ನೀವು ಎಂತೆಂಥಾ ಕಾರಣಕ್ಕೆ ಕೆಲಸ (Work) ಬಿಟ್ಟಿರೋ ಬಗ್ಗೆ ಕೇಳಿದ್ದೀರಿ. ಆಫೀಸಲ್ಲಿ ವರ್ಕ್ ಪ್ರೆಶರ್ (Work Pressure) ಜಾಸ್ತಿ ಆಯ್ತು, ಬಾಸ್ ಕಿರಿಕಿರಿ, ಸ್ಯಾಲರಿ (Salary) ಚೆನ್ನಾಗಿಲ್ಲ ಹೀಗೆಲ್ಲಾ ಕಾರಣಗಳನ್ನು ಕೇಳಿರ್ಬೋದು ಅಲ್ವಾ. ಆದ್ರೆ ಇಲ್ಲೊಬ್ಬ ಭೂಪ ಕೆಲಸ ಬಿಟ್ಟಿದ್ದು ಯಾಕೆ ಗೊತ್ತಾ ? ಆಫೀಸ್ ಕ್ಯಾಂಟೀನ್ (Canteen)ನಲ್ಲಿ ಸಮೋಸಾ (Samosa) ಬೆಲೆ ಹೆಚ್ಚಾಯ್ತು ಅಂತ.
ಯಾವುದೇ ಕೆಲಸ (Work) ಮಾಡುವಾಗಲೂ ವರ್ಕಿಂಗ್ ಅಟ್ಮೋಸ್ಮಿಯರ್ ಚೆನ್ನಾಗಿರಲಿ, ಸ್ಯಾಲರಿ ಹೈಕ್ (Salary Hike) ಆಗಲಿ, ಬಾಸ್ ಕಿರಿಕಿರಿ ಇಲ್ಲದಿರಲಿ ಎಂದೇ ಎಲ್ಲರೂ ಬಯಸ್ತಾರೆ. ಇದೆಲ್ಲಾ ಇಲ್ಲದಿದ್ದಾಗ ಕಷ್ಟಪಟ್ಟು ಕೆಲಸ ಮಾಡ್ತಾ ಮುಂದೊಂದು ದಿನ ರಿಸೈನ್ ಮಾಡೋಕೆ ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬ ಭೂಪ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟಿರೋದು ಅದೆಷ್ಟು ಸಿಲ್ಲಿ ರೀಸನ್‌ಗೆ ಅಂದ್ರೆ ಗೊತ್ತಾದ್ರೆ ನೀವು ಹೀಗೂ ಉಂಟಾ ಅಂತ ಮೂಗಿನ ಮೇಲೆ ಬೆರಳಿಡೋದು ಖಂಡಿತ.
ಆಫೀಸಲ್ಲಿ ವರ್ಕ್ ಲೋಡ್ ಜಾಸ್ತಿ ಆದಾಗ, ಬಾಸ್ ಬೈಗುಳ ತಪ್ಪದಿದ್ದಾಗ, ಎಷ್ಟು ವರ್ಷ ಆದ್ರೂ ಸ್ಯಾಲರಿ ಹೈಕ್, ಬೋನಸ್ ಸೂಚನೆ ಇಲ್ಲದಿದ್ದಾಗ ಎಂಪ್ಲಾಯಿಸ್ ಸಾಕಪ್ಪಾ ಈ ಕೆಲಸ ಅಂತ ರಿಸೈನ್ ಮಾಡಿಬಿಡ್ತಾರೆ. ಆದ್ರೆ ಇಲ್ಲೊಬ್ರು ಮಾತ್ರ ಕ್ಯಾಂಟೀನ್‌ನಲ್ಲಿ ಸಮೋಸ (Samosa) ಬೆಲೆ ಹೆಚ್ಚಾಗಿದೆ ಅಂತ ಕೆಲಸವನ್ನೇ ಬಿಟ್ಟಿದ್ದಾರೆ. ಇವ್ರು ಚಾಣಾಕ್ಷರು ನಿರ್ವಹಿಸೋ ಲಾಯರ್ (Lawyer) ಕೆಲ್ಸ ಮಾಡ್ತಿದ್ರು ಅನ್ನೋದು ಇನ್ನಷ್ಟು ಅಚ್ಚರಿಪಟ್ಕೊಳ್ಳೋ ವಿಷ್ಯ.
Samantha Gym Look: ಸಮೋಸ ತಿನ್ನೋ ಆಸೆಗೆ ಭಾರ ಎತ್ತುತ್ತಾರೆ ಸಮಂತಾ
ಆಪೀಸಿಗೆ ಬರೋ ಹೆಚ್ಚಿನವರು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್‌ಗೆ ಕ್ಯಾಂಟೀನನ್ನೇ ನೆಚ್ಚಿಕೊಂಡಿರುತ್ತಾರೆ. ಕ್ಯಾಂಟೀನ್ (Canteen)ನಲ್ಲಿ ಆಹಾರದ ಬೆಲೆ ಹೆಚ್ಚಾಯ್ತು ಅಂದ್ರೆ ಸಾಮಾನ್ಯವಾಗಿ ಬಾಕ್ಸ್ ಹಿಡ್ಕೊಂಡು ಬರೋದು, ಆಫೀಸ್ ಹೊರಗಿನ ಕ್ಯಾಂಟೀನ್‌ಗೆ ಊಟಕ್ಕೆ ಹೋಗೋದು ಮಾಡ್ಬೋದು. ಆದ್ರೆ ನಾಗ್ಪುರದಲ್ಲಿ ಮಾತ್ರ ಕ್ಯಾಂಟೀನ್‌ನಲ್ಲಿ ಸಮೋಸ ಬೆಲೆ ಹೆಚ್ಚಾಗಿದೆ ಎಂದು ವಕೀಲರು ಕೆಲಸವನ್ನೇ ಬಿಟ್ಟಿದ್ದಾರೆ.
