ನವರಾತ್ರಿ ವ್ರತ ಮಾಡೋರಿಗೆ ಇನ್ನು ಟೆನ್ಶನ್‌ ಇಲ್ಲ; ರೈಲಿನಲ್ಲೂ ಸಿಗುತ್ತೆ ಉಪವಾಸದ ಊಟ

By Suvarna News  |  First Published Sep 20, 2022, 10:04 AM IST

ಹಬ್ಬಗಳು ಬಂದಾಗ ಹಲವರು ವ್ರತ ಮಾಡುವುದು ಸಾಮಾನ್ಯ. ಆದ್ರೆ ಉಪವಾಸದಲ್ಲಿದ್ದಾಗ ಪ್ರಯಾಣ ಮಾಡುವುದು ತುಂಬಾ ಕಷ್ಟವಾದ ಕೆಲಸ. ಯಾಕೆಂದರೆ ವ್ರತದ ಸಂದರ್ಭ ತಿನ್ನಬಹುದಾದ ಆಹಾರ ಸಿಗುವುದು ಕಷ್ಟ. ಆದ್ರೆ ಈ ಬಾರಿ ನವರಾತ್ರಿ ಸಂದರ್ಭದಲ್ಲಿ ಅಂಥಾ ತೊಂದ್ರೆಯೇನು ಆಗಲ್ಲ. ಅದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ. 


ಒಂಭತ್ತು ದಿನಗಳ ಕಾಲ ಆಚರಿಸುವ ನವರಾತ್ರಿ ಭಾರತೀಯರ ನೆಚ್ಚಿನ ಹಬ್ಬ. ವಿವಿಧ ಭಕ್ಷ್ಯಗಳನ್ನು ತಯಾರಿಸಿ, ದುರ್ಗಾ ಮಾತೆಯನ್ನು ಪೂಜಿಸಿ ಸಂಭ್ರಮಿಸುತ್ತಾರೆ. ಕೆಲವೊಬ್ಬರು ಹಬ್ಬದ ಒಂಭತ್ತು ದಿನ ಉಪವಾಸವನ್ನು ಮಾಡುತ್ತಾರೆ. ಆದ್ರೆ ನವರಾತ್ರಿಯಲ್ಲಿ ವ್ರತ ಮಾಡುವವರು ದೂರ ದೂರದ ಊರುಗಳಿಗೆ ರೈಲು ಪ್ರಯಾಣ ಮಾಡುವುದು ಕಷ್ಟ. ಸರಿಯಾದ ಆಹಾರ ಸಿಗದೆ ಬಳಲುವಂತಾಗುತ್ತೆ. ಆದ್ರೆ ಈ ಬಾರಿ ಅಂಥಾ ತೊಂದ್ರೆಯೇನಿಲ್ಲ. ಒಂಬತ್ತು ದಿನಗಳ ಸುದೀರ್ಘ ಹಬ್ಬದ ವೇಳೆಯಲ್ಲಿ ಹಲವಾರು ಭಕ್ತರು  ಉಪವಾಸವನ್ನು ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಐಆರ್‌ಸಿಟಿಸಿ ‘ವ್ರತ್ ಕಾ ಖಾನಾ’ ಸೇವೆಯನ್ನು ತಂದಿದೆ. ವ್ರತದಲ್ಲಿರುವ ಪ್ರಯಾಣಿಕರಿಗೆಂದೇ ಭಾರತೀಯ ರೈಲ್ವೇಯ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ 'ವ್ರತ್ ಕ ಖಾನಾ’ವನ್ನು ಪೂರೈಕೆ ಮಾಡುತ್ತಿದೆ. ಆಯ್ದ ರೈಲು ನಿಲ್ದಾಣಗಳಲ್ಲಿ ಇ-ಕ್ಯಾಟರಿಂಗ್ ಸೇವೆಯ ಮೂಲಕ ಇದು ಲಭ್ಯವಿದೆ.

400 ರೈಲು ನಿಲ್ದಾಣಗಳಲ್ಲಿ ವ್ರತ ಥಾಲಿ ಲಭ್ಯ
ವ್ರತ ಥಾಲಿಯು ದೇಶಾದ್ಯಂತ 400 ರೈಲು ನಿಲ್ದಾಣಗಳಲ್ಲಿ (Railway station) ಲಭ್ಯವಿರುತ್ತದೆ. ರೈಲ್ವೆಯ ಈ ನಿರ್ಧಾರದ ನಂತರ ಪ್ರಯಾಣಿಕರು ಉಪವಾಸದ (Fasting) ಸಮಯದಲ್ಲಿ ಊಟ ಮಾಡುವ ಟೆನ್ಷನ್‌ನಿಂದ ಮುಕ್ತರಾಗಲಿದ್ದಾರೆ. IRCTC ಜನರಿಗೆ ನವರಾತ್ರಿಯ ಥಾಲಿಯನ್ನು ಒದಗಿಸುತ್ತಿದೆ.  ಈ ಪ್ಲೇಟ್ ಅನ್ನು ಆರ್ಡರ್ ಮಾಡಲು, ಪ್ರಯಾಣಿಕರು 1323 ಗೆ ಕರೆ ಮಾಡುವ ಮೂಲಕ ಬುಕ್ ಮಾಡಬೇಕಾಗುತ್ತದೆ. ನಂತರ ಸ್ವಲ್ಪ ಸಮಯದ ನಂತರ, ಕ್ಲೀನ್ ಫಾಸ್ಟಿಂಗ್ ಪ್ಲೇಟ್ ಅನ್ನು ನಿಮ್ಮ ಆಸನಕ್ಕೆ ತಲುಪಿಸಲಾಗುತ್ತದೆ. ಇಂತಹ ವ್ಯವಸ್ಥೆಯನ್ನು ಕಳೆದ ವರ್ಷವೂ ಜಾರಿಗೆ ತರಲಾಗಿತ್ತು ಎಂದು ತಿಳಿದುಬಂದಿದೆ. 

