Healthy Food: ಮಳೆಗಾಲದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ಬೇಡಿ

By Suvarna NewsFirst Published Jul 18, 2023, 4:47 PM IST
Highlights

ವೆಜ್ ಇರಲಿ, ನಾನ್ ವೆಜ್ ಇರಲಿ, ಬೆಳ್ಳುಳ್ಳಿ ಒಗ್ಗರಣೆ, ಈರುಳ್ಳಿ ಇಲ್ಲದೆ ಹೋದ್ರೆ ಆಹಾರ ರುಚಿಸೋದಿಲ್ಲ. ಹಾಗಂತ ಇದನ್ನು ಎಲ್ಲ ಋತುವಿನಲ್ಲಿ ತಿನ್ನೋದು ಒಳ್ಳೆಯದಲ್ಲ. ಆಹಾರ ತಜ್ಞರ ಪ್ರಕಾರ, ಒಂದು ಋತುವಿನಲ್ಲಿ ನೀವು ಈರುಳ್ಳಿ- ಬೆಳ್ಳುಳ್ಳಿಯಿಂದ ದೂರವಿದ್ರೆ ಒಳ್ಳೆಯದು.
 

ಹವಾಮಾನಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಗಳು ಬದಲಾಗುತ್ತವೆ. ಬೇಸಿಗೆಯಲ್ಲಿ ತಣ್ಣನೆಯ ಪಾನೀಯ, ಆಹಾರಗಳನ್ನು ಹೆಚ್ಚು ಪ್ರಿಫರ್ ಮಾಡ್ತೀವಿ. ಅದೇ ಮಳೆಗಾಲ ಚಳಿಗಾಲ ಬಂತೆಂದರೆ ಬಿಸಿ ಬಿಸಿ ಆಹಾರಗಳು ಹೆಚ್ಚು ಹಿತವೆನಿಸುತ್ತೆ. ಆಯಾ ಋತುಮಾನಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವನ್ನು ನಾವು ಬದಲಾಯಿಸಿಕೊಳ್ಳದೇ ಇದ್ದರೆ ಆರೋಗ್ಯದ ಸಮಸ್ಯೆಗಳು ಉದ್ಭವವಾಗುತ್ತದೆ. 

ಸೆಲೆಬ್ರಿಟಿ ನ್ಯೂಟ್ರಿಶಿಯನ್ ಮತ್ತು ಖ್ಯಾತ ಡಯಟೀಷಿಯನ್ ರುಜುತಾ ದಿವೇಕರ್ ಅವರು ಋತುಮಾನದಲ್ಲಿ ಬದಲಾವಣೆಗಳಾಗುವಾಗ ಆಹಾರ (Food) ದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಕೆಲವು ಪದಾರ್ಥಗಳಿಂದ ದೂರವಿರಬೇಕೆಂದು ಹೇಳಿದ್ದಾರೆ. ಅಂತಹ ಪದಾರ್ಥಗಳಲ್ಲಿ ಈರುಳ್ಳಿ (Onion) ಬೆಳ್ಳುಳ್ಳಿಯೂ ಸೇರಿದೆ.

Latest Videos

ಮಳೆಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಿ : ಮಳೆಗಾಲ (Rain) ಆರಂಭವಾದರೆ ಸಾಕು ಶೀತ, ಕೆಮ್ಮು, ಜ್ವರ, ಡೆಂಗ್ಯೂ, ಮಲೇರಿಯ ಮುಂತಾದ ಅನೇಕ ತರಹದ ರೋಗಗಳು ನಮ್ಮನ್ನು ಕಾಡುತ್ತವೆ. ಮಳೆಗಾಲದ ಶುರುವಿನಲ್ಲಿ ಈ ರೋಗಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮನುಷ್ಯನ ಆಹಾರದ ಬಗ್ಗೆ ಕಾಳಜಿ ವಹಿಸದೇ ನಿರಂತರವಾಗಿ ಅನಾರೋಗ್ಯಕರ ಆಹಾರ ಸೇವಿಸಿದರೆ ರೋಗಗಳು ಆತನನ್ನು ಬಹಳ ಬೇಗ ಆವರಿಸುತ್ತವೆ.

ಪ್ರೊಟೀನ್‌ಗಾಗಿ ಹಸಿ ಮೊಟ್ಟೆ ತಿನ್ನೋ ಅಭ್ಯಾಸವಿದ್ಯಾ? ಇಷ್ಟೆಲ್ಲಾ ತೊಂದ್ರೆ ಆಗುತ್ತೆ ಗೊತ್ತಿರ್ಲಿ  

ರುಜುತಾ ದಿವೇಕರ್ ಅವರ ಪ್ರಕಾರ, ಮಳೆಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗಗಳಿಂದ ಮುಕ್ತವಾಗಿರಲು ನಮ್ಮ ದೇಹಕ್ಕೆ ವಿಶೇಷ ಪೋಷಣೆಯ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲೆಡೆ ವಾತಾವರಣ ತಂಪಾಗುತ್ತದೆ. ಇದರಿಂದ ದೇಹ ಒಳಗಿನಿಂದಲೂ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಹಾಗಾಗಿ ಆಹಾರದ ಮೂಲಕವೇ ನಮ್ಮ ಶರೀರ ಬೆಚ್ಚಗಿರುವಂತೆ ಹಾಗೂ ರೋಗದ ವಿರುದ್ಧ ಹೋರಾಡುವಂತೆ ಇರಬೇಕು. ರುಜುತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಫುಡ್ ಡಯಟ್ ಕುರಿತು ಅನೇಕ ಪೋಸ್ಟ್ ಗಳನ್ನು ಹಾಕುತ್ತಾರೆ. ಖ್ಯಾತ ಬಾಲಿವುಡ್ ತಾರೆ ಕರೀನಾ ಕಪೂರ್ ಅವರಿಗೂ ಕೂಡ ರುಜುತಾ ಡಯಟೀಶನ್ ಆಗಿದ್ದಾರೆ.

