
ಗಣೇಶ ಚತುರ್ಥಿ ಬಂತು ಅಂದ್ರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಜನರು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ಹಲವು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ, ವಿಘ್ನ ವಿನಾಯಕನಿಗೆ ನೈವೇದ್ಯವಾಗಿ ಸಲ್ಲಿಸಿ ಖುಷಿ ಪಡುತ್ತಾರೆ. ಗಣೇಶನ ಹಬ್ಬ ಅಂದ್ರೆ ಅಲ್ಲಿ ಕರ್ಜಿಕಾಯಿ, ಮೋದಕ ಇರೋ ಹಾಗೆಯೇ ಲಡ್ಡು ಸಹ ಬೇಕೇ ಬೇಕು. ಹಬ್ಬಕ್ಕೆ ರುಚಿಕರವಾದ ಕೆಲವು ಲಡ್ಡುಗಳನ್ನು ಮಾಡೋದು ಹೇಗೆ ತಿಳಿಯೋಣ,
ಮೋತಿಚೂರ್ (Motichoor) ಲಡ್ಡು: ಇದು ಅತ್ಯಂತ ಸಾಮಾನ್ಯವಾದ ಲಡ್ಡೂಗಳಲ್ಲಿ ಒಂದಾಗಿದೆ. ಇದನ್ನು ಅನೇಕ ವಿಶೇಷ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಕಚ್ಚುವ ಗಾತ್ರದ ಬೂಂದಿ ಅಂದರೆ ಮಿನಿ ಸ್ವೀಟ್ ಬಾಲ್‌ಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ ಮತ್ತು ಪರಸ್ಪರ ಬಂಧಿಸಲಾಗುತ್ತದೆ. ಅಂಗೈಯಲ್ಲಿ ಚೆಂಡನ್ನು ಸುತ್ತಿ, ಲಡ್ಡೂಗಳನ್ನು ತಯಾರಿಸಲಾಗುತ್ತದೆ. ಅದರ ಮೇಲೆ ಕತ್ತರಿಸಿದ ಪಿಸ್ತಾಗಳನ್ನು ಸೇರಿಸುವ ಮೂಲಕ ಅಲಂಕಾರಿಕವಾಗಿ ಜೋಡಿಸುವ ಜೊತೆಗೆ ರುಚಿಯನ್ನೂ ಹೆಚ್ಚಿಸಬಹುದು. ನೋಡಿದ ಕೂಡಲೇ ಅದರಲ್ಲಿ ಒಂದನ್ನು ಬಾಯಿಗೆ ಹಾಕಿಕೊಳ್ಳಬೇಕು ಅಂತ ಅನಿಸುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಈ ಬಾರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ತಯಾರಿಸಿ
ಅಟ್ಟಾ (Atta) ಲಡ್ಡು: ಇದು ಸುಲಭವಾದ ಲಡ್ಡೂ ರೆಸಿಪಿ. ನಿಮಗೆ ಬೇಕಾಗಿರುವುದು ಗೋಧಿ ಹಿಟ್ಟು ಅಥವಾ ಅಟ್ಟಾ, ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಹುರಿದು ಇಟ್ಟುಕೊಳ್ಳಿ. ಇದಕ್ಕೆ ಸಕ್ಕರೆ ಪುಡಿ ಅಥವಾ ಬೆಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು. ಜೊತೆಗೆ ಹೆಚ್ಚಿನ ಪ್ರಮಾಣದ ತುಪ್ಪವನ್ನು ಸೇರಿಸಿದಷ್ಟು ಲಡ್ಡುವಿನ ರುಚಿ ದುಪ್ಪ ಗುತ್ತದೆ. ಈ ರುಚಿಕರವಾದ ಸಿಹಿ ಭಕ್ಷಕ್ಕೆ (Dessert) ಬಾದಾಮಿ ಮತ್ತು ಗೋಡಂಬಿಯಂತಹ ಬೀಜಗಳನ್ನು (Nuts) ಸೇರಿಸಿಕೊಳ್ಳಬಹುದು. ಈ ಮಿಶ್ರಣವು ಸ್ವಲ್ಪ ತಣ್ಣಗಾಗುವ ತನಕ ಕಾದು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನಾಗಿ. ಇಷ್ಟು ಮಾಡಿದರೆ ನಿಮ್ಮ ರುಚಿಕರ ಗೋಧಿ ಲಡ್ಡೂಗಳು ಸವಿಯಲು ಸಿದ್ಧವಾಗುತ್ತದೆ.
