Christmas Special Doughnut: ಬಾಯಲ್ಲಿ ನೀರೂರಿಸೋ ಡೋನಟ್ಸ್ ಮಿಸ್ ಮಾಡ್ಬೇಡಿ

Suvarna News   | Asianet News
Published : Dec 16, 2021, 09:19 AM ISTUpdated : Dec 16, 2021, 07:16 PM IST
Christmas Special Doughnut: ಬಾಯಲ್ಲಿ ನೀರೂರಿಸೋ ಡೋನಟ್ಸ್ ಮಿಸ್ ಮಾಡ್ಬೇಡಿ

ಸಾರಾಂಶ

ಕ್ರಿಸ್ಮಸ್ (Christmas) ಶುರುವಾಯ್ತು..ಈಗೇನಿದ್ರೂ ಎಲ್ಲೆಡೆ ಕಲರ್‌ಫುಲ್ ಕೇಕ್‌ (Cake)ಗಳದ್ದೇ ದರ್ಬಾರ್. ಮಾಲ್, ಕಾಫಿ ಡೇಗಳಲ್ಲಿ ಟೇಸ್ಟೀ ಕೇಕ್‌ಗಳು ಸವಿಯಲು ಸಿಗುತ್ತವೆ. ಕ್ರಿಸ್ಮಸ್‌ಗೆ ಸ್ಪೆಷಲ್ ಆಗಿ ನೀವು ಟೇಸ್ಟ್ (Taste) ಮಾಡಲೇಬೇಕಾದ ಕೇಕ್‌ಗಳು ಯಾವುವು..ಇಲ್ಲಿದೆ ಲಿಸ್ಟ್..

ಕ್ರಿಸ್ಮಸ್‌ (Christmas) ಎಂದ ಕೂಡಲೇ ಕ್ರಿಸ್ಮಸ್‌ ಟ್ರೀ, ಸಾಂತಾಕ್ಲಾಸ್, ಗಿಫ್ಟ್ ಗಳ ಜತೆಗೆ ತಕ್ಷಣವೇ ನೆನಪಾಗುವುದು ರುಚಿಕರ ಕೇಕ್‌ಗಳು, ಚಾಕೋಲೇಟ್‌ಗಳು. ಕ್ರಿಸ್ಮಸ್‌ ಆರಂಭವಾದಾಗಾಲೇ ಮಾಲ್, ಕಾಫಿ ಡೇಗಳು, ಪಿಜ್ಜಾ ಶಾಪ್‌ಗಳು ಕಲರ್‌ಫುಲ್ ಲೈಟಿಂಗ್‌ನೊಂದಿಗೆ ಸಜ್ಜಾಗುತ್ತದೆ. ಮಾಲ್‌ಗಳಲ್ಲಿ ಪ್ಯಾಕ್ ಮಾಡಿದ ಡಿಫರೆಂಟ್ ಶೇಪ್ ನ ಚಾಕೋಲೇಟ್ ಗಳು ಟೇಸ್ಟ್ ಮಾಡಲು ಸಿಗುತ್ತವೆ. ಕ್ರಿಸ್ಮಸ್‌ ನೆಪದಲ್ಲೇ ಜನರು ವಿವಿಧ ಮಾಲ್, ಶಾಪ್‌ಗಳಿಗೆ ತೆರಳಿ ರುಚಿಕರವಾದ ಚಾಕೋಲೇಟ್‌ಗಳನ್ನು ಸವಿಯುತ್ತಾರೆ. ಕ್ರಿಸ್ಮಸ್‌ ಹಾಲಿಡೇ ಇರುವವರು ಫ್ರೆಂಡ್ ಜತೆ ಕೇಕ್ ಪಾರ್ಟಿ ಮಾಡಿಕೊಂಡು ಖುಷಿಪಡುತ್ತಾರೆ.

