ಒಂದು ಸ್ಯಾಂಡ್ವಿಚ್ ಗೆ 1 ಲಕ್ಷದ 64 ಸಾವಿರ ದಂಡ ತೆತ್ತ ಮಹಿಳೆ!

By Suvarna News  |  First Published Nov 27, 2023, 2:37 PM IST

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಮೊದಲು ವಿಮಾನದ ನಿಯಮಗಳನ್ನು ತಿಳಿದಿರಬೇಕು. ಮರೆತೂ ಕೆಲ ತಪ್ಪುಗಳನ್ನು ಮಾಡಬಾರದು. ಇಲ್ಲವೆಂದ್ರೆ ಈ ಮಹಿಳೆಯಂತೆ ಉಣ್ಣದೆ, ತಿನ್ನದೆ ದೊಡ್ಡ ಮೊತ್ತವನ್ನು ಕಳೆದುಕೊಳ್ಳಬೇಕಾಗುತ್ತದೆ. 
 


ವಿಮಾನ ಪ್ರಯಾಣದ ವೇಳೆ ಎಲ್ಲ ನಿಯಮಗಳನ್ನು ತಪ್ಪದೆ ಪಾಲನೆ ಮಾಡಬೇಕಾಗುತ್ತದೆ. ಇಲ್ಲವೆಂದ್ರೆ ವಿಮಾನ ನಿಲ್ದಾಣದಲ್ಲಿ ದಂಡ ತೆರಬೇಕಾಗುತ್ತದೆ. ವಿಮಾನಯಾನ ಕಂಪನಿಗಳು ವಿಮಾನದಲ್ಲಿ ಕೆಲವೊಂದು ವಸ್ತುಗಳನ್ನು ಕೊಂಡೊಯ್ಯದಂತೆ ನಿಷೇಧ ಹೇರಿದ್ದಾರೆ. ನಿಷೇಧಿತ ವಸ್ತುಗಳನ್ನು ಪ್ರಯಾಣಿಕರು ತೆಗೆದುಕೊಂಡು ಹೋಗುವಂತಿಲ್ಲ. ಅದೇ ರೀತಿ ಪ್ರಯಾಣಿಕರ ಬ್ಯಾಗ್ ಗೆ ಸಂಬಂಧಿಸಿದಂತೆ ನಿಯಮವಿದೆ. ತೂಕಕ್ಕಿಂತ ಹೆಚ್ಚು ಬಟ್ಟೆ, ಬ್ಯಾಗ್ ಕೂಡ ಕೊಂಡೊಯ್ಯುವಂತಿಲ್ಲ. ಕಸ್ಟಮ್ಸ್ ಡಿಕ್ಲರೇಶನ್ ಫಾರ್ಮ್ ಕೂಡ ಪೂರ್ಣಗೊಳಿಸಬೇಕಾಗುತ್ತದೆ. ಅದ್ರಲ್ಲಿ ನೀವು ತಪ್ಪು ಮಾಹಿತಿ ನೀಡಿದ್ರೆ ದಂಡ ಪಾವತಿಸಬೇಕಾಗುತ್ತದೆ. ಈಗ ನ್ಯೂಜಿಲೆಂಡ್ ಮಹಿಳೆಯೊಬ್ಬರು ಒಂದು ಸ್ಯಾಂಡ್ವಿಚ್ ಗೆ ಭಾರೀ ದಂಡ ತೆತ್ತಿದ್ದಾರೆ.

