
ಜೇನುತುಪ್ಪವನ್ನು ನಾವು ಈಗ ಬಳಕೆ ಮಾಡ್ತಿಲ್ಲ. ಜೇನು ತುಪ್ಪವನ್ನು ಪ್ರಾಚೀನ ಕಾಲದಿಂದಲೂ ಬಳಕೆ ಮಾಡಿಕೊಂಡು ಬಂದಿದ್ದೇವೆ. ಜೇನುತುಪ್ಪದ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಜೇನುತುಪ್ಪ ಹೂವಿನ ರಸದಿಂದ ಜೇನುನೊಣಗಳಿಂದ ತಯಾರಿಸಲ್ಪಟ್ಟ ದ್ರವ ಎಂಬುದು ನಿಮಗೆಲ್ಲ ಗೊತ್ತು. ಪ್ರತಿ ದಿನ ನಿಯಮಿತ ಪ್ರಮಾಣದಲ್ಲಿ ಜೇನುತುಪ್ಪ ಸೇವನೆಯಿಂದ ಅನೇಕ ಲಾಭವಿದೆ. ಇದನ್ನು ಅನೇಕ ಔಷಧಿಗಳಿಗೆ ಬಳಕೆ ಮಾಡಲಾಗುತ್ತದೆ. ಸಕ್ಕರೆ ಬದಲಾಗಿ ಜೇನುತುಪ್ಪ ಬಳಸುವಂತೆ ತಜ್ಞರು ಸಲಹೆ ನೀಡ್ತಾರೆ.
ಮಾರುಕಟ್ಟೆಯಲ್ಲಿ ನಾನಾ ಕಂಪನಿಯ ಜೇನುತುಪ್ಪ (Honey) ಗಳನ್ನು ನೀವು ನೋಡ್ಬಹುದು. ಇದು ಕಲಬೆರಿಕೆ ಯುಗ. ಅಕ್ಕಿಯಿಂದ ಹಿಡಿದು ತರಕಾರಿ ಸೇರಿದಂತೆ ಎಲ್ಲ ಆಹಾರ (food) ಗಳು ಕಲಬೆರಕೆ ಆಗ್ತಿವೆ. ಅದ್ರಲ್ಲಿ ಜೇನುತುಪ್ಪ ಕೂಡ ಸೇರಿದೆ. ಒಳ್ಳೆ ಹೆಸರಿರುವ ಕಂಪನಿಗಳೇ ಜೇನುತುಪ್ಪಕ್ಕೆ ಸಕ್ಕರೆ (Sugar) ಪಾಕಬೆರೆಸಿ ನೀಡ್ತಿವೆ ಎನ್ನುವ ಆರೋಪಗಳು ಕೇಳಿ ಬರ್ತಿರುತ್ತವೆ. ಯಾವ ಜೇನುತುಪ್ಪ ಅಸಲಿ, ಯಾವುದಕ್ಕೆ ಸಕ್ಕರೆ ಮಿಕ್ಸ್ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚೋದು ಸುಲಭವಲ್ಲ. ಆದ್ರೆ ಒಂದು ಸರಳ ವಿಧಾನದ ಮೂಲಕ ನೀವು ಜೇನುತುಪ್ಪಕ್ಕೆ ಸಕ್ಕರೆ ಬೆರಸಲಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು. krishi_belakuandavinaash_korakodu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ತೀರ್ಥಗಳ್ಳಿಯ ಚಿನ್ಮಯ ಎಂಬುವವರು ಜೇನುತುಪ್ಪಕ್ಕೆ ಸಕ್ಕರೆ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಪತ್ತೆ ಮಾಡ್ಬೇಕು ಎಂಬುದನ್ನು ವಿವರಿಸಿದ್ದಾರೆ.
