ಬೇಗ ರಾತ್ರಿಯ ಊಟವನ್ನು ತಿನ್ನುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ, ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಸಂಜೆ 7 ಗಂಟೆಯ ನಂತರ ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು ಅನ್ನೋದು ನಿಮ್ಗೊತ್ತಾ ?
ಭಾರತೀಯರ ಪಾಲಿಗೆ ಭೋಜನವು ದಿನದ ಪ್ರಮುಖ ಊಟಗಳಲ್ಲಿ ಒಂದಾಗಿದೆ. ಚಿಕನ್ ಕರಿಯಿಂದ ಹಿಡಿದು ಮಟನ್ ಬಿರಿಯಾನಿ, ಮತ್ತು ಮಸಾಲೆಯುಕ್ತ ಆಹಾರಗಳು, ಭಾರತೀಯ ಪಾಕಪದ್ಧತಿಯು ರುಚಿಕರವಾದ ಆಹಾರವಾಗಿದೆ. ಆದರೆ ತಜ್ಞರ ಪ್ರಕಾರ ತಡರಾತ್ರಿಯಲ್ಲಿ ಆಹಾರ ಸೇವನೆ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತದೆ. ನೀವು ತಡವಾಗಿ ರಾತ್ರಿಯ ಊಟವನ್ನು ತಿಂದಾಗ, ಅಂದರೆ ಸಂಜೆ 7 ಗಂಟೆಯ ನಂತರ, ಇದು ಜೀರ್ಣಕ್ರಿಯೆಯ ಸಮಸ್ಯೆಗಳು, ಹೊಟ್ಟೆಯ ಕಿರಿಕಿರಿ, ಅಧಿಕ ರಕ್ತದೊತ್ತಡ ಇತ್ಯಾದಿಗಳನ್ನು ಉಂಟುಮಾಡಬಹುದು. ಹಾಗಾದ್ರೆ ಸಂಜೆ 7 ಗಂಟೆಯ ನಂತರ ಯಾವೆಲ್ಲಾ ಆಹಾರ ತಿನ್ಬೋದು ತಿಳಿಯೋಣ.
ಮಟನ್ ಬಿರಿಯಾನಿ: ಬಿರಿಯಾನಿಯು ಅತ್ಯಂತ ಅದ್ಭುತವಾದ ಖಾದ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈ ಮಟನ್ ಬಿರಿಯಾನಿಯು ಕ್ಯಾಲೋರಿಗಳು ಮತ್ತು ಕೊಬ್ಬಿನ ಅಂಶಗಳಿಂದ ಸಮೃದ್ಧವಾಗಿರುವ ಭಕ್ಷ್ಯವಾಗಿದೆ ಎಂದು ನಿಮಗೆ ತಿಳಿದಿದೆಯೇ ? ಬಿರಿಯಾನಿ ತಿನ್ನುವಾಗ, ಕ್ಯಾಲೊರಿಗಳು ಮತ್ತು ಕೊಬ್ಬಿನಂಶದ ಬಗ್ಗೆ ಯಾರೂ ಹೆಚ್ಚು ಕಾಳಜಿ ವಹಿಸುವುದಿಲ್ಲ. ಹೀಗಾಗಿ ಯಾವಾಗಲೂ ನಿರ್ಧಿಷ್ಟ ಪ್ರಮಾಣವನ್ನು ಮೀರಿ ಎಲ್ಲರೂ ಬಿರಿಯಾನಿ ತಿನ್ನುತ್ತಾರೆ. ಮಟನ್ ಬಿರಿಯಾನಿಯಂತಹ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿ-ದಟ್ಟವಾದ ಖಾದ್ಯವನ್ನು ಸೇವಿಸುವುದರಿಂದ ಅಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಲಿವರ್ ಡಿಸೀಸ್ (NAFLD) ಅನ್ನು ಉತ್ತೇಜಿಸಬಹುದು ಎಂದು ತಜ್ಞರು ಒಪ್ಪುತ್ತಾರೆ, ಇದು ಭಾರತದಲ್ಲಿ ಹೆಚ್ಚುತ್ತಿರುವ ಕಾಯಿಲೆಗಳಲ್ಲಿ ಒಂದಾಗಿದೆ. ಒಂದು ಸಣ್ಣ ಪ್ರಮಾಣದ ಮಟನ್ ಬಿರಿಯಾನಿಯು 500-700 ಕ್ಯಾಲೋರಿಗಳಿಗೆ ಸಮನಾಗಿರುತ್ತದೆ. ಇದು ನಿಮ್ಮ ಕ್ಯಾಲೋರಿ ಸೇವನೆಯಲ್ಲಿ ತೀವ್ರ ಏರಿಕೆಯನ್ನು ನೀಡಬಹುದು.
ಮಾರ್ಕೆಟ್ಟಲ್ಲಿ ಸಿಗೋ ಪ್ರೋಟೀನ್ ಪೌಡರ್ ಬಿಡಿ, ಮನೆಯಲ್ಲೇ ಮಾಡ್ಬಹುದು ನೋಡಿ!
