ಗೋಧಿ ರಪ್ತು ನಿಷೇಧಿಸಿದ ಭಾರತ: ನಿರ್ಧಾರ ಮರುಪರಿಶೀಲಿಸುವಂತೆ ಬೇಡುವೆ: IMF ಮುಖ್ಯಸ್ಥೆ

By Anusha Kb  |  First Published May 25, 2022, 9:39 AM IST

ಗೋಧಿ ರಪ್ತು ನಿರ್ಧಾರ ಮರು ಪರಿಶೀಲಿಸುವಂತೆ  ಬೇಡಿಕೊಳ್ಳುತ್ತೇನೆ
ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಮನವಿ
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಜಾರ್ಜಿವಾ


ನವದೆಹಲಿ: ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ಭಾರತವು ಈ ತಿಂಗಳ ಆರಂಭದಲ್ಲಿ ವಿದೇಶಕ್ಕೆ ಗೋಧಿ ರಫ್ತನ್ನು ನಿಷೇಧಿಸಿತು. ಆದರೆ ಭಾರತ ಗೋಧಿ ರಫ್ತು (export of wheat) ಮೇಲಿನ ತನ್ನ ನಿಷೇಧವನ್ನು ಆದಷ್ಟು ಬೇಗ ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರು ಭಾರತವನ್ನು ಒತ್ತಾಯಿಸಿದ್ದಾರೆ. 

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಜಾರ್ಜಿವಾ, ರಫ್ತುಗಳನ್ನು ನಿರ್ಬಂಧಿಸುವುದು ಇತರ ರಾಷ್ಟ್ರಗಳನ್ನು ಅದೇ ರೀತಿ ಮಾಡಲು ಪ್ರೇರೇಪಿಸಬಹುದು. ಇದು ಜಾಗತಿಕ ಸಮುದಾಯವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ (Kristalina Georgieva) ಒತ್ತಿ ಹೇಳಿದರು.

Tap to resize

Latest Videos

ಭಾರತ ಗೋಧಿ ಮೇಲಿನ ರಫ್ತು ನಿಷೇಧವನ್ನು ತೆಗೆದು ಹಾಕಿದರೆ ಅದು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತದೆ ಎಂದು ಕೇಳಿದಾಗ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ (Russia-Ukraine war) ಇಡೀ ವಿಶ್ವಕ್ಕೆ ಗೋಧಿ ಪೂರೈಕೆಯ ಕೊರತೆ ತೀವ್ರ ಪರಿಣಾಮ ಬೀರಿದೆ. ಹೀಗಿರುವಾಗ ಭಾರತವು ಎಷ್ಟು ರಫ್ತು ಮಾಡಬಹುದು ಮತ್ತು ಅದು ತನ್ನ ರಫ್ತುಗಳನ್ನು ಎಲ್ಲಿ ನಿರ್ದೇಶಿಸುತ್ತದೆ ಎಂಬುದರ ಆಧಾರದ ಮೇಲೆ ಅದನ್ನು ನಿರ್ಧರಿಸಬಹುದು ಎಂದು ಜಾರ್ಜಿವಾ ಹೇಳಿದರು. ವಿಶೇಷವಾಗಿ ಗೋಧಿಯ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿರುವ ಈಜಿಪ್ಟ್ ಅಥವಾ ಲೆಬನಾನ್‌ನಂತಹ ದೇಶಗಳಿಗೆ  ರಫ್ತುಗಳು ಹೋದರೆ ಗಮನಾರ್ಹ ಪರಿಣಾಮ ಆಗಲಿದೆ. ಹೆಚ್ಚುತ್ತಿರುವ ಹಸಿವು ಮಾತ್ರವಲ್ಲದೆ ಸಾಮಾಜಿಕ ಅಶಾಂತಿಯ ಅಪಾಯವಿರುವ ದೇಶಗಳಲ್ಲಿ ಇವು ಸೇರಿವೆ. ಇದು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. 