ಎಳ್ಳಿನ (Til) ಲಡ್ಡು :ಟಿಲ್ ಎಂಬುದು ಎಳ್ಳಿನ ಬೀಜಗಳನ್ನು (Sesame) ಸೂಚಿಸುತ್ತದೆ. ಇದೂ ಕೂಡ ಸೂಪರ್ ತ್ವರಿತ ಮತ್ತು ಸುಲಭವಾದ ಪಾಕವಿಧಾನ. ಈ ಲಡ್ಡೂಗಳನ್ನು ತಯಾರಿಸಲು ಬಿಳಿ ಎಳ್ಳು ಬೀಜಗಳೊಂದಿಗೆ, ತುಪ್ಪವನ್ನು ಮತ್ತು ಬೆಲ್ಲವನ್ನು ಸಂಯೋಜಿಸಬೇಕು. ರುಚಿಯನ್ನು ಹೆಚ್ಚಿಸುವ ಸಲುವಾಗಿ ಲಡ್ಡೂಗಳಿಗೆ ಸ್ವಲ್ಪ ಕಡಲೆಕಾಳನ್ನು (Peanuts) ಸಹ ಸೇರಿಸಬಹುದು. ಆದರೆ, ಬೆಲ್ಲವನ್ನು ಇದಕ್ಕೆ ಬೆರೆಸುವ ಮೊದಲು ಚೆನ್ನಾಗಿ ಮೃದುಗೊಳಿಸುವುದಕ್ಕೆ ಮರೆಯಬೇಡಿ. ಬೆಲ್ಲ ಹದವಾದ ಬಳಿಕವೇ ಈ ಮಿಶ್ರಣವನ್ನು ಸೇರಿಸಿಕೊಳ್ಳಿ ಆಗ ಸಣ್ಣ ಉಂಡೆಗಳ ಲಡ್ಡು ತಯಾರಿಸಿಕೊಳ್ಳಲು ಸುಲಭವಾಗುತ್ತದೆ.
ಗಣೇಶನ ಹಬ್ಬಕ್ಕಿನ್ನು ಒಂದೇ ವಾರ, ಮೋದಕ ಮಾಡೋದು ಹೇಗೆ ತಿಳ್ಕೊಂಡು ಬಿಡಿ
ಚುರ್ಮಾ ಲಡ್ಡು (Churma Laddoo): ಇದು ಗೋಧಿ ಹಿಟ್ಟು ಮತ್ತು ಬೆಲ್ಲದಿಂದ ಮಾಡುವ ರಾಜಸ್ಥಾನದ ವಿಶೇಷ ತಿಂಡಿಯಾಗಿದೆ. ದಾಲ್ ಬಾತಿ ಚುರ್ಮಾ ಸಂಯೋಜನೆಗೆ ಸೇರಿಸಲಾದ ಅದೇ ಚುರ್ಮಾದಿಂದ ಈ ಲಡ್ಡೂಗಳನ್ನು ತಯಾರಿಸಲಾಗುತ್ತದೆ. ಗೋಧಿ ಹಿಟ್ಟನ್ನು ಬೆಲ್ಲದೊಂದಿಗೆ (Jaggery) ನಿರಂತರವಾಗಿ ಹುರಿಯುವ ಮೂಲಕ ಚುರ್ಮಾವನ್ನು ತಯಾರಿಸಲಾಗುತ್ತದೆ. ಅಗಿಯಲು ತುಪ್ಪ ಮತ್ತು ಎಳ್ಳು ಸೇರಿಸುವುದರಿಂದ ಇದರ ರುಚಿ ಹೆಚ್ಚಾಗುತ್ತದೆ. ಈ ಲಡ್ಡೂಗಳು ಇತರ ಮೃದುವಾದ ಪ್ರಭೇದಗಳಿಗೆ ಹೋಲಿಸಿದರೆ ಕುರುಕಲು ಅನುಭವ ನೀಡುತ್ತದೆ.
ತೆಂಗಿನಕಾಯಿ (Coconut) ಲಡ್ಡು: ತೆಂಗಿನಕಾಯಿಯ ರುಚಿಕರವಾದ ಸುವಾಸನೆ ಮತ್ತು ಅದು ಯಾವುದೇ ಭಕ್ಷ್ಯಕ್ಕೆ ಸೇರಿಸುವ ಸೌಮ್ಯವಾದ ಮಾಧುರ್ಯವು ನಿಮ್ಮ ರೆಸಿಪಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಣಗಿದ ತೆಂಗಿನಕಾಯಿಯನ್ನು ಕೆಲವು ಏಲಕ್ಕಿ ಪುಡಿ, ಹಾಲು, ಸಕ್ಕರೆ ಮತ್ತು ತುಪ್ಪದೊಂದಿಗೆ ಮಿಶ್ರಣ ಮಾಡಿ ಉಂಡೆಗಳನ್ನಾಗಿ ಮಾಡಿಕೊಳ್ಳಬಹುದು. ಹೆಚ್ಚುವರಿ ಸಿಹಿಗಾಗಿ ಸ್ವಲ್ಪ ತುರಿದ ಬೆಲ್ಲದ ಜೊತೆಗೆ ಗೋಡಂಬಿಯಂತಹ ಬೀಜಗಳನ್ನು ಸೇರಿಸಬಹುದು. ಇವುಗಳು ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಸ್ವಲ್ಪ ಕುರುಕುಲಾದ ಹೊರಭಾಗದೊಂದಿಗೆ ಕೂಡಿರುತ್ತದೆ. ಆದರೆ, ಒಳಭಾಗದಲ್ಲಿ ಮೃದುವಾಗಿರುತ್ತವೆ.
ಗಣಪನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?
ಎಲ್ಲ ರೀತಿಯ ಲಡ್ಡುಗಳ ತಯಾರಿಕೆಯ ಕ್ರಮ ಕೇಳಿದರೇನೇ ಬಾಯಲ್ಲಿ ನೀರು ಇರುತ್ತದೆ ಅಲ್ಲವೇ ನಿಮ್ಮ ಈ ವರ್ಷದ ಗಣೇಶ ಚತುರ್ಥಿಯ ಆಚರಣೆಗೆ ಈ ವಿಧವಿಧವಾದ ಲಡ್ಡುಗಳನ್ನು ತಯಾರಿಸುವ ಮೂಲಕ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.