
ಪ್ರತಿ ಆಹಾರ, ತಿನಿಸು ತಿನ್ನಲು ಒಂದು ಸರಿಯಾದ ಕ್ರಮ, ವಿಧಾನ ಇದೆ. ಆದರೆ ಎಲ್ಲರೂ ತಮ್ಮ ತಮ್ಮ ಅನುಕೂಲ, ಅವಶ್ಯಕತೆಗೆ ತಕ್ಕಂತೆ ತಿನ್ನುತ್ತಾರೆ. ಈ ಪೈಕಿ ಚಾಕೋಲೇಟ್ ಎಲ್ಲರ ನೆಚ್ಚಿನ ಸಿಹಿತಿಂಡಿ. ಚಿಕ್ಕ ಮಕ್ಕಳಿಂದ ಹಿಡಿದು ಮುತ್ತಾತನವರೆಗೂ ಚಾಕೋಲೇಟ್ ಇಷ್ಟ. ಆದರೆ ಈ ಚಾಕೋಲೇಟ್ ತಿನ್ನಲು ಒಂದು ವಿಧಾನವಿದೆ. ಚಾಕೋಲೇಟ್ ರ‍್ಯಾಪರ್ ತೆಗೆದು ಗುಳುಂ ಮಾಡುವುದಲ್ಲ. ಅದನ್ನು ಅನುಭವಿಸಿ ತಿನ್ನಬೇಕು. ಹಾಗಂತ ಜಗಿದು ಜಗಿದು ತಿನ್ನುವುದಲ್ಲ. ಈ ಚಾಕೋಲೇಟ್ ಸ್ವಾದ ಮತ್ತಷ್ಟು ಹೆಚ್ಚಿಸಲು, ಗಂಟಲಿನಿಂದ ಇಳಿಯುವ ಈ ಸಿಹಿ ಹಾಗೂ ರುಚಿ ಡಬಲ್ ಆಗಲು 92ರ ಅಜ್ಜ ಒಂದು ವಿಧಾನ ಹೇಳಿದ್ದಾರೆ. ಆದರೆ ಈ ತಾತನ ವಿಧಾನ ಎಲ್ಲರೂ ಅನುಸರಿಸಲು ಹೋಗಬೇಡಿ. ಕಾರಣ ಯಾಕೆ ಗೊತ್ತಾ?
92ರ ಹರೆಯದ ಐರಿಶ್ ತಾತಾ ನೀಡಿದ ಸಲಹೆ ಇದೀಗ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಈ ತಾತನ ಟಿಪ್ಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ರಾಚಿನ್ ವೈಸಿ ಅನ್ನೋ ಸೋಶಿಯಲ್ ಮೀಡಿಯ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಚಾಕೋಲೇಟ್ ತಿನ್ನು ಸ್ವೀಕಾರ್ಹ ಹಾಗೂ ಸರಿಯಾದ ವಿಧಾನ ಇದು ಎಂದು ತಾತಾ ಹೇಳಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಲಾಗಿದೆ.
ಭಾರತದ ಈ ಕೆಫೆಯಲ್ಲಿ ಸಿಗುತ್ತೆ ದುಬಾರಿ ಚಾಯ್, ಇದರ ಬೆಲೆ 1,000 ರೂಪಾಯಿ
ಈ ವಿಡಿಯೋದ ಆರಂಭದಲ್ಲಿ 92ರ ಹರೆಯದ ಅಜ್ಜ ಚಾಕೋಲೇಟ್ ಕೈಗಳಲ್ಲಿ ಹಿಡಿದಿದ್ದಾರೆ. ಕೆಂಪು ಬಣ್ಣದ ಚಾಕೋಲೇಟ್ ರ‍್ಯಾಪರ್ ಹೊಂದಿದೆ. ಈ ರ‍್ಯಾಪರ್‌ನ ಎರಡು ಬದಿಯ ತುದಿಯಲ್ಲಿ ಹಿಡಿದು ಎಳೆದಿದ್ದಾರೆ. ಈ ವೇಳೆ ಸುರುಳಿಯಾಗಿದ್ದ ಚಾಕೋಲೇಟ್ ರ‍್ಯಾಪರ್ ಬಿಡಿಸಿಕೊಂಡಿದೆ. ಬಳಿಕ ರ‍್ಯಾಪರ್ ಒಳಗಿನಿಂದ ಚಾಕೋಲೇಟ್ ಹೊರತೆಗೆದಿದ್ದಾರೆ. ಬಳಿಕ ಮೂಗಿನ ಬಳಿ ತಂದ ಚಾಕೋಲೇಟ್ ಸುವಾಸನೆ ಸವಿಸಿದ್ದಾರೆ. ಇಲ್ಲೀವರೆಗೆ ಎಲ್ಲವೂ ಒಕೆ. ಆದರೆ ಮುಂದಿನ ವಿಧಾನ ಮಾತ್ರ ಕೆಲವರಿಗೆ ಮಾತ್ರ.
