನೆ. ಇದ್ದಕ್ಕಿದ್ದಂತೆ ಮೀನು ಜೀವಂತವಾಗುತ್ತದೆ ಮತ್ತು ಬಾಯಿ ತೆರೆಯುತ್ತದೆ. ಮೀನು ಬಾಯಿ ತೆರೆದ ತಕ್ಷಣ, ಮೀನು ಮುಳ್ಳನ್ನು ಬಿಗಿಯಾಗಿ ಹಿಡಿಯುತ್ತದೆ, ವ್ಯಕ್ತಿಯು ಅದನ್ನು ತನ್ನ ಕಡೆಗೆ ಎಳೆಯುತ್ತಾನೆ.

ಸಸ್ಯಹಾರಿಗಳಿಗೊಂದು ಗುಡ್‌ ನ್ಯೂಸ್‌... ಇಲ್ಲಿದೆ ವೆಜಿಟೇರಿಯನ್ ಫಿಶ್

ಈ ವೀಡಿಯೋವನ್ನು Instagramನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಜನ ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 93 ಸಾವಿರ ಬಾರಿ ಲೈಕ್ ಮಾಡಲಾಗಿದೆ. ಜನರು ಕೂಡ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೋಗೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಏನದು, ಹಸಿಯಾಗಿ ತಿನ್ತಿದ್ದೀರಾ, ಬೇಯಿಸಿಯಾ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಅವರಿಬ್ಬರೂ ಪರಸ್ಪರ ತಿನ್ನಲು ಬಯಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರ್ಲಿ ತಟ್ಟೆಯಲ್ಲಿ ಇಟ್ಟಿದ್ದ ಮೀನು ಇದ್ದಕ್ಕಿದ್ದಂತೆ ಜೀವಂತವಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ ಹೇಳಿ ?

click me!