ಇದು ದುಬಾರಿ ದುನಿಯಾ. ಎಲ್ಲದರ ಬೆಲೆ ಗಗನಕ್ಕೇರಿದೆ. ಅದ್ರಲ್ಲಿ ನಿಂಬೆ ಹಣ್ಣು ಕೂಡ ಸೇರಿದೆ. ಬೆಲೆ ಏರಿಕೆ ಕಾಣ್ತಿರುವ ನಿಂಬೆ ಖರೀದಿಸುವಾಗ ತಪ್ಪು ಮಾಡಿದ್ರೆ ಹಣ ಹಾಳಾದಂತೆ. ಹಾಗಾಗಿ ಕಣ್ಮುಚ್ಚಿಕೊಂಡು ನಿಂಬೆ ಹಣ್ಣು ಖರೀದಿ ಬದಲು ಕೆಲವೊಂದು ವಿಷ್ಯ ತಿಳಿದಿರಿ.
ಋತು (Season) ವಿನಲ್ಲಿ ಸಿಗುವ ಆಹಾರ (Food) ವನ್ನು ಅಗತ್ಯವಾಗಿ ಸೇವನೆ ಮಾಡ್ಬೇಕು. ಬೇಸಿಗೆ (Summer) ಋತುವಿನಲ್ಲಿ ಸಿಗುವ ಹಣ್ಣು (Fruit) ಗಳು ಹಾಗೂ ತರಕಾರಿಗಳನ್ನು ಕೂಡ ಡಯಟ್ ನಲ್ಲಿ ಸೇರಿಸುವುದ್ರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ಪಟ್ಟಿಯಲ್ಲಿ ನಿಂಬೆ (Lemon) ಹಣ್ಣು ಕೂಡ ಸೇರಿದೆ. ನಿಂಬೆ ಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ನಿಂಬೆ ಹಣ್ಣು ಆಹಾರದ ರುಚಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗೆಯೇ ಔಷಧಿಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಗುಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ನಿಂಬೆ ಸೇವನೆಯು ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ತುಂಬಾ ದುಬಾರಿಯಾಗಿದೆ. ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಿಂಬೆ ಹಣ್ಣಿನ ಖರೀದಿ ಮಾಡದೆ ಬಿಡಲಾಗುವುದಿಲ್ಲ. ದುಬಾರಿ ಬೆಲೆ ಕೊಟ್ಟ ನಿಂಬೆ ಹಣ್ಣು ಖರೀದಿ ಮಾಡುತ್ತಾರೆ. ಹೆಚ್ಚಿನ ಹಣ ಕೊಟ್ಟು ನಿಂಬೆ ಹಣ್ಣು ಮನೆಗೆ ತರ್ತೇವೆ. ಆದ್ರೆ ಹಣ್ಣು ಹಾಳಾಗಿರುತ್ತದೆ ಇಲ್ಲವೆ ಅದ್ರಲ್ಲಿ ರಸವೇ ಇರುವುದಿಲ್ಲ. ಹಾಗಾದಾಗ ಹಣ ಹಾಳಾಗುತ್ತದೆ. ನಿಂಬೆಹಣ್ಣಿನ ಖರೀದಿ ವೇಳೆ ಬಹಳ ಎಚ್ಚರಿಕೆಯಿಂದಿರಬೇಕು. ನಿಂಬೆ ಹಣ್ಣಿನ ಖರೀದಿ ವೇಳೆ ಏನು ಮಾಡ್ಬೇಕು ? ಏನು ಗಮನಿಸಬೇಕೆಂದು ನಾವು ಹೇಳ್ತೇವೆ.
ನಿಂಬೆ ಹಣ್ಣಿನ ಖರೀದಿ ಹೀಗಿರಲಿ :
undefined
ನಿಂಬೆ ಹಣ್ಣಿನ ಬಣ್ಣವನ್ನು ನೋಡಿ : ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳನ್ನು ಖರೀದಿಸುವಾಗ ಹಸಿರು ಬಣ್ಣದ ನಿಂಬೆಹಣ್ಣಿನ ಹಣ್ಣನ್ನು ಕೊಂಡುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಆದರೆ ಹಸಿರು ಬಣ್ಣದ ನಿಂಬೆಹಣ್ಣುಗಳು ಕಾಯಿಯಾಗಿರುತ್ತವೆ. ಅದರಲ್ಲಿ ರಸವು ತುಂಬಾ ಕಡಿಮೆಯಿರುತ್ತದೆ. ಅದರ ಚರ್ಮ ದಪ್ಪವಾಗಿರುತ್ತದೆ. ಆದ್ದರಿಂದ, ನಿಂಬೆಯನ್ನು ತೆಗೆದುಕೊಳ್ಳುವಾಗ, ಹಳದಿ ಬಣ್ಣದ ನಿಂಬೆಹಣ್ಣನ್ನು ಮಾತ್ರ ಖರೀದಿಸಿ. ಹಳದಿ ನಿಂಬೆಯಲ್ಲಿ ಬಹಳಷ್ಟು ರಸವಿರುತ್ತದೆ. ಹಾಗೆಯೇ ತಿಳಿ ಹಳದಿ ಮತ್ತು ತಿಳಿ ಹಸಿರು ನಿಂಬೆಹಣ್ಣುಗಳನ್ನು ಖರೀದಿಸುವುದನ್ನು ತಪ್ಪಿಸಿ.
