ಇಂದು ಗೋಡಂಬಿ ದಿನ: ಕ್ಯಾಶ್ಯೂ ತಿನ್ನೋದ್ರಿಂದ ಪುರುಷತ್ವ ಹೆಚ್ಚುತ್ತಾ?

By Suvarna News  |  First Published Nov 23, 2023, 12:48 PM IST

ಇಂದು ನ್ಯಾಶನಲ್ ಕ್ಯಾಶ್ಯೂ ಡೇ. ಗೋಡಂಬಿ ತಿಂದ್ರೆ ದಪ್ಪ ಆಗ್ತಾರ? ಕ್ಯಾಶ್ಯೂ ತಿನ್ನೋದು ಪುರುಷತ್ವ ಹೆಚ್ಚಿಸುತ್ತಾ? ಸೆಕ್ಸ್ ಬಗ್ಗೆ ಆಸಕ್ತಿ ಮೂಡೋ ಹಾಗೆ ಮಾಡುತ್ತಾ?


ಇಂದು ರಾಷ್ಟ್ರೀಯ ಗೋಡಂಬಿ ದಿನ. ಗೋಡಂಬಿ ಬಗ್ಗೆ ನಮ್ಮಲ್ಲಿ ನಂಬಿಕೆ, ಅಪನಂಬಿಕೆ ಹೆಚ್ಚು. ತಿಂದಷ್ಟು ತಿನ್ನೋಣ ಅನಿಸೋ ಈ ರುಚಿಕರ ಡ್ರೈಫ್ರುಟ್ ನ ಪಾಯಸ, ಸ್ವೀಟ್‌ಗಳಿಂದ ಹಿಡಿದು ವಿವಿಧ ಬಾತ್ ಗಳಲ್ಲಿ ಕರಿಗಳಲ್ಲಿ ಹೇರಳವಾಗಿ ಬಳಸುತ್ತಾರೆ. ಟೇಸ್ಟ್ ಚೆನ್ನಾಗಿರುತ್ತೆ. ಆರೋಗ್ಯಕ್ಕೂ ಒಳ್ಳೆಯದು ಅನ್ನೋ ಕಾರಣ. ಗೋಡಂಬಿಯ ಮೂಲ ಬ್ರೆಜಿಲ್‌. ಇದು ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಕಡಲೆಕಾಯಿ ಮತ್ತು ಬಾದಾಮಿಯಂತೆ, ಇದು ಬಹಳಷ್ಟು ಕ್ಯಾಲರಿಗಳನ್ನು ಹೊಂದಿದೆ. ಅನೇಕ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಗರ್ಭಿಣಿಯರು ದಿನಕ್ಕೆ ಒಂದಿಷ್ಟು ಗೋಡಂಬಿ ತಿಂದರೆ ತುಂಬಾ ಒಳ್ಳೆಯದು. ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೇರಳವಾಗಿ ಗೋಡಂಬಿ ಬೆಳೆಯಲಾಗುತ್ತಿದ್ದು, ಇಲ್ಲಿಂದಲೇ ವಿದೇಶಗಳಿಗೆ ರಫ್ತು ಸಹ ಮಾಡಲಾಗುತ್ತದೆ.

ಇದು ಹೆಚ್ಚಿನ ಕ್ಯಾಲರಿಗಳ ಜತೆಗೆ, ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಸಹ ಒಳಗೊಂಡಿದೆ. ಇದು ವಿಟಮಿನ್ ಎ, ಇ, ಕೆ, ತಾಮ್ರ, ಮೆಗ್ನೀಸಿಯಮ್, ಸತು, ರೋಗ ನಿರೋಧಕಗಳು, ಪ್ರೋಟೀನ್‌ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಖನಿಜಗಳಿಂದ ಸಮೃದ್ಧವಾಗಿದೆ. ಈ ಪೋಷಕಾಂಶ ಭರಿತ ಗೋಡಂಬಿಯನ್ನು ನಿಮ್ಮ ದೈನಂದಿನ ಆಹಾರದ ಭಾಗವನ್ನಾಗಿ ಮಾಡುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದು.ತುಪ್ಪದಲ್ಲಿ ಕರಿದು ಗೋಡಂಬಿ ತಿಂದರೆ ಇದರ ರುಚಿಗೆ ಬೇರೆ ಸರಿಸಾಟಿಯೇ ಇಲ್ಲ. ಹಾಗೆಂದು ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಹೃದಯಕ್ಕೆ ಅಪಾಯಕಾರಿಯಾದ ಕೊಬ್ಬು ಶೇಖರಣೆಗೆ ಕಾರಣವಾಗಬಹುದು ಎಂದು ಹಲವರು ಭಯಪಡುತ್ತಾರೆ. ಆದರೆ, ಗೋಡಂಬಿಯು ಪೋಷಕಾಂಶಗಳಿಂದ ಕೂಡಿರುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.

