ಹುಳು ಮತ್ತು ರಾಸಾಯನಿಕ ಫ್ರೀ ಗೋಬಿಗಾಗಿ ಮನೆಯಲ್ಲಿ ಹೀಗೆ ಮಾಡಿ: ಸಂತೋಷದಿಂದ ಸವಿಯಿರಿ

Published : Oct 18, 2026, 12:37 PM IST
Cauliflower

ಸಾರಾಂಶ

ಹೂಕೋಸು ಅಥವಾ ಗೋಬಿಯಲ್ಲಿ ಅತಿ ಹೆಚ್ಚು ರಾಸಾಯನಿಕಗಳು ಮತ್ತು ಹುಳುಗಳು ಇರುತ್ತವೆ. ಉಪ್ಪು ಮತ್ತು ಅರಿಶಿನದ ನೀರಿನಲ್ಲಿ ನೆನೆಸುವ ಮೂಲಕ ಹುಳುಗಳನ್ನು ಸುಲಭವಾಗಿ ತೆಗೆಯಬಹುದು. ನಂತರ ಕುಕ್ಕರ್‌ನಲ್ಲಿ ಬೇಯಿಸಿ ನೀರು ಚೆಲ್ಲುವುದರಿಂದ ರಾಸಾಯನಿಕಗಳನ್ನು ನಿವಾರಿಸಬಹುದು.

ಗೋಬಿ, ಫ್ಲವರ್​, ಹೂಕೋಸು... ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ತರಕಾರಿ ಹಲವರಿಗೆ ಪ್ರಿಯ. ಅದರಲ್ಲಿಯೂ ಗೋಬಿ ಮಂಚೂರಿ ಎಂದರೆ ಬಾಯಲ್ಲಿ ನೀರು ಬರುವುದು ಉಂಟೇ ಉಂಟು. ಆದರೆ ಹೋಟೆಲ್​ ಆಗಲೀ, ರಸ್ತೆ ಬದಿಯಾಗಲಿ ಗೋಬಿ ಮಂಚೂರಿ ತಿನ್ನುವವರಿಗೆ ಫ್ರೈ ಆಗಿರೋ ಹುಳುಗಳು ಫ್ರೀ ಎನ್ನುವ ಮಾತಿದೆ. ಮನೆಯಲ್ಲಿ ನೀವು ಎಷ್ಟೇ ಕ್ಲೀನ್​ ಮಾಡಿದರೂ ಹುಳು ಇದ್ದೇ ಇರುತ್ತದೆ. ಹಾಗಿದ್ದ ಮೇಲೆ ಗೋಬಿ ಮಂಚೂರಿ ಮಾಡುವವರು ಎಷ್ಟು ಕ್ಲೀನ್​ ಮಾಡಬಹುದು ಎನ್ನೋದನ್ನು ಯೋಚನೆ ಮಾಡಿ. ಅದೇನೇಇರಲಿ ಬಿಡಿ. ಗೋಬಿಯ ಘಮಲು ಬಂದಾಗ, ಹುಳುಗಳು ನೆನಪೇ ಆಗದೇ ವೆಜಿಟೇರಿಯನ್ಸ್​ ಕೂಡ ನಾನ್​ ವೆಜಿಟೇರಿಯನ್​ ಆಗೋದು ಇದ್ದೇ ಇದೆ.

ಆದರೆ ಇಲ್ಲಿ ಹೇಳ್ತಿರೋದು ಅದಲ್ಲ. ಹೊರಗಡೆ ಗೋಬಿಯನ್ನು ಹೇಗಾದ್ರೂ ತಿನ್ನಿ. ಆದರೆ ಮನೆಯಲ್ಲಿ ಮಾಡುವಾಗ, ಅದರಲ್ಲಿನ ಹುಳುಗಳನ್ನು ಕ್ಲೀನ್​ ಮಾಡೋದು ದೊಡ್ಡ ಸಮಸ್ಯೆ ಎನ್ನಿಸಬಹುದು. ಅಷ್ಟೇ ಅಲ್ಲದೇ ಅತ್ಯಂತ ಹೆಚ್ಚಿನ ಕ್ರಿಮಿನಾಶಕವನ್ನು ನೇರವಾಗಿ ಸ್ಪ್ರೇ ಮಾಡುವ ಕೆಲವು ತರಕಾರಿಗಳಲ್ಲಿ ಗೋಬಿಯದ್ದು ಮೊದಲ ಸ್ಥಾನ. ಇದಕ್ಕೆ ಹುಳುಗಳು ಬಾರದೇ ಇರಲಿ ಎನ್ನುವ ಕಾರಣಕ್ಕೆ ಆರಂಭದಿಂದಲೂ ಕೆಮಿಕಲ್ಸ್​ ಹಾಕಿ ಬೆಳೆಸಲಾಗುತ್ತದೆ. ಅದು ದೊಡ್ಡದಾಗುವವರೆಗೆ ಅದೆಷ್ಟೋ ಬಾರಿ ರಾಸಾಯನಿಕಯದಲ್ಲಿಯೇ ಅದು ಸ್ನಾನ ಮಾಡಿರುತ್ತದೆ.

