Best Winter Soups: ತೂಕ ಇಳಿಸಿಕೊಳ್ಳಬಹುದು ಟ್ರೈ ಮಾಡಿ

By Suvarna News  |  First Published Dec 18, 2021, 9:14 PM IST

ಚಳಿಗಾಲ (Winter) ಬಂತು ಅಂದ್ರೆ ಸಾಕು ಬಜ್ಜಿ, ಬೋಂಡಾ, ಪಕೋಡಾ ಅಂತ ಆಗಾಗ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಆದ್ರೆ ದಿನಪೂರ್ತಿ ಇಂಥಹಾ ತಿಂಡಿಗಳನ್ನು ತಿಂದ್ರೆ ತೂಕ ಹೆಚ್ಚಳವಾಗೋದು ಖಂಡಿತ. ಹೀಗಿದ್ದಾಗ ಕೊರೆಯುವ ಚಳಿಯಲ್ಲಿ ಸೂಪ್ (Soup) ಕುಡಿಯೋದು ಬೆಸ್ಟ್. ಆರೋಗ್ಯ (Health)ಕ್ಕೂ ಉತ್ತಮ ತೂಕ ಇಳಿಸಿಕೊಳ್ಳಲೂ ಸಹಕಾರಿ


ಚಳಿಗಾಲ ಬಂತು..ಬೆಚ್ಚಗಿನ ಸ್ವೆಟರ್, ಸಾಕ್ಸ್‌ಗಳನ್ನು ಹೊರಗಿಡುವ ಸಮಯ..ಅಲ್ಲದೆ, ಆರೋಗ್ಯದ ಬಗ್ಗೆಯೂ ಇಂಥಹಾ ಸಮಯದಲ್ಲಿ ಕಾಳಜಿ ವಹಿಸಬೇಕಾದುದು ಅಗತ್ಯ. ಯಾಕೆಂದರೆ ಚಳಿಗಾಲದಲ್ಲಿ ಬೇಗನೇ ಆರೋಗ್ಯ ಹದಗೆಡುತ್ತದೆ. ಮತ್ತು ಗುಣಮುಖವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಚಳಿಗಾಲದಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ದೇಹ ಯಾವಾಗಲೂ ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಬಿಸಿ ನೀರು, ಬಿಸಿ ಆಹಾರವನ್ನು ಮಾತ್ರ ಸೇವಿಸಬೇಕು. ಅದರಲ್ಲೂ ಚಳಿಗಾದಲ್ಲಿ ಧಾನ್ಯಗಳಿಂದ ತಯಾರಿಸಿದ ಬಿಸಿ ಬಿಸಿ ಸೂಪ್‌ನ್ನು ಕುಡಿಯುವುದು ಉತ್ತಮ. ಇದು ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲದೆ ತೂಕ ಇಳಿಕೆಗೂ ನೆರವಾಗುತ್ತದೆ.

ಚಳಿಗಾಲದಲ್ಲಿ ಆಗೊಮ್ಮೆ ಈಗೊಮ್ಮೆ ಏನಾದರೂ ತಿನ್ನುತ್ತಿರಬೇಕು ಎಂದು ಅನಿಸುವುವುದು ಸಹಜ. ಸಂಜೆಯ ಟೀ, ಕಾಫಿಗೆ ಬಜ್ಜಿ, ಪಕೋಡಾಗಳನ್ನು ಮಾಡಿ ಸವಿಯುವವರಿದ್ದಾರೆ. ಹಾಗೆಂದು ಅನಿಸಿದಾಗಲ್ಲೆಲ್ಲಾ ಇಂಥಹಾ ಎಣ್ಣೆಯ ಪದಾರ್ಥಗಳನ್ನು ತಿನ್ನಲು ಸಾಧ್ಯವಿಲ್ಲ. ಇದರಿಂದ ದಿಢೀರ್ ತೂಕ ಹೆಚ್ಚಳವಾಗಬಹುದು. ಹೀಗಾಗಿ ಚಳಿಗಾಲದಲ್ಲಿ ಊಟದ ಮಧ್ಯೆ ಆಗೊಮ್ಮೆ ಈಗೊಮ್ಮೆ ಹಸಿವಾದಾಗ ತಿನ್ನಲು ಸೂಪ್ ಬೆಸ್ಟ್..ಕಾಳು, ತರಕಾರಿಗಳಿಂದ ಸಿದ್ಧಪಡಿಸೋ ಸೂಪ್ ತಿಂದೊಡನೇ ಮೈ ಬೆಚ್ಚಗಾಗುತ್ತದೆ. 

Latest Videos

undefined

ಪ್ರತಿದಿನ ಸೂಪ್, ಸಲಾಡ್ಸ್ ಸೇವಿಸಿದರೆ ಇಳಿಯುತ್ತಾ ತೂಕ?

ಚಳಿಗಾಲ (Winter)ದಲ್ಲಿ ಜ್ವರದ ಅನುಭವವಾದರೆ ದೇಹದ ತಾಪಮಾನವನ್ನು ಹೆಚ್ಚಿಸಲು ಸೂಪ್ (Soup) ಸೇವನೆ ಸಹಾಯ ಮಾಡುತ್ತದೆ. ಸೂಪ್ ಸೇವನೆಯಿಂದ ಹೊಟ್ಟೆ ತುಂಬುವುದು ಮಾತ್ರವಲ್ಲದೆ ದೇಹಕ್ಕೆ ಅಗತ್ಯವಾದ ಪ್ರೊಟೀನ್, ಖನಿಜಗಳು ಸಹ ಲಭಿಸುತ್ತದೆ. ಮಾತ್ರವಲ್ಲ ಈ ಸೂಪ್‌ಗಳ ಸೇವನೆ ತೂಕ (Weight) ಇಳಿಕೆಗೂ ಉತ್ತಮ.. 

