ಬೆಳಿಗ್ಗೆ ಬಿಸಿ ಮಾಡಿದ ಹಾಲು (Milk) ಆಗ್ಲೇ ಹಾಳಾಯ್ತು, ಸಾಂಬಾರ್ (Samabr) ಸ್ಮೆಲ್ ಆಗಿದೆ ಎನ್ನುವ ಮಾತುಗಳು ಬೇಸಿಗೆಯಲ್ಲಿ ಕೇಳಿ ಬರ್ತಿರುತ್ತವೆ. ಬೇಸಿಗೆ (Summer)ಯಲ್ಲಿ ಆಹಾರ (Food) ಬಹಳ ಬೇಗ ಹಾಳಾಗುತ್ತೆ. ತಯಾರಿಸಿದ ಅಡುಗೆ (Cooking) ಸ್ವಲ್ಪ ಸಮಯ ಉಳಿಯಬೇಕೆಂದ್ರೆ ಟ್ರಿಕ್ಸ್ ಉಪಯೋಗಿಸಬೇಕು.
ಬೇಸಿಗೆ (Summer) ಶುರುವಾಗಿದೆ. ಬಿಸಿಲ ಝಳಕ್ಕೆ ಮೈನಿಂದ ಬೆವರು (Sweat) ಕಿತ್ತು ಬರ್ತಿದೆ. ಬೇಸಿಗೆಯಲ್ಲಿ ಆರೋಗ್ಯ (Health) ಸಾಕಷ್ಟು ವ್ಯತ್ಯಯವಾಗುತ್ತದೆ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲ ಆಹಾರ (Food) ದ ಬಗ್ಗೆಯೂ ಕಾಳಜಿ ವಹಿಸಬೇಕು. ಯಾಕೆಂದ್ರೆ ಆಹಾರಗಳು ಬಿಸಿಲ ಕಾರಣಕ್ಕೆ ಬಹುಬೇಗ ಹಾಳಾಗುತ್ತವೆ. ಹಾಲಿ (Milk) ನಿಂದ ಹಿಡಿದು ಹಣ್ಣಿ (Fruit) ನವರೆಗೆ ಎಲ್ಲ ಆಹಾರಗಳು ಬೇಗ ಹಾಳಾಗುತ್ತದೆ. ಇದನ್ನು ತಿಳಿಯದೆ ನಾವು ಸೇವನೆ ಮಾಡಿದ್ರೆ ಅನಾರೋಗ್ಯ (Illness)ಕ್ಕೆ ಒಳಗಾಗುವ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಫುಡ್ ಪಾಯ್ಸನ್ (Food Poison) ಅಪಾಯವೂ ಹೆಚ್ಚಿರುತ್ತದೆ. ಹಳಸಿದ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಡುಗೆ ಮಾಡಿದ ನಂತರ ಅದನ್ನು ಸರಿಯಾದ ಸಮಯದಲ್ಲಿ ತಿನ್ನುವುದು ಮತ್ತು ಉಳಿದ ಆಹಾರವನ್ನು ಸರಿಯಾಗಿ ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ.
ಬೇಸಿಗೆಯಲ್ಲಿ ಪ್ರತಿ ಮನೆಯಲ್ಲೂ ಆಹಾರ ಹಾಳಾಗುವುದು ಮಾಮೂಲಿ. ಬೇಸಿಗೆಯಲ್ಲಿ ಆಹಾರವನ್ನು ಹೆಚ್ಚೆಚ್ಚು ತಯಾರಿಸಬಾರದು. ಒಂದು ವೇಳೆ ಹೆಚ್ಚಾಗಿ ಆಹಾರ ಉಳಿದರೆ ಅದನ್ನು ದೀರ್ಘಕಾಲದವರೆಗೆ ಹೊರಗೆ ಇಡುವುದರಿಂದ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಅದು ಆಹಾರವನ್ನು ತ್ವರಿತವಾಗಿ ಹಾಳುಮಾಡುತ್ತದೆ. ನೀವೂ ಈ ಸಮಸ್ಯೆ ಎದುರಿಸುತ್ತಿರಬಹುದು. ಬೇಸಿಗೆಯಲ್ಲಿ ಆಹಾರವನ್ನು ಹೇಗೆ ದೀರ್ಘಕಾಲದವರಗೆ ಹಾಳಾಗದಂತೆ ರಕ್ಷಿಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ವಯಸ್ಸು ಹೆಚ್ಚುತ್ತಿದೆಯೇ ? ಹಾಗಿದ್ರೆ ಆಹಾರ ಕ್ರಮ ಬದಲಾಯಿಸಿ
ಬೇಸಿಗೆಯಲ್ಲಿ ಆಹಾರ ಹಾಳಾಗ್ಬಾರದು ಅಂದ್ರೆ ಹೀಗೆ ಮಾಡಿ :
ಆಹಾರ ತಯಾರಿ ವೇಳೆ ಇರಲಿ ಬುದ್ಧಿವಂತಿಕೆ : ಬೇಸಿಗೆಯಲ್ಲಿ ಹಸಿವಾಗುವುದು ಕಡಿಮೆ. ಬಾಯಾರಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗುವ ಕಾರಣಕ್ಕೆ ಜನರು ಹೆಚ್ಚು ನೀರು ಸೇವನೆ ಮಾಡ್ತಾರೆ. ಇದ್ರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗೆ ಮಸಾಲೆ ಪದಾರ್ಥಗಳನ್ನು ಬೇಸಿಗೆಯಲ್ಲಿ ಇಷ್ಟಪಡುವವರು ಕಡಿಮೆ. ಹಾಗಾಗಿ ಆ ಸಮಯಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ತಯಾರಿಸಿ. ಎರಡು –ಮೂರು ಹೊತ್ತಿಗೆ ಬೇಕಾಗುವಷ್ಟು ಆಹಾರವನ್ನು ತಯಾರಿಸಬೇಡಿ. ಅದಲ್ಲದೆ ಆಹಾರ ಸೇವನೆ ಮಾಡುವ ಎರಡು ಗಂಟೆ ಮೊದಲು ಆಹಾರ ತಯಾರಿಸಿ.
