ದಕ್ಷಿಣಭಾರತದ ಸ್ಪೆಷಲ್ ಆಹಾರ ಇಡ್ಲಿ (Idli) ಅಂದ್ರೆ ನಿಮ್ಗೆ ಇಷ್ಟಾನ ? ಹಾಗೆಯೇ ಐಸ್‌ಕ್ರೀಂ (Ice cream) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇವೆರಡನ್ನೂ ಸೇರಿಸಿದ್ರೆ ಹೇಗಿರುತ್ತೆ. ಅಯ್ಯೋ ಅದ್ಹೇಗೆ ಸಾಧ್ಯ ಅಂತೀರಾ. ಆಹಾರ (Food) ಎಕ್ಸಪರಿಮೆಂಟ್ ಮಾಡೋರಿಗೆ ಯಾವುದೂ ಅಸಾಧ್ಯವಲ್ಲ ಬಿಡಿ. ಸದ್ಯ ಇಡ್ಲಿ ಐಸ್‌ಕ್ರೀಂ ವಿಡಿಯೋ ಎಲ್ಲೆಡೆ ವೈರಲ್ (Viral) ಆಗ್ತಿದೆ.
ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (Combination) ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಹೀಗಾಗಿ ಫುಡ್‌ನಲ್ಲಿ ಮಾಡುವ ನ್ಯೂ ಎಕ್ಸ್ ಪರಿಮೆಂಟ್‌ಗಳ ಪರಿಚಯವೂ ಆಗುತ್ತದೆ. ಆಹಾರ ಪ್ರಿಯರು ಯಾವ್ಯಾವುದೋ ಫುಡ್ ಅನ್ನು ಇನ್ಯಾವುದರೊಂದಿಗೆ ಸೇರಿಸಿ ಟ್ರಯಲ್ ಮಾಡ್ತಾರೆ. ಇಂಥಹಾ ಫುಡ್ ಫೋಟೋ, ವೀಡಿಯೋಗಳು ಇಂಟರ್ ನೆಟ್‌ನಲ್ಲಿ ವೈರಲ್ ಆಗುತ್ತವೆ. ಸದ್ಯ ಇಡ್ಲಿ ಐಸ್‌ಕ್ರೀಂ ಮಾಡೋ ವೀಡಿಯೋ (Video) ಎಲ್ಲೆಡೆ ವೈರಲ್ ಆಗ್ತಿದೆ.
ಇಡ್ಲಿನೋ, ಐಸ್‌ಕ್ರೀಮೋ ಕರೆಕ್ಟಾಗಿ ಹೇಳಿ ಅಂತೀರಾ, ನಾವ್ ಹೇಳ್ತಿರೋದು ಸರಿಯಾಗೇ ಇದೆ. ವೈರಲ್ ಆಗಿರೋದು ಇಡ್ಲಿ ಮತ್ತು ಐಸ್ ಕ್ರೀಮ್‌ನ ಕಾಂಬಿನೇಶಷನ್ ಐಸ್‌ಕ್ರೀಂ ಇಡ್ಲಿ.
undefined
World Idli Day 2022: ಇಡ್ಲಿ ಬಗ್ಗೆ ನಿಮಗೆಷ್ಟು ಗೊತ್ತು
ಇಡ್ಲಿ (Idli) ದಕ್ಷಿಣ ಭಾರತದ (South India) ಜನಪ್ರಿಯ ಆಹಾರವಾಗಿದೆ. ಬಹುತೇಕರು ಇಷ್ಟ ಪಡುವಂತಹ ನೆಚ್ಚಿನ ಉಪಾಹಾರ (Tiffin) ಎಂದು ಹೇಳಬಹುದು. ಬಿಸಿ ಬಿಸಿ ಸಾಂಬಾರ್ (Sambar) ಮತ್ತು ಕೊಬ್ಬರಿ ಚಟ್ನಿ ಜೊತೆ ಇಡ್ಲಿಯನ್ನು ಸವಿಯುತ್ತಾರೆ. ಐಸ್ ಕ್ರೀಂ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಡಿಫರೆಂಟ್ ಫ್ಲೇವರ್‌ನಲ್ಲಿ ಸಿಗೋ ಐಸ್ ಕ್ರೀಂನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಇವೆರಡನ್ನೂ ಕಂಬೈನ್ ಮಾಡಿದ್ರೆ ಹೇಗಿರುತ್ತೆ. ಇಲ್ಲಾಗಿರೋದು ಇದೇ ಈ ಹಿಂದೆ ಮಸಾಲೆ ದೋಸೆಯೊಂದಿಗೆ (dosa) ಐಸ್‌ಕ್ರೀಮ್ (Ice Cream) ಅನ್ನು ಮಿಕ್ಸ್ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಹಾಗೆಯೇ ಈಗ ಸಹ ಅಂತಹದ್ದೇ ಒಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ ನೋಡಿ. ಈ ಬಾರಿ ಇಡ್ಲಿಯೊಂದಿಗೆ ಐಸ್‌ಕ್ರೀಮ್ ಅನ್ನು ಮಿಕ್ಸ್ ಮಾಡಿದ್ದಾರೆ ನೋಡಿ.