ಬೇಯಿಸಿದ ಆಲೂಗಡ್ಡೆ ಫ್ರಿಜ್‌ನಲ್ಲಿಟ್ಟು ಬಳಸಿದ್ರೆ ಏನಾಗುತ್ತೆ? ಹೀಗಿದ್ದು ಕೆಲಸ್ ಮಾಡ್ಲೇ ಬೇಡಿ
ಜೇನುತುಪ್ಪಕ್ಕೆ ಸಕ್ಕರೆಪಾಕ ಹಾಕಿರೋದನ್ನು ಹೀಗೆ ಪತ್ತೆ ಮಾಡಿ : ಚಿನ್ಮಯ್ ಅವರ ಪ್ರಕಾರ, ನೀವು ಇದನ್ನು ಸುಲಭವಾಗಿ ಮಾಡಬಹುದು. ಜೇನುತುಪ್ಪವನ್ನು ಮನೆಗೆ ತಂದು ಈ ಪರೀಕ್ಷೆ ಮಾಡ್ಬೇಕಾಗಿಲ್ಲ. ಖರೀದಿ ಸ್ಥಳದಲ್ಲಿಯೇ ಪರೀಕ್ಷೆ ನಡೆಸಬಹುದು. ಅದಕ್ಕೆ ಬೇಕಾಗಿರೋರು ಒಂದು ಪೇಪರ್ ಪೀಸ್ ಮಾತ್ರ. ಒಂದು ಪೇಪರ್ ಪೀಸ್ ತೆಗೆದುಕೊಂಡು ಅದಕ್ಕೆ ಒಂದು ಹನಿ ಜೇನುತುಪ್ಪವನ್ನು ಹಾಕಬೇಕು. ನೀವು ಜೇನುತುಪ್ಪ ಹಾಕಿದ ನಂತ್ರ ಪೇಪರ್ ಕೆಳ ಭಾಗದಲ್ಲಿ ತೇವವಾದ್ರೆ ಅದು ಕಲಬೆರಿಕೆ ಎಂದರ್ಥ. ಅದ್ರಲ್ಲಿ ಸಕ್ಕರೆ ಬೆರೆತಿದೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದು. ಅದೇ ಪೇಪರ್ ಕೆಳಭಾಗ ತೇವವಾಗಿಲ್ಲವೆಂದ್ರೆ ನೀವು ಖರೀದಿ ಮಾಡ್ತಿರುವ ಜೇನುತುಪ್ಪ ಶುದ್ಧವಾಗಿದೆ ಎಂದರ್ಥ.
ಈ ಜೈಲು ಕ್ಯಾಂಟೀನ್‌ಗಳಲ್ಲಿ ಸಿಗುತ್ತೆ ಐಸ್‌ಕ್ರೀಂ, ಪಾನಿಪುರಿ: ಅರೋಪಿಗಳಿಗೆ ಬರ್ಮುಡಾ ಚಡ್ಡಿ, ಟಿ ಶರ್ಟ್!
ಶುದ್ಧ ಜೇನುತುಪ್ಪದಲ್ಲಿದೆ ಈ ಎಲ್ಲ ಗುಣ : ಜೇನುತುಪ್ಪವು ಅಗತ್ಯವಾದ ಪೋಷಕಾಂಶಗಳು, ಖನಿಜಗಳು ಮತ್ತು ಜೀವಸತ್ವಗಳ ಉಗ್ರಾಣವಾಗಿದೆ. ಫ್ರಕ್ಟೋಸ್ ಮುಖ್ಯವಾಗಿ ಜೇನುತುಪ್ಪದಲ್ಲಿ ಕಂಡುಬರುತ್ತದೆ. ಇದಲ್ಲದೆ, ಕಾರ್ಬೋಹೈಡ್ರೇಟ್‌ಗಳು, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಬಿ-6, ವಿಟಮಿನ್ ಸಿ ಮತ್ತು ಅಮೈನೋ ಆಮ್ಲಗಳು ಸಹ ಇದರಲ್ಲಿ ಕಂಡುಬರುತ್ತವೆ. ಒಂದು ಟೀಚಮಚ ಜೇನುತುಪ್ಪವು ಸುಮಾರು 64 ಕ್ಯಾಲೋರಿಗಳನ್ನು ಮತ್ತು 17 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಜೇನುತುಪ್ಪವು ಯಾವುದೇ ಕೊಬ್ಬು, ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುವುದಿಲ್ಲ.
ಜೇನುತುಪ್ಪವನ್ನು ನೀವು ಹೀಗೆ ಸೇವನೆ ಮಾಡಿ : ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾಹಿತಿ ಅನೇಕರಿಗಿದೆ. ಆದ್ರೆ ಅದನ್ನು ಹೇಗೆ ಸೇವನೆ ಮಾಡಬೇಕು ಎನ್ನುವ ಜ್ಞಾನವಿಲ್ಲ. ನೀವು ಪ್ರತಿದಿನ ಒಂದರಿಂದ ಎರಡು ಚಮಚ ಜೇನುತುಪ್ಪವನ್ನು ನೇರವಾಗಿ ತಿನ್ನಬಹುದು ಅಥವಾ ಅದನ್ನು ಹಾಲಿನಲ್ಲಿ ಬೆರೆಸಿ ಸೇವಿಸಬಹುದು. ಇದಲ್ಲದೆ, ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿಗೆ ಜೇನುತುಪ್ಪವನ್ನು ಹಾಕಿ ಸೇವಿಸಬಹುದು.
ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪವನ್ನು ಹಾಕಿ ಸೇವನೆ ಮಾಡಬಹುದು. ಆದ್ರೆ ನೀರಿಗೆ ಜೇನುತುಪ್ಪ ಹಾಕಿ ಎಂದಿಗೂ ಕುದಿಸಬಾರದು. ಇದು ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಅಲ್ಲದೆ ಜೇನುತುಪ್ಪವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವನೆ ಮಾಡುವುದು, ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ನೀಡುವುದು ಅಪಾಯಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.