Kids Recipe: ಮಕ್ಕಳಿಗಿಷ್ಟ ಈ ಮ್ಯಾಂಗೋ ಪಾಪ್ಸಿಕಲ್, ಮಕ್ಕಳಿಂದಲೇ ಈ ಸುಲಭ ರೆಸಿಪಿ ಮಾಡಿಸಿ!

By Suvarna News  |  First Published May 24, 2023, 2:39 PM IST

ಬೇಸಿಗೆ ನಡುವೆ ಮಳೆ ಬಂದರೂ ಬಿಸಿಲ ಬೇಗೆ ಕಡಿಮೆ ಆಗಿಲ್ಲ. ಇನ್ನೊಂದು ಕಡೆ ಮಕ್ಕಳಿಗೂ ಬೇಸಿಗೆ ರಜೆ. ಮಕ್ಕಳಿಂದಲೇ ಮ್ಯಾಂಗೋ ಪಾಪ್ಸಿಕಲ್ ಮಾಡಿಸಿ.


ಮಕ್ಕಳ ಬೇಸಿಗೆ ರಜೆ ಮುಗೀತಾ ಬಂತು. ಆ ಕಡೆ ಸಮ್ಮರ್ ಕ್ಯಾಂಪ್‌ಗಳೂ ಮುಗಿದಿವೆ. ಊರಿಗೆ ಹೋದ ಮಕ್ಕಳು ಮನೆಗೆ ಮರಳಿದ್ದಾರೆ. ಯಾವಾಗಲೂ ಟಿವಿ, ಲ್ಯಾಪ್‌ಟಾಪ್ ಮುಂದೆ ಕೂತು ಚಿಪ್ಸ್ ಹಾಳುಮೂಳು ತಿನ್ನೋ ಮಕ್ಕಳಿಗೆ ಒಂದೊಳ್ಳೆ ರೆಸಿಪಿ ಕಲಿಸಿ. ಚಾಕ್ಲೇಟ್, ಸ್ನಾಕ್ಸ್ ಬಿಟ್ರೆ ಮತ್ತೇನು ಬೇಡ ಅಂತ ರಗಳೆ ತೆಗೆಯೋ ಮಕ್ಕಳಿಗೆ ಮ್ಯಾಂಗೋ ಕ್ಯಾಂಡಿ ರುಚಿ ತೋರಿಸಿ. ಅದಕ್ಕಿಂತ ಹೆಚ್ಚಾಗಿ ಈ ರೆಸಿಪಿಯನ್ನು ಅವರಿಂದಲೇ ಮಾಡಿಸಿ. ತಾವೇ ಕ್ಯಾಂಡಿ ಮಾಡಿದ್ದೇವೆ ಅನ್ನೋ ಖುಷಿ ಜೊತೆಗೆ ಸಖತ್ ಟೇಸ್ಟಿ ಆಗಿಯು ಇರೋದು ಮಕ್ಕಳ ಖುಷಿ ಹೆಚ್ಚಿಸುತ್ತದೆ. ಇಂಥಾ ಸಣ್ಣಪುಟ್ಟ ಕೆಲಸಗಳು ಮಕ್ಕಳು ಗ್ಯಾಜೆಟ್ಸ್‌ನಿಂದ ಹೊರಬರಲು, ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಲೂ ಬೆಸ್ಟ್. ಈ ರೆಸಿಪಿಗೆ ಬೇಕಾದ ಸಾಮಗ್ರಿಗಳನ್ನು ತರುವಾಗ ಮಕ್ಕಳನ್ನೂ ಕರೆದುಕೊಂಡು ಹೋಗಿ. ಇದಕ್ಕೆ ಮುಖ್ಯವಾಗಿ ಬೇಕಿರೋದು ಮಾವಿನ ಹಣ್ಣು. ಮಾರ್ಕೆಟ್‌ನಿಂದ ಅವರಿಂದಲೇ ಮಾವಿನ ಹಣ್ಣುಗಳನ್ನು ಆರಿಸುವಂತೆ ಮಾಡುವುದೂ ಮಕ್ಕಳಿಗೆ ಖುಷಿ ತರಬಹುದು.

ಬೇಸಿಗೆಯಲ್ಲಿ ಮಾವಿನ ಹಣ್ಣು ಸವಿಯುವುದು ಎಂದರೆ ಒಂದು ರೀತಿಯ ಉಲ್ಲಾಸ. ಮಾವಿನ ಹಣ್ಣಿನಿಂದ ತಯಾರಿಸಿದ ಖಾದ್ಯ ಹಾಗೂ ತಂಪು ಪಾನೀಯಗಳು ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುತ್ತವೆ. ರುಚಿಕರವಾದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬಯಸುತ್ತಾರೆ. ಈ ಹಣ್ಣಿನಿಂದ ವಿವಿಧ ಬಗೆಯ ತಂಪು ಕ್ಯಾಂಡಿಗಳನ್ನು ತಯಾರಿಸಬಹುದು. ಅಂತಹ ಕ್ಯಾಂಡಿಗಳಲ್ಲಿ ಮಾವಿನ ಹಣ್ಣಿನ ಪಾಪ್ಸಿಕಲ್ ಸಹ ಒಂದು. ಈ ಒಂದು ವಿಶೇಷ ಕ್ಯಾಂಡಿಯನ್ನು ತಯಾರಿಸುವ ಬಗೆಯೂ ಸುಲಭ.

