ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಹಣ ಹಾಗೂ ಸ್ಮಾರ್ಟ್ ಫೋನ್ ಇದ್ದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಆದ್ರೆ ಹೀಗೆ ಆನ್‌ಲೈನ್ ಡೆಲಿವರಿಯ ಸಂದರ್ಭ ಕೆಲವೊಮ್ಮೆ ಮಹಾ ಎಡವಟ್ಟುಗಳು ಆಗೋದು ಇದೆ. ಇಲ್ಲೂ ಅಂಥಹದ್ದೇ ಘಟನೆಯೊಂದು ನಡೆದಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಆನ್‌ಲೈನ್ ಫ್ಲಾಟ್‌ಫಾರ್ಮ್ ಜನರ ಬದುಕನ್ನು ಮತ್ತಷ್ಟು ಸುಲಭವಾಗಿಸಿದೆ. ಮನೆಯಲ್ಲೇ ಇದ್ದೂ ಯಾವುದೇ ವಸ್ತುವನ್ನು ಸುಲಭವಾಗಿ ಮನೆಗೆ ತರಿಸಿಕೊಳ್ಳಬಹುದಾಗಿದೆ. ಬಟ್ಟೆ, ಎಲೆಕ್ಟ್ರಾನಿಕ್ಸ್ ಐಟಮ್ಸ್, ಆಹಾರ, ಮೆಡಿಸಿನ್ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. ಅದರಲ್ಲೂ ಆಹಾರ ಪಡೆಯುವ ವಿಚಾರದಲ್ಲಿ ಇದು ಹೆಚ್ಚಾಗಿ ಜನರ ನೆರವಿಗೆ ಬರುತ್ತಿದೆ. ಊಟ ಮಾಡೋಕೆ ಜನರು ಹೊಟೇಲ್, ರೆಸ್ಟೋರೆಂಟ್‌ಗೆ ಹೋಗಬೇಕಾಗಿಲ್ಲ. ಈ ಸೇವೆಯಿಂದ ಜನರು ಮನೆಯಲ್ಲೇ ಇದ್ದು ತಮ್ಮಿಷ್ಟದ ತಿಂಡಿ, ಊಟ ತರಿಸಿ ತಿನ್ನಬಹುದಾಗಿದೆ. ಈ ಹಿಂದೆ ಮನೆಯಲ್ಲಿ ಮಾಡಬೇಕಾದ ಅಥವಾ ಹೊರ ಹೋಗಿ ತಿನ್ನಬೇಕಾದ ಅನಿವಾರ್ಯತೆ ಇತ್ತು. ಆದರೀಗ ಹಾಗಲ್ಲ, ಕರೆ ಮಾಡಿ ಅಥವಾ ಆನ್‌ಲೈನ್ ಮೂಲಕ ಮನೆ ಬಾಗಿಲಿಗೇ ಊಟ ತರಿಸಿಕೊಳ್ಳಬಹುದು.
ಚಿಕನ್ ವಿಂಗ್ಸ್ ಆರ್ಡರ್ ಮಾಡಿದ್ರೆ ತಿಂದು ಮುಗಿಸಿದ ಮೂಳೆ ಬಂತು !
ಇಂಥಾ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳು ಯಾವಾಗಲೂ ಪರ್ಫೆಕ್ಟ್ ಎಂದು ಹೇಳುವಂತಿಲ್ಲ. ಬಟ್ಟೆ ಬುಕ್ ಮಾಡಿದರೆ ಹಳೆತಾದ ಬಳಸಿದ ಬಟ್ಟೆ (Dress) ಬರುವುದು, ಹಳೆ ಶೂ ಬರುವುದು. ಬುಕ್ ಮಾಡಿದ್ದು ಯಾವುದೋ ಡೆಲಿವರಿ ಆಗುವುದು ಇನ್ಯಾವುದು ಹೀಗೆ ಹಲವು ರೀತಿಯಲ್ಲಿ ಎಡವಟ್ಟುಗಳಾಗುತ್ತವೆ. ಇಲ್ಲೊಂದು ಯುವಕ (Youth)ನಿಗೂ ಇದೇ ರೀತಿಯ ಎಡವಟ್ಟಿನ ಅನುಭವ ಆಗಿದ್ದು, ತನಗೆ ಉಂಟಾದ ತೊಂದರೆಯನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಫುಲ್ ವೈರಲ್ ಆಗಿದೆ.
