ಸಂಡೆ ಸ್ಪೆಷಲ್ ಚಿಕನ್‌ಗೆ ಕತ್ತರಿ; ಮೊಟ್ಟೆಗೆ ₹4 ರೂ ಜಾಸ್ತಿ, ಚಿಕನ್ ₹50! ಬೆಲೆ ಏರಿಕೆ ಹಿಂದಿನ ಕಾರಣ ಏನು?

Published : Nov 26, 2026, 05:56 PM IST
chicken rate

ಸಾರಾಂಶ

ಕೋಳಿ ಆಹಾರದ ಬೆಲೆ ಏರಿಕೆಯಿಂದಾಗಿ ಚಿಕನ್ ಹಾಗೂ ಮೊಟ್ಟೆ ದರ ಶೀಘ್ರದಲ್ಲೇ ದುಪ್ಪಟ್ಟಾಗುವ ಸಾಧ್ಯತೆಯಿದೆ. ಮೆಕ್ಕೆಜೋಳ ಮತ್ತು ಸೋಯಾಬೀನ್ ದರ ಹೆಚ್ಚಳದಿಂದಾಗಿ ಕೋಳಿ ಸಾಕಣೆ ಉದ್ಯಮ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಹಲವು ಫಾರ್ಮ್‌ಗಳು ಮುಚ್ಚುವ ಹಂತ ತಲುಪಿವೆ.

ಬೆಂಗಳೂರು: ಬೆಲೆ ಏರಿಕೆಯ ಬಿಸಿ ಇದೀಗ ಕೋಳಿ ಸಾಕಣಿಕೆಗೆ ದೊಡ್ಡ ಪೆಟ್ಟು ಕೊಡುವ ಸಿಗ್ನಲ್ ಸಿಗ್ತಿದೆ. ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿಕನ್ ರೆಟ್ ದುಪ್ಪಟ್ಟಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಒಂದು ಕೆಜಿ ಕೋಳಿ ಮಾಂಸಕ್ಕೆ ಬರೋಬ್ಬರಿ 50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಜೊತೆಗೆ ಮೊಟ್ಟೆ ಕೂಡ ಬಲು ಭಾರ ಆಗಲಿದೆ. 7 ರಿಂದ 8 ರೂಪಾಯಿ ಸಿಗುತ್ತಿದ್ದ ಒಂದು ಮೊಟ್ಟೆಗೆ ಹೆಚ್ಚುವರಿಯಾಗಿ ನಾಲ್ಕು ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬರಬಹುದು.

ಯಾಕೆ ಕೋಳಿ ರೇಟ್ ಹೆಚ್ಚಳ ಆಗ್ತಿದೆ?

ಕೋಳಿ ಸಾಕಣಿಕೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋಳಿ ಆಹಾರಕ್ಕಾಗಿ ಬಳಸುವ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಲೆಗಳು ತೀವ್ರವಾಗಿ ಏರಿಕೆ ಆಗಿದೆ. ಇದು ಕೋಳಿ ಉದ್ಯಮದ ಮೇಲೆ ತೀವ್ರ ಪೆಟ್ಟು ಕೊಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೋಳಿ ಮಾಂಸದ ಬೆಲೆ ಕೆಜಿಗೆ 40 ರಿಂದ 50 ರೂ.ಗಳಷ್ಟು ಹೆಚ್ಚಾಗಬಹುದು. ಅದೇ ರೀತಿ ಒಂದು ಮೊಟ್ಟೆಯ ಬೆಲೆ 3 ರಿಂದ 4 ರೂಪಾಯಿ ಹೆಚ್ಚಾಗಬಹುದು ಎಂದು ವರದಿ ಹೇಳಿದೆ.

