ಚಿನ್ನದ ಫ್ರೆಂಚ್ ಫ್ರೈಸ್ ಬಗ್ಗೆ ಕೇಳಿದ್ದೀರಾ..? ಒಂದು ಪ್ಲೇಟ್‌ಗೆ ಭರ್ತಿ 15000 ರೂ. !

By Suvarna News  |  First Published Mar 27, 2022, 2:53 PM IST

ಫ್ರೆಂಚ್‌ ಫ್ರೈಸ್‌ (French Fries)ನ್ನು ನೀವು ಸಾಮಾನ್ಯವಾಗಿ ಎಷ್ಟು ರೂಪಾಯಿ ಕೊಟ್ಟು ತಿಂದಿದ್ದೀರಿ. ಹೆಚ್ಚೆಂದರೆ 300 ರೂ. ಕೊಟ್ಟಿರಬಹುದು. ಆದ್ರೆ ಈ ರೆಸ್ಟೋರೆಂಟ್‌ನಲ್ಲಿ ಒಂದು ಪ್ಲೇಟ್‌ ಫ್ರೆಂಚ್ ಫ್ರೈಸ್ ಬೆಲೆ ಬರೋಬ್ಬರಿ 15000 ರೂಪಾಯಿ. ಅದ್ಯಾಕೆ ಅಂತೀರಾ. ಇದು ಅಂತಿಂಥಾ  ಫ್ರೆಂಚ್‌ ಫ್ರೈಸ್ ಅಲ್ಲ ಗೋಲ್ಡನ್ (Golden) ಫ್ರೆಂಚ್ ಫ್ರೈಸ್‌.


ಬರ್ಗರ್ ಆರ್ಡರ್ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಜೊತೆಗೆ ಫ್ರೆಂಚ್ ಫ್ರೈಸ್‌ (French Fries)ನ್ನು ಆರ್ಡರ್ ಮಾಡುತ್ತಾರೆ. ಪ್ರತಿಯೊಬ್ಬರೂ ಇದನ್ನು ಕೆಚಪ್‌ನೊಂದಿಗೆ ಸವಿಯಲು ಇಷ್ಟಪಡುತ್ತಾರೆ. ಫ್ರೆಂಚ್‌ ಫ್ರೈಸ್ ಸಾಮಾನ್ಯವಾಗಿ ಹೆಸರಾಂತ ರೆಸ್ಟೋರೆಂಟ್‌ಗಳಲ್ಲಿ 100ರಿಂದ 150 ರೂಪಾಯಿ, ಸ್ಟ್ರೀಟ್‌ ಸ್ಟಾಲ್‌ಗಳಲ್ಲಿ ಐವತ್ತು ರೂಪಾಯಿಗೆ ದೊರಕುತ್ತದೆ. ಆದರೆ ಇಲ್ಲಿ ದೊರಕುವ ಫ್ರೆಂಚ್‌ ಫ್ರೈಸ್ ಬೆಲೆ ಬರೋಬ್ಬರಿ 15 ಸಾವಿರ. ಅರೆ ಏನ್ ಹೇಳ್ತಿದ್ದೀರಪ್ಪಾ ಅಂತ ಗಾಬರಿಯಾಗ್ಬೇಡಿ. ನಾವ್ ಹೇಳ್ತಿರೋದೆ ನಿಜಾನೆ.

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಫಾಸ್ಟ್ ಫುಡ್ ರೆಸ್ಟೋರೆಂಟ್ ಸೆರೆಂಡಿಪಿಟಿಯ ಮೆನುವಿನಲ್ಲಿ ಈ ಕಾಸ್ಟ್ಲೀ ಫ್ರೆಂಚ್ ಫ್ರೈಸ್ ಲಭ್ಯವಿದೆ. ಈ ವಿಶೇಷವಾದ ಚೀಸೀ ಫ್ರೆಂಚ್ ಫ್ರೈಸ್ ಹೆಚ್ಚು ರುಚಿಕರವಾಗಿದ್ದು,  ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Record) 2021 ರಲ್ಲಿ ವಿಶ್ವದ ಅತ್ಯಂತ ದುಬಾರಿ (Costly) ಎಂದು ಗುರುತಿಸಲಾಗಿದೆ.

Latest Videos

undefined

ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಗೋಲ್ಡನ್‌ ಫ್ರೆಂಚ್ ಫ್ರೈಸ್
ಇಷ್ಟಕ್ಕೂ ಆಲೂಗಡ್ಡೆಯಿಂದ ತಯಾರಿಸುವ ಫ್ರೆಂಚ್ ಫ್ರೈಸ್‌ ಯಾಕೆ ಇಷ್ಟೊಂದು ಕಾಸ್ಟ್ಲೀ ಎಂದು ನೀವು ಅಂದ್ಕೊಳ್‌ಬೋದು. ಈ ಫ್ರೆಂಚ್‌ಫ್ರೈಸ್‌ನ ವಿಶೇಷತೆಯೆಂದರೆ ಇದು ಚಿನ್ನದ ಲೇಪನವನ್ನು ಹೊಂದಿದೆ. ಇದು ಸದ್ಯ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲೂ ಹೆಸರು ಪಡೆದುಕೊಂಡಿದೆ. ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಪುಟದಲ್ಲಿ ಈ ಬಗ್ಗೆ ಮಾಹಿತಿ ಶೇರ್‌ ಮಾಡಲಾಗಿದೆ. Instagram ನಲ್ಲಿ ಪೋಸ್ಟ್ ಮಾಡಿದ ವೀಡಿಯೊವು ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಗಳನ್ನು ತೋರಿಸುತ್ತದೆ.

