ಕಚೇರಿಯಲ್ಲಿ ಬಾಳೆಗೊನೆ! ತಿನ್ನೋಕಲ್ಲ ಟೆನ್ಷನ್ ಕಡಿಮೆ ಮಾಡೋಕಂತೆ!

By Roopa Hegde  |  First Published Jun 5, 2024, 3:35 PM IST

ಟೆನ್ಷನ್‌ಗೂ ಬಾಳೆಗೊನೆಗೂ ಏನು ಸಂಬಂಧ? ಈ ಪ್ರಶ್ನೆಯನ್ನು ಚೀನಾ ಮಂದಿಗೆ ಕೇಳಿದ್ರೆ ಅದು ಒತ್ತಡ ಕಡಿಮೆ ಮಾಡುತ್ತೆ ಎನ್ನುತ್ತಾರೆ. ಅಷ್ಟೇ ಅಲ್ಲ ಸಿಬ್ಬಂದಿ ಟೆನ್ಷನ್ ಕಡಿಮೆ ಮಾಡೋಕೆ ಹೊಸ ಪ್ಲಾನ್ ಶುರು ಮಾಡಿದ್ದಾರೆ. 
 


ಕೆಲಸ ಯಾವುದೇ ಇರಲಿ ಸಣ್ಣ ಟೆನ್ಷನ್ (Work Pressure) ಒಂದು ಇದ್ದೇ ಇರುತ್ತೆ. ಅದ್ರಲ್ಲೂ ಎಂಟು – ಒಂಭತ್ತು ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ. ಒಂದ್ಕಡೆ ದೈಹಿಕ ಚಟುವಟಿಕೆ (Physical Activity) ಇಲ್ಲದೆ ದೇಹದ ತೂಕ ಹೆಚ್ಚಾಗಿ ರೋಗಗಳು ಕಾಣಿಸಿಕೊಂಡ್ರೆ ಮತ್ತೊಂದು ಕಡೆ ಕೆಲಸದ ಒತ್ತಡ ಮಾನಸಿಕ ಸ್ಥಿತಿಯನ್ನು ಹಾಳು ಮಾಡಿರುತ್ತದೆ. ಈಗಿನ ದಿನಗಳಲ್ಲಿ ಬಹುತೇಕ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿವೆ. ಅವರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಕಚೇರಿ ಕೆಲಸ ಸುಗಮವಾಗಿ ನಡೆಯುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಉದ್ಯೋಗಿಗಳನ್ನು ಖುಷಿಯಾಗಿಡಲು ಅನೇಕ ಇವೆಂಟ್ ನಡೆಯುತ್ತಿರುತ್ತದೆ. ಒಳಾಂಗಣ ಆಟ, ಹೊರಾಂಗಣ ಆಟ ಸೇರಿದಂತೆ ಭಿನ್ನ ಕಾರ್ಯಕ್ರಮಗಳನ್ನು ಕಾಣ್ಬಹುದು. ಆದ್ರೆ ಚೀನಾದ ಒಂದು ಕಂಪನಿ ಕೆಲಸಗಾರರ ಒತ್ತಡವನ್ನು ಕಡಿಮೆ ಮಾಡಲು ವಿಚಿತ್ರ ಮಾರ್ಗವನ್ನು ಅನುಸರಿಸಿದೆ. ಅದು ಅನುಸರಿಸುತ್ತಿರುವ ಮಾರ್ಗ ಬಹಳ ಅಚ್ಚರಿ ಹುಟ್ಟಿಸುತ್ತದೆ. ಎಂದೂ ಕೇಳದ ಈ ವಿಧಾನದ ಬಗ್ಗೆ ನೀವು ತಿಳಿಲೇಬೇಕು.

ಬಾಳೆಹಣ್ಣು (Banana) ಎಲ್ಲ ಋತುವಿನಲ್ಲಿ ಸಿಗುವ ಹಣ್ಣು. ಈ ಬಾಳೆ ಹಣ್ಣಿಗೂ ಚೀನಾ ಆ ಕಂಪನಿ (Company) ಗೂ ಸಂಬಂಧವಿದೆ. ಬಾಳೆ ಹಣ್ಣು ಆರೋಗ್ಯ (Health) ಕ್ಕೆ ಒಳ್ಳೆಯದು. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಬಾಳೆ ಹಣ್ಣನ್ನು ತಿನ್ನುತ್ತಾರೆ. ಹಳ್ಳಿಗಳಲ್ಲಿ ಜನರು ಬಲಿತ ಬಾಳೆಕಾಯಿ ಗೊನೆಯನ್ನು ತಂದು ಅದನ್ನು ಮನೆಯಲ್ಲಿ ನೇತು ಹಾಕ್ತಾರೆ. ಅದು ಹಣ್ಣಾಗ್ತಿದ್ದಂತೆ ಬಾಳೆ ಹಣ್ಣನ್ನು ತಿನ್ನುತ್ತಾರೆ. ಚೀನಾದ ಈ ಕಂಪನಿ ಕೂಡ ಉದ್ಯೋಗಿಗಳ ಟೆನ್ಷನ್ ಕಡಿಮೆ ಮಾಡಲು ಬಾಳೆ ಹಣ್ಣಿನ ಮೊರೆ ಹೋಗಿದೆ. 

