ಬುಡಕಟ್ಟು ಜನಾಂಗ (Tribal People)ದವರು ನಗರದ ಸಂಪರ್ಕದಿಂದ ದೂರ ಉಳಿದುಕೊಂಡವರು. ಹೀಗಾಗಿಯೇ ಇವರ ಜೀವನಶೈಲಿ, ಆಹಾರಪದ್ಧತಿ ಎಲ್ಲವೂ ಕೊಂಚ ವಿಭಿನ್ನವಾಗಿದೆ. ಯಾವಾಗ್ಲೂ ಕಾಡಲ್ಲಿ ಸಿಗೋ ಹಣ್ಣು, ತರಕಾರಿಗಳನ್ನು ತಿನ್ನೋ ಇವ್ರು ಪಿಜ್ಜಾ (Pizza) ತಿಂದ್ರೆ ಹೇಗಿರುತ್ತೆ. ಫಸ್ ಟೈಂ ಪಿಜ್ಜಾ ತಿಂದಾಗ ಅವ್ರ ರಿಯಾಕ್ಷನ್ (Reaction) ಹೇಗಿದೆ ನೀವೇ ನೋಡಿ.
ಪಿಜ್ಜಾ (Pizza) ಅಂದ್ರೆ ಯಾರಿಗೆ ತಾನೇ ಇಷ್ವವಿಲ್ಲ ಹೇಳಿ. ಹದವಾಗಿ ಸಿದ್ಧಪಡಿಸಿದ ಪಿಜ್ಜಾ ಬೇಸ್‌ಗೆ ಮೇಲೊಂದಿಷ್ಟು ಆನಿಯನ್, ಕಾರ್ನ್, ಕ್ಯಾಬೇಜ್, ಸೋಯಾ, ಚೀಸ್ ಟಾಪಿಂಗ್ಸ್ ಹಾಕಿಕೊಟ್ಟು ಬಿಟ್ರೆ, ವಾವ್ ಹೇಳುವಾಗ್ಲೇನೆ ಬಾಯಲ್ಲಿ ನೀರು ಬರುತ್ತೆ. ನೋಡೋಕು ಕಲರ್ ಫುಲ್, ಸ್ಪೈಸಿಯಾಗಿ ತಿನ್ನೋಕು ಸಖತ್ ಟೇಸ್ಟ್. ಹಾಗಂತ ಪಿಜ್ಜಾ ಪ್ರತಿಯೊಬ್ಬರಿಗೂ ಇಷ್ಟಾಂತ ಹೇಳೋಕಾಗಲ್ಲ. ಏಯ್ ಪಿಜ್ಜಾನ ನಂಗಿಷ್ಟ ಇಲ್ಲಾಪ್ಪ ಅಂತ ಮೂಗು ಮುರಿಯುವವರೂ ಇದ್ದಾರೆ. ಹಾಗಿದ್ರೆ ನೀವು ಫಸ್ಟ್ ಪಿಜ್ಜಾ ತಿಂದಾಗ ನಿಮ್ಮ ರಿಯಾಕ್ಷನ್ ಹೇಗಿತ್ತು.?
ಫಸ್ಟ್ ಟೈಂ ಒಂದು ಹೊಸ ಆಹಾರ (Food)ವನ್ನು ತಿಂದಾಗ ಪ್ರತಿಯೊಬ್ಬರ ರಿಯಾಕ್ಷನ್ ಕೂಡಾ ಒಂದೇ ರೀತಿ ಇರಬೇಕೆಂದಿಲ್ಲ. ಕೆಲವೊಬ್ಬರಿಗೆ ಆಹಾರ ಇಷ್ವವಾಗಬಹುದು, ಇನ್ನು ಕೆಲವೊಬ್ಬರಿಗೆ ಇಷ್ಟವಾಗದೇ ಇರಬಹುದು. ಹೀಗಾಗಿಯೇ ಪ್ರಪಂಚದಾದ್ಯಂತ ಹೊಸ ಪಾಕಪದ್ಧತಿಗಳು ಮತ್ತು ಆಹಾರವನ್ನು ಪ್ರಯತ್ನಿಸುವ ಜನರ ವೀಡಿಯೊ (Video)ಗಳನ್ನು ವೀಕ್ಷಿಸಲು ಯಾವಾಗಲೂ ಸಂತೋಷವಾಗುತ್ತದೆ ಏಕೆಂದರೆ ಅವರ ಪ್ರತಿಕ್ರಿಯೆಗಳು ಉಲ್ಲಾಸದಾಯಕವಾಗಿರುತ್ತದೆ.
undefined
Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!