ಉಳಿದ ಆಹಾರ ಏನು ಮಾಡ್ಬೇಕು ? : ಮನೆಯಲ್ಲಿ ತಯಾರಿಸಿದ ಆಹಾರ ಹೆಚ್ಚಾದಲ್ಲಿ ಅದನ್ನು ತಕ್ಷಣ ಫ್ರಿಜ್ ನಲ್ಲಿಡಿ. ಆಹಾರವನ್ನು ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನ ಹೊರಗೆ ಇಟ್ಟರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಅದು ಆಹಾರವನ್ನು ತ್ವರಿತವಾಗಿ ಹಾಳುಮಾಡಲು ಪ್ರಾರಂಭಿಸುತ್ತದೆ. ಹಾಗಾಗಿ ಆಹಾರವನ್ನು ಆದಷ್ಟು ಬೇಗ ಫ್ರಿಜ್ ನಲ್ಲಿಡಿ.
ಕೊಬ್ಬು ಕರಗಬೇಕಾ? ಈ ಮೂರು ವಸ್ತುಗಳನ್ನು ತಿಂದು ನೋಡಿ!
ಆಹಾರವನ್ನು ರಕ್ಷಿಸುತ್ತೆ ತಣ್ಣೀರು : ಎಲ್ಲರ ಮನೆಯಲ್ಲೂ ಫ್ರಿಜ್ ಇರುವುದಿಲ್ಲ. ಕೆಲವರು ಫ್ರಿಜ್ ಬಳಕೆ ಮಾಡುವುದಿಲ್ಲ. ಅಂಥವರು ಹೊರಗಿನ ತಾಪಮಾನದಲ್ಲಿ ಆಹಾರವನ್ನಿಟ್ಟರೆ ಹಾಳಾಗುತ್ತೆ ಎನ್ನುತ್ತಾರೆ. ಫ್ರಿಜ್ ಇಲ್ಲವೆಂದ್ರೆ ಚಿಂತೆ ಬೇಡ. ಒಂದು ಪಾತ್ರೆಗೆ ತಣ್ಣನೆಯ ನೀರು ಹಾಕಿ, ಅದ್ರೊಳಗೆ ಆಹಾರದ ಪಾತ್ರೆಯನ್ನು ಇಡಿ. ಇದು ಆಹಾರ ದೀರ್ಘಕಾಲದವರೆಗೆ ಹಾಳಾಗದಂತೆ ರಕ್ಷಿಸುತ್ತದೆ.
ಸಾಮಾನ್ಯವಾಗಿ ಅಡುಗೆ ಮಾಡಿದ ಪಾತ್ರೆಯನ್ನೇ ನಾವು ಫ್ರಿಜ್ ನಲ್ಲಿ ಇಡ್ತೇವೆ. ಆದ್ರೆ ಮಿಕ್ಕ ಆಹಾರವನ್ನು ತಯಾರಿಸಿದ ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಹಾಕಿ ನಂತ್ರ ಫ್ರಿಜ್ ನಲ್ಲಿಡಿ. ಆಹಾರವನ್ನು ನೀವು ತಯಾರಿಸಿದ್ದು ತಕ್ಷಣ ಸೇವನೆ ಮಾಡ್ತಿಲ್ಲ ಎನ್ನುವುದಾದ್ರೆ ನೀವು ಆಹಾರ ಬಿಸಿಯಿರುವಾಗ್ಲೇ ಫ್ರಿಜ್ ನಲ್ಲಿ ಇಡಬೇಡಿ. ಆ ಆಹಾರವನ್ನು ಸಾಮಾನ್ಯ ತಾಪಮಾನಕ್ಕೆ ತಂದು ನಂತ್ರ ಫ್ರಿಜ್ ನಲ್ಲಿಡಿ. ಬಿಸಿ ಆಹಾರವನ್ನು ಫ್ರಿಜ್ ನಲ್ಲಿಟ್ಟರೆ ಆಹಾರ ಹಾಳಾಗುವ ಸಾಧ್ಯತೆಯಿರುತ್ತದೆ.
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಯಾವುದೇ ಕಾರಣಕ್ಕೂ ಮಾಡಿಟ್ಟ ಅಡುಗೆಯನ್ನು ಪದೇ ಪದೇ ಬಿಸಿ ಮಾಡ್ಬೇಡಿ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತವೆ.