ಹೊಟೇಲ್ ಆಹಾರವನ್ನು ಪರಿಶೀಲಿಸಿ ತಿನ್ನಿ. ಅನೇಕ ಬಾರಿ ಇಲಿ, ಹಲ್ಲಿ ಜೊತೆ ಮನುಷ್ಯನ ಅಂಗವೂ ಸಿಗಬಹುದು. ಇದಕ್ಕೆ ಈ ಘಟನೆ ಸಾಕ್ಷ್ಯ. ಅಮೆರಿಕಾದಲ್ಲಿ ಮಹಿಳೆ ಸಲಾಡ್ ಜೊತೆ ಮನುಷ್ಯನ ಬೆರಳು ತಿಂದಿದ್ದಾಳೆ.
ಹೊಟೇಲ್ ಗೆ ಹೋಗಿ ನಾವು ಆಹಾರ ಸೇವನೆ ಮಾಡ್ತೇವೆ. ಅಲ್ಲಿ ನೀಡುವ ರುಚಿ ರುಚಿ ಆಹಾರಕ್ಕೆ ನಾವು ಮರಳಾಗ್ತೇವೆ. ಆದ್ರೆ ಎಲ್ಲ ಆಹಾರವನ್ನು ಮನೆಯಲ್ಲಿ ತಯಾರಿಸಿದಂತೆ ತಯಾರಿಸಲು ಸಾಧ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಆಹಾರ ತಯಾರಾಗುವ ಕಾರಣ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತದೆ. ಸಣ್ಣಪುಟ್ಟ ಕೂದಲು, ಅಕ್ಕಿಯಲ್ಲಿ ಹುಳ ಬರೋದು ಸಾಮಾನ್ಯ. ಆಹಾರದಲ್ಲಿ ನೊಣ ಅಥವಾ ಕೂದಲು ಬಿದ್ರೆ ಅದನ್ನು ವಾಪಸ್ ಮಾಡಿ ಇನ್ನೊಂದು ಆಹಾರ ತರಿಸಿಕೊಂಡು ತಿಂದು ಬರೋದು ಹೆಚ್ಚು. ಹಲ್ಲಿ ಸೇರಿದಂತೆ ಕೆಲ ಪ್ರಾಣಿಗಳು ಸಿಕ್ಕ ಸುದ್ದಿಗಳನ್ನು ನಾವು ಕೇಳ್ತಿರುತ್ತೇವೆ . ಈಗ ಮನುಷ್ಯನ ಬೆರಳು ಸಲಾಡ್ ನಲ್ಲಿ ಸಿಕ್ಕ ಬಗ್ಗೆ ವರದಿಯಾಗಿದೆ. ಅಮೆರಿಕಾದ ರೆಸ್ಟೊರೆಂಟ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಹೊಟೇಲ್ ಮ್ಯಾನೇಜರ್ ಬೆರಳಿನ ಸಣ್ಣ ತುಂಡು ಸಲಾಡ್ ನಲ್ಲಿತ್ತು. ತಾನು ಅದನ್ನು ತಿಂದಿರೋದಾಗಿ ಅವರು ಆರೋಪ ಮಾಡಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಸಲಾಡ್ (Salad) ನಲ್ಲಿ ಮಾನವರ ಬೆರಳು : ಘಟನೆ ನಡೆದಿರೋದು ಯುನೈಟೆಡ್ ಸ್ಟೇಟ್ಸ್‌ನ ಕನೆಕ್ಟಿಕಟ್‌ನ ಗ್ರೀನ್‌ವಿಚ್‌ನಲ್ಲಿ. ದೂರು ನೀಡಿದ ಮಹಿಳೆ ಹೆಸರು ಅಲಿಸನ್ ಕೋಝಿ. ನ್ಯೂಯಾರ್ಕ್ (New York) ಮೌಂಟ್ ಕಿಸ್ಕೋದ ಚಾಪ್ಟ್ ಹೆಸರಿನ ರೆಸ್ಟೋರೆಂಟ್ ನಲ್ಲಿ ಕೋಝಿ ಸಲಾಡ್ ಖರೀದಿ ಮಾಡಿದ್ದರು.
undefined
ಕೋಪ, ತಾಪ ತರಿಸೋ ಈರುಳ್ಳಿ-ಬೆಳ್ಳುಳ್ಳಿ ಪೂಜಾ ವೇಳೆ ನಿಷಿದ್ಧ!
