ಮೊಟ್ಟೆ ಬೇಯಿಸುವ ಸಿಂಪಲ್ ಟ್ರಿಕ್ಸ್..ಒಂಚೂರು ಒಡೆಯಲ್ಲ, ಸಲೀಸಾಗಿ ಸಿಪ್ಪೆ ಬಿಡುತ್ತೆ!

Published : Jul 26, 2025, 03:27 PM ISTUpdated : Jul 26, 2025, 03:31 PM IST
boiled egg

ಸಾರಾಂಶ

ಇಲ್ಲಿ  ಮೊಟ್ಟೆಗಳನ್ನು ಬೇಯಿಸಲು ಸರಿಯಾದ ಮಾರ್ಗ ಯಾವುದೆಂದು ಕೊಡಲಾಗಿದೆ.  ಹೀಗೆ ಮಾಡುವುದರಿಂದ ಸ್ವಲ್ಪವೂ ಸಮಯ ವೇಸ್ಟ್ ಆಗದೆ ಮೊಟ್ಟೆ ನೀಟಾಗಿ ಬರುತ್ತದೆ. 

How to Boil Eggs: ಮೊಟ್ಟೆ ಎಲ್ಲಾ ವಯಸ್ಸಿನವರು ಎಲ್ಲಾ ಸೀಸನ್‌ನಲ್ಲಿ ಇಷ್ಟಪಡುವ ಆಹಾರವಾಗಿದೆ. ಉಪಾಹಾರಕ್ಕಾದರೂ ಆಗಲಿ ಅಥವಾ ಸಲಾಡ್ ಜೊತೆ ಇರಬಹುದು. ಅದರ ರುಚಿ ಮತ್ತು ಪೌಷ್ಟಿಕಾಂಶ ಎರಡೂ ಅತ್ಯುತ್ತಮವಾಗಿರುತ್ತದೆ. ಆದರೆ ಮೊಟ್ಟೆಯನ್ನು ಬೇಯಿಸುವುದು ಕೂಡ ಒಂದು ಕಲೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಏಕೆಂದರೆ ಹಲವು ಬಾರಿ ಮೊಟ್ಟೆಗಳು ಒಡೆದು ಅತಿಯಾಗಿ ಬೆಂದು ಹೋಗುತ್ತವೆ ಅಥವಾ ಸಿಪ್ಪೆ ತೆಗೆಯುವಾಗ ಬಿಳಿ ಭಾಗವೂ ಹೊರಬರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಮೊಟ್ಟೆಗಳನ್ನು ಬೇಯಿಸಲು ಸರಿಯಾದ ಮಾರ್ಗ ಯಾವುದೆಂದು ಕೊಡಲಾಗಿದೆ.  ಹೀಗೆ ಮಾಡುವುದರಿಂದ ಸ್ವಲ್ಪವೂ ಸಮಯ ವೇಸ್ಟ್ ಆಗದೆ ಮೊಟ್ಟೆ ನೀಟಾಗಿ ಬರುತ್ತದೆ. 

ಎಲ್ಲಿಂದ ಪ್ರಾರಂಭಿಸಬೇಕು?
ಹಂತ 1: ನೀರನ್ನು ಕುದಿಸಿ: ಮೊಟ್ಟೆ ಸಂಪೂರ್ಣವಾಗಿ ಮುಳುಗಬೇಕು. ಆ ಮಟ್ಟಕ್ಕೆ ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಸೇರಿಸಿ. ಉರಿ ಹೆಚ್ಚು ಮಾಡಿ ನೀರನ್ನು ಸಂಪೂರ್ಣವಾಗಿ ಕುದಿಯುವವರೆಗೂ ಬಿಡಿ.