ಒಂದು ಸ್ಯಾಂಡ್ವಿಚ್ (Sandwich) ಗೆ ಒಂದು ಲಕ್ಷ ರೂಪಾಯಿ ದಂಡ : ನ್ಯೂಜಿಲೆಂಡ್ ಮಹಿಳೆಯೊಬ್ಬರು ಆಸ್ಟ್ರೇಲಿಯಾ (Australia) ಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಸ್ಟ್ರೇಲಿಯಾ ತಲುಪಿದ ನಂತರ ತನ್ನ ಬ್ಯಾಗ್ ನಲ್ಲಿ ಸ್ಯಾಂಡ್ವಿಚ್ ತಂದಿರೋದನ್ನು ಹೇಳಿಲ್ಲ. ಬ್ಯಾಗ್ ನಲ್ಲಿ ಸ್ಯಾಂಡ್‌ವಿಚ್‌ ಇಟ್ಟುಕೊಂಡು ಅದನ್ನು ಹೇಳದ ಕಾರಣ ಭಾರಿ ದಂಡಕ್ಕೆ ಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಮಹಿಳೆಯ ವಯಸ್ಸು 77 ವರ್ಷ.  ಮಹಿಳೆ ನ್ಯೂಜಿಲೆಂಡ್‌ (New Zealand) ನ ಕ್ರೈಸ್ಟ್‌ಚರ್ಚ್ ವಿಮಾನ ನಿಲ್ದಾಣದಲ್ಲಿ ಗ್ಲುಟೆನ್ ಫ್ರೀ ಚಿಕನ್ ಮತ್ತು ಸಲಾಡ್ ಸ್ಯಾಂಡ್‌ವಿಚ್ ಮತ್ತು ಮಫಿನ್ ತೆಗೆದುಕೊಂಡಿದ್ದಳು. ವಿಮಾನದಿಂದ ಇಳಿಯುವಾಗ ಅವರ ಬ್ಯಾಗ್  ಪರಿಶೀಲಿಸಲಾಗಿದೆ. ಬ್ಯಾಗ್ ನಲ್ಲಿ  ಸ್ಯಾಂಡ್‌ವಿಚ್ ಪತ್ತೆಯಾಗಿದೆ. ಮಹಿಳೆಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಆಕೆಗೆ 1 ಲಕ್ಷದ 64 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 

Tap to resize

Latest Videos

undefined

ಪಾಕಿಸ್ತಾನ ಅಂದ್ರೆ ಟೆರರಿಸಂ ಮಾತ್ರ ಅಲ್ಲ, ಅಲ್ಲಿ ನಡೆದ ಆವಿಷ್ಕಾರಗಳ ಬಗ್ಗೆ ನಿಮಗೆ ಗೊತ್ತಾ?

ಬ್ರಸ್ಬೇನ್ ಗೆ ಪ್ರಯಾಣ ಬೆಳೆಸಿದ್ದ ಮಹಿಳೆ : ನ್ಯೂಜಿಲೆಂಡ್ ನ ಕ್ರೈಸ್ಟ್‌ಚರ್ಚ್‌ನಿಂದ ಮಹಿಳೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಪ್ರಯಾಣ ಬೆಳೆಸಿದ್ದರು. ತನ್ನ ಸಂಬಂಧಿಕರ ಜೊತೆ ಆಕೆ ವಿಮಾನ ಏರಿದ್ದರು. ಬ್ರಸ್ಬೇನ್ ತಲುಪಲು ಮೂರು ಗಂಟೆ ಸಮಯ ಹಿಡಿಯುತ್ತದೆ. ವಿಮಾನದಲ್ಲಿ ಹಸಿವಾದರೆ ಎನ್ನುವ ಕಾರಣಕ್ಕೆ ವಿಮಾನ ಹತ್ತುವ ಸಮಯದಲ್ಲಿ ಮಹಿಳೆ ಚಿಕನ್ ಮತ್ತು ಸಲಾಡ್ ಸ್ಯಾಂಡ್‌ವಿಚ್ ಅನ್ನು ಪ್ಯಾಕ್ ಮಾಡಿಕೊಂಡಿದ್ದರು. ತಮ್ಮ ಬ್ಯಾಗ್ಪ್ಯಾಕ್ ನಲ್ಲಿ ಇಟ್ಟುಕೊಂಡಿದ್ದ  ಸ್ಯಾಂಡ್ವಿಚ್ ತಿನ್ನುವುದನ್ನು ಅವರು ಮರೆತುಬಿಟ್ಟಿದ್ದರು. ಮಧ್ಯದಲ್ಲಿ ನಿದ್ರೆ ಮಾಡಿದ ಕಾರಣ ಅವರಿಗೆ ಹಸಿವಾಗಿರಲಿಲ್ಲ. ಅವರು ಬ್ರಿಸ್ಬೇನ್ ತಲುಪಿದಾಗ ಬ್ಯಾಗ್ ನಲ್ಲಿ ಸ್ಯಾಂಡ್ವಿಚ್ ಇರೋದನ್ನು ಸಂಪೂರ್ಣ ಮರೆತು, ಕಸ್ಟಮ್ಸ್ ಡಿಕ್ಲರೇಶನ್ ಫಾರ್ಮ್ ತುಂಬುವಾಗ ಅದನ್ನು ನಮೂದಿಸಿಲ್ಲ. 

