Cooking Tips: ರಾಜ್ಮಾ, ,ಬೀನ್ಸ್ ತಿಂದ್ರೆ ಹೊಟ್ಟೆ ಉಬ್ಬುತ್ತಾ? ಇಲ್ಲಿದೆ ಪರಿಹಾರ

By Suvarna News  |  First Published Dec 15, 2021, 7:29 PM IST

ಪ್ರೋಟೀನ್ ಇದೆ, ವಿಟಮಿನ್ ಇದೆ ಅಂತಾ ಒಂದಿಷ್ಟು ಬೇಳೆಗಳನ್ನು ಹಾಕಿ ನಾವು ಅಡುಗೆ ತಯಾರಿಸ್ತೇವೆ. ತುಂಬಾ ರುಚಿಯಾಗಿದೆ ಅಂತಾ ಸ್ವಲ್ಪ ಜಾಸ್ತಿ ತಿಂದು ತೇಗ್ತೇವೆ. ಅಷ್ಟೆಕ್ಕೆ ಮುಗೀಲಿಲ್ಲ. ನಂತ್ರ ಹೊಟ್ಟೆಯಲ್ಲಿ ಶುರುವಾಗುವ ಫೈಟಿಂಗ್ ಸಹಿಸೋದು ಕಷ್ಟ. ನಿಲ್ಲಕ್ಕಾಗಲ್ಲ,ಕೂರೋಕೆ ಆಗಲ್ಲ. ಈ ಟಿಪ್ಸ್ ಬಳಸಿದ್ರೆ ಇನ್ಮುಂದೆ ಗ್ಯಾಸ್ ಸಮಸ್ಯೆ ಇರಲ್ಲ.


ಗ್ಯಾಸ್ಟ್ರಿಕ್ (Gastric). ಸದ್ಯ ಸಾಂಕ್ರಾಮಿಕವಾಗಿರುವ ರೋಗವಿಸ್ಯೆ ಕಾಣಿಸಿಕೊಳ್ಳುತ್ತದೆ. ಇಷ್ಟದ ಆಹಾರ ಸೇವನೆಗೆ ಮನಸ್ಸು,ಬಾಯಿ ಹಾತೊರೆಯುತ್ತಿರುತ್ತದೆ. ಆದ್ರೆ ಗ್ಯಾಸ್ಟ್ರಿಕ್ ಭಯಕ್ಕೆ ಬಾಯಲ್ಲಿ ನೀರು ಬಂದ್ರೂ ಆಹಾರದಿಂದ ದೂರವಿರುವವರಿದ್ದಾರೆ. ಈಗಿನ ವಾತಾವರಣ,ಜೀವನ ಶೈಲಿ,ಆಹಾರ ಪದ್ಧತಿ ಈ ಗ್ಯಾಸ್ಟ್ರಿಕ್ ಗೆ ಕಾರಣವಾಗ್ತಿದೆ. ಅನೇಕ ಬಾರಿ ನಾವು ಆಹಾರ ತಯಾರಿಸುವ ವಿಧಾನ ಕೂಡ ಇದಕ್ಕೆ ದಾರಿ ಮಾಡಿಕೊಡುತ್ತದೆ. ಕಾಡುತ್ತದೆ. ಕೆಲವರು ಫೈಬರ್ ಅಜೀರ್ಣತೆಯಿಂದ ಬಳಲುತ್ತಾರೆ. ಅವರು ಬೀನ್ಸ್ ಅಡುಗೆ ಮಾಡುವಾಗ ಕೆಲವೊಂದು ವಿಷ್ಯವನ್ನು ನೆನಪಿಡಬೇಕು.
ತಜ್ಞರ ಪ್ರಕಾರ, ಬೀನ್ಸ್ ಅನ್ನು ಸಂಪೂರ್ಣವಾಗಿ ನೆನೆ ಹಾಕಬೇಕು. ಬೀನ್ಸ್ ಅನ್ನು ಸುಮಾರು 7-8 ಗಂಟೆಗಳ ಕಾಲ ನೆನೆಸುವುದು ಅವಶ್ಯಕ. ರಾತ್ರಿಯಿಡೀ ನೆನೆಸುವುದು ಉತ್ತಮ. ಬೆಳಿಗ್ಗೆ ನೆನೆಸಿದ ಕಾಳುಗಳ ನೀರನ್ನು ಬಸಿಯಬೇಕು. ಬಸಿದ ನೀರನ್ನು ಬಳಸಬಾರದು. ಕೆಲವರು ನೆನೆ ಹಾಕಿದ ನೀರಿನಲ್ಲಿಯೇ ಬೀನ್ಸ್ ಬೇಯಿಸುತ್ತಾರೆ. ಇದು ತಪ್ಪಾದ ವಿಧಾನ. ನೆನೆ ಹಾಕಿದ ನೀರನ್ನು ಎಸೆದು ಹೊಸ ನೀರನ್ನು ಹಾಕಿ ಬೇಯಿಸಬೇಕಾಗುತ್ತದೆ. ಆಗ ಗ್ಯಾಸ್ ಸಮಸ್ಯೆ ಕಾಡುವುದಿಲ್ಲ.

ತುರ್ತು ಸಮಯದಲ್ಲಿ ಬೀನ್ಸ್ ಅನ್ನು ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸಿಡಬಹುದು.  ಅನೇಕ ಬಾರಿ ನಾವು ಬೀನ್ಸ್ ಜೊತೆಗೆ ತರಕಾರಿ,ವಿನೇಗರ್ (Vinegar),ಟೊಮೊಟೊ,ಉಪ್ಪು ಸೇರಿದಂತೆ ಮಸಾಲೆಯನ್ನು ಹಾಕಿ ಒಟ್ಟಿಗೆ ಬೇಯಿಸುತ್ತೇವೆ. ಹೀಗೆ ಮಾಡಿದಾಗ ಬೀನ್ಸ್ ಸರಿಯಾಗಿ ಬೇಯುವುದಿಲ್ಲ. ಮೊದಲು ನೀರಿ(Water)ನಲ್ಲಿ ಬೀನ್ಸ್ ಬೇಯಿಸಬೇಕು. ನಂತರ ಬೀನ್ಸ್ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ಆ ನಂತರ ಅದಕ್ಕೆ ಮಸಾಲೆ (Spice) ಪದಾರ್ಥಗಳನ್ನು ಬೆರೆಸಬೇಕು.

Latest Videos

click me!