ಹಂತ 2: ಮೊಟ್ಟೆಗಳನ್ನು ಸೇರಿಸಿ: ನೀರು ಕುದಿಯುವ ಹಂತಕ್ಕೆ ಹೋದಾಗ ಮೊಟ್ಟೆಗಳನ್ನು ನೀರಿಗೆ ಚಮಚದೊಂದಿಗೆ ನಿಧಾನವಾಗಿ ಬಿಡಿ. ನೀವು ಅವುಗಳನ್ನು ನೇರವಾಗಿ ನಿಮ್ಮ ಕೈಯಿಂದ ಬಿಟ್ಟರೆ ಅವು ಬಿರುಕು ಬಿಡಬಹುದು.

ಹಂತ 3: ಉರಿಯನ್ನು ಸ್ವಲ್ಪ ಕಡಿಮೆ ಮಾಡಿ: ಮೊಟ್ಟೆಯನ್ನು ಪಾತ್ರೆಗೆ ಹಾಕಿದ ನಂತರ ಉರಿಯನ್ನು ಕಡಿಮೆ ಮಾಡಿ. ಇದರಿಂದ ಅವು ಪರಸ್ಪರ ಬಡಿದು ಬಿರುಕು ಬಿಡುವುದಿಲ್ಲ.

ಹಂತ 4: ಸಮಯವನ್ನು ಹೊಂದಿಸಿ: ಇದು ಅತ್ಯಂತ ಮುಖ್ಯವಾದ ಭಾಗ. ಅಂದರೆ ಸಮಯ. ನೀವು ಮೊಟ್ಟೆಗಳನ್ನು ಹೇಗೆ ಕುದಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು...

3 ನಿಮಿಷ: ನೀವು ಮೊಟ್ಟೆ ಬೇಯಿಸಲು ಮೂರು ನಿಮಿಷ ತೆಗೆದುಕೊಂಡರೆ ಸಿಪ್ಪೆ ತೆಗೆಯುವುದು ಸ್ವಲ್ಪ ಕಷ್ಟವಾಗಬಹುದು.

6 ನಿಮಿಷ: ಈ ಸಮಯದಲ್ಲಿ ಹಳದಿ ಲೋಳೆ ತೆಳ್ಳಗಿರುತ್ತದೆ. ಬಿಳಿ ಬಣ್ಣ ಸ್ವಲ್ಪ ಗಟ್ಟಿಯಾಗಿರುತ್ತದೆ.

8 ನಿಮಿಷ: ಮೃದುವಾಗಿ ಬೆಂದಿರುತ್ತದೆ. ಬಿಳಿ ಭಾಗ ಬೆಂದಿರುತ್ತದೆ. ಹಳದಿ ಲೋಳೆ ಕೆನೆಯಂತೆ ಇರುತ್ತದೆ (ಇದು ಅತ್ಯಂತ ಜನಪ್ರಿಯ).

10 ನಿಮಿಷ: ಹತ್ತು ನಿಮಿಷವಾದರೆ ಮೊಟ್ಟೆ ಗಟ್ಟಿಯಾಗಿ ಬೆಂದಿರುತ್ತದೆ. ಸಂಪೂರ್ಣವಾಗಿ ಬೆಂದಿರುವುದರಿಂದ ಇದು ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಿಗೆ ಉತ್ತಮವಾಗಿರುತ್ತದೆ.

12 ನಿಮಿಷಗಳಿಗಿಂತ ಹೆಚ್ಚು: ಇಷ್ಟು ಸಮಯ ತೆಗೆದುಕೊಂಡಾಗ ಮೊಟ್ಟೆ ಅತಿಯಾಗಿ ಬೆಂದು ಹಳದಿ ಲೋಳೆ ಒಣಗಿರುತ್ತದೆ ಮತ್ತು ಬಿಳಿ ಭಾಗ ರಬ್ಬರ್‌ನಂತೆ ಆಗಿರುತ್ತದೆ.