ಬ್ಯಾಗ್ ಪರಿಶೀಲಿಸಿದ ಅಧಿಕಾರಿಗಳು : ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಸ್ಯಾಂಡ್ ವಿಚ್ ಪತ್ತೆಯಾಗಿದೆ. ಕಸ್ಟಮ್ ಡಿಕ್ಲರೇಶನ್ ಫಾರ್ಮ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡದೆ ಮರೆಮಾಚಿದ್ದಕ್ಕಾಗಿ ಅಧಿಕಾರಿಗಳು ಅವರಿಗೆ ದಂಡ ವಿಧಿಸಿದ್ದಾರೆ. ಅದು ಮೂರು ಸಾವಿರ ಆಸ್ಟ್ರೇಲಿಯನ್ ಡಾಲರ್ ಆಗಿದೆ. ಅಂದ್ರೆ ಭಾರತೀಯ ರೂಪಾಯಿಯಲ್ಲಿ 1 ಲಕ್ಷ 64 ಸಾವಿರ ರೂಪಾಯಿಗಿಂತ ಹೆಚ್ಚಾಗುತ್ತದೆ. 

ವಿಶ್ವದ ಏಳು ಅದ್ಭುತಗಳು ಎಲ್ಲರಿಗೂ ಗೊತ್ತು, ಎಂಟನೇ ಅದ್ಭುತ ಯಾವುದು ಗೊತ್ತಾ?

ನನಗೆ ಮರೆವಿನ ಖಾಯಿಲೆ ಇದೆ. ನನ್ನ ಬ್ಯಾಗ್ಪ್ಯಾಕ್ ನಲ್ಲಿ ಸ್ಯಾಂಡ್ವಿಚ್ ಇರೋದನ್ನು ನಾನು ಸಂಪೂರ್ಣ ಮರೆತಿದ್ದೆ. ಕಸ್ಟಮ್ ಅಧಿಕಾರಿಯೊಬ್ಬರು ಮೊದಲು ಬಂದು ಬ್ಯಾಗ್ ಪರಿಶೀಲಿಸಿ ಹೋಗಿದ್ದಾರೆ. ಆಗ ಅವರು ಏನೂ ಹೇಳಿರಲಿಲ್ಲ. ಆದ್ರೆ ಮತ್ತೆ ಬಂದವರು ಮೂರು ಸಾವಿರ ಆಸ್ಟ್ರೇಲಿಯನ್ ಡಾಲರ್ ನೀಡಿ ಎಂದಿದ್ದಾರೆ. ಆರಂಭದಲ್ಲಿ ನನಗೆ ಅರ್ಥವಾಗ್ಲಿಲ್ಲ. ನಂತ್ರ ಸ್ಯಾಂಡ್ವಿಚ್ ಗೆ ದಂಡ ವಿಧಿಸಿದ್ದಾರೆ ಎಂಬುದು ಗೊತ್ತಾಗಿದೆ. ಒಂದು ಸ್ಯಾಂಡ್ವಿಚ್ ಗೆ ಇಷ್ಟೊಂದು ದಂಡ ವಿಧಿಸಿರೋದನ್ನು ಕೇಳಿ ನಾನು ದಂಗಾದೆ. ಅಲ್ಲಿಯೇ ಅಳಲು ಶುರು ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾರೆ.
 

click me!