ಜೇನುತುಪ್ಪ (Honey) ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ. ಚರ್ಮದ (Skin) ಕಾಂತಿಗೂ, ಕಣ್ಣಿನ ಆರೋಗ್ಯ (Health)ಕ್ಕೂ ಅತ್ಯುತ್ತಮ. ಹೀಗಾಗಿ ಎಲ್ಲರ ಮನೆಯಲ್ಲೂ ಜೇನುತುಪ್ಪವಂತೂ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತಾ, ಜೇನು ತುಪ್ಪವೇನೋ ಆರೋಗ್ಯಕ್ಕೆ ಸಹಕಾರಿ. ಆದರೆ ಬಿಸಿ ಮಾಡಿದ ಜೇನು ತುಪ್ಪ ಆರೋಗ್ಯಕ್ಕೆ ವಿಷಕಾರಿ
ಆಯುರ್ವೇದದಲ್ಲಿ ಜೇನಿಗೆ ಅಗ್ರಸ್ಥಾನವಿದೆ. ಜೇನು ತುಪ್ಪ ಎಂದರೆ ಎಂದಿಗೂ ಕೆಡದ ಆಹಾರ ಎಂದೇ ಪರಿಗಣಿಸಲಾಗುತ್ತದೆ. ಜೇನನ್ನು ಎಷ್ಟೋ ವರ್ಷಗಳ ಕಾಲ ಕೆಡದಂತೆ ಜೋಪಾನವಾಗಿ ತೆಗೆದಿಟ್ಟು ಬಳಸಿಕೊಳ್ಳಬಹುದು. ಜೇನಿನಲ್ಲಿ ಆರೋಗ್ಯಕ್ಕೆ ಉಪಕಾರಿಯಾಗುವ ಹಲವಾರು ಅಂಶಗಳಿವೆ. ಸಾಮಾನ್ಯವಾಗಿ ಜೇನುತುಪ್ಪವನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಹಲವು ಸಿಹಿತಿಂಡಿಗಳ ತಯಾರಿಯಲ್ಲಿಯೂ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರರು. ಮಾತ್ರವಲ್ಲ ಬಿಸಿ ಪದಾರ್ಥಗಳೊಂದಿಗೂ ಜೇನಿನ ಸೇವನೆ ಒಳ್ಳೆಯದಲ್ಲ. ಜೇನುತುಪ್ಪವನ್ನು ಬೇಯಿಸಿದಾಗ ಅಥವಾ ಬಿಸಿ ಮಾಡಿದಾಗ ಅದು ವಿಷಕಾರಿಯಾಗಿ ಬದಲಾಗುತ್ತದೆ. ಹೀಗಾಗಿ ಜೇನುತುಪ್ಪವನ್ನು ತಾಜಾವಾಗಿದ್ದಾಗ ಹಾಗೆಯೇ ಸೇವಿಸುವುದು ಉತ್ತಮ
ಜೇನುತುಪ್ಪವನ್ನು ಬಿಸಿ ಮಾಡಿದಾಗ ಏನಾಗುತ್ತದೆ ?
ಜೇನುತುಪ್ಪವನ್ನು ಬೇಯಿಸಿದಾಗ ಬಣ್ಣದಲ್ಲಿ ಬದಲಾವಣೆಯಾಗುತ್ತದೆ ಮತ್ತು ಅಂಟು ಅಂಟಾಗಿ ಬದಲಾಗುತ್ತದೆ. ಅದೇ ರೀತಿ ಬಿಸಿ ಮಾಡಿದ ಜೇನು ತುಪ್ಪ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ವಾಸ್ತವವಾಗಿ, ಜೇನುತುಪ್ಪವನ್ನು ಬಿಸಿಮಾಡುವುದು ವಿಷಕಾರಿಯಾಗಿ ಬದಲಾಗಬಹುದು. ಆಯುರ್ವೇದದ ಪ್ರಕಾರ, ಜೇನುತುಪ್ಪವನ್ನು ಬಿಸಿಮಾಡುವುದು ಅಥವಾ ಬೇಯಿಸುವುದು ನೈಸರ್ಗಿಕ ಸಂಯೋಜನೆಯನ್ನು ಬದಲಾಯಿಸುತ್ತದೆ. ವಿಷಕಾರಿ ಅಣುಗಳು ಜೀರ್ಣಾಂಗ ವ್ಯವಸ್ಥೆಯ ಲೋಳೆಯ ಪೊರೆಗಳಿಗೆ ಅಂಟಿಕೊಳ್ಳುತ್ತವೆ. ಇದು ಅಮಾ ಎಂಬ ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಹೊಟ್ಟೆನೋವಿಗೆ, ಉಸಿರಾಟದ ತೊಂದರೆಗೆ, ಚರ್ಮ ರೋಗಗಳು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೇ ರೀತಿ, ಜೇನು ತುಪ್ಪವನ್ನು ಬಿಸಿ ಅನ್ನ, ದೋಸೆ ಅಥವಾ ಇತರ ಪದಾರ್ಥದೊಂದಿಗೆ ಸೇವಿಸುವುದರಿಂದ ಇದು ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
Honey To Belly Button : ಪ್ರತಿದಿನ ನಾಭಿಗೆ ಜೇನುತುಪ್ಪ ಹಚ್ಚಿದ್ರೆ ಹಲವು ಪ್ರಯೋಜನ
ಬಿಸಿ ಮಾಡಿದ ಜೇನುತುಪ್ಪವನ್ನು ಸೇವಿಸುವುದು ಸುರಕ್ಷಿತವೇ ?