ಹುಳು ಹೋಗಿಸುವ ಟಿಪ್ಸ್​

ಆದ್ದರಿಂದ ಹುಳು ಮತ್ತು ರಾಸಾಯನಿಕ ಫ್ರೀ ಮಾಡಲು ಒಂದೇ ಒಂದು ಸುಲಭದ ಟಿಪ್ಸ್​ ಇದೆ. ಮೊದಲಿಗೆ ಹುಳುಗಳ ವಿಷಯಕ್ಕೆ ಬರೋಣ. ನೀವು ಒಂದು ಪಾತ್ರೆಯಲ್ಲಿ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಅರಿಶಿಣದ ಪುಡಿಯನ್ನು ಮಿಕ್ಸ್​ ಮಾಡಿ ಅದರಲ್ಲಿ ಗೋಬಿಯ ಒಂದೊಂದೇ ಎಸಳು ಬಿಡಿಸಿ ಅದ್ದಿಡಿ. ನಿಮಗೆ ಎಷ್ಟು ಗೋಬಿ ಬೇಕೋ ಅಷ್ಟನ್ನು ಕಟ್​ ಮಾಡಿ ಆ ಮಿಶ್ರಣದಲ್ಲಿ ಹಾಕಿ 15-20 ನಿಮಿಷ ಬಿಟ್ಟುಬಿಡಿ. ಹೀಗೆ ಮಾಡಿದಾಗ, ಗೋಬಿಯ ಒಳಗೆ ಅಂಟಿಕೊಂಡಿದ್ದ ಹುಳುಗಳು ತಾನಾಗೇ ಹೊರಕ್ಕೆ ಬಂದು ನೀರಿನಲ್ಲಿ ತೇಲಾಡುತ್ತವೆ. ಆಮೇಲೆ ಹುಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಮುಂದಿನ ಕೆಲಸ ಮಾಡಿ.

ರಾಸಾಯನಿಕ ತೆಗೆಯುವ ವಿಧಾನ

ಈಗ ರಾಸಾಯನಿಕ ತೆಗೆಯುವ ವಿಧಾನ ನೋಡೋಣ. ಉಪ್ಪು ಮತ್ತು ಅರಿಶಿಣದ ನೀರಿನಲ್ಲಿ ಗೋಬಿ ಅದ್ದಿದಾಗ ಒಂದಷ್ಟು ರಾಸಾಯನಿಕ ಹೋಗಿರುತ್ತದೆ. ಆದರೂ ಸಂಪೂರ್ಣ ಕೆಮಿಕಲ್ಸ್​ ತೆಗೆಯೋದು ಕಷ್ಟವೇ. ಆದ್ದರಿಂದ ಗೋಬಿಯನ್ನು ಯಾವತ್ತಿಗೂ ಹಸಿಯಾಗಿ ತಿನ್ನಲೇಬೇಡಿ. ಅದರ ಕೆಮಿಕಲ್ಸ್​ ತೆಗೆಯಬೇಕು ಎಂದರೆ, ಕ್ಲೀನ್​ ಮಾಡಿದ ನಂತರ ಗೋಬಿಯನ್ನು ಒಂದಷ್ಟು ನೀರು ಹಾಕಿ ಕುಕ್ಕರ್​ನಲ್ಲಿ ಒಂದು ವಿಸಲ್​ ಬೇಯಿಸಿ. ಆ ಬಳಿಕ ಆ ನೀರನ್ನೆಲ್ಲಾ ಚೆಲ್ಲಿ. ಇದರಿಂದ ಅದರಲ್ಲಿ ಇರುವ ಒಂದಷ್ಟು ರಾಸಾಯನಿಕ ಅಂಶ ಹೋಗಲು ಸಹಕಾರಿಯಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mysuru pak: ಮೈಸೂರು ಪಾಕಗಿದೆ ರಾಜಮನೆತನದ ರೋಚಕ ಹಿನ್ನೆಲೆ, ಈ ಮೂರು ಪದಾರ್ಥಗಳಿದ್ರೆ ಸಾಕು ಮನೆಯಲ್ಲೇ ತಯಾರಿಸಿ!
ಒಡೆದ ಹಿಮ್ಮಡಿ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು.. ಅಲ್ಲಿ ಇಲ್ಲಿ ಏಕೆ ಹುಡುಕೋದು?