ಕೆಚಪ್ ಸೇರಿ ಈ ಮೂರು ಆಹಾರ ಸ್ಲೋ ಪಾಯ್ಸನ್, ಮಕ್ಕಳಿಗೆ ಕೊಡಲೇಬೇಡಿ!

By Suvarna News  |  First Published Feb 19, 2024, 10:24 AM IST

ಮಕ್ಕಳಿಗೆ ಆರೋಗ್ಯದ ಬಗ್ಗೆ ಏನು ತಾನೇ ಗೊತ್ತು? ಅವರು ಕೇಳುವುದೇ ಜಾಮ್, ಮಯೋನೀಸ್, ಕೆಚಪ್, ಜೆಲ್ಲಿ... ಆದರೆ ಪೋಷಕರಾದ ನಿಮಗೆ ಅದನ್ನು ಕೊಡುವಾಗ ತಾವು ಮಕ್ಕಳ ಕಣ್ಣಲ್ಲಿ ಒಳ್ಳೆಯವರಾಗುತ್ತಲೇ ಅವರ ಆರೋಗ್ಯವನ್ನು ಹಾಳು ಮಾಡುತ್ತಿದ್ದೀರೆಂಬುದು ಅರಿವಿದೆಯೇ?


ಮಕ್ಕಳಿಗೆ ಹೋದಲ್ಲೆಲ್ಲ ಗಲಾಟೆ ಮಾಡದೆ ಸುಮ್ಮನೆ ಕೂರಲಿ ಎಂದು ಫ್ರೆಂಚ್ ಫ್ರೈಸ್ ಟೊಮ್ಯಾಟೋ ಸಾಸ್ ಕೊಡುವ ಅಭ್ಯಾಸ ಬಹಳಷ್ಟು ಪೋಷಕರಿಗೆ. ಇನ್ನು ಮನೆಯಲ್ಲಿ ಮಕ್ಕಳು ಹಸಿವೆಂದ ಕೂಡಲೇ ಮ್ಯಾಗಿ ಸಾಸ್, ಬ್ರೆಡ್ ಜಾಮ್, ಬ್ರೆಡ್ ಮಯೋನೀಸ್- ಈ ಆಹಾರಗಳನ್ನು ಕೊಟ್ಟು ಕೊಂಚ ಆರಾಮಾಗುತ್ತಾರೆ ತಾಯಂದಿರು. ಆದರೆ ನೀವು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕೊಂಚವಾದರೂ ಕಾಳಜಿ ಉಳ್ಳವರಾದರೆ ಖಂಡಿತಾ ಹೀಗೆ ಮಾಡಬೇಡಿ. ಏಕೆಂದರೆ ಇವು ವಿಷವಲ್ಲದೆ ಮತ್ತೇನಲ್ಲ ಅಂತಾರೆ ಮಕ್ಕಳ ತಜ್ಞರು. 

ಹೌದು-  ಎಲ್ಲ ಮಕ್ಕಳ ಫೇವರೇಟ್ ಆದ ಟೊಮ್ಯಾಟೋ ಕೆಚಪ್, ಮಯೋನೀಸ್, ಫ್ರೂಟ್ ಜಾಮ್ ಜೆಲ್ಲಿ ಇವು ಮಕ್ಕಳ ಆರೋಗ್ಯದ ಮಟ್ಟಿಗೆ ಬಹಳ ವಿಷಕಾರಿಯಾಗಿ ವರ್ತಿಸುತ್ತವೆ ಎನ್ನುತ್ತಾರೆ ಮಕ್ಕಳ ತಜ್ಞ ಡಾ. ಅಜಯ್ ಪ್ರಕಾಶ್. ಇವನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೊಡಬೇಡಿ. ಅವರ ಆರೋಗ್ಯದ ಜವಾಬ್ದಾರಿ ನಿಮ್ಮದು ಎಂಬುದು ನೆನಪಿರಲಿ. ಅಂದ ಹಾಗೆ, ಈ ಮೂರು ರೀತಿಯ ಆಹಾರ ಪದಾರ್ಥಗಳು ಮಕ್ಕಳ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ನೋಡೋಣ. 

Tap to resize

Latest Videos

undefined

ಕ್ಯಾನ್ಸರ್ ಚಿಕಿತ್ಸೆಗಾಗಿ ದೂರವಿದ್ದ ಅಜ್ಜಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೊಮ್ಮಗ; ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರ ಕಣ್ಣೀರು

ಜಾಮ್, ಜೆಲ್ಲಿ
ಸಕ್ಕರೆಯ ಪಾಕವೇ ಆಗಿರುವ ಇದು ಮಕ್ಕಳ ಹಲ್ಲುಗಳನ್ನು ಹಾಳು ಮಾಡುವ ಜೊತೆಗೆ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. 

ಮಯೋನೀಸ್
ಇದಂತೂ ಬಿಳಿಯ ವಿಷವಲ್ಲದೆ ಮತ್ತೇನಲ್ಲ. ಇದು ಮಕ್ಕಳಲ್ಲಿ ಹೈಪರ್ ಟೆನ್ಶನ್, ಶುಗರ್, ಸ್ಥೂಲ ಕಾಯಕ್ಕೆ ಕಾರಣವಾಗುವುದೇ ಅಲ್ಲದೆ, ಸಂಕಟ, ತಲೆನೋವಿಗೂ ಕಾರಣವಾಗುತ್ತದೆ.

ಪ್ರತಿ ದಿನ ಬೆಳಗ್ಗೆ ಲೆಮನ್ ವಾಟರ್ ಕುಡಿದ್ರೆ ಏನಾಗತ್ತೆ?

ಕೆಚಪ್
ಸಕ್ಕರೆ ಉಪ್ಪು ಹಾಗೂ ಪ್ರಿಸರ್ವೇಟಿವ್‌ಗಳಿಂದ ತುಂಬಿದ ಕೆಚಪ್‌ ಎಷ್ಟು ರುಚಿಯೋ ಅಷ್ಟೇ ಅಪಾಯಕಾರಿ. ಇದರ ಸೇವನೆಯಿಂದ ಸೋಡಿಯಂ ಹೆಚ್ಚಾಗಿ ಕಿಡ್ನಿ ಸ್ಟೋನ್ ಆಗಬಹುದು. ಇನ್ನು ಇದರಲ್ಲಿರುವ ಪ್ರಿಸರ್ವೇಟಿವ್‌ಗಳು ಗಂಟುಗಳ ನೋವು, ಮೂಳೆ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇನ್ನು ಇದರಲ್ಲಿರುವ ಅತಿಯಾದ ಸಕ್ಕರೆಯು ಡಯಾಬಿಟೀಸ್, ಬಿಪಿ ಮತ್ತು ಒಬೆಸಿಟಿಗೆ ಕಾರಣವಾಗಬಹುದು. 

ಇಂಥ ಆಹಾರವನ್ನು ಕೊಜುವಾಗ ಮಕ್ಕಳ ಸಂತೋಷಕ್ಕಿಂತ ಮೊದಲು ಅವರ ಆರೋಗ್ಯ ಎಂಬುದು ಗಮನದಲ್ಲಿರಲಿ. ಮನೆಯಲ್ಲಿ ಈ ಮೂರು ರೀತಿಯ ಆಹಾರ ಪದಾರ್ಥ ತಂದಿಟ್ಟುಕೊಳ್ಳದಿರುವುದೇ ಕ್ಷೇಮ. ಏನಂತೀರಾ?

 

click me!