ಹಾಲಿಲ್ಲದೆಯೂ ಪನ್ನೀರ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ

By Suvarna News  |  First Published Oct 22, 2023, 5:46 PM IST

ಅಡುಗೆಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆಹಾರ ಪದಾರ್ಥಗಳ ಪೈಕಿ ಪನ್ನೀರ್‌ ಕೂಡ ಒಂದು. ಒಂದೊಮ್ಮೆ ಮನೆಯಲ್ಲಿ ಹಾಲಿಲ್ಲವಾದರೂ ಪನ್ನೀರ್‌ ಮಾಡಿಕೊಳ್ಳಬಹುದು. ಕಡಲೆಕಾಯಿ ಹಾಲಿನ ಮೂಲಕ ಉತ್ತಮ ಪನ್ನೀರ್‌ ಸಿದ್ಧಮಾಡಿಕೊಳ್ಳಲು ಸಾಧ್ಯ.
 


ಅಡುಗೆಮನೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಲವು ಪದಾರ್ಥಗಳಿವೆ. ಕರಾವಳಿ ಪ್ರದೇಶದಲ್ಲಿ “ಇಂಗು, ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆʼ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿ ಇತ್ತು. ಆದರೆ, ಇಂದು ಅಡುಗೆ ಮಾಡಲು ಇಂಗು, ತೆಂಗು ಬೇಕಾಗಿಯೇ ಇಲ್ಲ. ಅವುಗಳನ್ನು ಹೊರತುಪಡಿಸಿಯೂ ಹಲವು ವಿಧದ ಆಹಾರಗಳನ್ನು ತಯಾರಿಸಬಹುದು. ಸಾಂಪ್ರದಾಯಿಕ ಅಡುಗೆಗೆ ಅವು ಬೇಕಾಗಿದ್ದರೂ ಇಂದಿನ ಹೊಸ ಶೈಲಿಯ ಅಡುಗೆಗಳಿಗೆ ಅವುಗಳಿಲ್ಲದಿದ್ದರೂ ನಡೆಯುತ್ತದೆ. ಆಧುನಿಕ ಗೃಹಿಣಿಯರು ಫ್ರಿಡ್ಜ್‌ ನಲ್ಲಿ ಪನ್ನೀರ್‌ ಇದ್ದರೆ ಸ್ವಾದಿಷ್ಟವಾದ ಅಡುಗೆ ಮಾಡಲು ಎಷ್ಟು ಸಮಯವೂ ಬೇಕಾಗಿಲ್ಲ ಎನ್ನುತ್ತಾರೆ. ಉತ್ತರ ಭಾರತ ಶೈಲಿಯ ಸಾಗು ಅಥವಾ ಕರಿ ಮಾಡಲು ಪನ್ನೀರ್‌ ಬೇಕೇ ಬೇಕು. ಆದರೆ, ಪನ್ನೀರ್‌ ವಿಚಾರದಲ್ಲಿ ಹುಷಾರಾಗಿರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಹೇಳಿಕೇಳಿ ಅದು ಹಾಲಿನ ಉತ್ಪನ್ನ. ಸ್ವಲ್ಪ ಯಾಮಾರಿದರೂ ಪನ್ನೀರ್‌ ಹಾಳಾಗಿ ಹೋಗುತ್ತದೆ. ವಾಸನೆ ಮೂಡಲು ಆರಂಭವಾಗುತ್ತದೆ. ಹೀಗಾಗಿ, ಬಹಳಷ್ಟು ಮಹಿಳೆಯರು ಬಾಹ್ಯ ಪನ್ನೀರ್‌ ಕೊಳ್ಳುವುದಿಲ್ಲ, ಮನೆಯಲ್ಲೇ ಸಿದ್ಧಮಾಡಿಕೊಳ್ಳುತ್ತಾರೆ. ಆದರೆ, ಅದಕ್ಕೂ ಸಾಕಷ್ಟು ಹಾಲು ಮತ್ತು ಸಮಯ ಎರಡೂ ಬೇಕು. 

ಒಂದೊಮ್ಮೆ ಮನೆಯಲ್ಲಿ ಪನ್ನೀರ್‌ (Paneer) ಮಾಡುವಷ್ಟು ಹಾಲು (Milk) ಇಲ್ಲವಾದರೂ ಪನ್ನೀರ್‌ ಮಾಡಿಕೊಳ್ಳಲು ಸಾಧ್ಯ. ಅಚ್ಚರಿ ಬೇಡ. ಹಾಲಿಲ್ಲದೆಯೇ ಪನ್ನೀರ್‌ ಹೇಗೆ ಮಾಡಬಹುದು ಅಂತೀರಾ? ಅದಕ್ಕೆ ಇಲ್ಲಿದೆ ಟಿಪ್ಸ್.‌ ಮಾಸ್ಟರ್‌ ಶೆಫ್‌ ಆಗಿರುವ ಪಂಕಜ್‌ ಭದೌರಿಯಾ ಎನ್ನುವವರು ತಮ್ಮ ಖಾಸಗಿ ಯೂಟ್ಯೂಬ್‌ ಚಾನೆಲ್‌ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಹಾಲು ಇಲ್ಲದೆಯೂ ಪನ್ನೀರ್‌ ಮಾಡುವ ವಿಧಾನದ ಬಗ್ಗೆ ತಿಳಿಸಿದ್ದಾರೆ. 