Tap to resize

Latest Videos

undefined

Food Trend of 2023: ಇವುಗಳೇ ನೋಡಿ ಈ ವರ್ಷ ಹೆಚ್ಚು ಟ್ರೆಂಡ್‌ನಲ್ಲಿದ್ದ ಆಹಾರ

ಗೋಡಂಬಿ (cashew) ಹೃದಯದ ಆರೋಗ್ಯಕ್ಕೆ (Heart Healthy) ತುಂಬಾ ಒಳ್ಳೆಯದು. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಕೊಬ್ಬಿನಾಮ್ಲಗಳು ರಕ್ತನಾಳಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು (blood pressure) ನಿಯಂತ್ರಣದಲ್ಲಿಡುತ್ತದೆ.

ಗೋಡಂಬಿ ಆರೋಗ್ಯಕರ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಕ್ಯಾಲರಿಗಳನ್ನು ಹೊಂದಿರುವುದರಿಂದ, ಮಧುಮೇಹಿಗಳು (sugar) ದಿನಕ್ಕೆ ಕೇವಲ 3-4 ಗೋಡಂಬಿ ಮಾತ್ರ ಸೇವಿಸಿದರೆ ಉತ್ತಮ. ಗೋಡಂಬಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್‌ಗಳು (vitamin) ಹೇರಳವಾಗಿವೆ. ಇದು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಸ್ನಾಯುಗಳಿಗೆ ಅಗತ್ಯವಾದ ಕಾಲಜನ್ ಒದಗಿಸುತ್ತದೆ ಮತ್ತು ಮೂಳೆಗಳನ್ನು ಬಲವಾಗಿ ಇಡುತ್ತದೆ. ಅಷ್ಟೇ ಅಲ್ಲ ಮೆದುಳಿನ ಕಾರ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ.

ಅಯ್ಯೋ ತೂಕ ಇಳಿಯೋಲ್ಲ ಅಂತ ಗೊಣಗೋದು ಬಿಡಿ, ದಕ್ಷಿಣ ಭಾರತೀಯ ಡಯಟ್ ಮಾಡಿ!

ಗೋಡಂಬಿಯಲ್ಲಿ ಸತುವು ಸಮೃದ್ಧವಾಗಿದೆ. ಇದು ಪುರುಷರಲ್ಲಿ ವೀರ್ಯದ (Sperm) ಸಂಖ್ಯೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಫಲವತ್ತತೆ ಹೆಚ್ಚಾಗುತ್ತದೆ. ಹೀಗಾಗಿ ವಿವಾಹಿತರು ಇದನ್ನು ಸೇವಿಸುವುದು ಉತ್ತಮ. ವೀರ್ಯ ಫಲವತ್ತಾದರೆ, ಮಕ್ಕಳಾಗುವ ಅವಕಾಶ ಹೆಚ್ಚುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಮತ್ತು ಮಧುಮೇಹವನ್ನು ಸಹ ನಿಯಂತ್ರಿಸಬಹುದು. ಹೀಗಾಗಿ ಪ್ರತಿನಿತ್ಯ ಗೋಡಂಬಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.

ಇಂದಿನ ಒತ್ತಡದ ಲೈಫ್‌ಸ್ಟೈಲಿನಲ್ಲಿ (Stressed Lifestyle) ಸೆಕ್ಸ್ ಬಗ್ಗೆ ಆಸಕ್ತಿ ಬಹುಬೇಗ ಕಡಿಮೆ ಆಗುತ್ತೆ. ಇದು ಬದುಕಿನ ಖುಷಿಯನ್ನು ಕಸಿದುಕೊಂಡು ಬಿಡುತ್ತದೆ. ನಿತ್ಯವೂ ಗೋಡಂಬಿಯನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಎನರ್ಜಿ ಹೆಚ್ಚಾಗೋದು ಮಾತ್ರ ಅಲ್ಲ, ಲಿಬಿಡೋ ಅಂದರೆ ಸೆಕ್ಸ್ ಬಗೆಗಿನ ಆಸಕ್ತಿಯೂ ಹೆಚ್ಚಾಗುತ್ತ ಹೋಗುತ್ತದೆ. ಇದು ಪುರುಷರಲ್ಲಿ ಸ್ಪರ್ಮ್ ಕೌಂಟ್ ಹೆಚ್ಚು ಮಾಡುತ್ತೆ. ಮಹಿಳೆಯರಿಗೂ ಸಹಕಾರಿ ಎಂದು ತಜ್ಞರು ಹೇಳುತ್ತಾರೆ.

click me!