ಹಂತ 5: ತಣ್ಣೀರಿನಲ್ಲಿ ಹಾಕಿ: ಬೆಂದ ನಂತರ ಮೊಟ್ಟೆಗಳನ್ನು ತಕ್ಷಣವೇ ಐಸ್ ಅಥವಾ ತಣ್ಣೀರಿನಲ್ಲಿ ಹಾಕಿ. ಇದರಿಂದ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ.

ಹಂತ 6: ಸಿಪ್ಪೆ ಸುಲಿಯುವುದು ಹೇಗೆ?. ಮೊಟ್ಟೆಯನ್ನು ಹರಿಯುವ ನೀರಿನ ಅಡಿಯಲ್ಲಿ ಹಾಕಿ ಸಿಪ್ಪೆ ತೆಗೆಯಿರಿ. ಇದು ಮೊಟ್ಟೆ ಸಿಪ್ಪೆ ಸ್ವಚ್ಛವಾಗಿ ಬೇಗನೆ ತೆಗೆಯಲು ಸಹಾಯ ಮಾಡುತ್ತದೆ.

ಮೊಟ್ಟೆ ಕುದಿಸಲು ಕೆಲವು ಪ್ರಮುಖ ಸಲಹೆಗಳು
*ಒಂದೇ ಬಾರಿಗೆ ಹೆಚ್ಚು ಮೊಟ್ಟೆಗಳನ್ನು ಸೇರಿಸಬೇಡಿ. ಇದು ನೀರಿನ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಮೊಟ್ಟೆಗಳು ಸರಿಯಾಗಿ ಬೇಯುವುದಿಲ್ಲ.
*ಸಣ್ಣ ಪಾತ್ರೆಯಲ್ಲಿ ಹೆಚ್ಚು ಮೊಟ್ಟೆಗಳನ್ನು ಹಾಕಬೇಡಿ. ಪ್ರತಿಯೊಂದು ಮೊಟ್ಟೆಯ ಸುತ್ತಲೂ ಬಿಸಿ ನೀರು ತುಂಬಿರಬೇಕು.
*ಹಳೆಯ ಮೊಟ್ಟೆಗಳ ಸಿಪ್ಪೆ ತೆಗೆಯುವುದು ಸುಲಭ. ತಾಜಾ ಮೊಟ್ಟೆಗಳು ಬಲವಾದ ಪೊರೆ ಹೊಂದಿರುತ್ತವೆ. ಆದ್ದರಿಂದ ಅವು ಹೆಚ್ಚಾಗಿ ತುಂಡುಗಳಾಗಿ ಸಿಪ್ಪೆ ಸುಲಿಯುತ್ತವೆ.

ಯಾವ ರೀತಿಯ ಮೊಟ್ಟೆಗಳನ್ನು ಎಲ್ಲಿ ಬಳಸಬೇಕು?
8 ನಿಮಿಷ ಬೆಂದ ಮೊಟ್ಟೆಗಳು: ಸಲಾಡ್‌, ಸ್ಯಾಂಡ್‌ವಿಚ್‌, ಟೋಸ್ಟ್ ಅಥವಾ ಪಾಸ್ತಾಗಳಿಗೆ ಉತ್ತಮ.
10 ನಿಮಿಷ ಬೆಂದ ಮೊಟ್ಟೆಗಳು: ಡೆವಿಲ್ಡ್ ಎಗ್‌ಗಳು, ಆಲೂ ಚಾಟ್ ಅಥವಾ ಮಕ್ಕಳ ಊಟದ ಬಾಕ್ಸ್‌ಗಳಿಗೆ ಸೂಕ್ತವಾಗಿದೆ.
3 ಅಥವಾ 6 ನಿಮಿಷ ಬೆಂದ ಮೊಟ್ಟೆಗಳು: ಟೋಸ್ಟ್‌ನೊಂದಿಗೆ ತಿನ್ನಿರಿ ಅಥವಾ ರಾಮೆನ್‌ಗೆ ಸೇರಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ
ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್