ಮಸಾಲೆಯುಕ್ತ ಆಹಾರಗಳು: ಭಾರತವು ಮಸಾಲೆಗಳ (Spice) ಕೇಂದ್ರವಾಗಿದೆ ಮತ್ತು ಆದ್ದರಿಂದ ಹೆಚ್ಚಿನ ಭಕ್ಷ್ಯಗಳನ್ನು ಅವುಗಳಿಂದಲೇ ತಯಾರಿಸಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಹೆಚ್ಚಿನವರು ರಾತ್ರಿಯ ಊಟದಲ್ಲಿ ನಾನ್ ಮತ್ತು ಪರಾಠ ಅಥವಾ ಅನ್ನ (Rice)ದೊಂದಿಗೆ ಇಂಥಾ ಮಸಾಲೆಭರಿತ ಕರಿಗಳನ್ನು ಇಷ್ಟಪಡುತ್ತಾರೆ. ಆದ್ರೆ ಸಂಜೆ ಏಳರ ಬಳಿಕ ಹೆಚ್ಚುವರಿ ಮಸಾಲೆ ಸೇರಿಸಿದ ಇಂಥಾ ಆಹಾರ ಸೇವನೆಯಿಂದ ತೀವ್ರವಾದ ಎದೆಯುರಿ ಉಂಟಾಗುತ್ತದೆ. ಯಾಕೆಂದರೆ ಇಂತಹ ಭಕ್ಷ್ಯಗಳನ್ನು ಬಹಳಷ್ಟು ಎಣ್ಣೆ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ಮತ್ತಷ್ಟು ಬಿಗಡಾಯಿಸಬಹುದು. ಅಲ್ಲದೆ, ಅಂತಹ ಭಕ್ಷ್ಯಗಳು ದೇಹಕ್ಕೆ ಕಿರಿಕಿರಿಯನ್ನುಂಟು ಮಾಡುತ್ತವೆ. ಏಕೆಂದರೆ ಮಸಾಲೆಗಳು ಚಯಾಪಚಯ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತವೆ.
ಸಿಹಿ ತಿನಿಸುಗಳು: ಸಂಜೆ 7 ಗಂಟೆಯ ನಂತರ ಸಿಹಿತಿಂಡಿಗಳನ್ನು (Sweets) ಸೇವಿಸುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಯಾಕೆಂದರೆ ಅದು ನಿಮ್ಮ ದೇಹವು ನಿದ್ರಿಸುವ ವಿಧಾನವನ್ನು ಅಡ್ಡಿಪಡಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೊಟ್ಟೆ ತುಂಬಾ ಊಟದ ನಂತರ ಸಿಹಿ ತಿನ್ನುವುದು ಉತ್ತಮ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಆದರೆ ಹಾಗೆ ಮಾಡುವುದರಿಂದ ದೇಹದ ನಿದ್ರೆಯ (Sleep) ಮಾದರಿಯನ್ನು ಅಡ್ಡಿಪಡಿಸಬಹುದು ಮತ್ತು ಹೆಚ್ಚಿನ ಆಹಾರಕ್ಕಾಗಿ ನೀವು ಕಡುಬಯಕೆಯನ್ನು ಅನುಭವಿಸಬಹುದು. ಅಲ್ಲದೆ, ರಾತ್ರಿಯ ಊಟದ ನಂತರ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಸಿಹಿತಿಂಡಿ ಇದಕ್ಕೆ ತದ್ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ.
ಕೆಟ್ಟ ಕೊಬ್ಬು ಬೇಡ ಅಂದ್ರೆ ಈ ಆಹಾರಗಳಿಗೆ ಬೈ ಬೈ ಹೇಳಿ
ಪಕೋಡಾ: ಪಕೋಡಾ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುವ ತಿಂಡಿ. ಆದರೆ, ಸಂಜೆ 7 ಗಂಟೆಯ ನಂತರ ಈ ರುಚಿಕರವಾದ ಖಾದ್ಯವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಮಾತ್ರವಲ್ಲ ಇದು ನಿಮ್ಮ ನಿದ್ರೆಯ ಅಭ್ಯಾಸವನ್ನು ಅಡ್ಡಿಪಡಿಸುತ್ತದೆ. ಏಕೆಂದರೆ ಪಕೋಡಾಗಳು ಡೀಪ್-ಫ್ರೈಡ್ ಆಗಿರುವುದರಿಂದ ಹೆಚ್ಚು ಆಮ್ಲೀಯವಾಗಿರುತ್ತವೆ. ರಾತ್ರಿಯಲ್ಲಿ ಹೆಚ್ಚು ಆಮ್ಲೀಯ ಆಹಾರವನ್ನು ಸೇವಿಸಿದರೆ, ಅದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಉಂಟು ಮಾಡಬಹುದು.
ಕೆಫೀನ್‌ಯುಕ್ತ ಪಾನೀಯಗಳು: ಕೆಫೀನ್ ಉತ್ತಮ ಉತ್ತೇಜಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಇದು ರಾತ್ರಿಯ ನಿದ್ರೆಯ ನಂತರ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಆದರೆ, ನೀವು ಚಹಾ, ಕಾಫಿ ಅಥವಾ ಹಸಿರು ಚಹಾದಂತಹ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸಿದಾಗ, ಅದು ರಾತ್ರಿಯಲ್ಲಿ ಒಬ್ಬ ವ್ಯಕ್ತಿಯು ಹೊಂದಿರುವ ಆಳವಾದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಅಡ್ಡಿಪಡಿಸುತ್ತದೆ. ಅಂತಹ ಪಾನೀಯಗಳನ್ನು ಸಂಜೆ 6 ಗಂಟೆಯ ನಂತರ ತಪ್ಪಿಸಬೇಕು. ಬದಲಿಗೆ ಜ್ಯೂಸ್ ಅಥವಾ ಸಣ್ಣ ಚಾಕೊಲೇಟ್‌ನಂತಹ ಇತರ ಆಯ್ಕೆಗಳನ್ನು ಸೇವಿಸಬಹುದು.