Tap to resize

Latest Videos

Navratri 2022: ಮಹಿಳೆಯರು ಈ 16 ಮೇಕಪ್ ಮಾಡ್ಕೊಳ್ಳಲೇಬೇಕು! ಯಾಕೆ ಕೇಳಿ..

IRCTC ವ್ರತ್‌ ಥಾಲಿ ಬಗ್ಗೆ ಏನು ಹೇಳುತ್ತದೆ ?
IRCTC PRO ಆನಂದ್ ಕುಮಾರ್ ಝಾ ಮಾತನಾಡಿ, ನವರಾತ್ರಿಯಲ್ಲಿ ಉಪವಾಸದ ಸಮಯದಲ್ಲಿ ಅನೇಕ ಪ್ರಯಾಣಿಕರು (Passengers) ಆಹಾರ (Food) ಮತ್ತು ಪಾನೀಯದ ಬಗ್ಗೆ ಚಿಂತಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಥಾಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ. . ಈ ವಿಶೇಷ ಆಹಾರವು ಆಯ್ದ ರೆಸ್ಟೋರೆಂಟ್‌ಗಳ ಮತ್ತು ಭಾರತೀಯ ರೈಲ್ವೆ ನೆಟ್‌ವರ್ಕ್‌ನಲ್ಲಿನ ಆಯ್ದ ನಿಲ್ದಾಣಗಳಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ.

ವ್ರತ ಥಾಲಿಯಲ್ಲಿ ಏನೆಲ್ಲಾ ಲಭ್ಯವಿರುತ್ತದೆ ?
ರೂ 99 - ಹಣ್ಣುಗಳು, ಬಕ್ವೀಟ್ ಪಕೋರಿ, ಮೊಸರು
ರೂ 99 - 2 ಪರಾಠಗಳು, ಆಲೂಗೆಡ್ಡೆ ಕರಿ, ಸಾಗು ಪುಡಿಂಗ್
ರೂ 199 - 4 ಪರಾಠಗಳು, 3 ತರಕಾರಿಗಳು, ಸಾಗು ಖಿಚಡಿ
250- ಪನೀರ್ ಪರಾಠ, ವ್ರತ್ ಮಸಾಲಾ, ಸಿಂಘಡ ಮತ್ತು ಆಲೂ ಪರಾಠವನ್ನು ನೀಡಲಾಗುತ್ತದೆ.

ನವರಾತ್ರಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗೋದು ಎಷ್ಟು ಸರಿ?

ಎಲ್ಲೆಲ್ಲಿ ಲಭ್ಯವಿರಲಿದೆ ? 
ಕಾನ್ಪುರ ಸೆಂಟ್ರಲ್, ಜಬಲ್ಪುರ, ರತ್ಲಂ, ಜೈಪುರ, ಬಿನಾ, ಪಾಟ್ನಾ, ರಾಜೇಂದ್ರ ನಗರ, ಹಜರತ್ ನಿಜಾಮುದ್ದೀನ್, ಅಂಬಾಲಾ ಕ್ಯಾಂಟ್, ಝಾನ್ಸಿ, ಔರಂಗಾಬಾದ್, ಅಕೋಲಾ, ಇಟಾರ್ಸಿ, ವಸೈ ರೋಡ್, ವಾಪಿ, ಕಲ್ಯಾಣ್, ಬೊರಿವಾಲಿ ಮಥುರಾ, ನಾಗ್ಪುರ, ಭೋಪಾಲ್, ಉಜ್ಜಯಿನಿ ಮತ್ತು ಅಹ್ಮದಾನಗರ್ ರೈಲುನಿಲ್ದಾಣಗಳಲ್ಲಿ ‘ವ್ರತ್ ಕಾ ಖಾನಾ’ ಲಭ್ಯವಿದೆ.

ಐಆರ್‌ಸಿಟಿಸಿಯ ಇ-ಕ್ಯಾಟರಿಂಗ್ ವೆಬ್‌ಸೈಟ್ www.ecatering.irctc.co.in ಅಥವಾ “ಫುಡ್-ಆನ್-ಟ್ರ್ಯಾಕ್” ಅಪ್ಲಿಕೇಶನ್‌ನಲ್ಲಿ ಪ್ರಯಾಣಿಕರು ಮೊದಲೇ ಆರ್ಡರ್ ನೀಡುವ ಮೂಲಕ ಈ ಸೇವೆಯನ್ನು ಪಡೆಯಬಹುದು.

click me!