ದ್ರಾಕ್ಷಿ ಎಂಬ ಸಣ್ಣ ಹಣ್ಣಿನ ದೊಡ್ಡ ಪ್ರಯೋಜನಗಳನ್ನು ತಿಳಿಯಿರಿ

ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಗಳು ಬಹಳಷ್ಟು ಪದಾರ್ಥಗಳನ್ನು ಹೊಂದಿವೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಶೀರ್ಷಿಕೆಯಲ್ಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಿಂಟೇಜ್ 2006 ಡೊಮ್ ಪೆರಿಗ್ನಾನ್ ಶಾಂಪೇನ್, ಜೆ ಸೇರಿದಂತೆ ಭಕ್ಷ್ಯದ ಎಲ್ಲಾ ಪದಾರ್ಥಗಳನ್ನು ಉಲ್ಲೇಖಿಸಿದೆ. LeBlanc ಫ್ರೆಂಚ್ ಷಾಂಪೇನ್, ಫ್ರಾನ್ಸ್‌ನ ಶುದ್ಧ ಕೇಜ್-ಫ್ರೀ ಗೂಸ್ ಕೊಬ್ಬು, 23 ಕ್ಯಾರೆಟ್ ಚಿನ್ನದ ಹುಡಿಯನ್ನು ಲೇಪಿಸಲಾಗುತ್ತದೆ.

ಚಿನ್ನದ ಲೇಪಿತ ಫ್ರೆಂಚ್ ಫ್ರೈಸ್
ರೆಸ್ಟೋರೆಂಟ್ ಈ ಫ್ರೆಂಚ್ ಫ್ರೈಸ್‌ಗೆ ಇಟ್ಟ ಹೆಸರು ಕ್ರೀಮ್ ಡೆ ಲಾ ಕ್ರೀಮ್ ಪೊಮೆ ಫ್ರೈಟ್ಸ್ ಎಂದು. ಐಷಾರಾಮಿ ಪದಾರ್ಥಗಳನ್ನೊಳಗೊಂಡ ಈ ಫ್ರೆಂಚ್ ಫ್ರೈಸ್‌ ಬೆಲೆ 200 ಯುಎಸ್ ಡಾಲರ್ ಎಂದರೆ ಭಾರತದಲ್ಲಿ ಸುಮಾರು 15,000 ರೂಪಾಯಿ. ಈ ಮೌಲ್ಯದ ಕಾರಣದಿಂದಲೇ ಈ ಫ್ರೆಂಚ್ ಫ್ರೈಸ್‌ ಈಗ ವಿಶ್ವದ ಗಮನ ಸೆಳೆದಿದೆ. ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ವಾವ್‌ ಏನ್‌ ಟೇಸ್ಟ್‌..ಥೈಲ್ಯಾಂಡ್ ಬ್ಲಾಗರ್ ಸೌತ್ ಇಂಡಿಯನ್ ಫುಡ್‌ಗೆ ಫಿದಾ

ಈ ವಿಡಿಯೋಗೆ ಇದುವರೆಗೆ 2.56 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊದಲ್ಲಿ, LA ಬೀಸ್ಟ್ ಎಂದು ಕರೆಯಲ್ಪಡುವ ಯೂಟ್ಯೂಬರ್ ದುಬಾರಿಯಾದ ಸೆರೆಂಡಿಪಿಟಿ ರೆಸ್ಟೋರೆಂಟ್‌ನಲ್ಲಿ ಫ್ರೆಂಚ್ ಫ್ರೈಗಳನ್ನು ತಿನ್ನುತ್ತಾರೆ, ಅಲ್ಲಿ ಖಾದ್ಯವನ್ನು 'ಕ್ರೆಮ್ ಡೆಲಾ ಕ್ರೀಮ್ ಪೊಮ್ಮೆಸ್ ಫ್ರೈಟ್ಸ್' ಎಂದು ಕರೆಯಲಾಗುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವೀಡಿಯೋಗೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದಾದರೊಂದು ಖಾದ್ಯಕ್ಕೆ ಚಿನ್ನವನ್ನು ಹಾಕುವುದು ಮತ್ತು ಅದನ್ನು ಅತ್ಯಂತ ದುಬಾರಿ ಮಾಡುವುದು ಬಹಳ ಸರಳವಾದ ಮಾರ್ಗವಾಗಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

ಈ ಹಿಂದೆ ಪ್ರಪಂಚದ ಕಾಸ್ಟ್ಲೀ ಬರ್ಗರ್ ಫೇಮಸ್ ಆಗಿತ್ತು. ದಿ ಗೋಲ್ಡನ್ ಬಾಯ್ ಎಂದು ಹೆಸರಿಸಲಾದ ಈ ಬರ್ಗರ್ ಅನ್ನು ನೆದರ್‌ಲ್ಯಾಂಡ್‌ನ ಡಿ ಡಾಲ್ಟನ್ಸ್ ಡಿನ್ನರ್‌ನ ಬಾಣಸಿಗ ರಾಬರ್ಟ್ ಜಾನ್ ಡಿ ವೀನ್ ತಯಾರಿಸಿದ್ದರು.  

click me!