79 ವರ್ಷದ ಬಳಿಕ ವಿದ್ಯಾರ್ಥಿ ಭವನ ಎರಡನೇ ಶಾಖೆ, ಎಲ್ಲಾಗ್ತಿದೆ ಗೊತ್ತಾ?
ನಿಂಬೆಯನ್ನು ಒತ್ತುವ ಮೂಲಕ ಗುರುತಿಸಿ : ನಿಂಬೆ ಹಣ್ಣನ್ನು ಖರೀದಿಸುವಾಗ ಅದನ್ನು ಒತ್ತುವ ಮೂಲಕ ನೀವು ನಿಂಬೆ ರಸವನ್ನು ಸಹ ಊಹಿಸಬಹುದು. ಮೃದುವಾದ ನಿಂಬೆಹಣ್ಣುಗಳು ಗಟ್ಟಿಯಾದ ನಿಂಬೆಗಳಿಗಿಂತ ಹೆಚ್ಚು ರಸವನ್ನು ಹೊಂದಿರುತ್ತವೆ. ನಿಂಬೆಹಣ್ಣುಗಳನ್ನು ಒತ್ತಲು ಕಷ್ಟವಾದ್ರೆ ಹಾಗೂ ಅದರ ಚರ್ಮ ದಪ್ಪಗಿದ್ದರೆ ಅದನ್ನು ಖರೀದಿಸಬೇಡಿ. ಅದರಲ್ಲಿ ತುಂಬಾ ಕಡಿಮೆ ರಸವಿರುತ್ತದೆ ಎಂದು ಅರ್ಥೈಸಿಕೊಳ್ಳಿ. ದೊಡ್ಡ ನಿಂಬೆ ಹಣ್ಣನ್ನು ಖರೀದಿಸಲು ನಾವು ಮುಂದಾಗ್ತೇವೆ. ಆದ್ರೆ ಗಾತ್ರಕ್ಕಿಂತ ನಿಂಬೆ ಹಣ್ಣಿನ ಗುಣಮಟ್ಟದ ಬಗ್ಗೆ ಗಮನ ನೀಡಿ.
Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?
ಹಾಳಾದ ನಿಂಬೆ ಖರೀದಿ ಬೇಡ : ನಿಂಬೆಹಣ್ಣುಗಳನ್ನು ಖರೀದಿ ಮಾಡುವಾಗ, ನಿಂಬೆ ಹಣ್ಣಿನ ಮೇಲೆ ಕಲೆಯಿದ್ದರೆ, ಹಾಳಾದಂತೆ ಕಂಡರೆ ಖರೀದಿಸಬೇಡಿ. ಹಾಗೆ ಒಣಗಿದ ಸಿಪ್ಪೆ ಹೊಂದಿರುವ ನಿಂಬೆ ಹಣ್ಣುಗಳನ್ನು ಖರೀದಿಸಬೇಡಿ. ಒಣಗಿದ ನಿಂಬೆ ಹಣ್ಣಿನಲ್ಲಿ ರಸವು ಅತ್ಯಲ್ಪವಾಗಿರುತ್ತದೆ. ಹಾಗೆ ಕೊಳೆತಂತೆ ಕಾಣುವ ನಿಂಬೆ ಹಣ್ಣಿನ ರುಚಿ ಹಾಳಾಗಿರುತ್ತದೆ. ಪ್ರತಿಯೊಂದು ನಿಂಬೆ ಖರೀದಿ ಮಾಡುವಾಗಲೂ ಈ ಎಲ್ಲ ವಿಷ್ಯವನ್ನು ಗಮನಿಸಬೇಕಾಗುತ್ತದೆ. ನಿಂಬೆ ದುಬಾರಿಯಾಗಿದ್ದರೂ, ಕಲೆಗಳಿಲ್ಲದೆ ಮೃದುವಾದ ಹಳದಿ ನಿಂಬೆಯನ್ನು ಖರೀದಿಸಿದ್ರೆ ನೀವು ನಿಂಬೆ ಹಣ್ಣಿಗೆ ನೀಡಿದ ಹಣ ವಾಪಸ್ ಬಂದಂತೆ. ಇಲ್ಲವೆಂದ್ರೆ ಕೊಳೆತ, ಹಾಳಾದ, ಒಣಗಿದ ನಿಂಬೆ ಖರೀದಿ ಮಾಡಿ, ಸರಿಯಾದ ರಸವಿಲ್ಲದೆ ಹಣ ಹಾಳಾಗುತ್ತದೆ. ಮಾರುಕಟ್ಟೆಗೆ ಹೋದಾಗ ಆತುರ ಮಾಡದೆ ನಿಧಾನವಾಗಿ ನಿಂಬೆ ಹಣ್ಣನ್ನು ಆರಿಸಿ ಖರೀದಿ ಮಾಡಿ.