ಹೆಚ್ಚಾಗಿ ಸಂಜೆಯ ಸ್ನ್ಯಾಕ್ಸ್ (Snacks)ಗೆ ಸವಿಯುವ ಸಮೋಸಾ ಎಂಬುದು ಹುರಿದ ಅಥವಾ ಬೇಯಿಸಿದ ಹೂರಣವಾಗಿದ್ದು, ಮಸಾಲೆಯುಕ್ತ ಆಲೂಗಡ್ಡೆ, ಈರುಳ್ಳಿ, ಬಟಾಣಿಗಳಂತಹ ಪದಾರ್ಥಗಳನ್ನು ಒಳಗೊಂಡಂತೆ ಖಾರದ ಫಿಲ್ಲಿಂಗ್ಸ್ನಿಂದ ಇದನ್ನು ತಯಾರಿಸಲಾಗುತ್ತದೆ. ಇದು ಪ್ರದೇಶವನ್ನು ಅವಲಂಬಿಸಿ ತ್ರಿಕೋನ, ಕೋನ್ ಅಥವಾ ಅರ್ಧ ಚಂದ್ರನ ಆಕಾರಗಳನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ದೊರೆಯುತ್ತವೆ. ಸಮೋಸಾಗಳು ಸಾಮಾನ್ಯವಾಗಿ ಚಟ್ನಿಯೊಂದಿಗೆ ಸೇವಿಸುತ್ತಾರೆ.
ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!
ಮಧ್ಯಕಾಲೀನ ಕಾಲದಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಹುಟ್ಟಿಕೊಂಡ ಈ ಪ್ರಸಿದ್ಧ ತಿನಿಸು ಹಳೆಯ ಮೂಲವನ್ನೂ ಹೊಂದಿದೆ. ಸಮೋಸಾಗಳು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಪೂರ್ವ ಆಫ್ರಿಕಾ ಮತ್ತು ಇತರ ಪ್ರದೇಶಗಳ ಸ್ಥಳೀಯ ಪಾಕಪದ್ಧತಿಗಳಲ್ಲಿ ಜನಪ್ರಿಯ ಆಹಾರ. ಹಸಿವಾಗುವಾಗ ತಟ್ಟನೆ ತಿನ್ನುವ ಬೂಸ್ಟರ್ ತಿಂಡಿಗಳಾಗಿವೆ ಸಮೋಸ. ವಲಸೆ ಮತ್ತು ಸಾಂಸ್ಕೃತಿಕ ಪ್ರಸರಣದಿಂದಾಗಿ, ಇಂದು ಸಮೋಸಾಗಳನ್ನು ಪ್ರಪಂಚದ ಇತರ ಭಾಗಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ.
ಡಿಬಿಎ ವಕೀಲರ ಸಂಘದ ಕಾರ್ಯಕಾರಿ ಸದಸ್ಯರೊಬ್ಬರು ಜಿಲ್ಲಾ ನ್ಯಾಯಾಲಯದ ಕ್ಯಾಂಟೀನ್‌ನಲ್ಲಿ ಸಮೋಸಾಗಳ ದುಬಾರಿ ಬೆಲೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡಿದ ವಕೀಲರ ಹೆಸರು ಧರ್ಮರಾಜ್ ಬೋಗ್ತಿ. ನ್ಯಾಯಾಲಯದ ಎರಡನೇ ಮಹಡಿಯಲ್ಲಿ ಕ್ಯಾಂಟೀನ್ ಅನ್ನು ಡಿಬಿಎ ನಡೆಸುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಕ್ಯಾಂಟೀನ್‌ಗಳಲ್ಲಿ ದೊರೆಯುವ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈ ಕಾರಣಕ್ಕೆ ಸಿಟ್ಟಿಗೆದ್ದ ಬೋಗ್ಲಿ ರಾಜೀನಾಮೆ (Resignation) ನೀಡಿದ್ದಾರೆ.
ಇದೇ ವೇಳೆ ಬೋಗ್ತಿ ಅವರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಲೇ ಇಲ್ಲ. ಬೆಲೆ ಏರಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸದೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಬಿಎ ಅಧಿಕಾರಿಗಳ ಪ್ರಕಾರ, ಹೆಚ್ಚುತ್ತಿರುವ ಸಿಲಿಂಡರ್ ಮತ್ತು ಪೆಟ್ರೋಲ್ ಬೆಲೆ ಸೇರಿದಂತೆ ಕ್ಷೇತ್ರಗಳಾದ್ಯಂತ ಆಹಾರ ಹಣದುಬ್ಬರ ಹೆಚ್ಚಾಗಿದೆ, ಹೀಗಾಗಿ ಕ್ಯಾಂಟೀನ್‌ನಲ್ಲಿಯೂ ಸಮೋಸಾ ಬೆಲೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ವಕೀಲರ ರಾಜೀನಾಮೆಯ ನಂತರ ಡಿಬಿಎ ಕ್ಯಾಂಟೀನ್ ವಕೀಲರಿಗೆ ಸಮಂಜಸವಾದ ಬೆಲೆಯಲ್ಲಿ ಆಹಾರವನ್ನು ಒದಗಿಸುವ ನಿರೀಕ್ಷೆಯಿದೆ.