ರಾಜ್ಯ ಸರ್ಕಾರ ಸದ್ದಿಲ್ಲದ ಪಾನಿಪುರಿ ಮೇಲೂ ಪ್ರಹಾರ ಮಾಡಲು ಸಜ್ಜಾಗಿದೆ. ಬಾಂಬೆ ಮಿಠಾಯಿ, ಗೋಬಿ, ಕಬಾಬ್ ಬಳಿಕ ಪಾನಿಪೂರಿಯಲ್ಲಿ ಬಳಸುವ ಪದಾರ್ಥಗಳಿಗೆ ಬ್ಯಾನ್ ಮಾಡುವ ನಿಟ್ಟಿನಲ್ಲಿ ರೂಪುರೇಷೆ ನಿರ್ಮಿಸುತ್ತಿದೆ.
ಬೆಂಗಳೂರು (ಜೂ.27): ಸಂಜೆ ಮಳೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಪಾನಿಪುರಿ ತಿಂದ್ರೆ ಏನ್ ಮಜಾ ಇರುತ್ತೆ ಅಂತಾ ಅನ್ನೋ ಹಾಗಿಲ್ಲ. ಶೀಘ್ರದಲ್ಲಿಯೇ ಪಾನಿಪೂರಿಯ ಟೇಸ್ಟ್ ಮೊದಲಿನಂತಿರೋದಿಲ್ಲ. ಬಾಂಬೆ ಮಿಠಾಯಿ, ಗೋಬಿ, ಕಬಾಬ್ ಬಳಿಕ ಪಾನಿಪೂರಿಯಲ್ಲಿ ಬಳಕೆ ಮಾಡುವ ಪದಾರ್ಥಗಳ ಬಗ್ಗೆಯೂ ಸರ್ಕಾರ ನಿಗಾ ವಹಿಸಿದೆ. ಅದರಂತೆ ಪಾನಿಪೂರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಸದ್ದಿಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ನಡೆಸಿದೆ. ಬಾಂಬೆ ಮಿಠಾಯಿ, ಗೋಬಿ ಹಾಗೂ ಕಬಾಬ್‌ನಲ್ಲಿ ಸಿಕ್ಕಿರುವಂತೆ, ಪಾನಿಪೂರಿಯಲ್ಲೂ ಕೂಡ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ಪಾನಿಪೂರಿಗೆ ಬಳಸೋ ಐದು ಮಾದರಿಯ ಸಾಸ್‌ಗಳು ಹಾಗೂ ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಬೆಂಗಳೂರಿನ 49 ಪ್ರದೇಶಗಳಿಂದ ಈ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿದೆ.
49 ಕಡೆ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಶೀಘ್ರದಲ್ಲೆ ಪಾನಿಪೂರಿಗೆ ಬಳಸೋ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಕಾರಕ ಇರೋ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
Breaking: ಮಾರುಕಟ್ಟೆಯಿಂದ ಬ್ಯಾನ್ ಆಗುತ್ತಾ ಕೆಂಪು ಕೆಂಪು ಕಬಾಬ್? ನಾನ್‌ವೆಜ್ ಪ್ರಿಯರಿಗೆ ಬಿಗ್ ಶಾಕ್
undefined
ಪಾನಿಪೂರಿ ಅಂದ್ರೆ ಬಾಯಿ ನೀರು ಬಿಡುವ ಯುವತಿಯರು, ವಿದ್ಯಾರ್ಥಿಗಳೇ ಹೆಚ್ಚು. ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿಯನ್ನು ಪಾನಿಪೂರಿಯಲ್ಲಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ವಾರದಲ್ಲಿ ಪಾನಿಪುರಿಗೆ ಹಾಕೋ ಸಾಸ್ ಮತ್ತು ಮಿಟಾ ಬ್ಯಾನ್ ಮಾಡೋಕೆ ನಿರ್ಧಾರ ಮಾಡಲಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್ ಟ್ರೆಂಡ್, ಮಾರ್ಕೆಟ್‌ನಲ್ಲಿ ಬೆಳ್ಳುಳ್ಳಿ ಕೆಜಿಗೆ ಫೈವ್ ಹಂಡ್ರೆಡ್!