ರ‍್ಯಾಪರ್‌ನಿಂದ ತೆಗೆದ ಚಾಕೋಲೇಟ್‌ನ್ನು ತಾತ ತನ್ನ ಬಳಿ ಇದ್ದ ವಿಸ್ಕಿ ತುಂಬಿದ ಗ್ಲಾಸ್‌ಗೆ ಹಾಕಿದ್ದಾರೆ. ಬಳಿಕ ಒಂದೆರೆಡು ಸುತ್ತು ಗ್ಲಾಸ್‌ನ್ನು ತಿರುಗಿಸಿದ್ದಾರೆ. ಈ ವೇಳೆ ವಿಸ್ಕಿಯೊಳಗೆ ಈ ಚಾಕೋಲೇಟ್ ನಿಧಾನವಾಗಿ ಕರಗಲು ಆರಂಭಗೊಂಡಿದೆ. ಒಂದರೆಡ ರೌಂಡ್ ಸುತ್ತಿಸಿ ಬಳಿಕ ಗ್ಲಾಸನ್ನು ಮೂಗಿನ ಬಳಿ ತಂದ ಮತ್ತೆ ಸುವಾಸನೆ ಪಡೆದಿದ್ದಾರೆ. ಈ ವೇಳೆ ತಾತನ ಮುಖಭಾವ, ಹಾಗೂ ನಿಟ್ಟುಸಿರು ಯಾವ ಮಾಡೆಲ್‌ಗೂ ಕಡಿಮೆ ಇಲ್ಲ. ಇದಾದ ಬಳಿಕ ಒಂದು ಗುಟುಕು ಕುಡಿದು ಅದನ್ನು ಅಷ್ಟೇ ಅನುಭವಿಸಿದ್ದಾರೆ. ಬಾಯಲ್ಲಿ ಕೆಲೆ ಸೆಕೆಂಡ್‌ಗಳ ಕಾಲ ವಿಸ್ಕಿಯನ್ನು ಸವಿದಿದ್ದಾರೆ. ಬಳಿಕ ನಿಧಾನವಾಗಿ ಇಳಿಸಿದ್ದಾರೆ. ಈ ಸ್ವಾದಿಷ್ಠ ಅನುಭವ ಹಾಗೂ ಆನಂದವನ್ನು ಅಜ್ಜನ ಮುಖದಲ್ಲಿ ಗಮನಿಸಬಹುದು. ಸಂಪೂರ್ಣ ವಿಡೋಯದಲ್ಲಿ ತಾತಾ ಒಂದೇ ಒಂದು ಮಾತು ಆಡಿಲ್ಲ. ಆದರೆ ಈ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ತಾತನ ವಯಸ್ಸು 92. ಈ ರೀತಿಯ ಹಲವು ಅನುಭವ ನಮಗೆ ಧಾರೆ ಎರೆಯುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದು ನಿಜವಾಗಿಯೂ ಉತ್ತಮ ವಿಧಾನ. ಚಾಕೋಲೇಟ್ ಈ ರೀತಿ ತಿಂದರೆ ಎಲ್ಲಾ ರೀತಿಯಿಂದಲೂ ಉತ್ತಮ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 92ರ ತಾತನ ಅನುಭವ ನಮ್ಮಂತ ಯುವ ಸಮೂಹಕ್ಕೆ ಅಗತ್ಯವಿದೆ. ಈ ರೀತಿಯ ಮತ್ತಷ್ಟು ವಿಧಾನ ಹೇಳಿಕೊಡಬೇಕಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
35ರೂ ಗೆ ಇಡ್ಲಿ ವಡಾ ಮಾರುವ ಮಹಿಳೆ ಅಂಗಡಿಗೆ ಸೋನು ಸೂದ್ ಭೇಟಿ, ಮುಂದೇನಾಯ್ತು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.