ಸಲಾಡ್ ತಿನ್ನುವ ವೇಳೆ ಅಲಿಸನ್ ಕೋಝಿಗೆ ತಾನು ಮನುಷ್ಯನ ಬೆರಳು (Finger) ತಿನ್ನುತ್ತಿದ್ದೇನೆ ಎಂಬುದು ಅರಿವಿಗೆ ಬಂದಿದೆ. ಅದು ಸಲಾಡ್ ನಲ್ಲಿತ್ತು ಎಂಬುದು ಅವರಿಗೆ ಗೊತ್ತಾಗಿದೆ. ಮ್ಯಾನೇಜರ್ ಬೆರಳು ತಿಂದ ಮಹಿಳೆ : ರೆಸ್ಟೋರೆಂಟ್ ನಲ್ಲಿ ಅರಗುಲಾ ಕತ್ತರಿಸುತ್ತಿದ್ದ ವೇಳೆ ಮ್ಯಾನೇಜರ್ ಕೈ ಬೆರಳು ಕಟ್ ಆಗಿದೆ. ಅವರ ಎಡ ತೋರುಬೆರಳು ಕಟ್ ಆಗಿತ್ತು. ಆ ಕ್ಷಣ ಮ್ಯಾನೇಜರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಕತ್ತರಿಸಿದ್ದ ತೋರು ಬೆರಳಿನ ಭಾಗ ಸಲಾಡ್ ನಲ್ಲಿ ಸೇರಿದೆ. ರೆಸ್ಟೋರೆಂಟ್ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ. ಅದನ್ನೇ ಮಹಿಳೆಗೆ ಸರ್ವ್ ಮಾಡಿದೆ ಎಂದು ದಾಖಲೆಗಳು ಹೇಳಿವೆ.
ಮನುಷ್ಯನ ಬೆರಳು ತಿಂದ್ಮೇಲೆ ಆಗಿದ್ದೇನು? : ಕೋಝಿ ಸಲಾಡ್ ನಲ್ಲಿದ್ದ ಬೆರಳು ತಿನ್ನ ಮೇಲೆ ಏನಾಯ್ತು ಎಂಬುದನ್ನು ಹೇಳಿದ್ದಾರೆ. ಅವರ ದೂರಿನ ಪ್ರಕಾರ, ಬೆರಳು ತಿಂದ ಪರಿಣಾಮ ಆಘಾತ, ಪ್ಯಾನಿಕ್ ಅಟ್ಯಾಕ್, ಮೈಗ್ರೇನ್, ಅರಿವಿನ ದುರ್ಬಲತೆ, ವಾಕರಿಕೆ, ತಲೆತಿರುಗುವಿಕೆ ಮತ್ತು ಕುತ್ತಿಗೆ ಮತ್ತು ಭುಜದ ನೋವು ಸೇರಿದಂತೆ ಕೆಲವೊಂದು ಗಂಭೀರ ಸಮಸ್ಯೆಯನ್ನು ಕೋಝಿ ಅನುಭವಿಸಿದಳಂತೆ.
ಈ ಘಟನೆಯಿಂದ ಸಾಕಷ್ಟು ಒತ್ತಡ ಮತ್ತು ಆಘಾತವಾಗಿದೆ. ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಕೋಝಿ ಬಯಸುವುದಿಲ್ಲ ಎಂದು ವಕೀಲರು ಹೇಳಿದ್ದಾರೆ. ನ್ಯೂಯಾರ್ಕ್ ಕಾನೂನಿಗೆ ಅನುಸಾರವಾಗಿ, ಆಕೆಯ ದೂರಿನಲ್ಲಿ ಅವಳು ಬಯಸುತ್ತಿರುವ ಡಾಲರ್ ಮೊತ್ತದ ವಿತ್ತೀಯ ಹಾನಿಯನ್ನು (Monetary Compensation) ಒಳಗೊಂಡಿಲ್ಲ. ಇದು ಸಾಮಾನ್ಯ ಜ್ಞಾನ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ. ಈ ರೀತಿಯಲ್ಲಿ ಆಹಾರ ತಯಾರಿಕೆ ಮತ್ತು ಸೇವೆಯನ್ನು ಮೇಲ್ವಿಚಾರಣೆ ಮಾಡುವುದು ರೆಸ್ಟೋರೆಂಟ್‌ನ ಜವಾಬ್ದಾರಿಯಾಗಿದೆ. ಇದು ಗಮನಾರ್ಹ ಪರಿಹಾರಕ್ಕೆ ಅರ್ಹವಾಗಿದೆ ಎಂದು ವಕೀಲರು ಹೇಳಿದ್ದಾರೆ.
ಜಗತ್ತಿನ ಅತ್ಯಂತ ದುಬಾರಿ ಸಸ್ಯವಿದು, 'ರೆಡ್ ಗೋಲ್ಡ್' ಹೆಸರಿನ ಈ ಮಸಾಲೆ ಬೆಳೆದ್ರೆ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ!
ಕೋಝಿಗೆ ಪರಿಹಾರ ನೀಡಿದ ರೆಸ್ಟೋರೆಂಟ್ : ಕೋಝಿ ದೂರಿನ ಮೇರೆಗೆ ವೆಸ್ಟ್‌ಚೆಸ್ಟರ್ ಕೌಂಟಿ ಆರೋಗ್ಯ ಇಲಾಖೆಯು ಘಟನೆಯ ಬಗ್ಗೆ ತನಿಖೆ ನಡೆಸಿದೆ. ನಿರ್ಲಕ್ಷ್ಯ ಮಾಡಿ ಮಹಿಳೆ ಸಲಾಡ್ ನಲ್ಲಿ ಮನುಷ್ಯನ ಬೆರಳು ಹಾಕಿದ್ದ ರೆಸ್ಟೋರೆಂಟ್‌ಗೆ 900 ಡಾಲರ್ ದಂಡ ವಿಧಿಸಿದೆ.