ಸದ್ಯ ವೈರಲ್ (Viral) ಆಗ್ತಿರೋದು ಬುಡಕಟ್ಟು ಜನಾಂಗ (Tribal People)ದವರು ಪಿಜ್ಜಾ ಸವಿದಿರುವ ವೀಡಿಯೋ. ಬುಡಕಟ್ಟು ಜನಾಂಗದವರು ಅಂದ್ರೆ ಸಾಮಾನ್ಯವಾಗಿ ಅವರು ಕಾಡಲ್ಲಿ ಸಿಗೋ ಆಹಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಗೆಡ್ಡೆ ಗೆಣಸು, ಕಾಡಿನ ಹಣ್ಣು, ತರಕಾರಿಗಳನ್ನು ಹೆಚ್ಚು ತಿನ್ನುತ್ತಾರೆ. ಹೀಗಾಗಿಯೇ ಪಿಜ್ಜಾ ಅವರ ಪಾಲಿಗೆ ವಿಚಿತ್ರ ಆಹಾರ. ಹಾಗಿದ್ರೆ ಮೊದಲ ಬಾರಿಗೆ ಪಿಜ್ಜಾ ತಿಂದವರ ರಿಯಾಕ್ಷನ್ (Reaction) ಹೇಗಿತ್ತು ತಿಳಿಯೋಣ.
ಮಸಾಯಿ ಬುಡಕಟ್ಟಿನ ಜನರು ಮೊದಲ ಬಾರಿಗೆ ಪಿಜ್ಜಾ ಪ್ರಯತ್ನಿಸುತ್ತಿರುವುದನ್ನು ತೋರಿಸುವ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅವರ YouTube ಪ್ರೊಫೈಲ್ ಪ್ರಕಾರ ಅವರು ಟಾಂಜಾನಿಯಾದಿಂದ ಬಂದವರು. ಮೊದಲ ಬಾರಿಗೆ ಪಿಜ್ಜಾವನ್ನು ಸವಿಯುತ್ತಿರುವುದಾಗಿ ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಒಬ್ಬ ವ್ಯಕ್ತಿಯು ಇಡೀ ಪಿಜ್ಜಾವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿನೆ. ಇನ್ನೊಬ್ಬನು ಪಿಜ್ಜಾ ಸ್ಲೈಸ್ ಅನ್ನು ಕಟ್ ಮಾಡಲು ಒದ್ದಾಡುತ್ತಿದ್ದಾನೆ. ಪಿಜ್ಜಾ ತಿಂದ ನಂತರ ಗುಂಪಿನಲ್ಲಿರುವ ಒಬ್ಬ ವ್ಯಕ್ತಿಯು, ಪಿಜ್ಜಾ ಹೊಟ್ಟೆಯಲ್ಲಿ ಎಷ್ಟು ದಿನ ಇರುತ್ತದೆ ಎಂದು ಕೇಳುತ್ತಾನೆ. ಇನ್ನೊಬ್ಬ ನನಗೆ ಪಿಜ್ಜಾ ನಿಜವಾಗಿಯೂ ಇಷ್ಟವಾಯಿತು. ರುಚಿಕರವಾಗಿರುವ ಈ ಆಹಾರವನ್ನು ಮತ್ತೊಮ್ಮೆ ತಿನ್ನಲು ಇಷ್ಟಪಡುತ್ತಾರೆ ಎನ್ನುತ್ತಾನೆ. ಮೊದಲ ಬಾರಿಗೆ ನಾವು ಪಿಜ್ಜಾವನ್ನು ಪ್ರಯತ್ನಿಸಿದ್ದೇವೆ ಮತ್ತು ಈಗ ನಮಗೆ ಇನ್ನಷ್ಟು ಬೇಕು ಎಂದು ವೀಡಿಯೊದ ಶೀರ್ಷಿಕೆಯಲ್ಲಿ ಹೇಳಲಾಗಿದೆ.
Pizza Recipes: ಮನೆಯಲ್ಲೇ ಮಾಡಿದ್ರೆ ಆರೋಗ್ಯಕ್ಕೂ ಬೆಸ್ಟ್
ಮೂರು ದಿನಗಳ ಹಿಂದೆ ಪೇಜ್ maasaiboys ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದುವರೆಗೆ 21,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೊದಲ್ಲಿರುವ ಬುಡಕಟ್ಟು ಜನಾಂಗದ ಮಂದಿ ತಮ್ಮ Instagram ಬಯೋ ಪ್ರಕಾರa ಮಸಾಯಿ ಬುಡಕಟ್ಟಿನ ಜನರಾಗಿದ್ದಾರೆ. ಅವರು Instagram ನಲ್ಲಿ 3,800 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 800 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ YouTube ಖಾತೆಯನ್ನು ಸಹ ಹೊಂದಿದ್ದಾರೆ.
ವಿಡಿಯೋವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಾನು ಪಿಜ್ಜಾವನ್ನು ತಿಂದಿದ್ದೇನೆ. ಆದರೆ ಇವರ ಪ್ರತಿಕ್ರಿಯೆ ನೋಡಿ ನನಗೆ ಇನ್ನಷ್ಟು ಪಿಜ್ಜಾಗಳನ್ನು ತಿನ್ನುವ ಆಸೆಯಾಗುತ್ತಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರ್ಲಿ, ಬುಡಕಟ್ಟು ಜನಾಂಗದವರು ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನೋದು ನೋಡಿ ಜನರಲ್ಲೂ ಪಿಜ್ಜಾದ ಬಗ್ಗೆ ಕ್ರೇಜ್ ಇನ್ನಷ್ಟು ಹೆಚ್ಚದಿದ್ದರೆ ಸಾಕು.