Tap to resize

Latest Videos

undefined

ಯಾವ ಪದಾರ್ಥಗಳು?
•    ನೆಲಗಡೆಲೆ (Groundnut) ಕಾಲು ಕೆಜಿ
•    ಲಿಂಬು (Lime) ಅಥವಾ ವಿನೆಗರ್‌
•    ಸ್ವಚ್ಛವಾದ ಕಾಟನ್‌ ಬಟ್ಟೆ (Cotton Cloth)

ಎಲ್ಲಕ್ಕಿಂತ ಮೊದಲು ನೆಲಕಡಲೆ ಕಾಯಿಯನ್ನು 6ರಿಂದ 7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಬೇಕು. ಬಳಿಕ, ಅದನ್ನು ಮೂರ್ನಾಲ್ಕು ಬಾರಿ ನೀರಿನಿಂದ ಸ್ವಚ್ಛವಾಗಿ (Clean) ತೊಳೆಯಿರಿ. ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿ. ನುಣ್ಣಗೆ (Paste) ರುಬ್ಬಿಕೊಳ್ಳಬೇಕು. ಚೆನ್ನಾಗಿ ನೀರನ್ನು ಸೇರಿಸಿಕೊಂಡು ರುಬ್ಬಿ. ನೆಲಗಡಲೆಯ ಹಾಲು ಸಿದ್ಧವಾಗುತ್ತದೆ. ಅದನ್ನು ಗ್ಯಾಸ್‌ ಮೇಲೆ ಇಟ್ಟು ಸಣ್ಣದಾಗಿ ಸ್ಟೋವ್‌ ಹತ್ತಿಸಿಕೊಳ್ಳಿ. ಅದು ಬಿಸಿಯಾದ (Warm) ಬಳಿಕ ಕೆಳಗೆ ಇರಿಸಿಕೊಂಡು ಸ್ವಚ್ಛವಾದ ಕಾಟನ್‌ ಬಟ್ಟೆಯಲ್ಲಿ ಸೋಸಿಕೊಳ್ಳಿ. ನುಣ್ಣಗಾಗದ ಕಡಲೆಕಾಯಿ ಹೋಳುಗಳಿದ್ದರೆ ತೆಗೆದಿರಿಸಿ. ಬಳಿಕ, ಮತ್ತೆ ಅದನ್ನು ಸ್ಟೋವ್‌ (Stove) ಮೇಲಿಟ್ಟು ಬಿಸಿ ಮಾಡಿ.

ಹಾಲನ್ನು ಕಾಯಲು ಇಟ್ಟು ಅದನ್ನು ಹೇಗೆ ಪನ್ನೀರ್‌ ಮಾಡುತ್ತೀರೋ ಅದೇ ಮಾದರಿಯಲ್ಲಿ ಪನ್ನೀರ್‌ ಮಾಡಲು ಸಾಧ್ಯ. ಕಡಲೆಕಾಯಿ ಹಾಲಿಗೆ ಎಷ್ಟು ಬೇಕೋ ಲಿಂಬು ರಸ ಅಥವಾ ವಿನೆಗರ್‌ ಅನ್ನು ಸೇರಿಸಿ ಕಲಕುತ್ತಿರಿ. ಕಡಲೆಕಾಯಿ ಹಾಲು ತಳ ಹಿಡಿಯದಂತೆ ಸರಿಯಾಗಿ ಕಲಕುತ್ತಿರಿ. ಹೆಚ್ಚು ಪ್ರಮಾಣದಲ್ಲಿ ಲಿಂಬೆ ರಸ ಸೇರಿಸುವುದು ಬೇಕಾಗುವುದಿಲ್ಲ. ಹಾಲು ಒಡೆದ ಬಳಿಕ ಸ್ಟೋವ್‌ ಆಫ್‌ ಮಾಡಿ. ಒಡೆದ ಹಾಲನ್ನು ಬಟ್ಟೆಯ ಮೂಲಕ ಸೋಸಿಕೊಳ್ಳಿ. ಮತ್ತೆ ಅದನ್ನು ತಣ್ಣಗಿನ ಐಸ್‌ ನೀರಿನಿಂದ ತೊಳೆಯಿರಿ. ವಿನೆಗರ್‌ ಅಥವಾ ಲಿಂಬೆರಸ ಸೇರಿಕೊಂಡಿದ್ದರೆ ತೊಳೆದುಹೋಗುತ್ತದೆ. ಬಟ್ಟೆಯ ಮೂಲಕ ಸರಿಯಾಗಿ ಸೋಸಿಕೊಂಡು ಮಣೆ ಅಥವಾ ಪ್ಲೇಟ್‌ (Plate) ನಲ್ಲಿ ಇಟ್ಟು ಅದರ ಮೇಲೆ ಭಾರವಾದ ವಸ್ತುವಿಡಿ. ಆಗ ಅದು ಗಟ್ಟಿಯಾದ ಆಕಾರಕ್ಕೆ ಬರುತ್ತದೆ. ಈ ಪನ್ನೀರ್‌ ನಿಂದ ನೀವು ಯಾವೆಲ್ಲ ಐಟಂ (Item) ಮಾಡಬಲ್ಲಿರೋ ಅವುಗಳೆಲ್ಲವನ್ನೂ ಮಾಡಲು ಸಾಧ್ಯ. 

click me!