Latest Videos

undefined

ಕಡಲೆಕಾಯಿ ಸಿಪ್ಪೆ ತೆಗೆಯೋದು ಕಷ್ಟವಲ್ಲ..ರಣವೀರ್ ಬ್ರಾರ್ ಟಿಪ್ಸ್‌ ಇಲ್ಲಿದೆ ನೋಡಿ!

ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ (Chinese Social Media Post) ಒಂದು ವೈರಲ್ ಆಗಿದೆ. ಅದ್ರಲ್ಲಿ ಕಚೇರಿ ಟೇಬಲ್ ಮೇಲೆ ಬಾಳೆ ಗೊನೆ ಇರೋದನ್ನು ಕಾಣಬಹುದು. ಚೀನಾದ ಒಂದು ಕಂಪನಿ ಮಾತ್ರವಲ್ಲ ಅನೇಕ ಕಂಪನಿಗಳು ಈ ವಿಧಾನವನ್ನು ಪಾಲಿಸುತ್ತಿವೆ. ಬಾಳೆಕಾಯಿ ಗೊನೆ ತರುವ ಕಂಪನಿಗಳು ಅದನ್ನು ಹೂದಾನಿ ಇಡುವಂತೆ ಕಚೇರಿಯಲ್ಲಿ ಇಡುತ್ತದೆ. ಬಾಳೆಕಾಯಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವವರೆಗೂ ಅದನ್ನು ಕಚೇರಿಯಲ್ಲಿಯೇ ಇಡಲಾಗುತ್ತದೆ. ಸುಮಾರು ಒಂದು ವಾರಗಳ ನಂತ್ರ ಬಾಳೆಕಾಯಿ ಹಣ್ಣಾಗುತ್ತದೆ. ಬಾಳೆಕಾಯಿ ಹಣ್ಣಾದ ಮೇಲೆ ಅದನ್ನು ಕಂಪನಿ ಸಿಬ್ಬಂದಿ ತಿನ್ನುತ್ತಾರೆ. ಒಂದು ಗೊನೆ ಖಾಲಿ ಆಗ್ತಿದ್ದಂತೆ ಇನ್ನೊಂದು ಗೊನೆ ಕಂಪನಿಗೆ ಬಂದಿರುತ್ತದೆ. 

ಬಾಳೆ ಹಣ್ಣಿನಿಂದ ಒತ್ತಡ ನಿವಾರಣೆ (Work Pressure) : ಕಂಪನಿಯಲ್ಲಿ ಹೀಗೆ ಬಾಳೆ ಹಣ್ಣಿನ ಗೊನೆ ಇಡೋದ್ರಿಂದ ಅದು ಒತ್ತಡ ಕಡಿಮೆ ಮಾಡುತ್ತದೆಯಂತೆ. ಬಾಳೆಕಾಯಿ ಹಣ್ಣಾಗುವವರೆಗೂ ಸಿಬ್ಬಂದಿ ಅದನ್ನು ಗಮನಿಸುತ್ತಿರುತ್ತಾರೆ. ಅವರ ಗಮನ ಅದ್ರ ಮೇಲಿರುವ ಕಾರಣ ಕೆಲಸದ ಒತ್ತಡ ಹೆಚ್ಚಾಗಿ ಕಾಡುವುದಿಲ್ಲ. ಇನ್ನೊಂದು ಬಾಳೆಕಾಯಿ ಹಣ್ಣಾದ ಮೇಲೆ ಅದನ್ನು ಸಿಬ್ಬಂದಿ ಹಂಚಿ ತಿನ್ನುತ್ತಾರೆ. ಈ ಹಂಚಿ ತಿನ್ನುವ ಸಮಯದಲ್ಲಿ ಪರಸ್ಪರ ಸ್ನೇಹ ಬೆಳೆಯುತ್ತದೆ. ಸಿಬ್ಬಂದಿ ಮಧ್ಯೆ ಸ್ನೇಹಪರ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ಅವರ ನಂಬಿಕೆ. 

ಮುಖೇಶ್, ನೀತಾ ಅಂಬಾನಿ ನಿತ್ಯದ ಡಿನ್ನರ್ ನಲ್ಲಿ ಇದೊಂದು ಐಟಂ ಮಿಸ್ ಆಗಲೇಬಾರದು, ಏನದು?

ಚೀನಾ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ. ಸಾವಿರಾರು ಮಂದಿ ಇದಕ್ಕೆ ಲೈಕ್  ಒತ್ತಿದ್ದಾರೆ. ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಇಷ್ಟಪಟ್ಟಿದ್ದಾರೆ. ಬಾಳೆ ಹಣ್ಣಿನ ವ್ಯಾಪಾರ ಹೆಚ್ಚು ಮಾಡುವ ವಿಧಾನ ಇದು ಎಂದು ಬಳಕೆದಾರನೊಬ್ಬ ಬರೆದಿದ್ದಾನೆ. ಇನ್ನೊಬ್ಬ ನಮ್ಮ ಕಚೇರಿಯಲ್ಲಿ ಬರೀ ಬಾಳೆಹಣ್ಣು ಮಾತ್ರವಲ್ಲ ಅನಾನಸ್ ಕೂಡ ಬೆಳೆಸಲಾಗ್ತಿದೆ ಎಂದು ಬರೆದಿದ್ದಾನೆ. 

click me!