ಸಕ್ಕರೆ ಸಿಹಿ ನಮ್ಮ ಚಿತ್ತವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಕ್ಕರೆಯ ಸಿಹಿಗೆ ಬೆರಗಾಗದವರಿಲ್ಲ. ಒಂದು ಉತ್ತಮ ಶುಭಾ ಸಮಾರಂಭದ ಆರಂಭಕ್ಕೆ ಸಕ್ಕರೆ ಬೇಕೆ ಬೇಕು ಹಬ್ಬ ಹರಿದಿನಗಳಲ್ಲೂ ಸಕ್ಕರೆಯ ಸಿಹಿ ಇರಲೇಬೇಕು. ಸಕ್ಕರೆ ಬದುಕಿನ ಅವಿಭಾಜ್ಯ ಅಂಗ. ಆದರೆ ಈ ಸಕ್ಕರೆ ಹೇಗೆ ತಯಾರಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರಲಾರದು. ಭಾರತೀಯ ಕಾರ್ಖಾನೆಗಳಲ್ಲಿ ಸಕ್ಕರೆ ಹೇಗೆ ತಯಾರಾಗುತ್ತಿದೆ ಎಂಬುದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು Instagram-ಆಧಾರಿತ ಆಹಾರ ಬ್ಲಾಗರ್ @foodie_incarnate ಅವರು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು 1.7 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಈ ವಿಡಿಯೋದಲ್ಲಿ ಕಾಣಿಸುವಂತೆ ಕಬ್ಬನ್ನು ಹೊಸದಾಗಿ ಜಮೀನುಗಳಿಂದ ಕಟಾವು ಮಾಡಿ ತೂಕ ಮಾಡಲಾಗುತ್ತದೆ. ನಂತರ ಕಬ್ಬನ್ನು ಕನ್ವೇಯರ್ ಬೆಲ್ಟ್‌ಗಳ ಮೇಲೆ ಇರಿಸಲಾಗುತ್ತದೆ ಮತ್ತು ಯಂತ್ರಕ್ಕೆ ಕತ್ತರಿಸಲು ಕಳುಹಿಸಲಾಗುತ್ತದೆ. ಯಂತ್ರವು ಸಣ್ಣದಾಗಿ ಕೊಚ್ಚಿದ ಕಬ್ಬನ್ನು ನೀಡುತ್ತದೆ. ಕಬ್ಬನ್ನು ಜ್ಯೂಸ್ ಮಾಡುವ ಪ್ರಕ್ರಿಯೆಯು ಕಬ್ಬಿನ ರಸವನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಗಳು ಮಾಡುವಂತೆಯೇ ಇರುತ್ತದೆ. ಒಂದೇ ವ್ಯತ್ಯಾಸವೆಂದರೆ ಕಾರ್ಖಾನೆಗಳಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಯಾಂತ್ರಿಕವಾಗಿ ಮಾಡಲಾಗುತ್ತದೆ. ಕತ್ತರಿಸಿದ ಕಬ್ಬನ್ನು ಬೃಹತ್ ರೋಲರುಗಳ ಮೂಲಕ ತಳ್ಳಲಾಗುತ್ತದೆ ಮತ್ತು ರೋಲರ್‌ನಿಂದ ರಚಿಸಲಾದ ಒತ್ತಡವು ರಸವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ತೆಗೆದ ರಸ ಮತ್ತು ಕತ್ತರಿಸಿದ ಕಬ್ಬನ್ನು ಅನೇಕ ಬಾರಿ ರೋಲರುಗಳ ಮೂಲಕ ತಳ್ಳಲಾಗುತ್ತದೆ, ಎಲ್ಲಾ ರಸವನ್ನು ಕಬ್ಬಿನಿಂದ ಹೊರತೆಗೆಯಲಾಗಿದೆ ಎಂದು ಖಚಿತ ಪಡಿಸಿಕೊಳ್ಳಲಾಗುತ್ತದೆ.
Ethanol Petrol: ಸಕ್ಕರೆಗಿಂತ ಎಥೆನಾಲ್ ಉತ್ಪಾದನೆಗೆ ಕಾರ್ಖಾನೆಗಳ ಒತ್ತು?