ಕುದುರೆ ಏರಿ ಬಂದ... ಸಿನಿಮಾ ಸ್ಟೈಲ್‌ಲ್ಲಿ ಫುಡ್ ಡೆಲಿವರಿ ಮಾಡಿದ ಸ್ವಿಗ್ಗಿ ಬಾಯ್: ವಿಡಿಯೋ ವೈರಲ್
ಆಹಾರ (Food) ವಿತರಣಾ ಸೇವೆಗಳು ಜೀವನವನ್ನು ತುಂಬಾ ಅನುಕೂಲಕರವಾಗಿಸಿದೆ. ಆದಾಗ್ಯೂ, ಒಮ್ಮೊಮ್ಮೆ ವಿಲಕ್ಷಣವಾದ ಆಹಾರ ವಿತರಣೆಯ ಕಥೆಗಳನ್ನು ನಾವು ಕೇಳುತ್ತೇವೆ. ಇಂತಹ ಘಟನೆಯನ್ನು ವ್ಯಕ್ತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social media) ಹಂಚಿಕೊಂಡಿದ್ದಾರೆ. ಅವರು ತಾವು ಆರ್ಡರ್ ಮಾಡಿದ ಆಹಾರದ ಬದಲಿಗೆ, ಯಾರೋ ತಿಂದು ಉಳಿದಿರುವ ಬಾಕಿ ಆಹಾರವನ್ನು ಪಡೆದರು
ಆಹಾರ ಬದಲಾವಣೆಯ ವೀಡಿಯೋ ವೈರಲ್
ಡೇಮಿಯನ್ ಸ್ಯಾಂಡರ್ಸ್ ಚಿಕನ್ ವಿಂಗ್ಸ್, ಕೆಲವು ಫ್ರೈಸ್ ಮತ್ತು ಪಾನೀಯಕ್ಕಾಗಿ ಆರ್ಡರ್ ಮಾಡಿದ್ದರು. ಆಹಾರ ಬಂದಾಗ ಅವರು ಹೆಚ್ಚು ಉತ್ಸುಕರಾಗಿ ಓಪನ್ ಮಾಡಿದರು. ಆದ್ರೆ ಬಾಕ್ಸ್ ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಯಾಕೆಂದರೆ ಅಲ್ಲಿ ಅವರು ಆರ್ಡರ್ ಮಾಡಿ ಚಿಕನ್ ವಿಂಗ್ಸ್ ಬದಲು ಚಿಕನ್ ಮೂಳೆಗಳಿದ್ದವು. ಈ ವಿಡಿಯೋವನ್ನು ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಈ ಕ್ಲಿಪ್‌ನಲ್ಲಿ ವ್ಯಕ್ತಿಯು ತನ್ನ ಆಹಾರ ಪ್ಯಾಕೇಜ್‌ನಲ್ಲಿ ಸ್ವೀಕರಿಸಿದ ವಸ್ತುಗಳನ್ನು ತನ್ನ ಅನುಯಾಯಿಗಳಿಗೆ ತೋರಿಸುತ್ತಿರುವುದು ಕಂಡುಬರುತ್ತದೆ. ಇದರಲ್ಲಿ ಫ್ರೈಸ್ ಪ್ಯಾಕೆಟ್ ಖಾಲಿಯಾಗಿದ್ದು, ಚಿಕನ್ ವಿಂಗ್‌ಗಳ ಪ್ಯಾಕ್‌ನಲ್ಲಿ ಮೂಳೆಗಳು ಮಾತ್ರ ಉಳಿದಿದೆ.
ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಝೋಮ್ಯಾಟೋ ಬಾಯ್ ವಿಡಿಯೋ ವೈರಲ್
ಪೋಸ್ಟ್ ಮಾಡಿದ ನಂತರ, ಕ್ಲಿಪ್ ಸಾಕಷ್ಟು ಗಮನ ಸೆಳೆಯಿತು. ಇದನ್ನು ಇನ್‌ಸ್ಟಾಗ್ರಾಂನಲ್ಲಿ 2,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಬಳಕೆದಾರರು ಜನರು ಈ ಬಗ್ಗೆ ಹಲವಾರುರ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಜೋಕ್‌ಗಳನ್ನು ಹೇಳಿದರೆ, ಇನ್ನು ಕೆಲವರು ಡೆಲಿವರಿ ಬಾಯ್‌ಗೆ ಬೈದಿದ್ದಾರೆ. ಇನ್ನು ಕೆಲವರು ಆನ್‌ಲೈನ್ ಡೆಲಿವರಿಯಲ್ಲಿ ಹೀಗೆ ಆಗೋದು ಸಾಮಾನ್ಯವಾಗಿ ಹೋಗಿದೆ ಎಂದಿದ್ದಾರೆ. ಒಟ್ನಲ್ಲಿಇಷ್ಟಪಟ್ಟು ಚಿಕನ್ ವಿಂಗ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ಫುಡ್ ಪ್ಯಾಕೆಟ್ ನೋಡಿ ನಿರಾಶೆಯಾಗಿದ್ದಂತೂ ನಿಜ.