ಕಾಂಚೀಪುರಂ ಇಡ್ಲಿ ಅಂದ್ರೆ ದೇವಸ್ಥಾನದ ಇಡ್ಲಿ ಅಂತಾನೂ ಕರೀತಾರೆ. ಸಾಮಾನ್ಯ ಇಡ್ಲಿಗಿಂತ ತುಂಬಾನೇ ಡಿಫರೆಂಟ್. ಜೀರಿಗೆ, ಮೆಣಸು, ಶುಂಠಿ, ಕರಿಬೇವು ಹಾಕಿ ಘಮ ಘಮ ಅಂತ ಮಾಡ್ಕೋಬಹುದು.
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇಡ್ಲಿ ಮಾಡುತ್ತಾರೆ. ಅದರಲ್ಲಿಯೂ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳಗಿನ ತಿಂಡಿ ಅಂದ್ರೆ ನೆನಪಾಗುವ ಪ್ರಮುಖ ತಿಂಡಿಗಳಲ್ಲಿ ಇಡ್ಲಿ ಸಹ ಇರುತ್ತದೆ. ಮೈಸೂರು ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ ಹೀಗೆ ಹಲವು ಬಗೆಯಲ್ಲಿ ಇಡ್ಲಿಗಳನ್ನು ತಯಾರು ಮಾಡಲಾಗುತ್ತದೆ. ಸ್ಟೀಮ್ ಮಾಡಿರುವ ಆಹಾರ ಇದಾಗಿರುವ ಕಾರಣ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತೂಕ ಇಳಿಸುವ ಪ್ರಯತ್ನದಲ್ಲಿರೋರು ಬೆಳಗಿನ ತಿಂಡಿಯಾಗಿ ಇಡ್ಲಿ ಸೇವಿಸಲು ಇಷ್ಚಪಡುತ್ತಾರೆ. ಆದ್ರೆ ಇಡ್ಲಿ ಮಾಡುವ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿರುತ್ತದೆ. ವಿಧಾನವೂ ಸಹ ಬೇರೆಯಾಗಿರೋದರಿಂದ ರುಚಿಯೂ ಭಿನ್ನವಾಗಿರುತ್ತದೆ.
ಇಂದು ನಾವು ನಿಮಗೆ ಸೂಪರ್ ಟೇಸ್ಟಿಯಾಗಿರುವ ಕಾಂಚೀಪುಂ ಇಡ್ಲಿ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಈ ಇಡ್ಲಿಯನ್ನು ಸುವರೊಟ್ಟಿ ವರುವಲ್ ಅಂತಾನೂ ಕರೆಯಲಾಗುತ್ತದೆ. ಈ ರೀತಿಯಾಗಿ ಇಡ್ಲಿ ಮಾಡಿದ್ರೆ ಒಂದರೆಡು ತಿನ್ನೋರು ಸಹ ನಾಲ್ಕರಿಂದ ಐದು ತಿನ್ನುತ್ತಾರೆ. ಕಾಂಚೀಪುರಂ ಸೀರೆಯಂತೆ ಈ ಇಡ್ಲಿಯೂ ತಮಿಳುನಾಡಿನಲ್ಲಿ ಫೇಮಸ್ ಆಗಿದೆ.