ಫುಡ್ ಬ್ಲಾಗರ್ ‘ದಿ ಗ್ರೇಟ್ ಇಂಡಿಯನ್ ಫುಡ್ಡೀ’ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಶಿಷ್ಟವಾದ ತಿಂಡಿ ಇಡ್ಲಿ ಐಸ್‌ಕ್ರೀಮ್ ಅನ್ನು ದೆಹಲಿಯ ಲಜಪತ್ ನಗರ್ ದಲ್ಲಿರುವ ಒಂದು ಹೊಟೇಲ್ ಒಂದರಲ್ಲಿ ತಯಾರಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಈ ವೀಡಿಯೋದಲ್ಲಿ ಮೊದಲು ಇಡ್ಲಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಂಡು ಅದರ ಮೇಲೆ ಚಟ್ನಿ ಮತ್ತು ಸಾಂಬಾರ್ ಹಾಕಿಕೊಳ್ಳುತ್ತಾರೆ. ನಂತರ ಅದನ್ನು ಚೆನ್ನಾಗಿ ಕಲಸಿಕೊಂಡು ನಂತರ ಅದನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಅದರ ಮೇಲೆ ಐಸ್‌ಕ್ರೀಮ್ ಅನ್ನು ಹಾಕಿಕೊಳ್ಳುತ್ತಾರೆ. ಈಗ ಇಡ್ಲಿ ಐಸ್‌ಕ್ರೀಮ್ ರೆಡಿಯಾಗಿದೆ. ಈ ವೀಡಿಯೋವನ್ನು ಫುಡ್ ಬ್ಲಾಗರ್ ಒಬ್ಬರು ಕ್ಷಮೆ ಕೇಳುತ್ತಾ ಹಂಚಿ ಕೊಂಡಿದ್ದಾರೆ, ಆದರೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಬಳಕೆದಾರರು ಇದನ್ನು ಕ್ಷಮಿಸುವಂತೆ ಮಾತ್ರ ಕಾಣಿಸುತ್ತಿಲ್ಲ.
Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್
ಕೆಲವರು ಇದ್ಯಾವ ಡಿಷ್, ಇದನ್ನು ಯಾರು ತಿನ್ನುತ್ತಾರೆ ಎಂದು ಕೇಳಿದರೆ, ಇನ್ನೂ ಕೆಲವರು ಇಂತಹ ಒಳ್ಳೆಯ ತಿಂಡಿಗಳನ್ನು ಹೀಗೆ ಯಾವುದೋ ಒಂದು ಭಕ್ಷ್ಯದ ಜೊತೆಗೆ ಸೇರಿಸಿ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೂರನೆಯ ಬಳಕೆದಾರರು ‘ನನಗೆ ಇಡ್ಲಿ ಮತ್ತು ಐಸ್‌ಕ್ರೀಮ್ ಎರಡರ ಮೇಲೆ ಇರುವಂತಹ ಪ್ರೀತಿಯನ್ನು ಈ ವೀಡಿಯೋ ದೂರ ಮಾಡಿದೆ’ ಎಂದು ಬರೆದು ಕೊಂಡಿದ್ದಾರೆ.
ಹೀಗೆ ಕೆಲವು ತಿಂಗಳುಗಳ ಹಿಂದೆ ದೆಹಲಿಯ ಹೊಟೇಲ್ ಸಹ ಮಸಾಲೆ ದೋಸೆಯೊಂದಿಗೆ ಐಸ್‌ಕ್ರೀಮ್ ಅನ್ನು ಸೇರಿಸಿ ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹರಿ ಬಿಟ್ಟಿದ್ದರು. ಆಗಲೂ ಸಹ ನೆಟ್ಟಿಗರು ಇದನ್ನು ನೋಡಿ ಗರಂ ಆಗಿದ್ದರು. ವಿಚಿತ್ರ ಎಂದರೆ ಆವಾಗಲೂ ಇದೇ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಿಂದ ಆ ವೀಡಿಯೋವನ್ನು ಹಂಚಿ ಕೊಳ್ಳಲಾಗಿತ್ತು