
ನವದೆಹಲಿ(ಮೇ.22): ಹಾಂಕಾಂಗ್, ನೇಪಾಳ ಮತ್ತು ಸಿಂಗಾಪುರ ನಿಷೇಧದ ನಡುವೆಯೇ ಮಸಾಲೆ ಪದಾರ್ಥಗಳಾದ ಎಂಡಿಎಚ್, ಎವರೆಸ್ಟ್ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.
ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಎವರೆಸ್ಟ್ ಮತ್ತು ಎಂಡಿಎಚ್ ಕಂಪನಿಯ ಆಹಾರ ಪದಾರ್ಥಗಳ 34 ಸ್ಯಾಂಪಲ್‌ಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್ ಆಕ್ಸೈಡ್ ಇರುವುದು ಪತ್ತೆಯಾಗಿಲ್ಲ.
ಕ್ಯಾನ್ಸರ್ ಬರುವ ಅಂಶ ಪತ್ತೆ, ಎವರೆಸ್ಟ್, ಎಂಡಿಎಚ್ ಮಸಾಲೆಗೆ ನೇಪಾಳ ನಿಷೇಧ
ಹೊರದೇಶಗಳಲ್ಲಿ ನಿಷೇಧಿಸಲಾಗಿರುವ ಇತರೆ ಮಸಾಲೆ ಪದಾರ್ಥಗಳ 300 ಸ್ಯಾಂಪಲ್‌ಗಳನ್ನೂ ಪರೀಕ್ಷೆ ಮಾಡಲಾಗಿದೆ. ಅದರಲ್ಲೂ ಯಾವುದೇ ಮಾರಣಾಂತಿಕ ರಾಸಾಯನಿಕ ಅಂಶಗಳಿರುವುದು ಕಂಡುಬಂದಿಲ್ಲ ಎಂದು ದೃಢೀಕರಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.