ಕ್ರಿಸ್ಮಸ್‌ಗೆಂದೇ ಸ್ಪೆಷಲ್ ಆಗಿ ಮೆಕ್ ಡೊನಾಲ್ಡ್, ಪಿಜ್ಜಾ ಹಟ್, ಸ್ಟಾರ್‌ಬಕ್ಸ್‌ ಮೊದಲಾದೆಡೆ ಡಿಫರೆಂಟ್ ಟೇಸ್ಟ್‌ನ ಕೇಕ್ಸ್, ಕುಕ್ಕೀಸ್, ಪೈ, ಡೋನಟ್ ಮೊದಲಾದವುಗಳು ಲಭ್ಯವಾಗುತ್ತದೆ. ಅದರಲ್ಲಿ ಯಾವುದು ಬೆಸ್ಟ್...ಯಾವುದು ವರ್ಸ್ಟ್ ಟೇಸ್ಟ್ ತಿಳಿಯೋಣ..

ಕೇಕ್ ತಿನ್ನೋಂದ್ರಿಂದಾನೂ ಪ್ರಯೋಜನಗಳಿವೆ ಅನ್ನೋದು ಗೊತ್ತಾ?

ಶೇಕ್ ಶಾಕ್‌ನ ಕ್ರಿಸ್ಮಸ್ ಕುಕಿ ಶೇಕ್ (Shake Shack's Christmas Cookie Shake)

ಶೇಕ್ ಶಾಕ್‌ನ ಕ್ರಿಸ್ಮಸ್ ಕುಕಿ ಶೇಕ್ ತಿನ್ನೋದಕ್ಕೆ ಎಷ್ಟು ಟೇಸ್ಟ್ ಅನ್ನೋದಕ್ಕಿಂತ ನೋಡೋದಕ್ಕೆ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿದೆ. ಹೆವಿ ಕ್ರೀಮ್ ಮೇಲೆ ಹಸಿರು, ಕೆಂಪು ಟಾಪಿಂಗ್ಸ್ ಇದಕ್ಕೆ ಇನ್ನಷ್ಟು ಲುಕ್ ನೀಡುತ್ತದೆ. ಕ್ರೀಮ್ ಜತೆಯಲ್ಲಿ ತಿನ್ನಲು ಕ್ರಂಚೀ ಎಂದು ಸಹ ಅನಿಸುತ್ತದೆ. ಹಾಲಿಡೇ ಟ್ರೀಟ್‌ಗೆ ಪರ್ಫೆಕ್ಟ್ ಚಾಯ್ಸ್ ಆಗಿದೆ. 

ಮೆಕ್ ಡೊನಾಲ್ಡ್ ಹಾಲಿಡೇ ಪೈ (McDonald's Holiday Pie)

ಪ್ರತಿ ಬಾರಿಯೂ ಮೆಕ್ ಡೊನಾಲ್ಡ್ ಹಾಲಿಡೇ ಪೈಯನ್ನು ಆರಂಭಿಸಿದಾಗ ಖುಷಿಪಡುತ್ತಾರೆ. ಕಾಮನಬಿಲ್ಲಿನ ಬಣ್ಣಗಳನ್ನು ಚಿಮುಕಿಸಿದಂತೆ ಕಾಣುವ ಈ ಹಾಲಿಡೇ ಪೈ ತುಂಬಾ ಟೇಸ್ಟಿ ಸಹ ಆಗಿದೆ. ಪೈ ಟೇಸ್ಟ್ ಮಾಡುವಾಗ ಶುಗರ್ ಕುಕ್ಕಿಯಂತೆಯೇ ರುಚಿಕರವಾಗಿದ್ದು ಕ್ರಂಚೀ ಕೂಡಾ ಇದೆ. ಆದರೆ ಪೈ ತಿಂದಾದ ಬಳಿಕ ಕ್ರೀಮ್ ದೊರಕಿದಾಗ ನೀವು ನಿರಾಶರಾಗುವುದು ಖಂಡಿತ. ಯಾಕೆಂದರೆ ಈ ಕ್ರೀಮ್ ತುಂಬಾ ಸಪ್ಪೆಯಾಗಿದೆ ಮತ್ತು ಕಹಿಯೆನಿಸುತ್ತದೆ. ಹೀಗಾಗಿ ಈ ಕ್ರೀಮ್‌ನ್ನು ಸ್ಕಿಪ್ ಮಾಡಿ ಪೈಯನ್ನು ಮಾತ್ರ ತಿನ್ನುವುದು ಉತ್ತಮ.