ಮುಂದೆ, ರಸವನ್ನು ಉಗಿಯೊಂದಿಗೆ ಸಂಸ್ಕರಿಸಲಾಗುತ್ತದೆ, ಮತ್ತು ಸಲ್ಫರ್ ಮತ್ತು ಸುಣ್ಣವನ್ನು ಬೆರೆಸಲಾಗುತ್ತದೆ ಮತ್ತು ನಂತರ ಮತ್ತೆ ಉಗಿಯೊಂದಿಗೆ ಬಿಸಿ ಮಾಡಲಾಗುತ್ತದೆ. ಇದರ ನಂತರ, ರಸವನ್ನು ಸ್ವಲ್ಪ ಸಮಯದವರೆಗೆ ಬಿಡಲಾಗುತ್ತದೆ ಇದರಿಂದ ಕಲ್ಮಶಗಳು ಒಂದೆಡೆ ನೆಲೆಗೊಳ್ಳುತ್ತವೆ. ತೇವಾಂಶವನ್ನು ತೆಗೆದು ಹಾಕಲು ಶುದ್ಧ ರಸವನ್ನು ಆವಿಯಾಗಿಸುವ ಮೂಲಕ ಸಂಸ್ಕರಿಸಲಾಗುತ್ತದೆ, ರಸವನ್ನು ದಪ್ಪವಾದ ಸಕ್ಕರೆ ಪಾಕವಾಗಿ ಪರಿವರ್ತಿಸಲಾಗುತ್ತದೆ. ನಂತರ ಸಿರಪ್ ಅನ್ನು ಸ್ಫಟಿಕೀಕರಣಕ್ಕಾಗಿ ಸ್ಥಳಾಂತರಿಸಲಾಗುತ್ತದೆ, ಸಕ್ಕರೆ ಪಾಕವನ್ನು ಮತ್ತಷ್ಟು ಟ್ಯಾಂಕ್‌ಗಳಲ್ಲಿ ಕುದಿಸಲಾಗುತ್ತದೆ ಮತ್ತು ಅದು ಸಕ್ಕರೆಯ ಹರಳುಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಸ್ಫಟಿಕೀಕರಿಸಿದ ಸಕ್ಕರೆಯನ್ನು ಮತ್ತಷ್ಟು ಉಗಿಗೆ ಸಂಸ್ಕರಿಸಲಾಗುತ್ತದೆ ಮತ್ತು ಕೊಳಕು ಮತ್ತು ಕಲ್ಮಶಗಳನ್ನು ತೆಗೆದು ಹಾಕುತ್ತದೆ ಕೊನೆಗೆ ನಮ್ಮ ದೈನಂದಿನ ಅಡುಗೆಯಲ್ಲಿ ನಾವು ಬಳಸುವ ಬಿಳಿ ಸಕ್ಕರೆಯನ್ನು ನೀಡುತ್ತದೆ.
ಸಂಪೂರ್ಣವಾಗಿ ಸಕ್ಕರೆ ತಿನ್ನೋದನ್ನು ಬಿಟ್ಟು ಬಿಟ್ಟರೆ ಏನಾಗುತ್ತದೆ ?
ಭಾರತೀಯರು ಪ್ರತಿನಿತ್ಯದ ಅಡುಗೆ (Cooking)ಯಲ್ಲಿ ಸಕ್ಕರೆ (Sugar)ಯನ್ನು ಯಥೇಚ್ಛವಾಗಿ ಬಳಸುತ್ತಾರೆ. ಕಾಫಿ, ಟೀ, ಜ್ಯೂಸ್, ಸಿಹಿತಿಂಡಿ, ಖೀರು ಹೀಗೆ ಪ್ರತಿಯೊಂದರಲ್ಲೂ ಸಕ್ಕರೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸಕ್ಕರೆಯನ್ನು ತಿನ್ನದೇ ಇರುವವರು ಕಡಿಮೆ. ಮಧುಮೇಹಿ (Diabetes)ಗಳು, ಸಕ್ಕರೆ ಸಂಬಂಧಿತ ಕಾಯಿಲೆ ಇರುವವರು ಮಾತ್ರ ಸಕ್ಕರೆಯನ್ನು ತಿನ್ನುವುದನ್ನು ಅವಾಯ್ಡ್ ಮಾಡುತ್ತಾರೆ. ಆದ್ರೆ ಸಕ್ಕರೆ ತಿನ್ನೋದ್ರಿಂದ ತೂಕ ಹೆಚ್ಚಳ (Weight Gain), ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಹಲವರು ಸಕ್ಕರೆಯನ್ನು ತಿನ್ನೊದನ್ನು ಬಿಟ್ಟುಬಿಡುತ್ತಾರೆ. ಹಾಗಿದ್ರೆ ಸಂಪೂರ್ಣವಾಗಿ ಸಕ್ಕರೆಯನ್ನು ತಿನ್ನೋದನ್ನು ಬಿಟ್ಟು ಬಿಟ್ಟರೆ ಏನಾಗುತ್ತದೆ.
ಸಂಸ್ಕರಿಸಿದ ಸಕ್ಕರೆಗಳು ಮತ್ತು ನೈಸರ್ಗಿಕ ಸಕ್ಕರೆಗಳ ನಡುವೆ ವ್ಯತ್ಯಾಸವಿದೆ. ಸಾಮಾನ್ಯ ಸಕ್ಕರೆ ತಿನ್ನಲು ಬಾಯಿಗೆ ರುಚಿಯಾಗಬಹುದು, ಆದರೆ ಸಂಸ್ಕರಿಸಿದ ಸಕ್ಕರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಹಳಷ್ಟು ಸಂಸ್ಕರಿಸಿದ, ಸೇರಿಸಿದ ಸಕ್ಕರೆಗಳನ್ನು ತಿನ್ನುವುದು ತಲೆನೋವು (Headache), ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಆಹಾರದಿಂದ ಸಕ್ಕರೆಯನ್ನು ಕಡಿತಗೊಳಿಸುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.