ಬೆಂಗಳೂರಿನಲ್ಲಿ ತಯಾರಿಸಿದ 123 ಅಡಿ ಉದ್ದದ ದೋಸೆ ಗಿನ್ನಿಸ್‌ ದಾಖಲೆ!

By Kannadaprabha News  |  First Published Mar 18, 2024, 2:38 PM IST

ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.


ಬೆಂಗಳೂರು (ಮಾ.18): ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಂಸ್ಥೆಯಾದ ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ, ಇಡಿ ಸುಳಿಯಲ್ಲಿ ವಿಪಕ್ಷಗಳ ಪ್ರಮುಖ ನಾಯಕರು! ಯಾರ‍್ಯಾರು?

Tap to resize

Latest Videos

undefined

16.68 ಮೀಟರ್ (54 ಅಡಿ 8.69 ಇಂಚು) ಉದ್ದದ ದೋಸೆಯು ಇಲ್ಲಿಯವರೆಗೆ ದಾಖಲಾಗಿತ್ತು. ನಗರದ ಬೊಮ್ಮಸಂದ್ರದಲ್ಲಿರುವ ಕಂಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಸಿಗ್ನೇಚರ್ ರೆಡ್ ಬ್ಯಾಟರ್ ಅನ್ನು ಬಳಸಿಕೊಂಡಿದೆ. ಉದ್ದನೆಯ ತವಾದಲ್ಲಿ ಈ ದಾಖಲೆಯ ದೋಸೆ ತಯಾರಿಸಲಾಗಿದೆ.

ಅರುಣಾಚಲ ನಮ್ಮದೇ, ಭಾರತ ದ್ವಿಪಥ ಸುರಂಗ ನಿರ್ಮಿಸಿದ ಬೆನ್ನಲ್ಲೇ ಚೀನಿ ಸೇನೆಯ ಕ್ಯಾತೆ!

ಎಂಟಿಆರ್‌ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕ ಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್ ಉದ್ಯೋಗಿಗಳ ಜತೆಗೆ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದನ್ನು ಹಂಚಲಾಯಿತು.

click me!