ಕಾಂಚೀಪುರಂ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು:
ಒಂದು ಬಟ್ಟಲು ಇಡ್ಲಿ ಹಿಟ್ಟು (ಅಕ್ಕಿ ಹಿಟ್ಟು ತುಂಬಾ ನುಣ್ಣಗೆ ಅರೆಯಬಾರದು)
ಸಣ್ಣಗೆ ಹೆಚ್ಚಿದ ಒಂದು ಗುಚ್ಚ ಕರಿಬೇವು
ಅರ್ಧ ಟೀ ಚಮಚ ಇಂಗು
ಅರ್ಧ ಟೀ ಚಮಚ ಶುಂಠಿ ಪುಡಿ
ಒಂದು ಟೀ ಚಮಚ ಜೀರಿಗೆ
ಅರ್ಧ ಟೀ ಚಮಚ ಮೆಣಸು
ಮೂರು ಹಸಿಮೆಣಸಿನಕಾಯಿ
ಎರಡು ಟೀ ಸ್ಪೂನ್ ತುಪ್ಪ
ಒಂದು ಟೇಬಲ್ ಚಮಚ ನೆನೆಸಿಟ್ಟ ಕಡ್ಲೆಬೇಳೆ
ರುಚಿಗೆ ತಕ್ಕಷ್ಟು ಉಪ್ಪು
3 ಟೀ ಸ್ಪೂನ್ ಮೊಸರು
ಚಿಟಿಕೆ ಅಡುಗೆ ಸೋಡಾ
ಇದನ್ನೂ ಓದಿ: ಒಂದೇ ರೀತಿಯ ಇಡ್ಲಿ ತಿಂದು ಬೇಸರವಾಗಿದ್ಯಾ? ಇಲ್ಲಿದೆ ಟೇಸ್ಟ್ ಹೆಚ್ಚಿಸೋ ಟಿಪ್ಸ್
ಕಾಂಚೀಪುರಂ ಇಡ್ಲಿ ಮಾಡುವ ವಿಧಾನ:
*ಮೊದಲಿಗೆ ಇಡ್ಲಿ ಬ್ಯಾಟರ್ ಸಿದ್ಧ ಮಾಡಿಕೊಳ್ಳಬೇಕು. ರಾತ್ರಿಯೇ ಬ್ಯಾಟರ್ ಸಿದ್ಧ ಮಾಡಿಕೊಂಡಿದ್ರೆ ಇಡ್ಲಿ ಸಾಫ್ಟ್ ಆಗಿ ಬರುತ್ತದೆ. ಇಡ್ಲಿ ಹಿಟ್ಟು ಕನಿಷ್ಠ 7 ರಿಂದ 8 ಗಂಟೆ ನೆನೆಯುವಂತೆ ನೋಡಿಕೊಳ್ಳಬೇಕು.
* ಇಡ್ಲಿ ಮಾಡುವ ಮುನ್ನ ಹಿಟ್ಟಿಗೆ ಮೂರು ಟೀ ಸ್ಪೂನ್ ಮೊಸರು, ಚಿಟಿಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ಆನಂತರ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಂಡು ತುಪ್ಪ ಹಾಕಿಕೊಳ್ಳಿ. ತುಪ್ಪ ಬಿಸಿಯಾಗುತ್ತಿದ್ದಂತೆ ಜೀರಿಗೆ, ಕರಿಬೇವು, ಶುಂಠಿ, ಮೆಣಸು, ಹಸಿಮೆಣಸಿನಕಾಯಿ ಮತ್ತು ಕಡಲೆಬೇಳೆ ಹಾಕಿಕೊಂಡು ಒಗ್ಗರಣೆ ಮಾಡಿಕೊಳ್ಳಬೇಕು.
*ಈ ಒಗ್ಗರಣೆಯನ್ನು ಸಿದ್ಧ ಮಾಡಿಕೊಂಡಿರುವ ಇಡ್ಲಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ಆನಂತಗರ ಪಾತ್ರೆಗೆ ಹಿಟ್ಟು ಹಾಕಿ ಇಡ್ಲಿ ಮಾಡಿಕೊಳ್ಳಿ. ಸೂಪರ್ ರುಚಿಯಾದ ಕಾಂಚಿಪುರಂ ಇಡ್ಲಿಯನ್ನು ಚಟ್ನಿ ಜೊತೆ ಸವಿಯಿರಿ.
ಇದನ್ನೂ ಓದಿ: ವಾರ ಕಳೆದ್ರೂ ಇಡ್ಲಿ ಹಿಟ್ಟು ಹುಳಿ ಬಾರದಂತೆ 'ಸಾಂಪ್ರದಾಯಿಕ ಶೈಲಿ'ಯಲ್ಲಿ ಸ್ಟೋರ್ ಮಾಡುವ ಟಿಪ್ಸ್