ಗೋಧಿ ರಫ್ತಿನ ಮೇಲೆ ಭಾರತದ ನಿಷೇಧ, ಜಗತ್ತಿನ ಆಹಾರ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದ ವಿಶ್ವ ನಾಯಕರು!

ಬೆಳೆ ನಷ್ಟ, ಬಿಸಿ ಗಾಳಿ ಕಾರಣ

ಚೀನಾದ (China) ನಂತರ ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ಕೇಂದ್ರವಾಗಿರುವ ಭಾರತ (India), ಮೇ 13 ರಂದು ತಕ್ಷಣವೇ ಜಾರಿಗೆ ಬರುವಂತೆ ಗೋಧಿಯ ರಫ್ತು (export) ನಿಷೇಧಿಸಿತು. ದೇಶದಲ್ಲಿ ಅಧಿಕ ತಾಪಮಾನದಿಂದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದಲ್ಲದೇ ಗೋಧಿಯ ಬೆಲೆ ದಾಖಲೆಯ ಗಿರಿಷ್ಠ ಮಟ್ಟವನ್ನು ತಲುಪಿದ್ದವು ಹೀಗಾಗಿ ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಗಳಿಗೆ ಭಾರತ ರಪ್ತಿ ನಿಷೇಧಿಸಿತ್ತು. ಮಾರ್ಚ್‌ನಲ್ಲಿ ಬಿಸಿಗಾಳಿಯಿಂದಾಗಿ (heatwave) ಭಾರತವು ಭಾರಿ ಬೆಳೆ ನಷ್ಟವನ್ನು ದಾಖಲಿಸಿದೆ.

ಗೋಧಿ ರಫ್ತು ನಿಷೇಧದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಕೇಂದ್ರ ಸರ್ಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಹಠಾತ್ ಗೋಧಿಯಲ್ಲಿ ಉಂಟಾದ ಕೊರತೆಯಿಂದ ಪ್ರತಿಕೂಲ ಪರಿಣಾಮ ಅನುಭವಿಸುತ್ತಿರುವ ಇತರ ದುರ್ಬಲ ರಾಷ್ಟ್ರಗಳಿಗೆ ಆಹಾರ ಭದ್ರತೆಯನ್ನು ಒದಗಿಸಲು ಭಾರತ ಬದ್ಧವಾಗಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ಹೇಳಿದೆ.

ಮೋದಿ ಸರ್ಕಾರದ ಈ ನಡೆಗೆ ಅಮೆರಿಕಾ ಕಿಡಿ, ಭಾರತದ ಬೆಂಬಲಕ್ಕೆ ನಿಂತ ಚೀನಾ!
ಆದರೆ ನಿಷೇಧದ ನಂತರ, ಗೋಧಿ ಬೆಲೆಗಳು ದಾಖಲೆಯ ಏರಿಕೆ ಕಂಡಾಗ ನಿಷೇಧವು ಗ್ರೂಪ್ ಆಫ್ ಸೆವೆನ್ ಅಥವಾ G7 ರಾಷ್ಟ್ರಗಳಿಂದ ಟೀಕೆಗೆ ಗುರಿಯಾಯಿತು, ನಿಷೇಧದ ನಿರ್ಧಾರಗಳು ಏರುತ್ತಿರುವ ಸರಕು ಬೆಲೆಗಳ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದು  G7 ರಾಷ್ಟ್ರಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜರ್ಮನಿಗೆ (Germany) ಭೇಟಿ ನೀಡಿದಾಗ, ಗೋಧಿಯ ಜಾಗತಿಕ ಕೊರತೆಯನ್ನು ಒಪ್ಪಿಕೊಂಡರು ಮತ್ತು ದೇಶದ ರೈತರು ಜಗತ್ತಿಗೆ ಆಹಾರ ನೀಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು.
 

click me!