ಬೆಲೆ ಏರಿಕೆ ಸೂಚನೆ ಸಿಗುತ್ತಿದ್ದಂತೆಯೇ ಅಖಿಲ ಭಾರತ ಕೋಳಿ ಸಾಕಣೆದಾರರ ಸಂಘ (ಎಐಪಿಬಿಎ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಏರುತ್ತಿರುವ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಲೆಗಳಿಂದ ತಮ್ಮನ್ನು ರಕ್ಷಿಸಬೇಕು. ಅಕ್ರಮ ಸಂಗ್ರಹಣೆ ನಿಲ್ಲಿಸಬೇಕು ಮತ್ತು ದಾಸ್ತಾನು ಮಿತಿಗಳನ್ನು ವಿಧಿಸಬೇಕು. ಅಷ್ಟೇ ಅಲ್ಲದೇ ಸರ್ಕಾರಿ ಗೋದಾಮುಗಳಿಂದ ಸುಮಾರು 30 ಲಕ್ಷ ಟನ್ ಮೆಕ್ಕೆ ಜೋಳವನ್ನು ಕೋಳಿ ಉದ್ಯಮಕ್ಕೆ ಸಬ್ಸಿಡಿ ದರದಲ್ಲಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದೆ.

ಕೆಲವು ವರದಿಗಳ ಪ್ರಕಾರ ಕೋಳಿ ಸಾಕಣೆ ಉದ್ಯಮವು ಕಳೆದ 50 ವರ್ಷಗಳಲ್ಲೇ ಅತ್ಯಂತ ಕೆಟ್ಟ ಬಿಕ್ಕಟ್ಟು ಎದುರಿಸುತ್ತಿದೆ. ಕೋಳಿ ಆಹಾರದ ಬೆಲೆಯಲ್ಲಿ ಭಾರೀ ಏರಿಕೆಯೊಂದಿಗೆ, ಉತ್ಪಾದನಾ ವೆಚ್ಚವು ರೈತರಿಗೆ ತುಂಬಾ ಭಾರವಾಗಿದೆ. ಕೋಳಿ ಆಹಾರದ ಬೆಲೆ ಪ್ರತಿ ಟನ್‌ಗೆ ಸುಮಾರು ₹15,000 ಹೆಚ್ಚಾಗಿದೆ ಎಂದು AIPBA ಮೂಲಗಳು ತಿಳಿಸಿವೆ. ಇದು ಹೀಗೆ ಮುಂದುವರಿದರೆ ವ್ಯವಹಾರ ನಡೆಸುವುದು ತುಂಬಾ ಕಷ್ಟ. ಅನೇಕ ರೈತರು ಉತ್ಪಾದನೆಯನ್ನು ಕಡಿಮೆ ಮಾಡುತ್ತಿದ್ದಾರೆ. ತಮ್ಮ ಹೊಲಗಳನ್ನು ಮುಚ್ಚುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಒಂದು ಆಘಾತಕಾರಿ ವಿಚಾರ ಏನಂದರೆ.. ಮೇವು ತಯಾರಿಕಾ ಕಾರ್ಖಾನೆಗಳಲ್ಲಿ ಉತ್ಪಾದನೆ ಮತ್ತು ಬೇಡಿಕೆ ಶೇ. 15 ರಿಂದ 20 ರಷ್ಟು ಕುಸಿದಿದೆ. ದೇಶಾದ್ಯಂತ ಶೇ. 20 ರಿಂದ 25 ರಷ್ಟು ಕೋಳಿ ಸಾಕಣೆ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಇನ್ನೂ ಕೆಲವು ಮುಚ್ಚುವ ಹಂತದಲ್ಲಿವೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದ ಕೆಲವು ಭಾಗಗಳು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಇದರ ಪರಿಣಾಮ ಬೀರಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಇನ್‌ಫ್ಲುಯೆನ್ಸರ್ ಜಾಹೀರಾತು ನಂಬುವ ಮುನ್ನ ಎಚ್ಚರ: ಶೇ.95ರಲ್ಲಿ ನಿಯಮ ಉಲ್ಲಂಘನೆ ಪತ್ತೆ!
ಕೈ ಹಿಡಿದ ಸಿರಿ ಧಾನ್ಯ ಇಡ್ಲಿ ಉದ್ಯಮ, 50 ಸಾವಿರ ಹೂಡಿಕೆ ಮಾಡಿ ಈಗ ತಿಂಗಳಿಗೆ 7.5 ಲಕ್ಷ ರೂ ಆದಾಯ