ಮಳೆಗಾಲದಲ್ಲಿ ಮೀನು, ಮಟನ್, ಚಿಕನ್ ಬೇಡ : ಅನೇಕ ಮಂದಿ ಮಳೆಗಾಲದಲ್ಲಿ ಬಿಸಿ ಬಿಸಿ ಚಿಕನ್ ಮಟನ್ ಫ್ರೈ ಮುಂತಾದವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಆಹಾರಗಳು ನಾಲಿಗೆಗೆ ರುಚಿ ಎನಿಸಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ಕೆಲವು ಭಾರತೀಯ ಕುಟುಂಬಗಳು ಮಳೆಗಾಲದ 4 ತಿಂಗಳು ಮಾಂಸಾಹಾರವನ್ನು ತಿನ್ನಬಾರದು ಎಂದು ಹೇಳುತ್ತದೆ. ಮಳೆಗಾಲದಲ್ಲಿ ಮಾಂಸಾಹಾರ, ಮೊಟ್ಟೆಯಿಂದ ದೂರವಿರುವುದು ಒಳ್ಳೆಯದೆನ್ನುವುದು ರುಜುತಾ ಸಲಹೆಯಾಗಿದೆ.

ಮಳೆಗಾಲದಲ್ಲಿ ಈರುಳ್ಳಿ ಬೆಳ್ಳುಳ್ಳಿಯೂ ಬೇಡ : ಶಾಖಾಹಾರಿಗಳಾದವರು ಮಳೆಗಾಲದ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಮಳೆಗಾಲದಲ್ಲಿ ಇದರ ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದೆ. ಏಕೆಂದರೆ ಈರುಳ್ಳಿ ಬೆಳ್ಳುಳ್ಳಿಯನ್ನು ತಾಮಸ ಆಹಾರದ ವರ್ಗಕ್ಕೆ ಸೇರಿಸಲಾಗಿದೆ. ಇದು ಶರೀರಕ್ಕೆ ಉಷ್ಣವಾಗಿದೆ. ಇವುಗಳ ಸೇವನೆಯಿಂದ ರಕ್ತ ಪರಿಚಲನೆ ಹೆಚ್ಚು ಕಡಿಮೆಯಾಗುತ್ತದೆ. ಹಾಗಾದಾಗ ವ್ಯಕ್ತಿ ಕೋಪ, ಅಹಂಕಾರ, ಸೋಮಾರಿತನ ಮುಂತಾದವುಗಳಿಗೆ ಒಳಗಾಗುತ್ತಾನೆ. ಹಾಗಾಗಿಯೇ ಪೂಜೆ ಪುನಸ್ಕಾರಗಳು ನಡೆಯುವ ಸಂದರ್ಭದಲ್ಲಿ ಈರುಳ್ಳಿ ಬೆಳ್ಳುಳ್ಳಿ ವರ್ಜ್ಯವಾಗಿದೆ. ಮಳೆಗಾಲದಲ್ಲಿಯೂ ಕೂಡ ಹೊಟ್ಟೆ ಹೆಚ್ಚು ಉಷ್ಣವಾಗಬಾರದು ಎನ್ನುವ ಕಾರಣಕ್ಕೆ ಈರುಳ್ಳಿ ಬೆಳ್ಳುಳ್ಳಿ ಮಳೆಗಾಲದಲ್ಲಿ ಹಾಗೂ ಋತುಮಾನ ಬದಲಾಗುವ ಸಮಯದಲ್ಲಿ ಬೇಡ ಎಂದು ಹೇಳಲಾಗುತ್ತದೆ.

ಫೈಬರ್ ಹೆಚ್ಚಿರೋ ಅನ್ನ ತಿನ್ನಬಾರದು ಅಂತಾರೆ. ಅಂಥದ್ರಲ್ಲಿ ಹೇಗೆ ಬೇಯಿಸಿದರೆ ಒಳ್ಳೇದು?

ಮಳೆಗಾಲದಲ್ಲಿ ಸಿಹಿಗೆಣಸನ್ನು ಸೇವಿಸಿ :  ಸಿಹಿಗೆಣಸಿನಲ್ಲಿ ಫೈಬರ್ ಹೇರಳವಾಗಿರುತ್ತದೆ. ಇದು ಉದರ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತದೆ. ಗೆಣಸಿನಲ್ಲಿ ಐರನ್, ವಿಟಮಿನ್ ಸಿ ಮತ್ತು ಎ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಮಳೆಗಾಲದ ಸೀಸನ್ ನಲ್ಲಿ ಫೈಟೊಕೆಮಿಕಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಕ್ಯಾರೆಟ್, ಜೋಳ ಮತ್ತು ಕುಂಬಳಕಾಯಿಯನ್ನು ಸಹ ತಿನ್ನಬಹುದು.

click me!