ಜೇನುತುಪ್ಪವು ಆರೋಗ್ಯಕರ ಕಿಣ್ವಗಳು, ಅಮೈನೋ ಆಮ್ಲಗಳು, ವಿಟಮಿನ್ (Vitamin) ಸಿ, ಡಿ, ಇ, ಕೆ ಮತ್ತು ಬಿ-ಕಾಂಪ್ಲೆಕ್ಸ್ ಮತ್ತು ಬೀಟಾ-ಕ್ಯಾರೋಟಿನ್, ಖನಿಜಗಳು, ಸಾರಭೂತ ತೈಲಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವುದರಿಂದ ಅದುನೈಸರ್ಗಿಕ ರೂಪದಲ್ಲಿ ಉತ್ತಮವಾಗಿದೆ. ಆದರೆ, ಆಯುರ್ವೇದದ ಪ್ರಕಾರ ಜೇನುತುಪ್ಪ (Honey)ವನ್ನು ಬಿಸಿಮಾಡುವುದು ಅಥವಾ ಬೇಯಿಸುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.
undefined
ಹೆಚ್ಚಿನ ತಾಪಮಾನದಲ್ಲಿ ಜೇನುತುಪ್ಪವನ್ನು ಬೇಯಿಸುವುದು ಅಥವಾ ಬಿಸಿ (Heat) ಮಾಡುವುದು ಪೋಷಕಾಂಶಗಳ ಸಂಯೋಜನೆಯನ್ನು ಬದಲಾಯಿಸಬಹುದು. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ವರದಿಯ ಪ್ರಕಾರ, ಜೇನುತುಪ್ಪವನ್ನು ಬೇಯಿಸುವುದು ಅಥವಾ ಬಿಸಿಮಾಡುವುದು ಗುಣಮಟ್ಟವನ್ನು ಹದಗೆಡಿಸುತ್ತದೆ. 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಜೇನುತುಪ್ಪವನ್ನು ಬೇಯಿಸುವುದು ನಕಾರಾತ್ಮಕ ರಾಸಾಯನಿಕ ಬದಲಾವಣೆಗೆ ಕಾರಣವಾಗಬಹುದು ಮತ್ತು ಅದು ಕಹಿ ರುಚಿಯನ್ನು ನೀಡುತ್ತದೆ.
Honey And Almond : ಜೇನಿನೊಂದಿಗೆ ಬೆರೆಸಿದ ಬಾದಾಮಿ ತಿನ್ನಿ, ಈ ರೋಗಗಳು ಹತ್ತಿರ ಸುಳಿಯಲ್ಲ
ಜೇನುತುಪ್ಪವನ್ನು ಅದರ ನೈಸರ್ಗಿಕ ರೂಪದಲ್ಲಿ ಸೇವಿಸಿ
ಬಿಸಿ ಮಾಡಿದ ನಂತರ ಜೇನುತುಪ್ಪವನ್ನು ಸೇವಿಸಬೇಕೆ, ಸೇವಿಸಬಾರದೇ ಎಂಬುದು ಹಲವರ ಗೊಂದಲ. ಪಾಶ್ಚಿಮಾತ್ಯ ದೇಶಗಳಲ್ಲಿ, ಕುಕೀಸ್, ಪುಡಿಂಗ್‌ಗಳು ಮತ್ತು ಸಿಹಿತಿಂಡಿಗಳನ್ನು ಬೇಯಿಸಲು ಜೇನುತುಪ್ಪವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಜೇನುತುಪ್ಪ ಸಕ್ಕರೆ (Sugar)ಗೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಇದನ್ನು ವಿಷಕಾರಿ ಎಂದು ಪರಿಗಣಿಸಲಾಗುವುದಿಲ್ಲ
ಆದರೆ, ಭಾರತದಲ್ಲಿ ಬಿಸಿ ಮಾಡಿದ ಜೇನನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಜೇನುತುಪ್ಪದಿಂದ ಪೌಷ್ಠಿಕಾಂಶವನ್ನು ಪಡೆದುಕೊಳ್ಳಲು ಉತ್ತಮ ಮಾರ್ಗವೆಂದರೆ ಅದನ್ನು ಕಚ್ಚಾ ರೂಪದಲ್ಲಿ ಬಳಸುವುದಾಗಿದೆ. ತಾಜಾ ಜೇನನ್ನು ಬಿಸಿ ಮಾಡದೆ ಹಾಗೆಯೇ ತಿನ್ನಲು ಬಳಸಿ. ಮಾರುಕಟ್ಟೆಯಿಂದ ಜೇನು ತುಪ್ಪವನ್ನು ಖರೀದಿಸುವಾಗ ಅದು ಕಲಬೆರಕೆಯಿಲ್ಲದ ಜೇನು ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೇನುತುಪ್ಪವನ್ನು ಬಳಸಿ ಯಾವುದೇ ಸಿಹಿಯಾದ ಪದಾರ್ಥವನ್ನು ತಯಾರಿಸುತ್ತಿರಾದರೆ ಜೇನು ಹೆಚ್ಚು ಬಿಸಿ ಮಾಡದೆ ಇದನ್ನು ಬಳಸಿ. ಈ ರೀತಿ ಮಾಡುವುದರಿಂದ ಜೇನು ಹೆಚ್ಚಿನ ಪ್ರಮಾಣದಲ್ಲಿ ಸತ್ವವನ್ನು ಕಳೆದುಕೊಳ್ಳುವುದಿಲ್ಲ.