ಎಲೆಕೋಸು ಸೂಪ್

ಎಲೆಕೋಸು ಸೂಪ್‌ನಲ್ಲಿ ಪ್ರೊಟೀನ್‌ಗಳು ಸಮೃದ್ಧವಾಗಿವೆ. ಎಲೆಕೋಸಿನ ಜತೆ ನಿಮಗಿಷ್ಟವಾದ ಇತರ ಕೆಲವು ತರಕಾರಿಗಳನ್ನು ಬಳಸಿಕೊಂಡು ಈ ಸೂಪ್ ತಯಾರಿಸಬಹುದು. ಇದರ ಪರಿಮಳ ಸ್ವಾದ ನಿಮಗೆ ಇಷ್ಟವಾಗುವುದು ಖಂಡಿತ, 

ಹಸಿರು ಬಟಾಣಿ ಸೂಪ್

ಬಟಾಣಿ ದ್ವಿದಳ ಧಾನ್ಯವಾಗಿದೆ. ಹೀಗಾಗಿ ಇದು ವಿಟಮಿನ್‌ಗಳು ಮತ್ತು ಉತ್ಕರ್ಷಣಾ ನಿರೋಧಕಗಳಿಂದ ತುಂಬಿರುತ್ತದೆ. ಮನೆಯಲ್ಲಿ ಯಾವಾಗಲೂ ಆಲೂಗಡ್ಡೆ-ಬಟಾಣಿಯ ರೆಸಿಪಿಯನ್ನು ತಿಂದು ನೀವು ಬೇಸತ್ತಿದ್ದರೆ ಹಸಿರು ಬಟಾಣಿಯ ಸೂಪ್‌ನ್ನು ಟೇಸ್ಟ್ ಮಾಡಬಹುದು. ದಿನದ ಯಾವುದೇ ಸಮಯದಲ್ಲಿ ನೀವು ಇದನ್ನು ತಯಾರಿಸಿ ಕುಡಿಯಬಹುದು.

ಟೊಮೇಟೊ-ಕ್ಯಾರೆಟ್ ಸೂಪ್ 

ಟೊಮೆಟೋ, ಕ್ಯಾರೆಟ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿಗಳು. ಸಿಹಿಯಾಗಿರುವ ಇರುವ ಕಾರಣ ಈ ತರಕಾರಿಗಳನ್ನು ಸೂಪ್‌ಗೆ ಹೆಚ್ಚಾಗಿ ಬಳಸಲಾಗುತ್ತದೆ. ಕ್ಯಾರೆಟ್ ಮತ್ತು ಟೊಮೆಟೋಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಕಾರಣ ತೂಕ ಹೆಚ್ಚಳವಾಗುವ ಭಯವೂ ಇಲ್ಲ. ಸುಸ್ತಾಗಿದ್ದಾಗ ಈ ಸೂಪ್ ಕುಡಿಯುವುದರಿಂದ ಆಯಾಸ ಪರಿಹಾರವಾಗುತ್ತದೆ.

ಪಾಲಕ್ -ಬೀಟ್ರೂಟ್ ಸೂಪ್ ಆರೋಗ್ಯಕ್ಕೆ ತುಂಬಾ ಬೆಸ್ಟ್

ಕಡಲೆ ಸೂಪ್ 

ಕಡಲೆ ಸೂಪ್ ಸಹ ಚಳಿಗಾಲದಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚು ಜೀವಸತ್ವಗಳು ಹಾಗೂ ಖನಿಜಗಳನ್ನು ಹೊಂದುವುದರಿಂದ ಆರೋಗ್ಯಕ್ಕೂ ಉತ್ತಮವಾಗಿದೆ. ಇದರ ಸೇವನೆಯಿಂದ ತೂಕ ಹೆಚ್ಚಳವಾಗುತ್ತದೆ ಅನ್ನೋ ಭಯವೂ ಇಲ್ಲ.

ಬಾರ್ಲಿ ಸೂಪ್

ಚಳಿಗಾಲದಲ್ಲಿ ಬಾರ್ಲಿ ಸೂಪ್ ಸೇವನೆ ಅತ್ಯುತ್ತಮವಾಗಿದೆ. ಜೀರಿಗೆ ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಸೇರಿಸಿ ಈ ಸೂಪ್‌ನ್ನು ತಯಾರಿಸಬಹುದಾಗಿದೆ. ಈ ಸೂಪ್‌ನಲ್ಲಿ ಬಳಸುವ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವಲ್ಲಿ ನೆರವಾಗುತ್ತದೆ. ಈ ಸೂಪ್‌ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಸಿ ಬಿಸಿಯಾದ ಸೂಪ್‌ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಚಳಿಗಾಲದಲ್ಲಿ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುವಲ್ಲಿ ಈ ಸೂಪ್ ಸಹಕಾರಿ. 

click me!