ಡಂಕಿನ್ಸ್ ಹಾಲಿ ಬೆರ್ರಿ ಸ್ಪ್ರಿಂಕಲ್ಸ್ ಡೋನಟ್ (Dunkin's Holly Berry Sprinkles Doughnut)

ಕ್ರಿಸ್ಮಸ್‌ ಎಂದ ಕೂಡಲೇ ಡಿಫರೆಂಟ್ ಡೋನಟ್‌ಗಳನ್ನು ಟೇಸ್ಟ್ ಮಾಡಲು ಸೂಕ್ತ ಸಮಯ. ಡಂಕಿನ್ಸ್ ಹಾಲಿ ಬೆರ್ರಿ ಸ್ಪ್ರಿಂಕಲ್ಸ್ ಡೋನಟ್ ನೋಡಿದಾಗಲೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಸಾಕಷ್ಟು ದಪ್ಪಗಾಗಿರುವ ಡೋನಟ್, ಆದರೆ ಮೇಲೆ ಚಿಮುಕಿಸಲಾಗಿರುವ ಚಾಕೋಪೀಸ್‌ಗಳು ಕ್ರಂಚೀ ಎನಿಸುತ್ತವೆ. 

X`mas Here I Come: ಟೇಸ್ಟೀ ಕ್ರಿಸ್ಮಸ್ ಪ್ಲಮ್ ಕೇಕ್ ಹೀಗೆ ಮಾಡಿ

ವಿಂಟರ್ ವಂಡರ್‌ಲ್ಯಾಂಡ್ ಪ್ಯಾನ್‌ಕೇಕ್‌ಗಳು (Winter Wonderland Pancakes)

ಪ್ಯಾನ್‌ಕೇಕ್‌ಗಳು ಯಾವಾಗಲೂ ಹಲವರ ಪಾಲಿಗೆ ಫಸ್ಟ್ ಆ್ಯಡ್ ಬೆಸ್ಟ್ ಚಾಯ್ಸ್. ಅದರಲ್ಲೂ ವಿಂಟರ್  ವಂಡರ್‌ಲ್ಯಾಂಡ್ ಪ್ಯಾನ್‌ಕೇಕ್‌ಗಳು ಬ್ಲೂ ಕ್ರೀಮ್ ಟಾಪಿಂಗ್ಸ್‌ನಿಂದ ಇನ್ನಷ್ಟು ಅದ್ಭುತವಾಗಿ ಕಾಣುತ್ತದೆ. ಅಚ್ಚುಕಟ್ಟಾಗಿ ಜೋಡಿಸಿದ ಪ್ಯಾನ್ ಕೇಕ್ ಮೇಲೆ ಬ್ಲೂ ಗೊ ಐಸಿಂಗ್ ಅಟ್ರ್ಯಾಕ್ಟಿವ್ ಆಗಿ ಇರಿಸಲಾಗುತ್ತದೆ. ಈ ನೀಲಿ ಐಸಿಂಗ್ ಡಿಫರೆಂಟ್ ರುಚಿ ನೀಡುತ್ತದೆ.

ಸ್ಟಾರ್‌ಬಕ್ಸ್‌ನ ಹಿಮಸಾರಂಗ ಕೇಕ್ ಪಾಪ್ (Starbucks' Reindeer Cake Pop)

ಸ್ಟಾರ್‌ಬಕ್ಸ್‌ನ ಹಿಮಸಾರಂಗ ಕೇಕ್ ಪಾಪ್ ನಂಬರ್ ಒನ್ ಹಾಲಿಡೇ ಟ್ರೀಟ್ ಆಗಿದೆ. ನೋಡೋದಕ್ಕೆ ಪುಟ್ಟದಾಗಿದ್ದರೂ ಸಕತ್ ಟೇಸ್ಟಿಯೂ ಹೌದು. ವೆನಿಲ್ಲಾ ಕೇಕ್ ಮೇಲೆ ಚಾಕೋಲೇಟ್ ಐಸಿಂಗ್ ಮಾಡಿರಲಾಗಿರುತ್ತದೆ. ಹಿಮಸಾರಂಗದಂತೆ ಮಾಡಲಾಗಿರುವ ಶೇಪ್‌ಗೆ ಬಳಸಲಿರುವ ಕ್ರೀಮ್‌ಗಳು ರುಚಿಯಾಗಿದ್ದು, ಒಟ್ಟಾರೆ ಈ ಕೇಕ್ ಪಾಪ್ ಅದ್ಭುತವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?