Tap to resize

Latest Videos

ಫ್ರಿಡ್ಜ್ ಇಲ್ಲದೇನೆ ಬೆಣ್ಣೆಯನ್ನು ತಾಜಾವಾಗಿರಿಸೋದು ಹೇಗೆ?

ಈ ರೆಸಿಪಿ ತಯಾರಿಸಲು 2 - ಮಾವಿನ ಹಣ್ಣು, 2 ಕಪ್‌ ಮೊಸರು, 1/2 ಕಪ್‌ ಸಕ್ಕರೆ, 1/4 ಕಪ್‌ ಕೆನೆ, 3 ಚಮಚ ನಿಂಬೆ ರಸ ಇಷ್ಟು ಸಾಮಗ್ರಿಗಳು ಬೇಕು.

ಮಿಕ್ಸರ್ ನಲ್ಲಿ ಮಾವಿನ ಹಣ್ಣಿನ ಹೋಳು(Mango slice), ಮೊಸರು, ಸಕ್ಕರೆ, ತಾಜಾ ಕೆನೆ, ನಿಂಬೆ ರಸ(Lemon juice) ಎಲ್ಲವನ್ನು ಸೇರಿಸಿ, ಹದವಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಕಾದ ವಿನ್ಯಾಸದ ಕಪ್‌ಗೆ ಸುರಿಯಿರಿ. ಇದರ ಮೇಲೆ ಕಡ್ಡಿ ಇಟ್ಟು ಫ್ರೀಜರ್‌‍ನಲ್ಲಿ ಇಡಬೇಕು. 7-8 ಗಂಟೆಗಳ ಕಾಲ ಫ್ರೀಜರ್‌ನಲ್ಲೇ ಬಿಡಬೇಕು. ಆಗ ಅದು ಗಟ್ಟಿಯಾಗಿ ಕ್ಯಾಂಡಿ ಆಗುವುದು.

Sex drive: ಈರುಳ್ಳಿ, ಬೆಳ್ಳುಳ್ಳಿಗೆ ಕಾಮ ಕೆರಳಿಸೋ ಶಕ್ತಿ ಇರೋದು ನಿಜನಾ?

ನಂತರ ಟ್ರೇಯಿಂದ ತೆಗೆದು ಮಾವಿನ ಹಣ್ಣಿನ ಪಾಪ್ಸಿಕಲ್ಸ್ ಅನ್ನು ಸವಿಯಲು ನೀಡಿ ತಂಪಾದ ಮಾವಿನ ಹಣ್ಣಿನ ಪಾಪಿಕಲ್ಸ್(mango popscicle) ಅದ್ಭುತ ಆನಂದವನ್ನು ನೀಡುವುದು. ಮಕ್ಕಳ ಕೈಯಿಂದಲೆ ಇದನ್ನು ಮಾಡಿಸಿದರೆ ಅವರಿಗೂ ಈ ಬಗ್ಗೆ ಕುತೂಹಲ ಬೆಳೆಯುವುದು. ಈ ಅಡುಗೆ ಅಂತಲ್ಲ, ಯಾವ ಬಗೆಯ ರೆಸಿಪಿಗಳನ್ನೂ ದೊಡ್ಡವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ಮಾಡಿಸಬಹುದು. ಈಗ ಹೇಗಿದ್ದರೂ ಮಾವು, ಹಲಸಿನ(Jack fruit) ಸೀಸನ್‌. ಮಕ್ಕಳನ್ನು ಮಾರ್ಕೆಟ್ಟಿಗೆ ಕರೆದುಕೊಂಡು ಹೋಗಿ ಅವರ ಮುಂದೆಯೇ ಹಣ್ಣು ಖರೀದಿಸಿದರೆ ಅವರಿಗೂ ಈ ಹಣ್ಣು ಆಯ್ಕೆ ಮಾಡುವ ವಿಧಾನ, ವ್ಯವಹಾರ ಮಾಡುವ ರೀತಿ ಎಲ್ಲ ತಿಳಿಯುತ್ತದೆ. ಮಾವು, ಹಲಸು, ಬೇಸಿಗೆಯಲ್ಲಿ ಸಿಗುವ ಹಣ್ಣುಗಳಿಂದಲೇ ಸುಲಭ ರೆಸಿ ಮಾಡೋದು ಕಲಿಸಿದರೆ ಸೀಸನಲ್ ಹಣ್ಣುಗಳನ್ನು ತಿಂದ ಹಾಗೂ ಆಗುತ್ತದೆ. ತಾವೇ ಮಾಡಿರೋ ಅಡುಗೆಯನ್ನು(Recipe) ತಿನ್ನೋ ಬಗ್ಗೆಯೂ ಮಕ್ಕಳು ಆಸಕ್ತರಾಗುತ್ತಾರೆ. ಒಂದು ರೀತಿಯಲ್ಲಿ ಇದು ಮಕ್ಕಳಿಗೆ ಸಹಜತೆಯ ಪಾಠವೂ ಹೌದು. ಇದನ್ನು ಅವರು ಖುಷಿಯಿಂದಲೇ ಕಲಿಯುವಂತಾಗಬೇಕು. ಇಂಥಾ ಜೀವನ ಪಾಠಗಳು ಆ ಕ್ಷಣ ಮಾತ್ರವಲ್ಲ, ಭವಿಷ್ಯದಲ್ಲೂ ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತದೆ.

click me!